ಉಷ್ಣವಿಭಜನೆ
ಒಂದು ನಿರ್ದಿಷ್ಟ ರಾಸಾಯನಿಕ ಸಂಯುಕ್ತವನ್ನು ಕಾಯಿಸಿದಾಗ ಅದು ವಿಭಜಿಸಿ ಎರಡು ಅಥವಾ ಅನೇಕ ಧಾತು ಅಥವಾ ಸಂಯುಕ್ತಗಳನ್ನು ಉತ್ಪತ್ತಿ ಮಾಡಿದರೆ ಆ ಕ್ರಿಯೆಗೆ ಉಷ್ಣವಿಭಜನೆ ಎಂದು ಹೆಸರು. ಇದು ಒಂದು ಬಗೆಯ ರಾಸಾಯನಿಕ ಬದಲಾವಣೆ (ಥರ್ಮಲ್ ಡೀಕಾಂಪೊಸಿಷನ್).[೧] ಇದಕ್ಕೆ ಅನೇಕ ನಿದರ್ಶನಗಳನ್ನು ಕೊಡಬಹುದು.
2HgO → 2Hg + O2
NH4NO3 → N2O + 2H2O
(NH4)2Cr2O7 → N2 + Cr2O3 + 4H2O
ಇತ್ಯಾದಿ.
ಉಷ್ಣದ ನೆರವಿನಿಂದ ಆಗುವ ಈ ಕ್ರಿಯೆ ವಿಪರ್ಯಾಯವಾಗಬಲ್ಲುದಾದರೆ ಅಂದರೆ ಉತ್ಪನ್ನ ಪದಾರ್ಥಗಳು ಕಡಿಮೆ ಉಷ್ಣದಲ್ಲಿ ಪುನಃ ಸಂಯೋಗ ಹೊಂದಿ ಮೂಲ ಪದಾರ್ಥವನ್ನು ಉತ್ಪತ್ತಿಮಾಡುವುದಾದರೆ ಆ ಕ್ರಿಯೆಗೆ ಉಷ್ಣವಿಯೋಜನೆ ಎಂದು ಹೆಸರು. ಇದೂ ಒಂದು ಬಗೆಯ ರಾಸಾಯನಿಕ ಬದಲಾವಣೆ (ಥರ್ಮಲ್ ಡಿಸೋಸಿಯೇಷನ್). ಇದಕ್ಕೆ ಕೆಲವು ನಿದರ್ಶನಗಳು-
ಇತ್ಯಾದಿ.
ಉಲ್ಲೇಖಗಳು
ಬದಲಾಯಿಸಿ- ↑ "Chemical decomposition." New World Encyclopedia, . 8 Feb 2017, 15:17 UTC. 15 Apr 2023, 13:32 <https://www.newworldencyclopedia.org/p/index.php?title=Chemical_decomposition&oldid=1003180>
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: