ಶಿಕಾರಿಪುರದಿಂದ ಸುಮಾರು ೧೦ ಕಿ.ಮೀ ದೂರದಲ್ಲಿರುವ ಗ್ರಾಮ.ಈ ಕ್ಷೇತ್ರದ ಹೆಸರನ್ನು ನೆನಪಿಸಿಕೊಂಡರೆ ಎದುರು ನಿಲ್ಲುವುದು ೧೨ ನೇ ಶತಮಾನದ ಶ್ರೇಷ್ಠ ವಚನಕಾರ್ತಿ ಹಾಗೂ ಅಕ್ಕ ಎಂದೇ ಖ್ಯಾತಿ ಪಡೆದ ಅಕ್ಕಮಹಾದೇವಿಯ ಭಾವಚಿತ್ರ.ಅಕ್ಕಮಹಾದೇವಿ ಜನಿಸಿದ ಪುಣ್ಯ ಭೂಮಿಯೇ ಉಡುಗಣಿ.ಇವಳು ಸೌಂದರ್ಯವತಿ, ಸದ್ಗುಣ ಸಂಪನ್ನಳಾಗಿದ್ದಳು.ಉಡುಗಣಿಯಲ್ಲಿ ಕೌಶಿಕ ಮಾಹಾರಾಜ ಆಳ್ವಿಕೆ ನಡೆಸುತ್ತಿದ್ದು.ಮಹಾದೇವಿ ಸೌಂದರ್ಯಕ್ಕೆ ಮಾರು ಹೋಗಿ ಮದುವೆಯಾಗಲು ಪೀಡಿಸಲು ತೊಡಗಿದಾಗ ಒಪ್ಪಂದದನ್ವಯ ಮದುವೆಯಾಗುತ್ತದೆ..ನಂತರ ಕೌಶಿಕ ಮಹಾದೇವಿ ಷರತ್ತುಗಳನ್ನು ಮುರಿದಾಗ ಅವರ ದಾಂಪತ್ಯ ಜೀವನವು ಮುರಿದು ಬೀಳುತ್ತದೆ.ಅಕ್ಕಮಹಾದೇವಿ ಕೌಶಿಕನನ್ನು ತೊರೆದು ತನ್ನ ಆರಾಧ್ಯ ದೈವ ಶ್ರೀ ಚನ್ನಮಲ್ಲಿಕಾರ್ಜುನನನ್ನು ಹುಡುಕುತ್ತಾ ಶ್ರೀಶೈಲದಲ್ಲಿ ಐಕ್ಯಳಾದಳು. ತಾಲ್ಲೂಕು: ಶಿಕಾರಿಪುರ ತಾಲ್ಲೂಕು ಕೇಂದ್ರದಿಂದ: ೧೦ ಕಿ.ಮೀ ಜಿಲ್ಲಾ ಕೇಂದ್ರದಿಂದ: ೬೦ ಕಿ.ಮೀ

"https://kn.wikipedia.org/w/index.php?title=ಉಡುಗಣಿ&oldid=309073" ಇಂದ ಪಡೆಯಲ್ಪಟ್ಟಿದೆ