ಉಗ್ರಂ (ಚಲನಚಿತ್ರ)
ಉಗ್ರಂ ಇದು ೨೦೧೪ ರ ಭಾರತೀಯ ಕನ್ನಡ ಭಾಷೆಯ ಚಿತ್ರವಾಗಿದ್ದು, ಪ್ರಶಾಂತ್ ನೀಲ್ ರವರು ಬರೆದು ನಿರ್ದೇಶಿಸಿದ್ದಾರೆ. ಇಂಕ್ಫೇನೆಟ್ ಫಿಲ್ಮ್ಸ್ ನಿರ್ಮಿಸಿದ ಚಿತ್ರದ ಸಂಗೀತವನ್ನು ರವಿ ಬಸ್ರೂರ್ ಸಂಯೋಜಿಸಿದ್ದಾರೆ. ಈ ಚಿತ್ರದಲ್ಲಿ ಶ್ರೀಮುರಳಿ ಮತ್ತು ಹರಿಪ್ರಿಯಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡರೆ, ತಿಲಕ್ ಶೇಖರ್, ಅತುಲ್ ಕುಲಕರ್ಣಿ, ಅವಿನಾಶ್ ಮತ್ತು ಜೈ ಜಗದೀಶ್ ಪೋಷಕ ಪಾತ್ರಗಳಲ್ಲಿ ಅಭಿನಯಸಿದ್ದಾರೆ. ಭುವನ್ ಗೌಡ ಛಾಯಾಗ್ರಹಿಸಿರುವ ಈ ಚಿತ್ರದಲ್ಲಿ ರಾಮ್-ಲೀಲಾ ಖ್ಯಾತಿಯ ರವಿ ವರ್ಮನ್ ಅತಿಥಿ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ.[೧] ಈ ಚಿತ್ರವು ಚಿತ್ರಮಂದಿರಗಳಲ್ಲಿ ೧೫೦ ದಿನಗಳ ಕಾಲ ಪ್ರದರ್ಶನ ಗೊಂಡು, ಕೆಲವು ಕಡೆಯಲ್ಲಿ ಮರುಬಿಡುಗಡೆ ಕೂಡ ಆಗಿತ್ತು. ವಿಮರ್ಶಕರ ಸಕಾರಾತ್ಮಕ ಅಭಿಪ್ರಾಯದಿಂದ ಈ ಚಿತ್ರವು ೨೦೧೪ ಅತ್ಯುತ್ತಮ ಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿತ್ತು.[೨]
ಉಗ್ರಂ | |
---|---|
ನಿರ್ದೇಶನ | ಪ್ರಶಾಂತ್ ನೀಲ್ |
ನಿರ್ಮಾಪಕ | ಇಂಕ್ಫೇನೆಟ್ ಫಿಲ್ಮ್ಸ್ |
ಚಿತ್ರಕಥೆ |
|
ಕಥೆ |
|
ಪಾತ್ರವರ್ಗ | |
ಸಂಗೀತ | ರವಿ ಬಸ್ರೂರ್ |
ಛಾಯಾಗ್ರಹಣ |
|
ಸಂಕಲನ | ಶ್ರೀಕಾಂತ್ |
ಸ್ಟುಡಿಯೋ | ಇಂಕ್ಫೇನೆಟ್ ಫಿಲ್ಮ್ಸ್ |
ವಿತರಕರು | ತೂಗುದೀಪ ಡಿಸ್ಟ್ರಿಬ್ಯುಟರ್ಸ್ |
ಬಿಡುಗಡೆಯಾಗಿದ್ದು | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
|
ದೇಶ | ಭಾರತ |
ಭಾಷೆ | ಕನ್ನಡ |
ಬಂಡವಾಳ | ₹೪ ಕೋಟಿ |
ಬಾಕ್ಸ್ ಆಫೀಸ್ | ₹೩೦ ಕೋಟಿ |
ಇದರ ಮುಂದಿನ ಅಧ್ಯಾಯ ಉಗ್ರಂ ವೀರಮ್ ಅನ್ನು ೨೦೧೫ರಲ್ಲೇ ಘೋಷಿಸಲಾಗಿತ್ತು.[೩] ಈ ಚಿತ್ರವು ಓಡಿಯಾ ಭಾಷೆಗೆ ಅಗಸ್ತ್ಯ ಎಂಬ ಹೆಸರಲ್ಲಿ ರೀಮೇಕ್ ಆಗಿತ್ತು.
