ಉಮಾಶಂಕರ್ ಜೋಶಿ(೧೨ ಜುಲೈ,೧೯೧೧-೧೯ ಡಿಸೆಂಬರ್,೧೯೯೯) ಇವರು ಗುಜರಾತಿ ಬಾಷೆಯ ಲೇಖಕರು, ಚಿಂತಕರು ಮತ್ತು ಕವಿ. ೧೯೬೭ರಲ್ಲಿ ಇವರಿಗೆ ಜ್ಞಾನಪೀಠ ಪ್ರಶಸ್ತಿಯು ದೊರಕಿತು. ಗುಜರಾತ್ ರಾಜ್ಯದ ಸಬರ್‍ಕಾಂತ ಜಿಲ್ಲೆಯ ಬಾಮ್ನ ಎಂಬಲ್ಲಿ ಜನಿಸಿದ ಉಮಾಶಂಕರ್ ಜೋಶಿ, ಮುಂಬಯಿ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತದಲ್ಲಿ ಎಂ.ಎ ಪಡೆದರು. ೧೯೨೯ರಿಂದ ೧೯೩೭ರವರೆಗೆ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಸಿಹಿದ ಜೋಶಿ, ಸಾಬರ್ಮತಿ, ಯರವಾಡ ಮತ್ತು ವಿಸಾಪುರ ಜೈಲುಗಳಲ್ಲಿ ಬಂಧಿಯಾಗಿದ್ದರು. ೧೯೩೭ರಲ್ಲಿ ಮುಂಬಯಿಯಲ್ಲಿ ಶಿಕ್ಷಕರಾಗಿ ವೃತ್ತಿಜೀವನ ಶುರುಮಾಡಿದ ಜೋಷಿ, ೧೯೫೪ರ ಹೊತ್ತಿಗೆ ಗುಜರಾತ್ ವಿಶ್ವವಿದ್ಯಾಲಯದಲ್ಲಿ ಗುಜರಾತಿ ಸಾಹಿತ್ಯದ ಪ್ರೊಫೆಸರ್ ಆಗಿ ನೇಮಕವಾದರು. ೧೯೬೬-೭೨ ವರೆಗೆ ಗುಜರಾತ್ ವಿಶ್ವವಿದ್ಯಾಲಯಉಪಕುಲಪತಿಯಾಗಿ ದುಡಿದರು. ೧೯೬೮ರ ಜ್ಞಾನಪೀಠ ಪ್ರಶಸ್ತಿಯನ್ನು ನಿಶಿಥ (ಮಧ್ಯರಾತ್ರಿಯ ದೇವರುಗಳು) ಎಂಬ ಕವನ ಸಂಕಲನಕ್ಕೆ ಪಡೆದರು. ಗುಜರಾತ್‍ದಿಂದ ರಾಜ್ಯಸಭೆ ಸದಸ್ಯರೂ ಆಗಿ ಸೇವೆ ಸಲ್ಲಿಸಿದರು.

ಉಮಾಶಂಕರ್ ಜೋಶಿ
ಜನನಬಾಮ್ನಾ, ಸಬರಕಾಂತ, ಗುಜರಾತ್
ಮರಣಮುಂಬಯಿ, ಮಹಾರಾಷ್ಟ್ರ, ಭಾರತ
ವೃತ್ತಿಕವಿ ಕಾದಂಬರಿಕಾರ
ರಾಷ್ಟ್ರೀಯತೆಭಾರತೀಯ


www.umashankarjoshi.in

ಬಾಹ್ಯ ಸಂಪರ್ಕಗಳು

ಬದಲಾಯಿಸಿ