ಉಡುಪಿ ಸೀರೆ ಕರ್ನಾಟಕ ರಾಜ್ಯದ ಕರಾವಳಿಯ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೈಮಗ್ಗದಲ್ಲಿ ನೇಕಾರರು ಕೈಯಲ್ಲಿ ನೇಯ್ದ ಸೀರೆಯ ಹೆಸರಾಗಿದೆ.

ಉಡುಪಿ ಸೀರೆ
ಉಡುಪಿ ಸೀರೆ ವಿನ್ಯಾಸ

ವ್ಯುತ್ಪತ್ತಿ

ಬದಲಾಯಿಸಿ

ಈ ಸೀರೆಯು ಭಾರತದ ಪಶ್ಚಿಮ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೇರಳದ ಕಾಸರಗೋಡು ಜಿಲ್ಲೆಯ ವ್ಯಾಪ್ತಿಯಲ್ಲಿ ನೇಕಾರ ಜನಾಂಗದವರು ಜೀವನಾಧಾರವಾಗಿ ನಡೆಸಿಕೊಂಡು ಬಂದ ಕುಲಕಸುಬಾಗಿದೆ. ಪ್ರಮುಖವಾಗಿ ಸೆಟ್ಟಿಗಾರ್ ಅಥವಾ ಶೆಟ್ಟಿಗಾರ್ ಎಂಬ ಜಾತಿಗೆ ಸೇರಿದ ಜನರು ಈ ಕೆಲಸದಲ್ಲಿ ಪರಂಪರಾಗತವಾಗಿ ತೊಡಗಿಸಿಕೊಂಡಿದ್ದರು.

ಇತಿಹಾಸ

ಬದಲಾಯಿಸಿ

ಸ್ವತಂತ್ರ ಪೂರ್ವದಲ್ಲಿ ಮಹಾತ್ಮ ಗಾಂಧಿ ಯವರ ಸಹಕಾರಿ ತತ್ವದಿಂದ ಪ್ರೇರಿತರಾಗಿ ನೇಕಾರರ ಸಂಘಗಳನ್ನು ಕಟ್ಟಿ ಸದಸ್ಯರಾಗಿ ಸ್ವಾವಲಂಬಿ ಜೀವನ ಆರಂಭಿಸಿದರು ನೇಕಾರರು. ಬಾಸೆಲ್ ಮಿಷನಿನ ರೆ.ಮೆರ್ಟ್ಜ್ ಎಂಬುವವರಿಂದ ೧೮೪೪ ರಲ್ಲಿ ನೇಕಾರಿಕೆಯು ಆರಂಭವಾಯಿತು. ಆ ಕಾಲದಲ್ಲಿ ಜೇಡರ, ಸಾಲಿಗ, ಬಿಲ್ಲವ, ಬಂಟ, ಮುಸ್ಲಿಂ ಮತ್ತು ಕ್ರಿಶ್ಚನರೂ ನೇಯುವ ಕೆಲಸ ಮಾಡುತಿದ್ದರು.

ಪ್ರಮುಖ ನೇಕಾರರ ಸಂಘಗಳು

ಬದಲಾಯಿಸಿ
  1. ತಾಳಿಪ್ಪಾಡಿ ನೇಕಾರರ ಸಂಘ
  2. ಉಡುಪಿ ಪ್ರಾಥಮಿಕ ನೇಕಾರರ ಸಹಕಾರಿ ಸಂಘ
  3. ಶಿವಳ್ಳಿ ಪ್ರಾಥಮಿಕ ನೇಕಾರರ ಸಹಕಾರಿ ಸಂಘ
  4. ಬಸ್ರೂರು ಪ್ರಾಥಮಿಕ ನೇಕಾರರ ಸಹಕಾರಿ ಸಂಘ
  5. ಬ್ರಹ್ಮಾವರ ಪ್ರಾಥಮಿಕ ನೇಕಾರರ ಸಹಕಾರಿ ಸಂಘ
  6. ಮಿಜಾರು ಪ್ರಾಥಮಿಕ ನೇಕಾರರ ಸಹಕಾರಿ ಸಂಘ
  7. ಪಡುಪಣಂಬೂರು ಪ್ರಾಥಮಿಕ ನೇಕಾರರ ಸಹಕಾರಿ ಸಂಘ
  8. ಮಂಗಳೂರು ಪ್ರಾಥಮಿಕ ನೇಕಾರರ ಸಹಕಾರಿ ಸಂಘ []

