ಉಚ್ಚ ಮತ್ತು ನೀಚ ಗ್ರಹಗಳು
ಯಾವುದೇ ಗ್ರಹದ ಮತ್ತು ಭೂಮಿಯ ಕಕ್ಷೆಗಳನ್ನು ಹೋಲಿಸಲು ಕೋಪರ್ನಿಕಸ್ನು ಈ ಪದಗಳನ್ನು ಸೃಷ್ಟಿಸಿದನು.
"ನೀಚ ಗ್ರಹ" ಮತ್ತು "ಉಚ್ಚ ಗ್ರಹ" - ಯಾವುದೇ ಗ್ರಹದ ಮತ್ತು ಭೂಮಿಯ ಕಕ್ಷೆಗಳನ್ನು ಹೋಲಿಸಲು ಕೋಪರ್ನಿಕಸ್ನು ಈ ಪದಗಳನ್ನು ಸೃಷ್ಟಿಸಿದನು. ಕುಬ್ಜ ಗ್ರಹಗಳು ಮತ್ತು ಸಾಧಾರಣ ಗ್ರಹಗಳ ನಡುವಿರುವ ವ್ಯತ್ಯಾಸದೊಂದಿಗೆ ಈ ಪದಗಳನ್ನು ಗಲಿಬಿಲಿ ಮಾಡಿಕೊಳ್ಳಬಾರದು.
- "ನೀಚ ಗ್ರಹ" - ಸೂರ್ಯನಿಗೆ ಭೂಮಿಯಿರುವ ದೂರಕ್ಕಿಂತ ಕಡಿಮೆ ದೂರದಲ್ಲಿರುವ ಬುಧ ಮತ್ತು ಶುಕ್ರ ಗ್ರಹಗಳಿಗೆ ಈ ಪದವನ್ನು ಬಳಸಲಾಗುತ್ತದೆ.
- "ಉಚ್ಚ ಗ್ರಹ" - ಮಂಗಳ, ಗುರು, ಶನಿ, ಯುರೇನಸ್, ನೆಪ್ಚೂನ್ ಗ್ರಹಗಳು, ಹಾಗೂ ಸೆರೆಸ್ ಮತ್ತು ಪ್ಲುಟೊ ಸೇರಿದಂತೆ ಎಲ್ಲಾ ಕುಬ್ಜ ಗ್ರಹಗಳು ಸೂರ್ಯನಿಂದ ಭೂಮಿಯಿರುವುದಕ್ಕಿಂತ ಹೆಚ್ಚು ದೂರದಲ್ಲಿವೆ. ಇವುಗಳನ್ನು ಉಚ್ಚ ಗ್ರಹಗಳೆಂದು ಕರೆಯಲಾಗುತ್ತದೆ.
ಕೆಲವೊಮ್ಮೆ ಈ ಪದಗಳನ್ನು ಹೆಚ್ಚು ಸಾರ್ವತ್ರಿಕವಾಗಿ ಬಳಸಲಾಗುತ್ತ್ತದೆ: ಉದಾಹರಣೆಗೆ, ಮಂಗಳದಿಂದ ನೋಡಿದಂತೆ, ಭೂಮಿಯು ನೀಚ ಗ್ರಹ. ಈ ವಿಂಗಡಣೆಯನ್ನು ಒಳ ಮತ್ತು ಹೊರ ಗ್ರಹ ಪದಗಳೊಂದಿಗೆ ಗಲಿಬಿಲಿ ಮಾಡಿಕೊಳ್ಳಬಾರದು. ಎಸ್ಟರೊಯ್ಡ್ ಪಟ್ಟಿಯ ಹೊರಗೆ ಮತ್ತು ಒಳಗೆ ಇರುವ ಗ್ರಹಗಳನ್ನು ಹೊರಗ್ರಹಗಳು ಮತ್ತು ಒಳಗ್ರಹಗಳು ಎಂದು ಕರೆಯಲಾಗುತ್ತದೆ.