ಉಗನಿಬಳ್ಳಿ
ಉಗನಿಬಳ್ಳಿ: ಕನ್ವಾಲ್ವುಲೇಸೀ ಕುಟುಂಬಕ್ಕೆ ಸೇರಿದ ಅಡರುಬಳ್ಳಿ.
ಪ್ರಭೇದಗಳು
ಬದಲಾಯಿಸಿಆರ್ಗೈರಿಯ ಎಲಿಪ್ಟಿಕ, ಮತ್ತು ಆರ್ಗೈರಿಯ ಇಂಬ್ರಿಕೇಟ ಎಂಬ ಎರಡು ಪ್ರಭೇದಗಳಿಗೆ ಈ ಹೆಸರು ಅನ್ವಯವಾಗುತ್ತದೆ.
ಭೌಗೋಳಿಕ
ಬದಲಾಯಿಸಿಏಷ್ಯಖಂಡದ ಉಷ್ಣ ಪ್ರದೇಶಗಳಲ್ಲಿ ಮತ್ತು ಮಲೇಷ್ಯಗಳಲ್ಲಿ ಬೆಳೆಯುವುದು. ಪಶ್ಚಿಮಘಟ್ಟಗಳು, ಕರ್ನಾಟಕ, ಕೇರಳ ಹಾಗೂ ಪಳನಿ ಬೆಟ್ಟಗಳಲ್ಲಿ ಬಲು ಸಾಮಾನ್ಯ ಬಳ್ಳಿ ಹರಡಿಕೊಂಡು ಬೆಳೆಯುತ್ತದೆ.
ಲಕ್ಷಣಗಳು
ಬದಲಾಯಿಸಿಎಲೆಗಳ ಜೋಡಣೆ ಪರ್ಯಾಯ, ಆಕಾರ ಅಂಡ ಅಥವಾ ಕೊಂಚ ಉದ್ದುದ್ದ. ಹೂಗಳು ಗೊಂಚಲು ಗೊಂಚಲಾಗಿರುತ್ತದೆ. ಅವುಗಳ ಬಣ್ಣ ಗುಲಾಬಿ ನಸುನೇರಳೆ ಅಥವಾ ಬಿಳಿ. ಕಾಯಿಗಳು ಸಣ್ಣಗೆ ಗುಂಡಗೆ ಇರುತ್ತದೆ. ಬಣ್ಣ ಕಿತ್ತಳೆ ಅಥವಾ ಕೆಂಪು.
ಉಪಯೋಗ
ಬದಲಾಯಿಸಿಉಗನಿಬಳ್ಳಿಯ ಕಾಂಡ ಉದ್ದವಾಗಿದ್ದು ಬಲು ಗಟ್ಟಿಯಾಗಿರುತ್ತದೆ. ಆದ್ದರಿಂದ ಇದನ್ನು ಹುಲ್ಲಿನ ಕಂತೆಗಳನ್ನು ಕಟ್ಟಲು ಹಗ್ಗದಂತೆ ಉಪಯೋಗಿಸುತ್ತಾರೆ. ಲೆ. ಎಲಿಪ್ಟಿಕದ ಎಲೆಗಳನ್ನು ಮೈಸೂರಿನ ಕೆಲವು ಭಾಗಗಳಲ್ಲಿ ಹಸಿರುಗೊಬ್ಬರವಾಗಿ ಉಪಯೋಗಿಸುವುದುಂಟು.
ಔಷಧವಾಗಿ
ಬದಲಾಯಿಸಿಲೆ. ಅಗ್ರಿಗೇಟ ಎಂಬುದರ ಎಲೆಗಳನ್ನು ಅರೆದು ತಯಾರಿಸಿದ ಲೇಪವನ್ನು ಕೆಮ್ಮು, ಗಂಟಲಿನ ಉರಿಯೂತಗಳ ಚಿಕಿತ್ಸೆಯಲ್ಲಿ ಗಂಟಲಿನ ಹೊರಭಾಗಕ್ಕೆ ಹಚ್ಚುತ್ತಾರೆ. ಲೆ. ಸಿಟೋಸ ಎಂಬ ಬಗೆಯ ಎಲೆಗಳನ್ನು ತರಕಾರಿಯಾಗಿಯೂ ಉಪಯೋಗಿಸುತ್ತಾರೆ.