ತಯಾರಿಸುವ ವಿಧಾನ

ಬದಲಾಯಿಸಿ
 
ಕೈಮಗ್ಗದ ಗಿರಣಿ

ಸೀರೆಯನ್ನು ಭಾಷೆಲ್ ಮಿಷನ್ ರವರು ಪರಿಚಯಿಸಿದ ಮಲಬಾರ್ ಫ್ರೇಮ್ ಎಂದು ಕರೆಯುವ ಮಗ್ಗದಲ್ಲಿ ಹತ್ತಿಯ ನೂಲಿನಿಂದ ಸಾದಾ ವಿನ್ಯಾಸದಲ್ಲಿ ಅಥವಾ ಸಣ್ಣ ಸಣ್ಣ ಚೌಕುಳಿ ಯ ವಿನ್ಯಾಸದಲ್ಲಿ ತಯಾರಿಸಲಾಗುತ್ತದೆ. ಬಾಸೆಲ್ ಮಿಷನ್ ರವರು ೧೮೪೪ ರಲ್ಲಿ ಕೈ ಮಗ್ಗದ ಗಿರಣಿಗಳನ್ನು ಸ್ಥಾಪಿಸಿದರು. ಜರ್ಮನಿಯಿಂದ ಬಂದ ತಾಂತ್ರಿಕ ಪರಿಣತ ಮುಲ್ಲರ್ ಎಂಬವರು ನಿಯಂತ್ರಕ ಚಕ್ರ (ಫ್ಲೈ ವೀಲ್ ) ಗಳನ್ನೂ ಅಳವಡಿಸಿದರು.[] ಹತ್ತಿಯಿಂದ ತಯಾರಿಸಿದ ನೂಲಿನಿಂದ ೬೦, ೮೦ ಹಾಗೂ ೧೦೦ ಸಂಖ್ಯೆ ಯ ನೂಲಿನ ಸೀರೆಗಳನ್ನು ತಯಾರಿಸಲಾಗುತ್ತದೆ. ಮೊದಲನೆಯದಾಗಿ ನೂಲನ್ನು ಸುಮಾರು ೨೪ ಗಂಟೆಗಳ ಕಾಲ ಕಾಸ್ಟಿಕ್ ಸೋಡಾ ಬೆರೆಸಿದ ನೀರಿನಲ್ಲಿ ಕುದಿಸಲಾಗುತ್ತದೆ.. ಅನಂತರ ನೀರಿನಲ್ಲಿ ತೊಳೆದು ಮತ್ತೆ ಕುದಿಸಲಾಗುತ್ತದೆ. ಅನಂತರ ಅದನ್ನು ಚೆಲುವೆ ಪುಡಿಯೊಂದಿಗೆ ಬಿಸಿ ನೀರಿನಲ್ಲಿ ಸುಮಾರು ಅರ್ಧ ಗಂಟೆಗಳ ಸಮಯ ಅದ್ದಿ ಇಡಲಾಗುತ್ತದೆ. ಅನಂತರ ಅವಕ್ಕೆ ಸಾವಯವ ಅಥವಾ ರಾಸಾಯನಿಕ ಬಣ್ಣ ಕೊಡಲಾಗುತ್ತದೆ. ಬಣ್ಣ ಪಡೆದ ನೂಲನ್ನು ಬಿಡಿಸಿ ಸುತ್ತಲಾಗುತ್ತದೆ. ಮುಂದಕ್ಕೆ ಅವನ್ನು ಬೇಕಾದ ಅಳತೆಗೆ ಹೊಂದಿಸುತ್ತಾರೆ. ಅನಂತರ ಅವನ್ನು ನೂಲುವ ಗಿರಣಿಗೆ ವರ್ಗಾಯಿಸಲಾಗುತ್ತದೆ. ನೇಯುವ ವೇಳೆ ನೂಲಿನ ಮೇಲೆ ಅಕ್ಕಿಯ ಅನ್ನದ ಗಂಜಿಯನ್ನು ಹಚ್ಚಲಾಗುತ್ತದೆ. ಇದರೊಂದಿಗೆ ನೇಯುವ ಪ್ರಕ್ರಿಯೆ ನಡೆಯುತ್ತದೆ. ಬೇಕಾದ ವಿನ್ಯಾಸ ಮತ್ತು ಬಣ್ಣದ ನೂಲುಗಳ ಸಹಾಯದಿಂದ ಉಡುಪಿ ಸೀರೆ ತಯಾರಾಗುತ್ತದೆ.[]

