ಉಸ್ತಾದ್ ಫಯಾಜ್ ಖಾನ್

'ಉಸ್ತಾದ್ ಫಯಾಜ್ ಖಾನ್' ರದು ಬಹುಮುಖ ಪ್ರತಿಭೆ.[] ೩ ದಶಕಗಳ ಕಾಲ ಸಾರಂಗಿ-ಹಾಡುಗಾರಿಕೆ, ತಬಲಾವಾದನಗಳಿಂದ ಜನಾನುರಾಗಿಯಾಗಿದ್ದಾರೆ. ಕುಂದಗೋಳ, ಹುಬ್ಬಳ್ಳಿ, ಸವಾಯ್ ಗಂಧರ್ವರ ಸಂಗೀತೋತ್ಸವ, ಚೈನ, ಮಲೇಶಿಯಾ, ದುಬೈ, ಜರ್ಮನಿ, ಕೆನಡಗಳಲ್ಲಿನ ವೇದಿಕೆಗಳಲ್ಲಿ 'ಸಾರಂಗಿ ನುಡಿಸಿ, ಹಾಡಿ. ಸಂಗೀತಾಭಿಮಾನಿಗಳನ್ನು ರಂಜಿಸಿದ್ದಾರೆ.

ಸಂಗೀತಯಾನದ ಆರಂಭ

ಬದಲಾಯಿಸಿ

ಸಂಗೀತಗಾರರ ವಂಶದಲ್ಲಿ ಬೆಳೆದುಬಂದ 'ಫಯಾಜ್', ಅಜ್ಜ, ಮೈಸೂರು ಆಸ್ಥಾನದಲ್ಲಿ ವಿದ್ವಾನ್, ತಂದೆ ಧಾರವಾಡಆಕಾಶವಾಣಿಯಲ್ಲಿ ಕಲಾವಿದ, ಕಛೇರಿಗಳನ್ನು ಕೊಡುವುದಲ್ಲದೆ ಮನೆಯಲ್ಲೂ ಸಂಗೀತ ಪಾಠ ಹೇಳಿಕೊಡುತ್ತಿದ್ದರು. ಫಯಾಜ್, ಮನೆಯಲ್ಲಿದ್ದ ಹಲವಾರು ವಾದ್ಯಗಳನ್ನು ನುಡಿಸಲು ಕಲಿತರು. ತಂದೆಯವರ ಜೊತೆ ಸಾರಂಗಿ ನುಡಿಸಲು ಹೋಗುತ್ತಿದ್ದರೂ ಅವರಿಗೆ ಪ್ರೀತಿಯಾದ ವಾದ್ಯವೆಂದರೆ ತಬಲಾ. ಗುರುಮುಖೇನ ೧೨ ನೆಯ ವರ್ಷದಲ್ಲಿ ಕಲಿಕೆ ಆರಂಭವಾಯಿತು. ಪಂ.ಬಸವರಾಜ ಬೆಂಡಿಗೇರಿ ಶಿಷ್ಯರಾದರು. ಮಕ್ಕಳಿಗೆ ಸಂಗೀತದ ಶಿಕ್ಷಣ ಕೊಡಲು ಇಷ್ಟಪಡುತ್ತಿರಲಿಲ್ಲ. ೧೯೮೯-೯೦ ರಾಷ್ಟ್ರಮಟ್ಟದ ಆಕಾಶವಾಣಿ ಕಾರ್ಯಕ್ರಮದಲ್ಲಿ ಪ್ರಥಮ ಬಹುಮಾನ ಗಳಿಸಿದರು. ತಂದೆ ಗತಿಸಿ ೪ ವರ್ಷಗಳೇ ಆಗಿದ್ದವು.

ಮುಂಬಯಿನಲ್ಲಿ

ಬದಲಾಯಿಸಿ

ಪದ್ಮಭೂಷಣ ಪಂ.'ರಾಮ್ ನಾರಾಯಣ್ ಜಿ'ಯವರ ಬಳಿ ಗುರುಕುಲ ಪದ್ಧತಿಯಲ್ಲಿ ೬ ವರ್ಷಗಳ ಕಾಲ ಸಾರಂಗಿವಾದ್ಯವನ್ನು ಅಭ್ಯಾಸಮಾಡಿದರು. ಪಾಟಿಯಾಲ ಘರಾನದ 'ಉಸ್ತಾದ್ ಅಲ್ತಾಫ್ ಹುಸೆನ್ ಖಾನ್ ಸಾಹೇಬ'ರಿಂದ ಸಂಗೀತ ಕಲಿತರು. ಗುರುಸೇವೆ ಸಂಗೀತ ಕಲಿಕೆಗಳ ಮಧ್ಯದಲ್ಲಿ, ಮುಂಬಯಿಯ 'ಸಮುದ್ರದಂಡೆ' 'ಪುಟ್ಪಾತ್' ಗಳಲ್ಲಿ ಮಲಗಿ ಹೇಗೋ ಒಂದು ವರ್ಷ ಕಳೆದರು.

