ಉಂಡೆಮೀನು
ಉಂಡೆಮೀನು | |
---|---|
White-spotted puffer, Arothron hispidus | |
Scientific classification | |
ಸಾಮ್ರಾಜ್ಯ: | Animalia
|
ವಿಭಾಗ: | Chordata
|
ಉಪವಿಭಾಗ: | |
ವರ್ಗ: | |
Subclass: | |
ಕೆಳವರ್ಗ: | |
ಗಣ: | |
ಕುಟುಂಬ: | Tetraodontidae Bonaparte, 1832
|
Genera | |
Amblyrhynchotes |
ಉಂಡೆಮೀನು ದೊಡ್ಡ ಮೂಳೆಮೀನು; ಬೆಲೂನಿನಂತೆ ದೇಹವನ್ನು ಉಬ್ಬಿಸಿಕೊಳ್ಳ ಬಲ್ಲುದು; ಉಬ್ಬುಮೀನು ಪರ್ಯಾಯನಾಮ (ಗ್ಲೋಬ್ ಫಿಶ್; ಡಿಯೊಡಾನ್ ಹಿಸ್ಟ್ರಿಕ್ಸ್). ಉಷ್ಣ ವಲಯಗಳ ಕರೆನೀರುವಾಸಿ; ಉರುಳೆ ಆಕಾರದ ದೇಹ 30-45ಸೆಂಮೀ. ಉದ್ದ. ಮೈ ತುಂಬ ಉದ್ದನೆಯ ಮೊನಚು ಮುಳ್ಳುಗಳಿವೆ. ದಪ್ಪತಲೆ ಮತ್ತು ಉಬ್ಬು ಹಲ್ಲುಗಳು ಇದರ ವೈಶಿಷ್ಟ್ಯ. ಸಾಧಾರಣ ಮೀನಿನಂತೆಯೇ ಇದು ಸಹ ಜೀವಿಸುತ್ತದೆ. ಆದರೆ ಸ್ವಲ್ಪ ಕೆಣಕಿದಾಗ ಅಥವಾ ಕೆರಳಿಸಿದಾಗ ಗಾಳಿಯಿಂದ ಅಥವಾ ನೀರಿನಿಂದ ತನ್ನ ಹೊಟ್ಟೆ ಅಥವಾ ದೇಹದಲ್ಲಿ ಚೀಲದಂಥ ಒಂದು ಭಾಗವನ್ನು ಉಬ್ಬಿಸಿಕೊಂಡು ಉಂಡೆಯಾಕಾರದಲ್ಲಿ ಅಧೋಭಾಗ ಕಾಣುವಂತೆ ನೀರಿನ ಮೇಲೆ ತೇಲುತ್ತದೆ. ಆಗ ನೇರವಾಗಿ ಎದ್ದುನಿಲ್ಲುವ ಮುಳ್ಳುಗಳು ಇದಕ್ಕೆ ಶತ್ರುವಿನ ವಿರುದ್ಧ ರಕ್ಷಣೆ ನೀಡುತ್ತವೆ. ಈ ಗುಂಪಿಗೆ ಸೇರಿದ ನಾಲ್ಕು ಹಲ್ಲುಗಳುಳ್ಳ ಟೆಟ್ರೋಡಾನ್ ಮತ್ತು ಎರಡು ಹಲ್ಲುಗಳುಳ್ಳ ಡಿಯೊಡಾನ್ ಭಾರತದ ಸುತ್ತಲ ಸಮುದ್ರಗಳಲ್ಲಿ ವಾಸಿಸುವುವು. ಇವನ್ನು ವಸ್ತು ಸಂಗ್ರಹಾಲಯಗಳಲ್ಲಿ ಕಾಣಬಹುದು. ಉಂಡೆಮೀನುಗಳು ವಿಷಪುರಿತವಾದ್ದರಿಂದ ಆಹಾರಯೋಗ್ಯವಲ್ಲ.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Fugu sequencing project at the Wayback Machine (archived ಮಾರ್ಚ್ ೨೨, ೨೦೦೯)
- Tetraodon sequencing project Archived 2015-09-23 ವೇಬ್ಯಾಕ್ ಮೆಷಿನ್ ನಲ್ಲಿ.
- EMedicine Article about the Toxicity of Tetrodotoxin
- FishBase listing for Tetraodontidae
- A Library of Puffer Fish DNA: Smithsonian Institution's Ocean Portal
- Fisheries Western Australia - Common blowfish Fact Sheet
- Underwater crop circles from Japan are an amazing form of biological art
- Puffer Archived 2015-02-16 ವೇಬ್ಯಾಕ್ ಮೆಷಿನ್ ನಲ್ಲಿ. has hook removed from mouth by scuba diver
- Dolphins 'getting high' on puffer fish, zoologist Rob Pilley says Archived 2016-10-21 ವೇಬ್ಯಾಕ್ ಮೆಷಿನ್ ನಲ್ಲಿ. news.com.au, 30 December 2013.
- How Puffer fish protect itself at the Wayback Machine (archived ಮಾರ್ಚ್ ೭, ೨೦೧೪) Video on How puffer fishes blow up