ಇದು ಭಾರತ್ ಗೋಲ್ಡ್ ಮೈನ್ಸ್ನ ಸೈನೈಡ್ ಡಂಪ್ನಲ್ಲಿ ಚಿತ್ರಿಸಿದ ಮೊದಲ ಚಲನಚಿತ್ರ. ಈ ಚಿತ್ರವನ್ನು ಚಿಂತಾಮಣಿ, ಕೋಲಾರ, ಮೈಸೂರು, ಗರಿಗೇಶ್ವರಿ, ನದಿಗ್ರಾಮ ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗಿದೆ.[೪] ಈ ಚಿತ್ರದಲ್ಲಿ ಸಂದರ್ಭಕ್ಕೆ ತಕ್ಕಂತೆ ೮ ಬೇರೆ ಬೇರೆ ಕ್ಯಾಮರಗಳನ್ನು ಬಳಿಸಲಾಗಿದೆ.
ಚಿತ್ರದ ಟ್ರೇಲರ್ ಅನ್ನು ೨೫ ನವೆಂಬರ್ ೨೦೧೩ ರಂದು ಯೂಟ್ಯೂಬ್ನಲ್ಲಿ ಬಿಡುಗಡೆ ಮಾಡಲಾಯಿತು. ಚಿತ್ರಪ್ರಿಯರು ಹಾಗೂ ವಿಮರ್ಶಕರಿಂದ ಸಕಾರಾತ್ಮಕ ಅಭಿಪ್ರಾಯಯನ್ನು ಪಡೆದಿತ್ತು.[೫][೬] ಈ ಚಿತ್ರವು ಕರ್ನಾಟಕದ ಬಾಕ್ಸ್ ಆಫೀಸ್ ನಲ್ಲಿ ಮೊದಲ ವಾರವೇ ೩೦ ಕೋಟಿ ರೂಪಾಯಿಗಳನ್ನು ಕಲೆಹಾಕಿತು.[೭]
ಸಾರಾಂಶ
ಬದಲಾಯಿಸಿಪ್ರಭಾಕರ (ಜೈ ಜಗದೀಶ್) ಮತ್ತು ಶಿವರುದ್ರಲಿಂಗಯ್ಯ (ಅವಿನಾಶ್) ಕುಟುಂಬವು ಬಹಳ ಹಿಂದಿನಿಂದಲೂ ಘರ್ಷಣೆಯನ್ನು ಹೊಂದಿದೆ. ಪ್ರಭಾಕರನ ಮಗಳು ನಿತ್ಯಾ (ಹರಿಪ್ರಿಯಾ) ತಾಯಿಯ ಸಮಾಧಿಯನ್ನು ನೋಡಲು ಆಸ್ಟ್ರೇಲಿಯಾದಿಂದ ಭಾರತಕ್ಕೆ ಮರಳುತ್ತಾಳೆ. ಗೂಂಡಾಗಳಿಂದ ಅವಳನ್ನು ಅಪಹರಿಸುತ್ತಾರೆ. ಅಗಸ್ತ್ಯ (ಶ್ರೀಮುರಳಿ) ಅವಳನ್ನು ಗೂಂಡಾಗಳಿಂದ ರಕ್ಷಿಸುತ್ತಾನೆ.
ಅಗಸ್ತ್ಯನು ತನ್ನ ಗೆಳೆಯ ಬಾಲಾ (ತಿಲಕ್ ಶೇಖರ್) ರೊಂದಿಗೆ ಮುಘೋರ್ನಲ್ಲಿ ಹುಟ್ಟಿ ಬೆಳೆದ. ಮೊಘೋರ್‌ನನ್ನು ರಕ್ತಸಿಕ್ತ ಭೂಗತ ಲೋಕವು ಆಳುತ್ತದೆ. ಅಗಾಸ್ತ್ಯ ಮತ್ತು ಬಾಲಾ ಮೊಘೋರ್‌ನನ್ನು ನಿಯಂತ್ರಿಸಲು ಭೂಗತ ಲೋಕಕ್ಕೆ ಹೆಜ್ಜೆ ಹಾಕುತ್ತಾರೆ. ಅವರ ವ್ಯತ್ಯಾಸ ಮಾರ್ಗಗಳು ಅವರ ನಡುವೆ ಘರ್ಷಣೆಯನ್ನು ಸೃಷ್ಟಿಸುತ್ತವೆ. ಅಗಸ್ತ್ಯನು ಮುಘೋರ್ ಅನ್ನು ಬಿಟ್ಟು ತಾಯಿಯೊಂದಿಗೆ ಶಾಂತಿಯುತವಾಗಿ ವಾಸಿಸುತ್ತಾನೆ.
ಆದರೆ ನಿತ್ಯಳ ಮೇಲೆ ಅವನಿಗಾದ ಪ್ರೀತಿ ಮತ್ತು ಅವಳನ್ನು ರಕ್ಷಿಸಲೇ ಬೇಕಾದ ಅನಿವಾರ್ಯತೆ ಬಂದ ಕಾರಣ ಅವನು ಮತ್ತೆ ಮುಘೋರಿನ ಕಡೆಗೆ ಮರಳಲು ನಿರ್ಧಾರ ಮಾಡುತ್ತಾನೆ. ಆದರೆ ತನ್ನ ತಾಯಿಗೆ ಮತ್ತೆಂದು ಅಲ್ಲಿಗೆ ಹಿಂತಿರುಗುವುದಿಲ್ಲ ಎಂದು ಕೊಟ್ಟ ಮಾತಿನಿಂದಾಗಿ ಹಿಂದೇಟು ಹಾಕುತ್ತಾನೆ. ಆದರೆ ಅಗಸ್ತ್ಯನ ತಾಯಿ ನಿತ್ಯಳನ್ನು ಕಾಪಾಡಲು ಮುಘೋರಿಗೆ ತೆರಳಲು ಅನುಮತಿಯನ್ನು ಕೊಡುತ್ತಾರೆ.
ಅಗಸ್ತ್ಯ ಮುಘೋರಿಗೆ ಹಿಂದಿರುಗುತ್ತಿರುವ ವಿಷಯ ಕೇಳಿ ಅವನ ಹಳೆಯ ವೈರಿಗಳಿಗೆ ಬಹಳ ಸಂತೋಷವಾಗುತ್ತದೆ. ಅಗಸ್ತ್ಯ ಮುಘೋರಿಗೆ ತೆರಳಿ ಅಲ್ಲಿಂದ ನಿತ್ಯಳನ್ನು ಬಿಡಿಸಿಕೊಳ್ಳುತ್ತಾನೆ. ಆದರೆ ಆಗ ಬಾಲ ಎದುರಾಗುತ್ತಾನೆ. ತನ್ನ ತಮ್ಮನ್ನು ಕೊಂಡಿದ್ದ ಸಿಟ್ಟಿದ್ದರೂ ಅಗಸ್ತ್ಯನ ಮೇಲಿನ ಸ್ನೇಹದಿಂದಾಗಿ ಅವನನ್ನು ಮತ್ತೆಂದೂ ಹಿಂದಿರುಗದಂತೆ ಹೇಳಿ ಕಳಿಸಿಕೊಡುತ್ತಾನೆ.
