ಉಮಾತನಯರಾಜ
ವ್ಯಕ್ತಿ ಪರಿಚಯ ಉಮಾತನಯರಾಜ ಅವರು ಮಕ್ಕಳ ಸಾಹಿತ್ಯದಲ್ಲಿ ತುಂಬಾ ಕೆಲಸ ಮಾಡಿದ್ದಾರೆ. ಮೂಲತ: ವಿಜಾಪುರ ಜಿಲ್ಲೆ ಯ ಇಂಡಿ ತಾಲೂಕಿನ ಮಿರಗಿ ಗ್ರಾಮದವರು. ಕಲಬುರ್ಗಿ ಜಿಲ್ಲೆ ಯಲ್ಲಿ ಅವರ ಶಿಕ್ಷಣವಾಗಿದೆ. ಎಂ.ಎಸ್.ಆಯ್ ಪದವಿ ಮಹಾವಿದ್ಯಾಲಯದಲ್ಲಿ ಪದವಿ.ಕಥೆ ಕವನ ಲೇಖನ, ಬರೆದಿದ್ದಾರೆ. ಅವರ ಎರಡು ಕವನಗಳು ಕನ್ನಡ ಪಠ್ಯಪುಸ್ತಕದಲ್ಲಿ ಅಡಕವಾಗಿವೆ.ಆಕಾಶವಾಣಿಯಲ್ಲಿ ಕವನಗಳು ಬಿತ್ತರಗೊಂಡಿವೆ.ಪ್ರಸ್ತುತ ಸಂಯುಕ್ತ ಕರ್ನಾಟಕದಲ್ಲಿ ಉಪಸಂಪಾದಕರಾಗಿ ೧೯೯೮ ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಉಮಾತನಯರಾಜ್ ಅವರ ಹೆಸರು ರಾಜೇಂದ್ರ ಪಾಟೀಲ. ತಂದೆ ಶಂಕರರಾವ್ ಪಾಟೀಲ, ತಾಯಿ ಉಮಾಬಾಯಿ ಪಾಟೀಲ. ಉಮಾತನಯರಾಜ ಅವರ ಪ್ರಾಥಮಿಕ ಶಿಕ್ಷಣ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಾಶಾಳ, ಕಮಲಾಪುರ, ರೇವೂರ ಗ್ರಾಮಗಳಲ್ಲಿ ನಡೆಯಿತು. ಪ್ರೌಢಶಿಕ್ಷಣ ಅಫಜಲಪುರದ ಸರಕಾರಿ ಕಿರಿಯ ಮಹಾವಿದ್ಯಾಲಯದಲ್ಲಿ ೧೯೭೮-೮೧ ರ ಅವಧಿಯಲ್ಲಿ ನಡೆಯಿತು.
೧೯೮೧-೧೯೮೩ ರಲ್ಲಿ ಕಲಬುರಗಿಯ ಸರಕಾರಿ ಕಿರಿಯ ಮಹಾವಿದ್ಯಾಲಯದಲ್ಲಿ ವಿಜ್ಞಾನ ವಿಷಯದಲ್ಲಿ ಪಿಯುಸಿ ಶಿಕ್ಷಣವಾಯಿತು.