ಗುಣಮಟ್ಟ ಮತ್ತು ಉಪಯೋಗ

ಬದಲಾಯಿಸಿ

ಉಡುಪಿ ಸೀರೆಯ ವಿನ್ಯಾಸ ಅಪರೂಪದ್ದು. ಗಾಢ ಬಣ್ಣದ ಅಂಚು ಮತ್ತು ತಿಳಿ ಬಣ್ಣದ ಮೈ ಇರುವ ಸೀರೆಗಳು ಪರಿಸರಕ್ಕೆ ಪೂರಕವಾದ ಬಣ್ಣದಿಂದ ಮಾಡಲ್ಪಟ್ಟಿವೆ. ಮಾಡುವ ವಿಧಾನ ಮತ್ತು ಪರಿಸರ ಸ್ನೇಹಿ ಗುಣಗಳಿಂದ ಸೀರೆಯು ಸುಮಾರು ಮೂವತ್ತು ವರುಷಗಳ ಕಾಲ ಬಾಳಿಕೆ ಬರುತ್ತದೆ.

ಪುನರುಜ್ಜೀವನ

ಬದಲಾಯಿಸಿ

ನೇಕಾರರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆ ಆದ ಕಾರಣ, ಈ ಕೌಶಲ್ಯಭರಿತ ಕಲೆ ಅಳಿವಿನಂಚಿಗೆ ಸಾಗಿತ್ತು. ಆ ಸಂದರ್ಭದಲ್ಲಿ 'ಕದಿಕೆ ಟ್ರಸ್ಟ್ ' ನ ಪ್ರಯತ್ನದಿಂದ ಪುನರುಜ್ಜೀವನ ಕಂಡಿದೆ.[],[] 'ಕದಿಕೆ ಟ್ರಸ್ಟ್' ನಬಾರ್ಡ್ (National Bank for Agriculture and Rural Development, NABARD) ಸಹಾಯದೊಂದಿಗೆ ಹಲವಾರು ತರಬೇತಿ ಕಾರ್ಯಾಗಾರಗಳನ್ನು ನಡೆಸಿ, ಆ ಮೂಲಕ ಹೊಸ ನೇಕಾರರ ಸೇರ್ಪಡೆಯಾಗಿದೆ.[]

ಮಾನ್ಯತೆ

ಬದಲಾಯಿಸಿ
  1. ಭಾರತ ಸರಕಾರದ ಅಂಚೆ ಇಲಾಖೆ ಉಡುಪಿ ಸೀರೆಯ ಕುರಿತಾಗಿ ಅಂಚೆಲಕೋಟೆಯನ್ನು ಬಿಡುಗಡೆಗೊಳಿಸಿದೆ.[]
  2. ಉಡುಪಿ ಸೀರೆಗೆ ಭಾರತ ಸರಕಾರದ ಭೌಗೋಳಿಕ/ ಪ್ರಾದೇಶಿಕ ಮಾನ್ಯತೆ (GI tag) ದೊರಕಿದೆ.[]

ಉಲ್ಲೇಖಗಳು

ಬದಲಾಯಿಸಿ
  1. (PDF) https://www.origin-gi.com/wp-content/uploads/2017/01/223-udupi-sarees.pdf. Retrieved 17 May 2023. {{cite web}}: Missing or empty |title= (help)
  2. Anthony, A.; Joseph.T, Mary (30 April 2016). [www.google.co.in/books/edition/SMEs_in_Indian_Textiles/wn8YDAAAQBAJ?hl=en&gbpv=1&dq=basel+mission+weaving+frame&pg=PA46&printsec=frontcove "SMEs in Indian Textiles: The Impact of Globalization in a Developing Market"] (in ಇಂಗ್ಲಿಷ್). Springer. Retrieved 17 May 2023. {{cite web}}: Check |url= value (help)
  3. https://www.origin-gi.com/wp-content/uploads/2017/01/223-udupi-sarees.pdf
  4. https://21in21.deccanherald.com/mamatha-rai
  5. https://timesofindia.indiatimes.com/city/mangaluru/udupi-sari-revival-attracts-budding-fashion-designers/articleshow/84928361.cms
  6. https://www.thehindu.com/news/cities/Mangalore/training-in-weaving-begins-at-talipady-cooperative-society/article33427816.ece
  7. https://www.deccanherald.com/state/mangaluru/special-postal-cover-on-udupi-saree-released-1095241.html
  8. https://search.ipindia.gov.in/GIRPublic/Application/Details/224