ಹಿರಿಯ ಗಾಯಕರ ಬಳಿ ಕಲಿಕೆ

ಬದಲಾಯಿಸಿ

'ಓಂಕಾರ್ ನಾಥ್ ಠಾಕೂರ್', 'ಬಡೆ ಗುಲಾಂ ಆಲಿಖಾನ್ ಸಾಹೇಬ್', 'ಅಮೀರ್ ಖಾನ್ ಸಾಹೆಬ್', 'ಕುಮಾರ ಗಂಧರ್ವ'ರ ಬಳಿಸಂಗೀತ ಪಾಠಕಲಿತರು. ತಬಲಾವಾದಕ 'ಪಂ ಸುರೇಶ್ ವಾರ್ ಕರ್',ರ ಗೋರೆಗಾವ್ ನಲ್ಲಿದ್ದ ಹೋಟೆಲ್ ನ 'ದತ್ತಾತ್ರೇಯ ಲಾಡ್ಜ್' ನಲ್ಲಿ 'ಕೌಸರ್ ಖಾನ್', 'ಕಿಶನ್ ಮಾಲಾ' ಎಂಬ ಕಲಾವಿದರ ಜೊತೆ ಒಂದು ಸಾವಿರ ರೂಪಾಯಿ ಕೊಟ್ಟು ವಸತಿಯ ಏರ್ಪಾಡುಮಾಡಿಕೊಂಡರು. 'ವಿಜಯ್ ಘಾಟೆ' ಎಂಬ ನವ ಕಲಾವಿದನಿಗೆ ವಾರಕ್ಕೆ ೨-೩ ದಿನ ಸಂಗೀತ ಪಾಠ ಮಾಡಿ 'ಮೆಹರ್ಬ ಜಾನ್' ಮಾಡಿ ಜೀವನೋಪಾಯ ಕಂಡುಕೊಂಡರು. ೧೯೯೦ ಬಹಳ ಕಷ್ಟದ ವರ್ಷವಾಗಿತ್ತು. 'ರೂಪಕ್ ಕುಲಕರ್ಣಿ'ಯವರು ಮುಂಬಯಿ ಆಕಾಶವಾಣಿಯಲ್ಲಿ ತಿಂಗಳಿಗೆ ೧೦ ದಿನ 'ಸ್ಟಾಫ್ ಆರ್ಟಿಸ್ಟ್' ಆಗಿ 'ಕಾಂಟ್ರಾಕ್ಟ್' ಕೊಡಿಸಿದರು. ರಾತ್ರಿ ಗುರುಗಳ ಮನೆಗೆ ಹೋಗಿ ಸಾರಂಗಿ ಕಲಿಯಬೇಕಿತ್ತು. ಡಿಸೆಂಬರ್ ೬ ೧೯೯೨ 'ಬಾಬ್ರಿ ಮಸೀದಿ ಪ್ರಕರಣ'ದಿಂದ ಮುಂಬಯಿ ಜೀವನ ಸ್ಥಬ್ಧವಾಗಿತ್ತು. ದಾದರ್ ನಲ್ಲಿ 'ಉಸ್ತಾದ್ ಬಾಲೇಖಾನ್' ತಂದೆ,ಸಂಗೀತ ಪಾಠಶಾಲೆಯಲ್ಲಿ ಕಲಿಸುತ್ತಿದ್ದರು. ರಾತ್ರಿ ಗೋರೆಗಾಂ ನ 'ರಾಧಾಮಾಯಿ ಚಾಳ್' ಗೆ ಬರುತ್ತಿದ್ದರು. 'ಸುರೇಶ್ ತಳವಾಳ್ಕರ್' ಆಸಮಯದಲ್ಲಿ ೧೫ ದಿನ ೩ ಜನರನ್ನು ತಮ್ಮ ಕೋಣೆಯಲ್ಲೇ ಇಟ್ಟುಕೊಂಡು ಸಂರಕ್ಷಿಸಿದರು.

