ಉನ್ನತ ಸಸ್ಯಗಳಲ್ಲಿ ಸಂತಾನೋತ್ಪತ್ತಿ

ಹೂವಿನ ಪ್ರಜನನ ಭಾಗಗಳು

ಪೀಠಿಕೆ ಬದಲಾಯಿಸಿ

ಪ್ರತಿಯೊಂದು ಜೀವಿಗಳ ಪ್ರಮುಖವಾದ ಏಳು ಗುಣಲಕ್ಷಣಗಳೆಂದರೆ ಚಲನೆ,ಉಸಿರಾಟ,ಬೆಳವಣಿಗೆ,ವಿಸರ್ಜನೆ,ಪೋಷಣೆ,ಸಂವೇದನೆ ಮತ್ತು ಸಂತಾನೋತ್ಪತ್ತಿ.ಸಸ್ಯಗಳಲ್ಲಿ ಸಂತಾನೋತ್ಪತ್ತಿಯು ಪ್ರಮುಖವಾಗಿ ಎರಡು ವಿಧಗಳಲ್ಲಿ ನಡೆಎಯುತ್ತದೆ.೧)ಅಲೈಂಗಿಕ ಸಂತಾನೋತ್ಪತ್ತಿ ಮತ್ತು ೨)ಲೈಂಗಿಕ ಸಂತಾನೋತ್ಪತ್ತಿ.[೧]

ಸಸ್ಯಗಳ ಪ್ರಕಾರಗಳು ಬದಲಾಯಿಸಿ

  1. ಹೂ ಬಿಡದ ಸಸ್ಯಗಳು ಅಥವಾ ಅನಾವೃತ ಬೀಜ ಸಸ್ಯಗಳು.
  2. ಹೂ ಬಿಡುವ ಸಸ್ಯಗಳು ಅಥವಾ ಆವೃತ ಬೀಜ ಸಸ್ಯಗಳು.

ಸಂತಾನೋತ್ಪತ್ತಿಯ ವಿಧಗಳು ಬದಲಾಯಿಸಿ

  1. ಅಲೈಂಗಿಕ ಸಂತಾನೋತ್ಪತ್ತಿ:ಈ ವಿಧದಲ್ಲಿ ಸಂತಾನೋತ್ಪತ್ತಿಯು ಮೊನೆರಾ,ಪ್ರೊಟುಸ್ಟ,ಶೈವಲಗಳು ಮತ್ತು ಶಿಲೀಂಧ್ರ ವರ್ಗಕ್ಕೆ ಸೇರಿರಿದ ಸಸ್ಯಗಳಲ್ಲಿ ನಡೆಯುತ್ತದೆ.
  2. ಲೈಂಗಿಕ ಸಂತಾನೋತ್ಪತ್ತಿ:ಈ ವಿಧದಲ್ಲಿ ಸಂತಾನೋತ್ಪತ್ತಿಯು ಉನ್ನತ ವರ್ಗದ ಸಸ್ಯಗಳಲ್ಲಿ ನಡೆಯುತ್ತದೆ.ಈ ವಿಧವು ಪ್ರಜನನ ಕೋಶಗಳಾದ ಲಿಂಗಾಣಗಳು ಉತ್ಪಾದನೆ ಮತ್ತು ಮತ್ತು ಸಮ್ಮೀಲನ ಕ್ರಿಯೆಗಳನ್ನು ಒಳಗೊಂಡಿದೆ.ಇದರಲ್ಲಿ ೨ ವಿಧಗಳಿವೆ.

ಹೂ ಬದಲಾಯಿಸಿ

ಸಸ್ಯಗಳ ಸಂತಾನೋತ್ಪತ್ತಿಯ ಭಾಗವೇ ಹೂ.ಹೂ ಸಾಮಾನ್ಯವಾಗಿ ಎಲೆಯ ಕಂಕುಳಲ್ಲಿ ಬ್ರಾಕ್ಟ ಎಂಬ ಎಂಬ ಭಾಗದಿಂದ ಹೂ ಹುಟ್ಟುತ್ತದೆ.ಹೂ ತನ್ನದೆ ಆದ ತೊಟ್ಟಿನ ಮೇಲೆ ನಿಂತಿರುತ್ತದೆ.

ಹೂವಿನ ಪ್ರಮುಖ ಭಾಗಗಳು ಬದಲಾಯಿಸಿ

  1. ಪುಷ್ಪಪಾತ್ರೆ
  2. ಪಯಷ್ಪದಳ
  3. ಕೇಸರ ಮಂಡಲ ಮತ್ತು
  4. ಶಲಾಕೆ.

ಪರಾಗಸ್ಪರ್ಶ ಮತ್ತು ಬೀಜದ ರಚನೆ. ಬದಲಾಯಿಸಿ

ಕೀಟಗಳು ಮತ್ತು ಹಕ್ಕಿಗಳು ಹೂವಿನ ಮಕರಂದವನ್ನು ಹೀರುವಾಗ ಪರಕೀಯ ಸ್ಪರಾಗಸ್ಪರ್ಶಕ್ಕೆ ಕಾರಣವಾಗುತ್ತವೆ.ದ್ವಿಗುಣಿತ ಯುಗ್ಮವು ಭ್ರೂಣವು ಬೆಳೆದೆ ನಂತರ ಬೀಜವಾಗಿ ಮಾರ್ಪಡುತ್ತದೆ.ಬೀಜವು ಇನ್ನೊಂದು ಸಸ್ಯವಾಗಿ ಬೆಳೆಯುತ್ತದೆ.ಭ್ರೂಣದ ಸುತ್ತ ಎಂಡೋಸ್ಪರ್ಮ ಎಂಬ ಅಂಗಾಂಶ ಬೆಳೆಯುತ್ತದೆ.ಇಡೀ ಅಂಡಕವು ಬೀಜವಾಗಿ ಮಾರ್ಪಡುತ್ತದೆ.ಅಂಡಕದ ಸುತ್ತ ಇದ್ದ ಹೊದಿಕೆಗಳು ಬೀಜದ ಹೋದಿಕೆಯಾಗಿ ಮಾರ್ಪಡುತ್ತದೆ.ಅಂಡಾಶಯ ಭಾಗವು ಬೀಜವನ್ನೊಳಗೊಂಡ ಹಣ್ಣಾಗಿ ಮಾರ್ಪಡುತ್ತದೆ.ಪುಶ್ಪಪಾತ್ರೆ,ಪುಷ್ಪದಳ ಮುಂತಾದ ಹೂವಿನ ಭಾಗಗಳು ಉದುರಿ ಹೋಗುತ್ತವೆ.

ಉಲ್ಲೇಖಗಳು ಬದಲಾಯಿಸಿ

ಬಾಹ್ಯ ಸಂಪರ್ಕಗಳು ಬದಲಾಯಿಸಿ

  1. https://www.google.co.in/webhp?sourceid=chrome-instant&ion=1&espv=2&ie=UTF-8#q=7%20life%20processes
  2. http://www.biologyreference.com/Re-Se/Reproduction-in-Plants.html