ಈಸೋಪ
ಗ್ರೀಕ್ ನೀತಿಕಥೆಗಾರ ಈಸೋಪ ಅಥವಾ Esop ( Greek: Αἴσωπος , Aisōpos ) ಕ್ರಿಸ್ತ ಪೂರ್ವ ಸುಮಾರು ೬೨೦-೫೬೪. ರಲ್ಲಿ ಜೀವಿಸಿದ್ದ ಮತ್ತು ಆತ ಮೂಲತಃ ಒಬ್ಬ ಗುಲಾಮರ (δοῦλος ) ಮನೆತನದವನಾಗಿದ್ದ. ಆತ ಹೇಳಿದನೆನ್ನಲಾದ ನೀತಿಕಥೆಗಳ ಮೂಲಕ ಅತ್ಯಂತ ಪ್ರಸಿದ್ಧನಾಗಿದ್ದರೂ, ಈಸೋಪನ ಅಸ್ತಿತ್ವದ ಕುರಿತು ಸ್ಪಷ್ಟ ಮಾಹಿತಿ ಲಭ್ಯವಿಲ್ಲ.
ಇತಿವೃತ್ತ
ಬದಲಾಯಿಸಿ- ಯಾವುದೇ ಲಿಖಿತ ದಾಖಲೆಗಳಲ್ಲಿ ಅವನು ಜೀವಿಸಿದ್ದ ಕುರಿತು ಬರೆಯಲ್ಪಟ್ಟಿಲ್ಲ. ಈಸೋಪನ ನೀತಿಕಥೆಗಳು ಎಂದು ಆತನ ಹೆಸರಿನಲ್ಲಿರುವ ಸಾವಿರಾರು ನೀತಿಕಥೆಗಳು ಅನೇಕ ಶತಮಾನಗಳಿಂದ ಬೇರೆ ಬೇರೆ ಭಾಷೆಗಳ ಸಂಪ್ರದಾಯಗಳಿಂದ ಆಯ್ಕೆ ಮಾಡಿ ಸಂಗ್ರಹಿಸಲ್ಪಟ್ಟವುಗಳಾಗಿದ್ದು, ಈಗಲೂ ಆ ರೀತಿಯಲ್ಲಿ ಕಥೆಗಳನ್ನು ಸಂಗ್ರಹಿಸುವ ಕೆಲಸ ನಡೆಯುತ್ತಿದೆ.
- ಇಂತಹ ಅನೇಕ ಕಥೆಗಳಲ್ಲಿ ಪ್ರಾಣಿಗಳು ಮನುಷ್ಯರಂತೆ ಮಾತನಾಡುತ್ತವೆ ಮತ್ತು ಅವುಗಳಿಗೆ ಮನುಷ್ಯರ ಗುಣಸ್ವಭಾವಗಳೇ ಇರುತ್ತವೆ. ಈಸೋಪನ ಜೀವನದ ಕುರಿತ ವಿವರಗಳು ಹರಡಿ ಹೋದಂತೆ ಕಂಡುಬಂದಿದ್ದು, ಅವುಗಳನ್ನು ಅನೇಕ ಪುರಾತನ ಕಾಲದ ಮೂಲಗಳಿಂದ ಪಡೆಯಲಾಗಿದೆ.
- ಉದಾಹರಣೆಗೆ, ಅರಿಸ್ಟಾಟಲ್, ಹೆರೊಡೋಟಸ್ ಮತ್ತು ಪ್ಲುಟಾರ್ಕ್ ಮುಂತಾದವರ ಮೂಲಕ. ಪುರಾತ ಸಾಹಿತ್ಯ ಕೃತಿಯಾದ ದ ಈಸೋಪ್ ರೋಮ್ಯಾನ್ಸ್ ಆತನ ಕುರಿತಾದ ಉಪಾಖ್ಯಾನದಂತಹ, ಅತ್ಯಂತ ಕಾಲ್ಪನಿಕವಾದ ಆತನ ಜೀವನದ ಆವೃತ್ತಿಯನ್ನು ಬರೆದಿದ್ದು, ಸಾಂಪ್ರದಾಯಿಕವಾಗಿ ಈಸೋಪನ ಕುರಿತು ಇರುವ ಕಥೆ ಎಂದರೆ-
- ಆತ ಅತ್ಯಂತ ಕುರೂಪಿಯಾದ ಗುಲಾಮನಾಗಿದ್ದು, ಕೇವಲ ತನ್ನ ಬುದ್ಧಿವಂತಿಕೆಯಿಂದಾಗಿ ಸ್ವಾತಂತ್ರ್ಯ ಪಡೆಯುತ್ತಾನೆ ಮತ್ತು ಅಗಿನ ರಾಜರಿಗೆ ಸಲಹೆಗಾರನಾಗಿ ನಿಯುಕ್ತನಾಗುತ್ತಾನೆ ಎಂಬುದು. ನಂತರದಲ್ಲಿ (ಅಂದರೆ ಮಧ್ಯ ಕಾಲೀನ ಯುಗ) ಈಸೋಪನನ್ನು ಕಪ್ಪು ಇಥಿಯೋಪಿಯನ್ ಆಗಿ ಚಿತ್ರಿಸಲಾಗಿದೆ.
