ಉತ್ತರ ಡಕೋಟ
ಉತ್ತರ ಡಕೋಟ ಅಮೆರಿಕ ಸಂಯುಕ್ತಸಂಸ್ಥಾನದ ಉತ್ತರ ಮಧ್ಯ ಗುಂಪಿನ ರಾಜ್ಯಗಳಲ್ಲೊಂದು. ಉ.ಅ. 45º 55'-49º ಹಾಗೂ ಪ. ರೇ. 96º 25'-104º 3' ನಡುವೆ ಹಬ್ಬಿರುವ ಈ ರಾಜ್ಯ ಉತ್ತರ ಅಮೆರಿಕ ಖಂಡ ಪ್ರದೇಶದ ನಟ್ಟನಡುವಿನಲ್ಲಿದೆ. ಉತ್ತರಕ್ಕೆ ಕೆನಡದ ಪ್ರಾಂತ್ಯಗಳಾದ ಮ್ಯಾನಿಟೋಬ ಮತ್ತು ಸಸ್ಕ್ಯಾಚವನ್. ಪೂರ್ವದಲ್ಲಿ ಕೆಂಪು ನದಿಯಾಚೆಗೆ ಮಿನಿಸೋಟ, ದಕ್ಷಿಣಕ್ಕೆ ದಕ್ಷಿಣ ಡಕೋಟ ಹಾಗೂ ಪಶ್ಚಿಮಕ್ಕೆ ಮಾಂಟ್ಯಾನ. ಪೂರ್ವಪಶ್ಚಿಮವಾಗಿ ಪರಮಾವಧಿ ಉದ್ದ 545 ಕಿಮೀ.; ದಕ್ಷಿಣೋತ್ತರವಾಗಿ ಗರಿಷ್ಠ ಅಗಲ 340 ಕಿಮೀ. ವಿಸ್ತೀರ್ಣ 1,83,022 ಚಕಿಮೀ. ಪೂರ್ವಭಾಗದ ಗಡಿಯಾದ ಕೆಂಪುನದಿಯನ್ನು ಬಿಟ್ಟರೆ ಉಳಿದ ಮೂರು ಕಡೆಯೂ ಇದರ ಎಲ್ಲೆ ಕೃತಕ. ರಾಜ್ಯಕ್ಕೆ ಈ ಹೆಸರು ಬಂದಿರುವುದು ಅಲ್ಲಿನ ಆದಿವಾಸಿಗಳಾದ ಡಕೋಟ ಅಥವಾ ನ್ಯೂ ಇಂಡಿಯನರಿಂದ, ಡಕೋಟ ಎಂದರೆ ಮಿತ್ರರೆಂದು ಅರ್ಥ. ಅಲುಗು ಬಾಲದ ರಾಜ್ಯ ಅಥವಾ ಫ್ಲಿಕರ್ ಟೇಲ್ ಸ್ಟೇಟ್ ಎಂಬ ಅಡ್ಡಹೆಸರು ಇದಕ್ಕೆ ಬಂದಿರುವುದಕ್ಕೆ ಇಲ್ಲಿ ಸಾಮಾನ್ಯವಾಗಿರುವ ಪುಟ್ಟ ಅಳಿಲು ಕಾರಣ.
