ಎಂದಿಗೂ ಸಲ್ಲುವ ಮಾರ್ಕ್ಸ್(ಪುಸ್ತಕ)

ಮಾರ್ಕ್ಸ್‌ವಾದಿ ಚಿಂತಕ ಡಾ.ಜಿ.ರಾಮಕೃಷ್ಣ ಬರೆದಿರುವ ಎಂದಿಗೂ ಸಲ್ಲುವ ಮಾರ್ಕ್ಸ್ ಪುಸ್ತಕ ಮಾರ್ಕ್ಸ್‌ವಾದ ಎಂದರೇನು ಎಂಬುದನ್ನು ತಿಳಿದುಕೊಳ್ಳಬಯಸುವವರು ಓದಲೇಬೇಕಾದ ಪುಸ್ತಕ ಮಾರ್ಕ್ಸವಾದದ ಪ್ರಸ್ತುತತೆ ಕುರಿತು ಚರ್ಚೆ ನಿರಂತರ.ಏಕೆಂದರೆ ಅದು ಎಲ್ಲ ಕಾಲಕ್ಕೂ ಸಲ್ಲುವಂಥದ್ದು. ಬಂಡವಾಳಶಾಹಿ ವ್ಯವಸ್ಥೆಯ ಉಗಮ,ಬೆಳವಣಿಗೆಯನ್ನು ಐತಿಹಾಸಿಕವಾಗಿ ಗುರ್ತಿಸಿದವನು,ಅದರ ಅಂತಿಮ ಅವಸಾನವನ್ನುಮುನ್ಸೂಚಿಸಿದವನು ಮಾರ್ಕ್ಸ್.ಮಾರ್ಕ್ಸ್ ಜೀವಿಸಿದ್ದ ಕಾಲ ೧೯ನೇ ಶತಮಾನ.ಈಗ ೨೧ನೇ ಶತಮಾನದಲ್ಲೂ ಅವನ ವಿಚಾರಗಳು ಜೀವಂತ.ವಾದ-ವಿವಾದಗಳು ಇಂದೂ ಮುಂದೂ ನಡೆಯುತ್ತಲೇ ಇರುತ್ತವೆ. ನೂರು ವರ್ಷಗಳ ಹಿಂದೆ ಬಂಡವಾಳಶಾಹಿ ಜಗತ್ತು ಬಹುದೊಡ್ಡ ಆರ್ಥಿಕ ಕುಸಿತವನ್ನು ಕಂಡಿತು.ಅದರ ಪರಿಣಾಮಗಳಿಂದ ಚೇತರಿಸಿಕೊಳ್ಳಲು ಹಲವು ವರ್ಷಗಳೇ ಹಿಡಿಯಿತು.ಅಂಥದೇ ಆರ್ಥಿಕ ಕುಸಿತ ಈ ಶತಮಾನದ ಆದಿಯಲ್ಲೂ ತಲೆದೋರಿತು.ಅದರಿಂದ ಬಂಡವಾಳಶಾಹಿ ಜಗತ್ತು ಇನ್ನೂ ಪರಿತಪಿಸುತ್ತಿದೆ.ತಂತ್ರಜ್ಞಾನ ಎಷ್ಟೋ ಮುಂದುವರಿದಿದ್ದರೂ ಬಂಡವಾಳಶಾಹಿ ಅರ್ಥವ್ಯವಸ್ಥೆಯ ಅಸ್ತವ್ಯಸ್ತತೆಗೆ ಮುಕ್ತಿಯೇ ಇಲ್ಲ.ಆಗಾಗ್ಗೆ ಮುಗ್ಗಟ್ಟು ಮರುಕಳಿಸುತ್ತಲೇ ಇರುತ್ತದೆ.ಮಾರ್ಕ್ಸ್ ಬಂಡವಾಳಶಾಹಿ ವ್ಯವಸ್ಥೆಯ ಏರುಪೇರುಗಳ,ಬಿಕ್ಕಟ್ಟುಗಳ ಮುನ್ಸೂಚನೆ ನೀಡಿದ್ದ.ಹಾಗಾಗಿ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಬಿಕ್ಕಟ್ಟು ತಲೆದೋರಿದಾಗೆಲ್ಲಾ ಮಾರ್ಕ್ಸ್‌ವಾದದ ನೆನೆಪಾಗುತ್ತದೆ,ವಿವಾದಕ್ಕೊಳಪಡುತ್ತದೆ.

ಎಂದಿಗೂ ಸಲ್ಲುವ ಮಾರ್ಕ್ಸ್
ಲೇಖಕರುಡಾ.ಜಿ.ರಾಮಕೃಷ್ಣ
ದೇಶಭಾರತ
ಭಾಷೆಕನ್ನಡ
ವಿಷಯಸಾಮಾಜಿಕ ರಾಜಕೀಯ
ಪ್ರಕಾರಸಾಮಾಜಿಕ ರಾಜಕೀಯ
ಪ್ರಕಾಶಕರುನವಕರ್ನಾಟಕ ಪಬ್ಲಿಕೇಶನ್ಸ್ ಪ್ರೈವೇಟ್ ಲಿಮಿಟೆಡ್
ಪ್ರಕಟವಾದ ದಿನಾಂಕ
೨೦೧೪, ೧ನೇ ಮುದ್ರಣ
ಪುಟಗಳು೧೩೬
ಐಎಸ್‍ಬಿಎನ್978-81-8467-4೨೦-೦ false

ಲೇಖಕರ ಬಗ್ಗೆ

ಬದಲಾಯಿಸಿ
  • [ಡಾ.ಜಿ. ರಾಮಕೃಷ್ಣ ಕನ್ನಡದ ಭೌತವಾದೀ ಸಂತ. ಮಾರ್ಕ್ಸ್‍ವಾದದಲ್ಲಿ ತುಂಬ ದೊಡ್ಡ ಹೆಸರು ಅವರದು. ಹೊಸತು ಪತ್ರಿಕೆಯ ಸಂಪಾದಕರಾಗಿಯೂ ಕೆಲಸ ಮಾಡಿದ್ದಾರೆ. ಅವರಿಗೆ ೨೦೧೪ರ ಡಾ.ಎಲ್. ಬಸವರಾಜು ಪ್ರಶಸ್ತಿ ನೀಡಲಾಗಿದೆ.[], []]

ಉಲ್ಲೇಖ

ಬದಲಾಯಿಸಿ
  1. ಪ್ರಜಾವಾಣಿ ವರದಿ http://www.prajavani.net/article/%E0%B2%9C%E0%B2%BF%E0%B2%B0%E0%B2%BE%E0%B2%AE%E0%B2%95%E0%B3%83%E0%B2%B7%E0%B3%8D%E0%B2%A3%E0%B2%97%E0%B3%86-%E0%B2%8E%E0%B2%B2%E0%B3%8D%E0%B2%AC%E0%B2%B8%E0%B2%B5%E0%B2%B0%E0%B2%BE%E0%B2%9C%E0%B3%81-%E0%B2%AA%E0%B3%8D%E0%B2%B0%E0%B2%B6%E0%B2%B8%E0%B3%8D%E0%B2%A4%E0%B2%BF]
    • [
  2. ಕನ್ನಡಪ್ರಭ ವರದಿ http://www.kannadaprabha.com/districts/kolar/%E0%B2%A1%E0%B2%BE%E0%B2%9C%E0%B2%BF-%E0%B2%B0%E0%B2%BE%E0%B2%AE%E0%B2%95%E0%B3%83%E0%B2%B7%E0%B3%8D%E0%B2%A3%E0%B2%B0%E0%B2%BF%E0%B2%97%E0%B3%86-%E0%B2%A1%E0%B2%BE%E0%B2%8E%E0%B2%B2%E0%B3%8D%E0%B2%AC%E0%B2%BF-%E0%B2%AA%E0%B3%8D%E0%B2%B0%E0%B2%B6%E0%B2%B8%E0%B3%8D%E0%B2%A4%E0%B2%BF/188515.html Archived 2016-03-04 ವೇಬ್ಯಾಕ್ ಮೆಷಿನ್ ನಲ್ಲಿ.