- ಈಸೋಪನನ್ನು ಜನಪ್ರಿಯ ಸಂಸ್ಕೃತಿಯಲ್ಲಿ ಕಳೆದ ೨೫೦೦ ವರ್ಷಗಳಿಂದ ವಿಭಿನ್ನ ಕಲಾ ಪ್ರಕಾರಗಳಲ್ಲಿ ಬಳಸಿಕೊಂಡಿದ್ದು, ಆತನ ಪಾತ್ರವನ್ನು ಅನೇಕ ಪುಸ್ತಕಗಳು, ಸಿನೆಮಾಗಳು, ನಾಟಕಗಳು ಮತ್ತು ಟಿವಿ ಕಾರ್ಯಕ್ರಮಗಳಲ್ಲಿಯೂ ಬಳಸಿಕೊಳ್ಳಲಾಗಿದೆ.
ಜೀವನ
ಬದಲಾಯಿಸಿ- "ಗ್ರೀಕೋ-ರೋಮನ್ ಪುರಾತನ ಕಾಲದವರಲ್ಲಿ ಈಸೋಪನ ಹೆಸರು ಅತ್ಯಂತ ಜನಪ್ರಿಯವಾಗಿದೆ...ಆದರೂ...ಈಸೋಪ ಎಂಬುವವನು ಐತಿಹಾಸಿಕವಾಗಿ ಜೀವಿಸಿದ್ದನೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ", ಎಂದು ಎಂ.ಎಲ್ ವೆಸ್ಟ್ ಬರೆಯುತ್ತಾ; "ಐದನೇ ಶತಮಾನದ [ಕ್ರಿ.ಪೂ.] ಕೊನೆಯ ಭಾಗದಲ್ಲಿ ಈಸೋಪನ ಕಥೆಗಳು ಪ್ರಾರಂಭವಾಗುತ್ತವೆ, ಮತ್ತು ಸಮೋಸ್ ಇದರ ಮೂಲವೆಂದು ಕಾಣುತ್ತದೆ" ಎಂದು ಹೇಳುತ್ತಾನೆ.[೧]
- ಅತ್ಯಂತ ಪ್ರಾಚೀನವಾದ ಗ್ರೀಕ್ ಮೂಲಗಳ ಪ್ರಕಾರ, ಅಂದರೆ ಅರಿಸ್ಟಾಟಲ್‌ನನ್ನೂ ಸೇರಿ, ಈಸೋಪ ಸುಮಾರು ಕ್ರಿ.ಪೂ.೬೨೦ ರ ಕಾಲದಲ್ಲಿ ಥ್ರೇಸ್ ಎಂಬಲ್ಲಿ ಕಪ್ಪು ಸಮುದ್ರದ ತೀರದಲ್ಲಿ ಹುಟ್ಟಿದ. ಆ ಪ್ರದೇಶ ನಂತರದಲ್ಲಿ ಮೆಸೆಂಬ್ರಿಯಾ ಸಿಟಿ ಎಂಬ ಹೆಸರಿನಿಂದ ಕರೆಸಿಕೊಂಡಿತು.
