ಉತ್ತರ ಮೀಮಾಂಸಾ: ಬ್ರಹ್ಮಸ್ವರೂಪ ವಿಚಾರಶಾಸ್ತ್ರ. ವೇದಾರ್ಥ ವಿಚಾರ ಪುರ್ವೋತ್ತರ ಭೇದಗಳೆಂದು ಎರಡು ವಿಧ. ಮೊದಲನೆಯದು ಪೂರ್ವಮೀಮಾಂಸಾ. ಎರಡನೆಯದು ಉತ್ತರಮೀಮಾಂಸಾ. ಗೃಹಸ್ಥಾಶ್ರಮಿ ಪತ್ನೀಸಮೇತನಾಗಿ ಮಾಡುವ ವೈದಿಕಕರ್ಮಗಳ ವಿಚಾರಮಾಡುವ ಶಾಸ್ತ್ರ ಪೂರ್ವಮೀಮಾಂಸಾ. ಮೋಕ್ಷವಿಚಾರಮಾಡುವ ಶಾಸ್ತ್ರ ಉತ್ತರಮೀಮಾಂಸಾ. ಪತ್ನಿಯ ಸಹಾಯವಿಲ್ಲದೆ ಮೋಕ್ಷಪ್ರದ ಮಾರ್ಗವನ್ನು ಇದು ವಿಚಾರಮಾಡುತ್ತದೆ. ಈ ವಿಚಾರಕ್ಕೆ ವ್ಯಾಸಮಹರ್ಷಿ ರಚಿಸಿರುವ ಬ್ರಹ್ಮಸೂತ್ರಗಳೇ ತಳಹದಿ. ಈ ಸೂತ್ರಗಳು ಅನೇಕಾರ್ಥಗಳಿಂದ ಗರ್ಭಿತವಾಗಿವೆ. ಬುದ್ಧಿಕೌಶಲ್ಯದಿಂದ ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಮೊದಲಾದ ರೂಪಗಳನ್ನು ತಳೆದ ವ್ಯಾಖ್ಯಾನಗಳು ಹೊರಟಿವೆ. ಈ ಎಲ್ಲದರ ಶಾಸ್ತ್ರರೂಪ ವಿಚಾರಪರಂಪರೆಯೇ ಉತ್ತರಮೀಮಾಂಸಾ.


ಇದನ್ನೂ ನೋಡಿ

ಬದಲಾಯಿಸಿ