೧೯೮೯-೯೦

ಬದಲಾಯಿಸಿ
  • ಧಾರವಾಡದ ಆಕಾಶವಾಣಿಯ ಮೂಲಕ ರಾಷ್ಟ್ರಮಟ್ಟದ ಆಕಾಶವಾಣಿಸಂಗೀತ ಸ್ಪರ್ಧೆಯ ವಾದನ ವಿಭಾಗದಲ್ಲಿ ಪ್ರಥಮ ಪುರಸ್ಕಾರ ಗೆದ್ದಿದ್ದಾರೆ.
  • ಬೆಂಗಳೂರಿನ ಅಕಾಡೆಮಿ ಆಫ್ ಮ್ಯೂಸಿಕ್ ಅತ್ಯುತ್ತಮ ವಾದಕ ಪ್ರಶಸ್ತಿ. ಗದುಗಿನ ವೀರೇಶ್ವರ ಪುಣ್ಯಾಶ್ರಮ ಪುಟ್ಟರಾಜು ಕೃಪಾ ಭೂಷಣ ಬಿರುದು,
  • ಬೆಂಗಳೂರಿನ ಭಾರತಿ ಸಂಸ್ಕೃತಿ ಕಲಾಕೌಮುದಿ ಪುರಸ್ಕಾರ,
  • ಗೋಕುಲಂ ಆರ್ಟ್ ಫೌಂಡೇಶನ್ ಕಲಾವಸಂತ ಪುರಸ್ಕಾರ,,
  • ಸಿದ್ದಾಪುರದ ದಿಯಾ ಪ್ರತಿಷ್ಠಾನ, ಸ್ವರ ಸಾಮ್ರಾಟ್ ಪುರಸ್ಕಾರ,

ಧಾರವಾಡಕ್ಕೆ

ಬದಲಾಯಿಸಿ

ಆಗಸ್ಟ್,೧೯೯೪ ರಲ್ಲಿ ಧಾರವಾಡಕ್ಕೆ ಬಂದರು. ಕೊಲ್ಹಾಪುರದ 'ಅರುಣ್ ಪೊದ್ದಾರ್', ಅವರಿಗೆ ಸಹಾಯಮಾಡಿದರು.

ಬೆಂಗಳೂರಿನಲ್ಲಿ

ಬದಲಾಯಿಸಿ

'ಮೈಸೂರ್ ಅರಮನೆಯ ದಸರಾ ಸಂಗೀತ ಕಛೇರಿ' 'ನಿರುಪಮಾ ರಾಜೇಂದ್ರ ನರ್ತಕ ಜೋಡಿ',[] ಸಾರಂಗಿ ಹಾಡುಗಾರಿಕೆ, ನಿರ್ದೇಶನ 'ಪ್ರವೀಣ್ ರಾವ್,' ಬೆಂಗಳೂರಿನಲ್ಲಿ ನೆಲೆಸಲು ಅನುಕೂಲಮಾಡಿಕೊಟ್ಟರು.

ಉಪೇಂದ್ರರ 'ಎ' ಚಿತ್ರಕ್ಕೆ ಟೈಟಲ್ ಹಾಡು

ಬದಲಾಯಿಸಿ

ಚಿತ್ರಸಂಗೀತದಲ್ಲಿ ನೆಲೆಯೂರಲು ಅನುವುಮಾಡಿಕೊಟ್ಟಿತು. 'ಹಂಸಲೇಖ', 'ಗುರುಕಿರಣ್', 'ವಿ.ಮನೋಹರ್',ಮೊದಲಾದವರ ಚಿತ್ರಗಳಲ್ಲಿ ಹಾಡಿದರು. 'ಕಿಶನ್ ದಾಲ್ಮಿಯ' 'ಉಸ್ತಾದ್ ಫಯಾಜ್ ಖಾನ್' ರ, ಗಜಲ್ ಗಳನ್ನು ಕೇಳಿ ಪ್ರಭಾವಿತರಾದರು.

೧೯೯೫ ರಲ್ಲಿ, ಮದುವೆ

ಬದಲಾಯಿಸಿ

ಸದಾಶಿವ ನಗರ ವಿಜಯಾ ಆರ್ಟ್ಸ್ ನಲ್ಲಿ ಮನೆಕೊಡಿಸಿದರು. 'ಮೈಸೂರಿನ ಲಯನ್ಸ್' ನಲ್ಲಿ 'ಮುರುಳಿ ನಂದಿನಿ ಮೆಹ್ತಾ' ನರ್ತನಕ್ಕೆ 'ಸಾಥ್' ಕೊಡುತ್ತಿದ್ದಾರೆ. ಮಾಯಾದೀದಿ ತಂಡಕ್ಕೆ ಆಗಾಗ, ನಿರುಪಮ ರಾಜೇಂದ್ರರಿಗೆ ಹಾಡುಬರೆದು ರೆಕಾರ್ಡ್ ಮಾಡಿಕೊಟ್ಟಿದ್ದಾರೆ. ಈ ಹಾಡನ್ನು ಅವರು ೧೯೯೪ ರಿಂದ ಬಳಸಿಕೊಳ್ಳುತ್ತಿದ್ದಾರೆ.