ಉತ್ತರ ಡಕೋಟಾ ರಾಜ್ಯ | |||||||||||
| |||||||||||
ಅಧಿಕೃತ ಭಾಷೆ(ಗಳು) | English[೧] | ||||||||||
Demonym | North Dakotan | ||||||||||
ರಾಜಧಾನಿ | ಬಿಸ್ಮಾರ್ಕ್ | ||||||||||
ಅತಿ ದೊಡ್ಡ ನಗರ | ಫಾರ್ಗೋ | ||||||||||
ಅತಿ ದೊಡ್ಡ ನಗರ ಪ್ರದೇಶ | Fargo metropolitan area | ||||||||||
ವಿಸ್ತಾರ | Ranked 19th in the US | ||||||||||
- ಒಟ್ಟು | 70,700 sq mi (183,272 km²) | ||||||||||
- ಅಗಲ | 211[ಸೂಕ್ತ ಉಲ್ಲೇಖನ ಬೇಕು] miles (340 km) | ||||||||||
- ಉದ್ದ | 340 miles (545 km) | ||||||||||
- % ನೀರು | 2.4 | ||||||||||
- Latitude | 45° 56′ N to 49° 00′ N | ||||||||||
- Longitude | 96° 33′ W to 104° 03′ W | ||||||||||
ಜನಸಂಖ್ಯೆ | 48thನೆಯ ಅತಿ ಹೆಚ್ಚು | ||||||||||
- ಒಟ್ಟು | {{{2000Pop}}} | ||||||||||
- ಜನಸಂಖ್ಯಾ ಸಾಂದ್ರತೆ | 11.70/sq mi (3.83/km²) 47thನೆಯ ಸ್ಥಾನ | ||||||||||
ಎತ್ತರ | |||||||||||
- ಅತಿ ಎತ್ತರದ ಭಾಗ | White Butte[೨][೩] 3,508 ft (1069 m) | ||||||||||
- ಸರಾಸರಿ | 1,900 ft (580 m) | ||||||||||
- ಅತಿ ಕೆಳಗಿನ ಭಾಗ | Red River of the North at Manitoba border[೨][೩] 751 ft (229 m) | ||||||||||
ಸಂಸ್ಥಾನವನ್ನು ಸೇರಿದ್ದು | November 2, 1889 (39th) | ||||||||||
Governor | Jack Dalrymple (R) | ||||||||||
Lieutenant Governor | Drew Wrigley (R) | ||||||||||
U.S. Senators | John Hoeven (R) Heidi Heitkamp (D) | ||||||||||
Congressional Delegation | Kevin Cramer (R) (list) | ||||||||||
Time zones | |||||||||||
- most of state | Central: UTC -6/-5 | ||||||||||
- southwest | Mountain: UTC -7/-6 | ||||||||||
Abbreviations | ND US-ND | ||||||||||
Website | www.nd.gov |
ಮೇಲ್ಮೈ ಲಕ್ಷಣ
