ಎಂ. ಡಿ. ಪಲ್ಲವಿ
ಎಂ. ಡಿ. ಪಲ್ಲವಿ, ಕರ್ನಾಟಕ ರಾಜ್ಯದ ಪ್ರಸಿದ್ಧ ಸುಗಮ ಸಂಗೀತ ಗಾಯಕಿ. ಹಾಗೆಯೇ ಇವರು ನಟನೆಯಲ್ಲೂ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.
ಎಂ. ಡಿ. ಪಲ್ಲವಿ | |
---|---|
ಹಿನ್ನೆಲೆ ಮಾಹಿತಿ | |
ಸಂಗೀತ ಶೈಲಿ | ಸುಗಮ ಸಂಗೀತ |
ವೃತ್ತಿ | ಗಾಯಕಿ |
ಸಕ್ರಿಯ ವರ್ಷಗಳು | 2000–ಇದುವರೆಗೆ |
ಅಧೀಕೃತ ಜಾಲತಾಣ | http://mdpallavi.com/ |
ಸಂಗೀತ
ಬದಲಾಯಿಸಿಪಲ್ಲವಿಯವರು ಹಿಂದೂಸ್ಥಾನೀ ಸಂಗೀತದಲ್ಲಿ ತರಬೇತಿ ಪಡೆದಿದ್ದಾರೆ. ನಂತರದ ದಿನಗಳಲ್ಲಿ ಮೈಸೂರು ಅನಂತಸ್ವಾಮಿಯವರ ಅಡಿಯಲ್ಲಿ ಸುಗಮ ಸಂಗೀತದ ತರಬೇತಿ ಪಡೆದಿದ್ದಾರೆ. [೧]
ನಟನೆ
ಬದಲಾಯಿಸಿನಾಟಕ
ಬದಲಾಯಿಸಿಪಲ್ಲವಿಯವರು ನಾಟಕರಂಗದಲ್ಲಿ ತಮ್ಮ ಪ್ರತಿಭೆಯನ್ನು ತೋರಿದ್ದು, ಹಲವು ಬೀದಿನಾಟಕಗಳನ್ನು ನಿರ್ಮಿಸಿದ್ದಾರೆ. ಇವರು ನಟಿಸಿದ ಕೆಲ ನಾಟಕಗಳೆಂದರೆ, ಹ್ಯಾಮ್ಲೆಟ್, ಫಯರ್ ಅಂಡ್ ರೇನ್, ಬಲಿದಾನ, ಮೈ ಫೇರ್ ಲೇಡಿ, ಗಾಜಿನ ಗೊಂಬೆಗಳು, ವಕ್ರ ಹಾಗೂ ಇತರೆ.
ದೂರದರ್ಶನ ಮತ್ತು ಚಲನಚಿತ್ರ
ಬದಲಾಯಿಸಿಪಲ್ಲವಿಯವರು ಕಿರುತೆರೆಯ ಮಾಯಾಮೃಗ ಹಾಗೂ ಗರ್ವ ಎಂಬ ಎರಡು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇವರು ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ ಸ್ಟಂಬಲ್ ನಲ್ಲಿ ನಟಿಸಿದ್ದಾರೆ.ಹಾಗೆಯೇ ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ ಗುಲಾಬಿ ಟಾಕೀಸ್ ನಲ್ಲೂ ಉಮಾಶ್ರೀಯವರೊಂದಿಗೆ ನಟಿಸಿದ್ದಾರೆ.
ಕಂಠದಾನ
ಬದಲಾಯಿಸಿಪಲ್ಲವಿಯವರು ಹಲವಾರು ಚಲನಚಿತ್ರಗಳಲ್ಲಿ ಕಂಠದಾನ ಕಲಾವಿದೆಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಪ್ರಮುಖವಾದವು, ಎದೆಗಾರಿಕೆ, ಆ ದಿನಗಳು, ಐಶ್ವರ್ಯ, ಮೀರ ಮಾಧವ ರಾಘವ. ಇವರು ಕನ್ನಡದ ನಟಿ ಡೈಸಿ ಬೊಪಣ್ಣರವರಿಗೆ, ಐಶ್ವರ್ಯ, ಸತ್ಯವಾನ್ ಸಾವಿತ್ರಿ, ರಾಮ ಶಾಮಭಾಮ, ಬಿಂಬ ಹಾಗೂ ಇತರೆ ಚಲನಚಿತ್ರಗಳಲ್ಲಿ ಕಂಠದಾನ ಮಾಡಿದ್ದಾರೆ
ಬಾಹ್ಯ ಕೊಂಡಿಗಳು
ಬದಲಾಯಿಸಿ- Official website Archived 2016-04-28 ವೇಬ್ಯಾಕ್ ಮೆಷಿನ್ ನಲ್ಲಿ.
ಉಲ್ಲೇಖ
ಬದಲಾಯಿಸಿ