ಉಟಿಲಾ ಕೋಟೆ
ಭಾರತ ದೇಶದ ಗ್ರಾಮಗಳು
ಉಟಿಲಾ ಕೋಟೆಯು ಭಾರತದ ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ ಕಂಡು ಬರುವ ಒಂದು ಕೋಟೆಯಾಗಿದೆ. ಉಟಿಲಾವು ಗ್ವಾಲಿಯರ್ ನಗರದ ಪೂರ್ವ ಭಾಗದ, ಗ್ವಾಲಿಯರ್ - ಹಸ್ತಿನಾಪುರ - ಬೆಹತ್ ರಸ್ತೆಯಿಂದ ೨೦ ಕಿ. ಮೀ ದೂರದಲ್ಲಿದೆ.
ಉಟಿಲಾ ಕೋಟೆ | |
---|---|
ಗ್ರಾಮ | |
Country | India |
State | ಮಧ್ಯ ಪ್ರದೇಶ |
Languages | |
ಸಮಯದ ವಲಯ | |
ಸಮಯ ವಲಯ | ಯುಟಿಸಿ+5:30 (IST) |
ಇತಿಹಾಸ
ಬದಲಾಯಿಸಿಉಟಿಲಾ ಕೋಟೆಯನ್ನು ೧೭೪೦ ರಲ್ಲಿ ಗೋಹಾಡ್ ರಾಜ್ಯದ ಭೀಮ್ ಸಿಂಗ್ ರಾಣಾ ಅವರು ನಿಮಾ೯ಣ ಮಾಡಿದರು. ಇದನ್ನು ಮುಖ್ಯವಾಗಿ ಗೋಹಾಡ್ ಕೋಟೆಗೆ ರಕ್ಷಣೆಯನ್ನು ನೀಡಲು ನಿರ್ಮಿಸಲಾಗಿದೆ.
ವಾಸ್ತುಶಿಲ್ಪ
ಬದಲಾಯಿಸಿಉಟಿಲಾ ಕೋಟೆಯು ಬೆಟ್ಟದ ಮೇಲೆ ನೆಲೆಗೊಂಡಿದೆ ಮತ್ತು ಅದರ ಸುತ್ತಲೂ ಆಳವಾದ ಕಂದಕಗಳಿವೆ. ಕೋಟೆಯ ಸುತ್ತಲೂ ನಾಲ್ಕು ಎತ್ತರದ ಗೋಪುರಗಳು ಅಥವಾ ಬುರ್ಜ್‌ಗಳಿವೆ. ಇವುಗಳ ವಾಸ್ತುಶಿಲ್ಪವು ಗೋಹಾದ್ ಜಾಟ್ ಆಡಳಿತಗಾರರ ರಕ್ಷಣಾ ತಂತ್ರ ಮತ್ತು ವಾಸ್ತುಶಿಲ್ಪದ ಕೌಶಲ್ಯಗಳನ್ನು ತೋರಿಸಿಕೊಡುತ್ತದೆ.