ಬದಲಾಯಿಸಿಉತ್ತರ ಡಕೋಟವನ್ನು ಪೂರ್ವಪಶ್ಚಿಮವಾಗಿ ಮೂರು ಮುಖ್ಯ ಮೈದಾನಪ್ರದೇಶಗಳಾಗಿ ವಿಭಾಗಿಸಬಹುದು. ಇದರಲ್ಲಿ ಅತ್ಯಂತ ಪೂರ್ವಕ್ಕಿರುವ ಬಯಲು ಕೆಂಪು ನದಿಯ ಕಣಿವೆಯ ಪ್ರದೇಶ. ಇದು ಪುರಾತನ ಭೂಕಲ್ಪದಲ್ಲಿ ಒಂದು ಹಿಮನದೀಪಾತ್ರ. ಈ ಕಣಿವೆಯ ಪಶ್ಚಿಮಕ್ಕೆ ಮಿಸೂರಿ ಪ್ರಸ್ಥಭೂಮಿಯ ಒಳಭಾಗಕ್ಕಿರುವ ಮೈದಾನ ಪ್ರದೇಶ ಸಮುದ್ರಮಟ್ಟಕ್ಕಿಂತ 395-490ಮೀ. ಗಳಷ್ಟು ಎತ್ತರವಿದೆ. ಇದರ ವಿಸ್ತಾರ ಪೂರ್ವ ಪಶ್ಚಿಮವಾಗಿ 112 ಕಿಮೀ.; ದಕ್ಷಿಣೋತ್ತರವಾಗಿ 320 ಕಿಮೀ. ಅಲ್ಲಲ್ಲಿರುವ ಸರೋವರಗಳ ಪೈಕಿ ದೆವ್ವಗಳ ಸರೋವರ (ಡೆವಿಲ್ಸ್ ಲೇಕ್) ಅತಿ ದೊಡ್ಡದು. ಟಟ್ರ್ಲ್ ಪರ್ವತಗಳು ಈ ಪ್ರದೇಶದ ಉತ್ತರದ ಕಿರೀಟ. ಈ ರಾಜ್ಯದ 3ನೆಯ ಹಾಗೂ ಅತಿ ಎತ್ತರದ ಮೆಟ್ಟಲಿನಂತಿದ್ದು ವಾಯವ್ಯ ಈಶಾನ್ಯವಾಗಿ ಹಬ್ಬಿರುವ ಪ್ರದೇಶವೇ ಮಿಸೂರಿ ಪ್ರಸ್ಥಭೂಮಿ. ಇಲ್ಲಿ ಮಿಸೂರಿ, ಚಿಕ್ಕ ಮಿಸೂರಿ, ಹಾರ್ಟ್, ಕ್ಯಾನನ್ ಬಾಲ್ ಮತ್ತು ನೈಫ್ ನದಿಗಳು ಮುಖ್ಯ. ಇವೇ ಅಲ್ಲದೆ ಅನೇಕ ಚಿಕ್ಕಪುಟ್ಟ ತೊರೆಗಳು ಪ್ರದೇಶದ ಎಲ್ಲ ದಿಕ್ಕುಗಳಲ್ಲೂ ಹರಡಿವೆ. ಎದ್ದು ನಿಂತಂತೆ ತೋರುವ ಕೋಡುಗಲ್ಲುಗಳ ಶಿಖರಗಳೂ ಶಿಲಾಪೀಠಗಳೂ ಇಲ್ಲಿನ ವೈಶಿಷ್ಟ್ಯ. ಮಳೆಯ ಹೊಡೆತ, ನದಿಗಳ ಕೊರೆತಗಳಿಂದಾಗಿ ಇಲ್ಲಿನ ನೆಲ ತುಂಡು ತುಂಡಾಗಿದೆ. ಇದರಿಂದಾಗಿ ಈ ನೆಲ ಬೇಸಾಯಕ್ಕೆ ನಿರುಪಯುಕ್ತ. ಆದರೆ ಇಲ್ಲಿ ಸೋಡಿಯಂ ಸಲ್ಫೇಟ್, ಕಲ್ಲಿದ್ದಲು ಮುಂತಾದ ಖನಿಜಗಳು ಹೇರಳ. ಈ ರಾಜ್ಯದ ಅತ್ಯುನ್ನತ ಪ್ರದೇಶವೆಂದರೆ ಸಮುದ್ರ ಮಟ್ಟದಿಂದ 1057ಮೀ ಎತ್ತರವಿರುವ ಬ್ಲ್ಯಾಕ್ ಬ್ಯೂಟ್ ಎಂಬ ಒಂಟಿ ಗುಡ್ಡ.
ವಾಯುಗುಣ
ಬದಲಾಯಿಸಿಉತ್ತರ ಡಕೋಟದ್ದು ಖಂಡಾಂತರ ವಾಯುಗುಣ. ಉಷ್ಣತೆಯ ಏರಿಳಿತದ ವ್ಯಾಪ್ತಿ ಬಲು ಹೆಚ್ಚು. ಬೇಸಿಗೆಯಲ್ಲಿ 56ºಸೆ. ಗೆ ಏರುವ ಪಾದರಸ, ಚಳಿಗಾಲದಲ್ಲಿ ತಳಕ್ಕಿಳಿದು-17ºಸೆ. ಮುಟ್ಟುತ್ತದೆ. ಮಳೆ ಆಗ್ನೇಯದಲ್ಲಿ 56 ಸೆಂಮೀ. ನೈರುತ್ಯದಲ್ಲಿ 36 ಸೆಮೀ. ಇದರಲ್ಲಿ ಹೆಚ್ಚು ಪಾಲು ವಸಂತಕಾಲದ ಉತ್ತರಾರ್ಧದಲ್ಲೂ ಬೇಸಗೆಯಲ್ಲೂ ಬೀಳುತ್ತದೆ. ಒಂದು ವರ್ಷ ಸುವೃಷ್ಟಿಯಾದರೆ ಇನ್ನೊಂದು ವರ್ಷ ಅನಾವೃಷ್ಟಿ. --ಸ್ವಾಭಾವಿಕ ಸಸ್ಯವರ್ಗ== ಹೆಚ್ಚಿನ ಸಂಖ್ಯೆಯಲ್ಲಿ ಗಿಡಮರಗಳು ಕೆಂಪು ನದೀ ಕಣಿವೆಯಲ್ಲೂ ಟಟ್ರ್ಲ್ ಪರ್ವತ ಪ್ರದೇಶಗಳಲ್ಲೂ ಕೆನಡದ ಎಲ್ಲೆಯ ಬೆಟ್ಟಗುಡ್ಡಗಳಲ್ಲೂ ಕಂಡುಬರುತ್ತವೆ. ದೆವ್ವಗಳ ಸರೋವರ ಹಾಗೂ ಇತರ ಸರೋವರಗಳ ಸುತ್ತಮುತ್ತ ಸ್ವಾಭಾವಿಕ ಸಸ್ಯವರ್ಗವುಂಟು. ಇಲ್ಲಿ ಪಾಪ್ಲರ್, ಕಾಟನ್ವುಡ್ ಸಾಮಾನ್ಯ. ಮಿಸೂರಿ ನದಿಯ ದಡಗಳಲ್ಲೂ ಬ್ಯಾಡ್ಲ್ಯಾಂಡ್ ಪ್ರದೇಶದಲ್ಲೂ ಪೊದೆ ಮತ್ತು ಕುರುಚಲು ವಿಶೇಷ.