- ನಂತರದಲ್ಲಿ ರೋಮನ್ ಸಾಮ್ರಾಜ್ಯದ ಕಾಲದ ಅನೇಕ ಬರಹಗಾರರು (ನೀತಿಕಥೆಗಳನ್ನು ಲ್ಯಾಟಿನ್ ಭಾಷೆಗೆ ತಂದ ಫೇಡ್ರಸ್ ಮತ್ತಿತರರು), ಹೇಳುವ ಪ್ರಕಾರ ಆತ ಫ್ರೈಜಿಯಾದಲ್ಲಿ ಜನಿಸಿದ.[೨] ಕ್ರಿ.ಪೂ. ೩ನೇ-ಶತಮಾನದ ಕವಿ ಕ್ಯಾಲಿಮ್ಯಾಕಸ್ ಆತನನ್ನು "ಸಾರ್ಡಿಸ್‌ನ ಈಸೋಪ" ಎಂದು ಕರೆಯುತ್ತಾನೆ ಮತ್ತು [೩] ನಂತರದ ಬರಹಗಾರ ಟೈರ್‌ನ ಮ್ಯಾಕ್ಸಿಮಸ್ ಆತನನ್ನು "ಲಿಡಿಯಾದ ಸನ್ಯಾಸಿ" ಎಂದು ಕರೆಯುತ್ತಾನೆ.[೪]
ಅರಿಸ್ಟಾಟಲ್[೫] ಮತ್ತು ಹೆರೊಡೋಟಸ್[೬]
- ಇವರಿಂದ ನಾವು ತಿಳಿಯುವುದೇನೆಂದರೆ ಈಸೋಪ ಸಮೋಸ್‌ನಲ್ಲಿ ಒಬ್ಬ ಗುಲಾಮನಾಗಿದ್ದ ಮತ್ತು ಆತನ ಮಾಲೀಕರೆಂದರೆ ಮೊದಲು ಝಾಂಥಸ್ ಮತ್ತು ನಂತರ ಲಾಡ್‌ಮನ್ ಎಂಬುವವರು; ಮತ್ತು ಕಾಲಾನಂತರದಲ್ಲಿ ಆತನನ್ನು ಗುಲಾಮಗಿರಿಯಿಂದ ಮುಕ್ತಗೊಳಿಸಲಾಯಿತು, ಆತ ಸೇಮಿಯನ್ ಶ್ರೀಮಂತನೊಬ್ಬನಿಗಾಗಿ ವಕೀಲನಂತೆ ವಾದಿಸಿದನು, ಮತ್ತು ಆತ ಡೆಲ್ಫಿಯಲ್ಲಿ ತೀರಿಕೊಂಡನು. ಪ್ಲುಟಾರ್ಕ್[೭]
- ಈಸೋಪ ಡೆಲ್ಫಿಗೆ ಒಂದು ರಾಜತಾಂತ್ರಿಕವಾದ ಕಾರ್ಯದ ಮೇಲೆ ಲಿಡಿಯಾದ ಕ್ರೋಸಸ್ ನಿಂದ ಕಳಿಸಲ್ಪಟ್ಟು ಬಂದಿದ್ದ, ಅಲ್ಲಿ ಡೆಲ್ಫಿಯನ್ನರನ್ನು ಅವಮಾನಿಸಿದ ಮತ್ತು ಆ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ಆರೋಪದ ಮೇಲೆ ಆತನಿಗೆ ಮರಣ ದಂಡನೆ ವಿಧಿಸಿ ಬೆಟ್ಟದಿಂದ ತಳ್ಳಲಾಯಿತು (ಆನಂತರದಲ್ಲಿ ಡೆಲ್ಫಿಯನ್ನರು ಸಾಂಕ್ರಾಮಿಕ ರೋಗ ಮತ್ತು ಬರಗಾಲವನ್ನು ಎದುರಿಸಿದರು);
- ಈ ಘಟನೆ ನಡೆಯುವ ಮೊದಲು, ಈಸೋಪ ಕೋರಿಂಥ್‌ನ ಪೆರಿಯಾಂಡರ್‌ನನ್ನು ಭೇಟಿ ಮಾಡಿದ, ಅಲ್ಲಿ ಪ್ಲುಟಾರ್ಕ್ ಹೇಳುವಂತೆ ಗ್ರೀಸ್‌ನ ಏಳು ಜನ ಸನ್ಯಾಸಿಗಳು ಜೊತೆ ಕುಳಿತು ಊಟ ಮಾಡಿದ. ಆತ ಸಾರ್ಡಿಸ್ ನಲ್ಲಿ ಭೇಟಿ ಮಾಡಿದ್ದ ಆತನ ಗೆಳೆಯ ಸೊಲೊನ್ ಕೂಡಾ ಜೊತೆಗಿದ್ದ. (ಲೆಸ್ಲಿ ಕುರ್ಕೆ ಹೇಳುವ ಪ್ರಕಾರ ಈಸೋಪನೇ "ಏಳು ಸನ್ಯಾಸಿಗಳ ಪಟ್ಟಿಯಲ್ಲಿ ಸೇರಿಸುವುದಕ್ಕೆ ತಕ್ಕವನಾಗಿದ್ದಾನೆ".[೮])
- ಈಸೋಪನ ಸಾವು ಮತ್ತು ಕ್ರೋಸಸ್‌ನ ಆಡಳಿತದ ಕಾಲಾವಧಿಯ ಕುರಿತಾಗಿ ಸಮಾನ ದಿನಾಂಕಗಳು ಲಭ್ಯವಾಗದ ಸಮಸ್ಯೆಯಿಂದಾಗಿ ಈಸೋಪನ ಕುರಿತು ಅಧ್ಯಯನ ಮಡಿದ (ಮತ್ತು "ಪೆರ್ರಿ ಇಂಡೆಕ್ಸ್" ಸಂಗ್ರಹಿಸಿದ) ಬೆನ್ ಎಡ್ವಿನ್ ಪೆರ್ರಿ ೧೯೬೫ ರಲ್ಲಿ ಈ ರೀತಿ ಹೇಳಿಕೆ ನೀಡಿದ:
- "ಪ್ರಾಚೀನ ಕಾಲದಲ್ಲಿ ಈಸೋಪ ಮತ್ತು ಕ್ರೋಸಸ್‌ಗೆ ಸಂಬಂಧಿಸಿದ ಯಾವುದೇ ದಾಖಲೆಗಳು ಅಥವಾ ಗ್ರೀಸ್‌ನ ಏಳು ಜನ ಸನ್ಯಾಸಿಗಳ ಜೊತೆಗಿನ ಆತನ ಸಂಬಂಧ ಎಲ್ಲವೂ ಸಾಹಿತ್ಯಿಕ ಕಲ್ಪನೆ ಎಂದು ಮಾತ್ರ ಪರಿಗಣಿಸಬಹುದಾಗಿದೆ." ಅಷ್ಟೇ ಅಲ್ಲದೇ ಪೆರ್ರಿ ಈಸೋಪನ ಸಾವು ಡೆಲ್ಫಿಯಲ್ಲಾಗಿದ್ದು ಕಲ್ಪನೆ ಎಂದು ಹೇಳಿದ್ದ;[೯]
- ಆದರೆ ನಂತರದ ಸಂಶೋಧನೆಗಳು ಕ್ರೋಸಸ್‌ಗಾಗಿ ರಾಜತಾಂತ್ರಿಕ ಉದ್ದೇಶದಿಂದ ಆತ ಹೋಗಿದ್ದು ಮತ್ತು ಆತ ಪೆರಿಯಾಂಡರ್‌ಗೆ ಭೇಟಿ ನೀಡಿದ್ದು" ಈಸೋಪನ ಸಾವಿನ ದಿನಾಂಕದೊಂದಿಗೆ ಹೊಂದುತ್ತವೆ."[೧೦] ಇನ್ನೂ ಸಮಸ್ಯಾತ್ಮಕವಾದುದೆಂದರೆ ಫೇಡ್ರಸ್ ಬರೆದ ಕಥೆ. ಇದರಲ್ಲಿ ಈಸೋಪ ಅಥೆನ್ಸ್‌ನಲ್ಲಿ ಕಪ್ಪೆಗಳು ರಾಜನಿಗಾಗಿ ಕೇಳಿದ ಕಥೆಯನ್ನು ಹೇಳುತ್ತಾನೆ. ಇದು ನಡೆದದ್ದು ಪೀಸಿಸ್ಟ್ರಾಟಸ್‌ನ ಆಡಳಿತ ಕಾಲದಲ್ಲಿ, ಮತ್ತು ಇದು ಈಸೋಪನ ಸಾವಿನ ಸಮಯವಾದ ಕ್ರಿ.ಪೂ. ೫೬೪ರ ಅನೇಕ ದಶಕಗಳ ನಂತರದಲ್ಲಿ ನಡೆಯುತ್ತದೆ .[೧೧]
ದ ಈಸೋಪ ರೋಮ್ಯಾನ್ಸ್
ಬದಲಾಯಿಸಿ- ಈಸೋಪನ ಜೀವನದ ಕುರಿತಾದ ಈ ಪ್ರಾಚೀನ ಕಾಲದ ಹರಡಿ ಹೋದ ಉಲ್ಲೇಖಗಳ ಜೊತೆಗೆ, ಒಂದು ಅತ್ಯಂತ ಕಾಲ್ಪನಿಕವಾದ ಒಂದು ಆತನ ಜೀವನ ಚರಿತ್ರೆಯಿದ್ದು ಅದರ ಹೆಸರು ದ ಈಸೋಪ್ ರೋಮ್ಯಾನ್ಸ್ (ಅದನ್ನು ವಿಟಾ ಅಥವಾ ದ ಲೈಫ್ ಆಫ್ ಈಸೋಪ ಅಥವಾ ದ ಬುಕ್ ಆಫ್ ಕ್ಸಾಂಥಸ್ ದ ಫಿಲಾಸಫರ್ ಅಂಡ್ ಈಸೋಪ ಹಿಸ್ ಸ್ಲೇವ್ ), ಎಂದೆಲ್ಲ ಕರೆಯಲಾಗುತ್ತದೆ.
- "ಇದೊಂದು ಅನಾಮಿಕ , ಗ್ರೀಕ್ ಜನಪ್ರಿಯ ಸಾಹಿತ್ಯವಾಗಿದ್ದು, ಇದನ್ನು ನಮ್ಮ ಕಾಲದ ಎರಡನೇ ಶತಮಾನದ ಸಂದರ್ಭದಲ್ಲಿ ರಚಿಸಲಾಗಿದೆ.... ದ ಅಲೇಕ್ಸಾಂಡರ್ ರೋಮ್ಯಾನ್ಸ್ ಹಾಗೆ ದ ಈಸೋಪ ರೋಮ್ಯಾನ್ಸ್ ಸಹಾ ಒಂದು ಜಾನಪದ ಪುಸ್ತಕವಾಯಿತು. ಈ ಪುಸ್ತಕ ಯಾರಿಗೂ ಸಂಬಂಧಪಡಲಿಲ್ಲ, ಮತ್ತು ಅನೇಕ ಲೇಖಕರು ತಮಗನ್ನಿಸಿದಂತೆ ಆಗಾಗ ಬದಲಾಯಿಸಿದ್ದಾರೆ."[೧೨] ಈ ಪುಸ್ತಕದ ಅನೇಕ, ಕೆಲವೊಮ್ಮೆ ವಿರೋಧಾಭಾಸದ ಆವೃತ್ತಿಗಳೂ ಲಭ್ಯವಿವೆ.
- ಇದರ ಅತ್ಯಂತ ಪ್ರಾಚೀನ ಆವೃತ್ತಿಯನ್ನು "ಬಹುಶಃ ಕ್ರಿ.ಶ. ಮೊದಲ ಶತಮಾನದಲ್ಲಿ" ರಚಿಸಲಾಗಿದೆ, ಆದರೆ ಈ ಕತೆಯು "ಬರೆಯಲ್ಪಡುವ ಮೊದಲು ಅನೇಕ ಕಡೆ ಶತಮಾನಗಳವರೆಗೆ ತಿರುಗಿದೆ";[೧೩] "ಇದರಲ್ಲಿನ ಕೆಲವು ಅಂಶಗಳನ್ನು ಕ್ರಿ.ಪೂ ೪ನೇ ಶತಮಾನದ್ದು ಎನ್ನಬಹುದಾಗಿದೆ."[೧೪] ದ ಈಸೋಪ ರೋಮ್ಯಾನ್ಸ್ ದಲ್ಲಿ ಯಾವುದೇ ರೀತಿಯ ಐತಿಹಾಸಿಕ ಅಥವಾ ಜೀವನ ಚರಿತ್ರೆಯ ಅಂಶಗಳಿರುವದನ್ನು ಸಂಶೋಧಕರು ಅಲ್ಲಗಳೆಯುತ್ತಾರೆ;
- ೨೦ನೇ ಶತಮಾನದ ಕೊನೆ ಹೊತ್ತಿಗೆ ಅನೇಕ ರೀತಿಯ ಸಂಶೋಧನೆಗಳು ಪ್ರಾರಂಭವಾದವು. ದ ಈಸೋಪ್ ರೋಮ್ಯಾನ್ಸ್ ನಲ್ಲಿ ಈಸೋಪ ಒಬ್ಬ ಸೋಮೊಸ್‌ನ ಫ್ರಿಜಿಯನ್ ಗುಲಾಮನಾಗಿದ್ದು, ತುಂಬಾ ವಿಕಾರ ರೂಪಿಯಾಗಿರುತ್ತಾನೆ. ಆತನಿಗೆ ಮಾತನಾಡುವ ಶಕ್ತಿ ಇರುವುದಿಲ್ಲ .
- ನಂತರದಲ್ಲಿ ಆತ ಐಸಿಸ್‌ನ ಆರಾಧಕಳಿಗೆ ತೋರಿಸಿದ ಕರುಣೆಯಿಂದಾಗಿ ಆತನಿಗೆ ಕಥೆ ಹೇಳುವ ಸಾಮರ್ಥ್ಯವನ್ನೂ ದೇವಿ ಅನುಗ್ರಹಿಸುತ್ತಾಳೆ. ಅದನ್ನು ಬಳಸಿಕೊಂಡು ತನ್ನ ಮಾಲೀಕನಾದ ಝಾಂಥಸ್‌ನಿಗೆ ಅವನ ವಿದ್ಯಾರ್ಥಿಗಳ ಎದುರು ವಿರೋಧವಾಗಿ ಮಾತನಾಡಲು ಮತ್ತು ಆತನ ಹೆಂಡತಿಯೊಂದಿಗೆ ಮಲಗಲು ಬಳಸಿಕೊಳ್ಳುತ್ತಾನೆ.
- ಸಮೋಸ್‌ನ ಜನರಿಗೆ ಮುಂದೊಗಲಿರುವ ಅಪಶಕುನದ ಕುರಿತು ಹೇಳಿದ ನಂತರದಲ್ಲಿ, ಈಸೋಪನಿಗೆ ಸ್ವಾತಂತ್ರ್ಯ ನೀಡಲಾಗುತ್ತದೆ ಮತ್ತು ಆತ ಸಮಿಯನ್ನರು ಮತ್ತು ಕ್ರೋಸಸ್ ರಾಜನ ನಡುವೆ ಗುಪ್ತ ದೂತನಾಗಿ ಕಾರ್ಯ ನಿರ್ವಹಿಸುತ್ತಾನೆ. ನಂತರದಲ್ಲಿ ಆತ (ಕಾಲ್ಪನಿಕವಾಗಿ) ಬ್ಯಾಬಿಲೋನಿನ ಲೈಸರ್ಗಸ್ ಮತ್ತು ಈಜಿಪ್ಟಿನ ನೆಕ್ಟನಾಬೋ ರಾಜರ ಆಸ್ಠಾನಕ್ಕೆ ಪ್ರಯಾಣಿಸುತ್ತಾನೆ.
- ಈ ಭಾಗವನ್ನು ಹೆಚ್ಚಾಗಿ ರೋಮಾನ್ಸ್ ಆಫ್ ಅಹಿಗರ್‌ದಿಂದ ಆಯ್ದುಕೊಳ್ಳಲಾಗಿದೆ.[೧೫] ಈಸೋಪ ಡೆಲ್ಫಿಗೆ ಪ್ರಯಾಣ ಬೆಳೆಸುವುದರೊಂದಿಗೆ ಇದು ಮುಗಿಯುತ್ತದೆ. ಅಲ್ಲಿ ಆತ ಅವಮಾನ ಮಾಡುವಂತಹ ಕಥೆಗಳನ್ನು ಹೇಳುವ ಮೂಲಕ ಅಲ್ಲಿನ ಜನರಿಗೆ ಸಿಟ್ಟು ಬರುವಂತೆ ಮಾಡುತ್ತಾನೆ ಮತ್ತು ಆ ಕಾರಣಕ್ಕಾಗಿ ಆತನಿಗೆ ಮರಣದಂಡನೆಯನ್ನು ವಿಧಿಸಲಾಗುತ್ತದೆ ಮತ್ತು ಆತನನ್ನು ಬೆಟ್ಟದಿಂದ ತಳ್ಳಲಾಗುತ್ತದೆ.
ನೀತಿಕಥೆಗಾರ ಈಸೋಪ್
ಬದಲಾಯಿಸಿ- ಪುರಾತನ ಕಾಲದ ನೀತಿ(ಕಟ್ಟು)ಕಥೆಗಾರನೆಂದು ಈಸೋಪನು ಪ್ರಸಿದ್ಧನಾಗ್ಯೂ ಅವನಿಗಿಂತಲೂ ಸುಮಾರು ಮೂರುನೂರು ವರ್ಷಗಳ ಹಿಂದೆ ಹೆಸಿಯದ್ ಎಂಬುವವನು ಗ್ರೀಕ್‌ನಲ್ಲಿ ಗಿಡುಗ ಮತ್ತು ನೈಟೆಂಗಲ್[೧೬] ಪಕ್ಷಿಗಳ ಮಾತನಾಡುವ ಕಥೆಗಳನ್ನು ರಚಿಸಿ ಪ್ರಸಿದ್ಧನಾಗಿದ್ದನು.
- ಈಸೋಪನು ತನ್ನ ಕಥೆಗಳನ್ನು ತಾನೇ ಬರೆದಿದ್ದಾನೆ ಎಂಬುದರ ಬಗ್ಗೆ ಅನುಮಾನಗಳಿವೆ. ಆದರೆ ಈಸೋಪ್ ರೊಮಾನ್ಸ್ ಪುಸ್ತಕದ ಪ್ರಕಾರ ಆತನು ಪುಸ್ತಕಗಳನ್ನು ಬರೆದು ಕ್ರೊಸಸ್‌ನ ಗ್ರಂಥಾಲಯಕ್ಕೆ ಧಾರೆಯೆರೆದನೆಂಬುದನ್ನು ಪುಷ್ಠೀಕರಿಸುತ್ತದೆ. ಹೆರೊಡೊಟಸ್ ಈಸೋಪನನ್ನು "ನೀತಿಕಥೆಗಳ ಬರಹಗಾರ"ನೆಂದು ಕರೆದಿದ್ದಾನೆ.
- ಅರಿಸ್ಟೋಫೇನಸ್ ಈಸೋಪನ[೧೭] ಕಥೆಗಳ ಓದಿನ ಬಗ್ಗೆ ಹೆಳಿದ್ದಾನಾದರೂ ಈಸೋಪನ ಬರವಣಿಗೆಗಳು ಉಳಿದಿಲ್ಲ. ತತ್ವಜ್ಞಾನಿಗಳ ಪ್ರಕಾರ ಆತನ ಬರವಣಿಗೆಗಳು ಸುಮಾರು ಕ್ರಿ.ಪೂ.ಐದನೇ ಶತಮಾನದಲ್ಲಿದ್ದು ಅವು ಜೀವನ ಚರಿತ್ರೆಯ ರೀತಿಯಲ್ಲಿದ್ದವು.[೧೮]
- ಆ ಪುಸ್ತಕಗಳನ್ನು ಯಾರು ಬರೆದರು ಎಂಬುದರ ಬಗ್ಗೆ ಸ್ಪಷ್ಟ ಉಲ್ಲೇಖವಿಲ್ಲವಾದರೂ ಕೂಡ ಪ್ರಾಚೀನ ಗ್ರೀಕ್‌ನ ಕಾಲದಲ್ಲಿ ಈ ನೀತಿ ಕಥೆಗಳು ಸಾಕಷ್ಟು ಪರಿಣಾಮ ಬೀರಿದ್ದವು ಎಂಬುದು ಸ್ಟಷ್ಟವಾಗಿ ಕಂಡುಬರುತ್ತದೆ. ಸೊಫೊಕ್ಲೆಸ್ ಒಂದು ಪದ್ಯದಲ್ಲಿ ಯುರಿಪಿಡಿಸ್‌ನನ್ನು ಪರಿಚಯಿಸುತ್ತಾ ಈಸೋಪನ ನೀತಿಗಳಾದ ಉತ್ತರದಿಂದ ಬೀಸುವ ಗಾಳಿಯ ಮತ್ತು ಸೂರ್ಯನ ನೀತಿಯನ್ನು ಉಲ್ಲೇಖಿಸಿದ್ದಾನೆ.[೧೯]
- ಸಾಕ್ರಟಿಸ್ ಜೈಲಿನಲ್ಲಿದ್ದಾಗ ಕೆಲವು ನೀತಿಗಳನ್ನು ಕಿರು ಪದ್ಯದ ರೂಪದಲ್ಲಿ[೨೦] ಸಣ್ಣ ಸಣ್ಣ ತುಣುಕುಗಳಲ್ಲಿ ಅರ್ಥವಾಗುವಂತೆ ರಚಿಸಿದ್ದಾನೆ. ಆ ಕುರಿತು ಡಯೋಜನಿಸ್ ಲಾರ್ಟಿಯಸ್ ಸಹಾ ದಾಖಲಿಸಿದ್ದಾನೆ.[೨೧] ಪ್ರಾಚೀನ ರೋಮ್‌ನ ನಾಟಕಕಾರನಾದ ಮತ್ತು ಕವಿಯಾದ ಇನ್ನುಯಿಸ್ ತನ್ನ ಲ್ಯಾಟಿನ್ ಕವನಗಳಲ್ಲಿ ಒಂದಾದರೂ ಈಸೋಪನ ನೀತಿಗಳನ್ನು ಕನಿಷ್ಟ ಪಕ್ಷ ಎರಡು ಸಾಲುಗಳಲ್ಲಾದರೂ ಕಾಣಿಸಿಕೊಳ್ಳುವಂತೆ ಆಯ್ದುಕೊಂಡಿದ್ದಾನೆ.[೨೨]
- ಈಸೋಪನ ನೀತಿಕಥೆಗಳ ಕುರುಹುಗಳನ್ನು ಹಲವಾರು ಲ್ಯಾಟಿನ್ ಮತ್ತು ಗ್ರೀಕ್ ಬರಹಗಾರರಿಂದ ಅನುವಾದಿಸಿ ಬರೆಯಲ್ಪಟ್ಟ ಲೇಖನಗಳಿಂದ ಕಂಡುಕೊಳ್ಳಬಹುದಾಗಿದೆ. ಪಲೆರಮ್‌ನ ಡೆಮಿಟ್ರಿಯಸ್(ca. ೩೫೦-ca. ೨೮೦ BC) ಇವುಗಳನ್ನು ಹತ್ತು ಪುಸ್ತಕಗಳಲ್ಲಿ ಸಂಗ್ರಹಿಸಿದ್ದಾನೆ. ಅವು ಮುಖ್ಯವಾಗಿ ಗದ್ಯ (Lopson Aisopeion sunagogai ) ರೂಪದಲ್ಲಿದ್ದು ಅವುಗಳನ್ನು ಭಾಷಣಗಳ ಸಲುವಾಗಿ ಮಾಡಿದ್ದಾಗಿದ್ದವು,
- ಆದರೆ ಅವು ಕಳೆದುಹೋಗಿವೆ. ನಂತರ ಇವು ಶೋಕಗೀತೆಗಳಲ್ಲಿ ಕಾಣಿಸಿಕೊಂಡವು ಸೂಡಾದಲ್ಲಿ ಇದರ ಉಲ್ಲೇಖವಿದ್ದು ಅದರ ಕತೃವಿನ ಬಗ್ಗೆ ಮಾಹಿತಿ ಇಲ್ಲ. ಅಗಸ್ಟಸ್‌ನ ಮುಕ್ತಮನುಷ್ಯನಾದ ಫ್ಯಾಡ್ರಸ್ ಇವುಗಳನ್ನು ಲ್ಯಾಟಿನ್‌ಗೆ ಬರೆದಿದ್ದಾನೆ.
- ಬಾಬ್ರಿಯಸ್ ಇವುಗಳನ್ನು ಗ್ರೀಕ್ ಛಂದಸ್ಸಿಗೆ ಕ್ರಿ.ಶ ಮೂರನೇ ಶತಮಾನದ ಪೂವಾರ್ಧದಲ್ಲಿ ಪರಿವರ್ತಿಸಿದನು ಮತ್ತು ಮೂರನೇ ಶತಮಾನದ ಬರಹಗಾರನಾದ ಟಿಟಿಯಾನಸ್ ನೀತಿಗಳನ್ನು ಕವನಗಳಲ್ಲಿ ಬರೆದಿದ್ದು, ಅವುಗಳು ಈಗ ಲಭ್ಯವಿಲ್ಲ.[೨೩]
- ಅವಾಯನಸ್ (ಸರಿಯಾಗಿ ದಿನಾಂಕಗಳು ಗೊತ್ತಿಲ್ಲದ ಆದರೆ ನಾಲ್ಕನೇ ಶತಮಾನಕ್ಕೆ ಸಂಬಂಧಿಸಿದ) ಈತನು ೪೨ ನೀತಿಕಥೆಗಳನ್ನು ಲ್ಯಾಟಿನ್ ವಚನಗಳಿಗೆ ಅನುವಾದ ಮಾಡಿದನು. ನಾಲ್ಕನೇ ಶತಮಾನದ ವ್ಯಾಕರಣಕಾರನಾದ ದೊಸಿಥಸ್ ಮೆಜಿಸ್ಟರ್ ಕೂಡ ಈಸೋಪನ ನೀತಿಕಥೆಗಳನ್ನು ಸಂಗ್ರಹಿಸಿದ್ದು ