ಉಪವೀತ
ಉಪವೀತ: ಉಪ ಮತ್ತು ವ್ಯೇ ಇವುಗಳಿಂದ ನಿಷ್ಪನ್ನವಾಗಿದೆ. ವೇದದಲ್ಲಿ ವಿಹಿತವಾಗಿರು ವಂತೆ ಬಾಲಕನನ್ನು ವೇದಾಧ್ಯಯನಕ್ಕೋಸ್ಕರ ಗುರುವಿನ ಸಾನ್ನಿಧ್ಯಕ್ಕೆ ಕರೆದೊಯ್ಯುವ ಸಮಾರಂಭವಾದ ಉಪನಯನದಲ್ಲಿ ಅವನ ಎಡಭುಜದ ಮೇಲೆ ಮತ್ತು ಬಲತೋಳಿನ ಕೆಳಗಿರುವಂತೆ ಮಾಡಿಸುವ ಯಜ್ಞಸೂತ್ರಧಾರಣೆ; ಆ ಯಜ್ಞಸೂತ್ರ; ಅದರ ಧಾರಣೆಯ ಒಂದು ಸಂಸ್ಕಾರ. ಮನುಸ್ಮೃತಿಯಲ್ಲಿ ಹೇಳಿರುವಂತೆ ಉದ್ಧೃತೇ ದಕ್ಷಿಣೇ ಪಾಣಾವುಪವೀತ್ಯುಚ್ಸತೇ ದ್ವಿಜಃ. ಬಲತೋಳನ್ನು ಎತ್ತಿ ಧರಿಸಿದಾಗ ಆ ದ್ವಿಜ ಉಪವೀತೀ ಎನ್ನಿಸಿಕೊಳ್ಳುತ್ತಾನೆ.(ಬಿ.ಕೆ.ಎಸ್.)