ಖನಿಜಸಂಪತ್ತು
ಬದಲಾಯಿಸಿಉತ್ತರ ಡಕೋಟದಲ್ಲಿ ಹೆಚ್ಚಿನ ಪ್ರಮಾಣದ ಲಿಗ್ನೈಟ್ ಕಲ್ಲಿದ್ದಲು ಮತ್ತು ಸ್ಲೇಟುಶಿಲೆ ಗಣಿಗಳಿವೆ. ಇಲ್ಲಿ ಹೇರಳವಾಗಿ ದೊರಕುವ ಸ್ಲೇಟುಶಿಲೆ ಮತ್ತು ಜೇಡಿಮಣ್ಣು ಗಳು ಇಟ್ಟಿಗೆ, ಹೆಂಚು ಮತ್ತು ಪಿಂಗಾಣಿ ಕೈಗಾರಿಕೆಗಳ ಸ್ಥಾಪನೆಗೆ ಸಹಾಯಕ. ಈ ರಾಜ್ಯದ ಉತ್ತರ ಭಾಗದಲ್ಲಿ ದೊರಕುವ ಬೆಣಚುಶಿಲೆ ಇನ್ನೊಂದು ಮುಖ್ಯ ಖನಿಜ. ಇತ್ತೀಚೆಗೆ ಪೆಟ್ರೋಲಿಯಂ ಉತ್ಪಾದನಾ ಮೊತ್ತ ಹೆಚ್ಚಾಗಿದೆ.
ವ್ಯವಸಾಯ ಮತ್ತು ಪಶುಪಾಲನೆ
ಬದಲಾಯಿಸಿಈ ರಾಜ್ಯ ವ್ಯವಸಾಯವನ್ನೇ ಹೆಚ್ಚಾಗಿ ಅವಲಂಬಿಸಿದೆ. ಸಾಗುವಳಿ ಕ್ಷೇತ್ರಗಳ ವಿಸ್ತರಣೆಯಿಂದ ಬೇಸಾಯದಲ್ಲಿ ಯಂತ್ರದ ಪಾತ್ರ ಹೆಚ್ಚುತ್ತಿದೆ. ಈ ಕೃಷಿ ಕ್ಷೇತ್ರಗಳ ಸರಾಸರಿ ವಿಸ್ತೀರ್ಣ ಸು. 325 ಹೆಕ್ಟೇರು. ಒಟ್ಟು ಫಸಲಿನ ಮೌಲ್ಯದಲ್ಲಿ ಅರ್ಧಪಾಲು ವಸಂತಗೋದಿಯದು. ಬಾರ್ಲಿ ಫ್ಲಾಕ್ಸ್ ಸೀಡ್, ಡುರಂ ಗೋದಿ, ತೊಕೆ ಗೋದಿ (ಓಟ್ಸ್), ಆಲೂಗಡ್ಡೆ, ಸೋಯಬೀನ್ಸ್, ಸಕ್ಕರೆಬೀಟ್, ಮೆಕ್ಕೆಜೋಳ, ಹುಲ್ಲು-ಇತರ ಫಸಲು. ಪಶುಪಾಲನೆ ಇನ್ನೊಂದು ಕಸಬು. ದನಕರು, ಹಂದಿ, ಕುರಿಗಳ ಪೋಷಣೆಯಲ್ಲದೆ ಕೋಳಿ ಸಾಕಣೆಯೂ ಹೆಚ್ಚುತ್ತಿದೆ. ಹೈನುಗಾರಿಕೆಯೂ ಲಾಭಕರ. ಸಹಕಾರಿ ಕ್ರಯ-ವಿಕ್ರಯಗಳಲ್ಲಿ ಇಲ್ಲಿನ ರೈತರಿಗೆ ಹೆಚ್ಚಿನ ಆಸಕ್ತಿ. ಸಹಕಾರಿ ಮಾರಾಟ ಹಾಗೂ ಬಳಕೆದಾರರ ಸಹಕಾರ ಸಂಸ್ಥೆಗಳು ಎರಡನೆಯ ಯುದ್ಧಾನಂತರದ ಕಾಲದಲ್ಲಿ ಹೆಚ್ಚಾಗಿ ಬೆಳೆದಿವೆ. ಮಿಸೂರಿ ಜಲಾನಯನ ಪ್ರದೇಶದಲ್ಲಿ ಸಂಯುಕ್ತ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ಕೈಗೊಂಡಿರುವ ಜಲಾಭಿವೃದ್ಧಿ ಯೋಜನೆಗಳಿಂದ ನೀರಾವರಿ ಸೌಲಭ್ಯವೇ ಅಲ್ಲದೆ ವಿದ್ಯುತ್ತಿನ ಉತ್ಪತ್ತಿಯೂ ಸಾಧ್ಯವಾಯಿತು. ಮಿಸೂರಿಗೆ ಅಡ್ಡಲಾಗಿ ಕಟ್ಟಿದ ಗ್ಯಾರಿಸನ್ ಕಟ್ಟೆ, ಹಾರ್ಟ್ ನದಿಗೆ ಅಡ್ಡಲಾಗಿರುವ ಡಿಕಿನ್ಸನ್ ಮತ್ತು ಹಾರ್ಟ್ ಬ್ಯೂಟ್ ಕಟ್ಟೆ, ಜೇಮ್ಸ್ ನದಿಗೆ ಅಡ್ಡಲಾದ ಜೇಮ್ಸ್ ಟೌನ್ ಕಟ್ಟೆ, ಷಿಯೆನ್ ನದಿಯ ಮೇಲಣ ಬಾಲ್ಡ್‌ಹಿಲ್ ಕಟ್ಟೆ, ಫಾರ್ಕ್ ನದಿಯ ದಕ್ಷಿಣ ಕವಲಿನ ಹಮ್ಮೆ ಕಟ್ಟೆಗಳು ಮುಖ್ಯ.