ಪಾತ್ರವರ್ಗ
ಬದಲಾಯಿಸಿಧ್ವನಿಸುರುಳಿ
ಬದಲಾಯಿಸಿUntitled | |
---|---|
ರವಿ ಬಸ್ರೂರ್ ಚಿತ್ರಕ್ಕಾಗಿ ಸ್ಕೋರ್ ಮತ್ತು ಹಾಡುಗಳನ್ನು ಸಂಯೋಜಿಸಲು ಸಹಿ ಮಾಡಿದ್ದಾರೆ. ಹಾಡುಗಳಿಗೆ ಸಾಹಿತ್ಯವನ್ನು ರಾಮ್ ನಾರಾಯಣ, ಸರ್ವೇಶ ಮತ್ತು ರವಿ ಬಸ್ರೂರು ಅವರು ಬರೆದಿದ್ದಾರೆ.
ಹಾಡುಗಳು | ||||
---|---|---|---|---|
ಸಂ. | ಹಾಡು | ಸಾಹಿತ್ಯ | ಗಾಯಕ(ರು) | ಸಮಯ |
1. | "ಲೆಜೆನ್ಡ್ ಆಫ್ ನರಸಿಂಹ" | ರವಿ ಬಸ್ರೂರ್ | ರವಿ ಬಸ್ರೂರ್ | 4:08 |
2. | "ಚನನ ಚನನ" | ರಾಮ್ ನಾರಾಯಣ್ | ಅನುರಾಧ ಭಟ್ | 4:40 |
3. | "ಒಂದು ಹುಡುಗಿ" | ರಾಮ್ ನಾರಾಯಣ್ | ರವಿ ಬಸ್ರೂರು, ಅನುರಾಧ ಭಟ್ | 3:37 |
4. | "ಚಿತ್ತಾರ ಮೂಡೋ" | ಸರ್ವೇಶ್ | ಪ್ರಿಯಾಂಕ ಬರಳಿ | 3:46 |
5. | "ಉಗ್ರಂ ವೀರಂ" | ರವಿ ಬಸ್ರೂರು | ರವಿ ಬಸ್ರೂರು | 3:48 |
6. | "ಚಿತ್ತಾರ ಮೂಡೋ ಆನ್ ಪ್ಲಗ್ಗ್ಡ್" | ಸರ್ವೇಶ್ | ಪ್ರಿಯಾಂಕ ಭರಳಿ | 3:38 |
ಒಟ್ಟು ಸಮಯ: | 23:37 |
ಉಲ್ಲೇಖಗಳು
ಬದಲಾಯಿಸಿ- ↑ "Ram-Leela famed Ravi Varman makes debut in Kannada". ದಿ ಟೈಮ್ಸ್ ಆಫ್ ಇಂಡಿಯಾ. 30 December 2013. Retrieved 20 February 2014.
- ↑ "The best of Sandalwood, 2014". ಬೆಂಗಳೂರು ಮಿರರ್. 29 December 2014. Retrieved 31 December 2014.
- ↑ "'Ugramm' sequel to be made in 2015". ದೈಜೀವರ್ಲ್ಡ್. 22 July 2014. Archived from the original on 21 ಆಗಸ್ಟ್ 2014. Retrieved 19 August 2014.
- ↑ "A Grand Avatar of Sri Murali in 'Ugramm'". ದಿ ನ್ಯು ಇಂಡಿಯನ್ ಎಕ್ಸ್ಪ್ರೆಸ್. 22 February 2014. Archived from the original on 13 ಮಾರ್ಚ್ 2014. Retrieved 22 February 2014.
- ↑ "Sandalwood Stars Go Gaga Over 'Ugramm' Trailer". ಇಂಟರ್ನ್ಯಾಷನಲ್ ಬಿಸ್ನೆಸ್ ಟೈಮ್ಸ್. Retrieved 3 December 2013.
- ↑ "Sandalwood stars praise Ugramm trailer". ದಿ ಟೈಮ್ಸ್ ಆಫ್ ಇಂಡಿಯಾ. 28 November 2013. Retrieved 21 February 2014.
- ↑ "Pirate Helps Ugramm Assess Losses". ದಿ ನ್ಯು ಇಂಡಿಯನ್ ಎಕ್ಸ್ಪ್ರೆಸ್. 6 September 2014. Archived from the original on 13 ಅಕ್ಟೋಬರ್ 2014. Retrieved 26 September 2014.