'ಪಂ. ತಾರಾನಾಥ'ರಲ್ಲಿ ಕಾರ್ಯಕ್ರಮ ಕೊಡುತ್ತಿದ್ದಾರೆ.'ಪಂ.ಪರಮೇಶ್ವರ್ ಹೆಗಡೆ'ಯವರ ಬಳಿ ಸಾರಂಗಿ ಸಾಥ್ ನೀಡುತ್ತಿದ್ದಾರೆ. 'ಪಂ ಎಮ್.ಆರ್. ಗೌತಮ್', ಪಂ. ತಾರಾನಾಥ್ ಸಹಾಯಮಾಡುತ್ತಿದ್ದಾರೆ.

ದಾಸವಾಣಿಯ ಜೊತೆ

ಬದಲಾಯಿಸಿ

'ಪಂ.ಮಲ್ಲಿಕಾರ್ಜುನ್ ಮನ್ಸೂರ್,'ದಾಸಸಾಹಿತ್ಯವನ್ನು ತಮ್ಮ ಸಂಗೀತದಲ್ಲಿ ಅಳವಡಿಸಿಕೊಂಡರು. ಭಕ್ತಿಪ್ರಧಾನವಾದ ದಾಸಸಾಹಿತ್ಯವನ್ನು 'ಪಂ.ಭೀಮಸೇನ ಜೋಶಿ'ಯವರು ಹಾಡಿ ಜನಪ್ರಿಯಮಾಡಿದರು. ರಾಗಗಳನ್ನು ವಿಸ್ತರಿಸಲು ಅಪಾರ ಸೌಲಭ್ಯವಿದೆ. ನಾಡಿನ ಗಾಯನ ಸಂಪ್ರದಾಯದ ಅವಿಭಾಜ್ಯ ಅಂಗವಾಗಿದೆ. ಹಿರಿಮಗ 'ಸರ್ಫರಾಜ್', ಸಾರಂಗಿ ಹಾಡುಗಾರಿಕೆಯಲ್ಲಿ ಚಿಕ್ಕ ಮಗ ಪಂ.ತಾರಾನಾಥರಲ್ಲಿ 'ಸರೊಡ್ ವಾದ್ಯ'ವನ್ನು ಅಭ್ಯಾಸಮಾಡುತ್ತಿದ್ದಾನೆ. ಜೀವನ ಸಂಗೀತದ ಅನುಬಂಧದಿಂದ ಜಾಗೃತವಾಗಿದೆ.

ಹಲವಾರು ವೇದಿಕೆಗಳಲ್ಲಿ

ಬದಲಾಯಿಸಿ

ಉಸ್ತಾದ್ ಫಯಾಜ್ ಖಾನ್ ಕೆಳಗೆ ನಮೂದಿಸಿದ ಸಂಗೀತ ವೇದಿಕೆಗಳಲ್ಲಿ ಮತ್ತು ಇನ್ನೂ ಹಲವಾರು ಪ್ರತಿಷ್ಠಿತ ಸಂಸ್ಥೆಗಳಲ್ಲಿ ತಮ್ಮ ಕಾರ್ಯಕ್ರಮ ಕೊಟ್ಟರು.

  • ನಾದಬ್ರಹ್ಮ ಮ್ಯೂಸಿಕಲ್ ಫೆಸ್ಟಿವಲ್, ಪುಣೆ,
  • ವಾರಣಾಸಿಯ ಸಂಕಟಮೋಚನ್ ಮ್ಯೂಸಿಕಲ್ ಫೆಸ್ಟಿವಲ್
  • ಮಿರಜ್ ನ ಅಬ್ದುಲ್ ಕರೀಮ್ ಖಾನ್ ಸಂಗೀತೋತ್ಸವ,

ಉಲ್ಲೇಖಗಳು

ಬದಲಾಯಿಸಿ
  1. "'ಮಯೂರ', 'ಸಾರಂಗಿ-ದಾಸವಾಣಿಯ ಅನನ್ಯ ಸಾಧಕ,ಉಸ್ತಾದ್ ಫಿಯಾಜ್ ಖಾನ್', ಜನವರಿ,೧, ೨೦೧೫, ಪುಟ :೩೨-೩೫,ಸಂದರ್ಶನ- ರಾಜಲಕ್ಷ್ಮಿ.ಎಸ್". Archived from the original on 2013-11-22. Retrieved 2014-12-27.
  2. Kathak performers

ಬಾಹ್ಯ ಸಂಪರ್ಕಗಳು

ಬದಲಾಯಿಸಿ