ಕೈಗಾರಿಕೆಗಳು
ಬದಲಾಯಿಸಿಉತ್ತರ ಡಕೋಟದಲ್ಲಿ ಕೈಗಾರಿಕೆಗಳು ಬಹಳ ತಡವಾಗಿ ಪ್ರಾರಂಭವಾದವು. ಇಲ್ಲಿನ ವಾಯುಗುಣ ಸಮರ್ಪಕವಾಗಿಲ್ಲದ್ದೂ ಜನಭರಿತ ಪೇಟೆಗಳಿಂದ ಈ ರಾಜ್ಯ ದೂರದಲ್ಲಿರುವುದೂ ಕೈಗಾರಿಕೆಗೆ ಒದಗಿ ಬರುವ ಸಾಮಗ್ರಿ ಇಲ್ಲಿ ಹೆಚ್ಚಾಗಿ ಉತ್ಪಾದನೆಯಾಗ ದಿದ್ದದ್ದೂ ಇದಕ್ಕೆ ಕಾರಣ. ಇಲ್ಲಿನ ಕೈಗಾರಿಕೆಗಳು ಮುಖ್ಯವಾಗಿ ಕೃಷಿ ಮತ್ತು ಪಶುಪಾಲನೆಗೆ ಸಂಬಂಧಪಟ್ಟಂಥವು. ಬೆಣ್ಣೆ, ಗಿಣ್ಣು, ಹಾಲಿನ ಪುಡಿ ಇವೇ ಮುಂತಾದ ಹೈನು ವಸ್ತುಗಳ ಉತ್ಪಾದನೆಯಾಗುತ್ತಿದೆ. ಹಿಟ್ಟಿನ ಗಿರಣಿಗಳು ರಾಜ್ಯಾದ್ಯಂತ ಹರಡಿವೆ. ಮಾಂಸ ಸಂವೇಷ್ಟನ ಕೈಗಾರಿಕೆಗಳೂ ಅಲ್ಲಲ್ಲಿ ಉಂಟು. ಆಲೂಗೆಡ್ಡೆಯ ಆಹಾರ ತಯಾರಿಕೆ, ಕೃಷಿ ಉಪಕರಣ ಕೈಗಾರಿಕೆ, ಕಟ್ಟಡ ವಸ್ತು ತಯಾರಿಕೆ ಇವೂ ಮುಖ್ಯ. ಇಲ್ಲಿನ ಉದ್ಯಮಗಳು ಸಾಮಾನ್ಯವಾಗಿ ಸಣ್ಣ ಪ್ರಮಾಣದವು.
ಜನಸಂಖ್ಯೆ, ಮುಖ್ಯಪಟ್ಟಣ
ಬದಲಾಯಿಸಿಉತ್ತರ ಡಕೋಟದ ಜನಸಂಖ್ಯೆ ೭,೨೩,೩೯೩.(೨೦೧೩)[೪] ಜನಸಾಂದ್ರತೆ ಚ.ಕಿ.ಮೀ.ಗೆ 91 (ಇಡೀ ಸಂಯುಕ್ತಸಂಸ್ಥಾನದಲ್ಲಿ 49.6) ಗ್ರಾಮಾಂತರ ವಾಸಿಗಳದೇ ಅಧಿಕ ಪ್ರಮಾಣ (64.8%). ರಾಜಧಾನಿ ಬಿಸ್ಮಾರ್ಕ್. ಜನಸಂಖ್ಯೆ 50,000 (2000). ಇತರ ನಗರಗಳು ಫಾರ್ಗೊ (70.500), ಗ್ರಾಂಡ್ ಫೋಕ್ರ್ಸ್ (46,000), ಮಿನಟ್ (36,650). ಜೇಮ್ಸ್ ಟೌನ್ (16,280) ಡಿಕಿನ್ ಸನ್ (15,924) ಇತ್ಯಾದಿ.(ಕೆ.ಎನ್.ಸಿ.)
ಇತಿಹಾಸ
ಬದಲಾಯಿಸಿಇಲ್ಲಿನ ವನ್ಯಮೃಗಸಂಪತ್ತೂ ಆರೋಗ್ಯಕರ ವಾಯುಗುಣವೂ ಇಂಡಿಯನ್ನರ ಅನೇಕ ಬುಡಕಟ್ಟುಗಳನ್ನು ಬಹು ಹಿಂದೆಯೇ ಇಲ್ಲಿಗೆ ಆಕರ್ಷಿಸಿದವು. ಡಕೋಟರು ಯುದ್ಧಪ್ರಿಯರು, ಬಿಳಿಯರ ದ್ವೇಷಿಗಳು. ಸಿಟಿಂಗ್ ಬುಲ್ ಇವರ ನಾಯಕ. ಉತ್ತರ ಡಕೋಟದ ನೆಲದ ಮೇಲೆ ಮೊಟ್ಟಮೊದಲು ಕಾಲಿಟ್ಟ ಬಿಳಿಯರು ಫ್ರೆಂಚರು (1738). ಇವರಲ್ಲೊಬ್ಬನ ಇಬ್ಬರು ಮಕ್ಕಳು ನಾಲ್ಕು ವರ್ಷಗಳ ಅನಂತರ ಇಲ್ಲಿಗೆ ಬಂದು ಇಲ್ಲಿಂದ ಪಶ್ಚಿಮದ ಸಮುದ್ರತೀರಕ್ಕೆ ಹಾದಿಯ ಅನ್ವೇಷಣೆಯಲ್ಲಿ ತೊಡಗಿ ವಿಫಲರಾದರು. ಹಡ್ಸನ್ ಕೊಲ್ಲಿಯ ಬಳಿಯ ಪ್ರದೇಶವನ್ನು ಬಿಟ್ಟು ಉಳಿದ ಉತ್ತರ ಡಕೋಟದ ನೆಲವನ್ನೆಲ್ಲ ಒಳಗೊಂಡಿದ್ದ ಲವೀಸಿಯಾನದ ಮೇಲಣ ಒಡೆತನವನ್ನು ಮೊದಲು ಫ್ರೆಂಚರೂ ಅನಂತರ ಸ್ಪೇನಿಗರೂ ಸಾಧಿಸಿದರು. ಸ್ಪೇನಿಗರ ಆಳ್ವಿಕೆಯ ಕಾಲದಲ್ಲಿ ಬ್ರಿಟಿಷರಿಗೆ ಇಲ್ಲಿನ ಮಿಸೂರಿ ನದೀ ತೀರದ ಇಂಡಿಯನ್ನರೊಂದಿಗೆ ತುಪ್ಪುಳು ವ್ಯಾಪಾರ ಮಾಡಲು ಅಪ್ಪಣೆ ದೊರಕಿತ್ತು. ಲವೀಸಿಯಾನ ಪ್ರದೇಶವನ್ನು ಅಮೆರಿಕ ಸಂಯುಕ್ತ ಸಂಸ್ಥಾನ 1803ರಲ್ಲಿ ಕೊಂಡುಕೊಂಡ ಮೇಲೆ ಈ ಪ್ರದೇಶದ ತುಪ್ಪುಳ ವ್ಯಾಪಾರ ಬೆಳೆಯಿತು. ಅಮೆರಿಕನ್ ತುಪ್ಪುಳು ಕಂಪನಿಯವರು ಇಲ್ಲಿ ಕೆಲವು ಕೋಟೆ ಕಟ್ಟಿಕೊಂಡರು. 1812ರಲ್ಲಿ ನಡೆದ ಯುದ್ಧದಿಂದಾಗಿ ಬ್ರಿಟಿಷರು ತಮ್ಮ ಕೆನೆಡಿಯನ್ ವಸಾಹತನ್ನು ದಕ್ಷಿಣಾಭಿಮುಖವಾಗಿ ಈ ಪ್ರದೇಶದಲ್ಲೂ ಬೆಳೆಸುವ ಆಶೆ ತೊರೆಯಬೇಕಾಯಿತು. 49ನೆಯ ರೇಖಾಂಶದ ಉದ್ದಕ್ಕೂ ರಾಕಿ ಪರ್ವತಗಳವರೆಗೆ ಗಡಿ ನಿರ್ಧಾರವಾದದ್ದು 1878ರ ಪ್ಯಾರಿಸ್ ಕೌಲಿನ ಪರಿಣಾಮವಾಗಿ. ಉತ್ತರ ಡಕೋಟದಲ್ಲಿ ಬಿಳಿಯರ ವಸತಿ ಸ್ಥಾಪನೆಯಾದದ್ದು 1812ರಲ್ಲಿ. 1823ರ ವೇಳೆಗೆ ಇಲ್ಲಿ 350 ಮಂದಿ ಬಿಳಿಯರಿದ್ದರು. ಇಂಡಿಯನ್ನರ ನೆಲವನ್ನೆಲ್ಲ ಬಿಳಿಯರು ಆಕ್ರಮಿಸಿಕೊಂಡು ಅವರ ಪಶುಸಂಪತ್ತಿಯ ನಾಶಕ್ಕೆ ಕಾರಣರಾದ್ದರಿಂದ 1850 ರಿಂದ ಮುಂದೆ 20 ವರ್ಷಕಾಲ ಇಲ್ಲಿನ ಬಿಳಿಯರಿಗೂ ಇಂಡಿಯನ್ನರಿಗೂ ಕದನಗಳು ನಡೆದವು. ಕ್ರಮೇಣ ಬಿಳಿಯರು ಈ ಮೂಲವಾಸಿಗಳನ್ನು ಮಿಸೂರಿಯ ಪಶ್ಚಿಮದ ಬ್ಯಾಡ್ಲ್ಯಾಂಡಿಗೆ ಒತ್ತರಿಸಿದರು. ಉತ್ತರ ಡಕೋಟದ ಪೂರ್ವಭಾಗವೆಲ್ಲ ಬಿಳಿಯರ ಕೈವಶವಾಗಿ, ಈ ರಾಜ್ಯದ ಪೂರ್ವಗಡಿಗೆ ರೈಲುರಸ್ತೆ ನಿರ್ಮಾಣವಾದಾಗ (1871) ಇಲ್ಲಿನ ಚಟುವಟಿಕೆಗೆ ಹೊಸ ಹುರುಪು ಬಂತು. ಮುಂದಿನ ಹತ್ತು ವರ್ಷ ಕೆಂಪು ನದೀಕಣಿವೆಯ ಅಭಿವೃದ್ಧಿಯ ಕಾಲ. ಪಶ್ಚಿಮಾಭಿಮುಖವಾಗಿ ರೈಲು ವ್ಯವಸ್ಥೆ ವಿಸ್ತರಿಸಿದಂತೆಲ್ಲ ಈ ರಾಜ್ಯ ಬೆಳೆಯಿತು. 1861-89ರ ವರೆಗೂ ಉತ್ತರ-ದಕ್ಷಿಣ ಡಕೋಟಗಳು ಪ್ರತ್ಯೇಕವಾಗಿರಲಿಲ್ಲ. ಡಕೋಟ ಪ್ರದೇಶವೆಂದೇ ಕರೆಯಲಾಗುತ್ತಿದ್ದ ಈ ನೆಲವನ್ನು 1889ರಲ್ಲಿ ಒಡೆದು ಎರಡು ರಾಜ್ಯ ಸೃಷ್ಟಿಸಿದಾಗ ಉತ್ತರ ಡಕೋಟಕ್ಕೊಂದು ಪ್ರತ್ಯೇಕ ಸಂವಿಧಾನ ರಚನೆಯಾಯಿತಲ್ಲದೆ ಆ ವರ್ಷದ ನವಂಬರ್ 2ರಂದು ಈ ರಾಜ್ಯ ಅಮೆರಿಕ ಸಂಯುಕ್ತಸಂಸ್ಥಾನಕ್ಕೆ ಸೇರಿತು. ಆಗಿನ ಜನಸಂಖ್ಯೆ 1,75,000. 1890 - 1915ರ ವರೆಗಿನ ಕಾಲದಲ್ಲಿ ರಾಜ್ಯ ಬೆಳೆಯಿತು. ಹೊಸ ಹೊಸ ಧಾನ್ಯ ಪ್ರದೇಶಗಳ ದ್ವಾರ ತೆರೆಯುವುದಕ್ಕೆ ಇಲ್ಲಿನ ರೈಲು ಕಂಪನಿಗಳ ತೀವ್ರ ಸ್ಪರ್ಧೆ ಬಹುಮಟ್ಟಿಗೆ ಕಾರಣ. ವಲಸೆಗಾರರು ಗುಂಪುಗುಂಪಾಗಿ ಬಂದರು. ವರ್ಷಕ್ಕೆ ಸುಮಾರು 18,000 ವಲಸೆಗಾರ ಕುಟುಂಬಗಳು ಇಲ್ಲಿ ನೆಲಸಿದವು. ಮಿಸೂರಿ ನದಿಯಾಚೆಗೂ ವಲಸೆಗಾರರ ದಂಡು ದಾಳಿಯಿಟ್ಟಿತು. ಒಂದನೆಯ ಮಹಾಯುದ್ಧಾನಂತರ ಕಾಲದವರೆಗೂ ಇದಕ್ಕೆ ತಡೆಯೇ ಇರಲಿಲ್ಲ. ಅಲ್ಲಿಂದೀಚೆಗೆ ಸಂಭವಿಸಿದ ಮುಗ್ಗಟ್ಟೂ ಅನಾವೃಷ್ಟಿಯೂ ದೂಳಿನ ಬಿರುಗಾಳಿಯೂ ಇಲ್ಲಿನ ಆರ್ಥಿಕ ವ್ಯವಸ್ಥೆಯ ಮೇಲೆ ಬಲವಾದ ಪೆಟ್ಟು ಹಾಕಿದವು. ಎರಡನೆಯ ಯುದ್ಧಕಾಲದಲ್ಲಿ ಮತ್ತೆ ಪರಿಸ್ಥಿತಿ ಸುಧಾರಿಸಿತೆನ್ನಬಹುದು. ಉತ್ತರ ಡಕೋಟದ ಜನ ಸಾಮಾನ್ಯವಾಗಿ ರಿಪಬ್ಲಿಕನ್ ಪಕ್ಷದವರು. ಬೇಸಾಯದ ಮುಗ್ಗಟ್ಟಿನ ಕಾಲದಲ್ಲಿ ಇಲ್ಲಿನ ರೈತರೂ ಇತರ ಅತೃಪ್ತ ಜನರೂ ಸ್ವತಂತ್ರ್ಯ ಸಂಸ್ಥೆ ಕಟ್ಟಿಕೊಂಡಿದ್ದ ರಾದರೂ ಈ ತೀವ್ರಗಾಮಿಗಳ ಪ್ರಭಾವ ದೀರ್ಘಕಾಲ ಉಳಿಯಲಿಲ್ಲ.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- State of North Dakota official website
- North Dakota tourism website
- Energy Profile for North Dakota
- USGS real-time, geographic, and other scientific resources of North Dakota Archived 2007-02-19 ವೇಬ್ಯಾಕ್ ಮೆಷಿನ್ ನಲ್ಲಿ.
- U.S. Census Bureau facts of North Dakota Archived 2006-06-15 ವೇಬ್ಯಾಕ್ ಮೆಷಿನ್ ನಲ್ಲಿ.
- North Dakota State Facts – USDA
- Pictures of the Dakotas: Badlands and Theodore Roosevelt National Parks Archived 2017-01-05 ವೇಬ್ಯಾಕ್ ಮೆಷಿನ್ ನಲ್ಲಿ.
- GhostsOfNorthDakota.com – a pictorial documentary of North Dakota "ghost towns"
- ಉತ್ತರ ಡಕೋಟ ಓಪನ್ ಡೈರೆಕ್ಟರಿ ಪ್ರಾಜೆಕ್ಟ್
ಉಲ್ಲೇಖಗಳು
ಬದಲಾಯಿಸಿ- ↑ "North Dakota Century Code, CHAPTER 54-02-13" (PDF). Retrieved September 13, 2013.
- ↑ ೨.೦ ೨.೧ "Elevations and Distances in the United States". United States Geological Survey. 2001. Archived from the original on ಅಕ್ಟೋಬರ್ 15, 2011. Retrieved October 24, 2011.
- ↑ ೩.೦ ೩.೧ Elevation adjusted to North American Vertical Datum of 1988.
- ↑ "Table 1. Annual Estimates of the Population for the United States, Regions, States, and Puerto Rico: April 1, 2010 to July 1, 2013" (CSV). 2013 Population Estimates. United States Census Bureau, Population Division. December 30, 2013. Retrieved January 6, 2014.
{{cite web}}
: External link in
(help)|work=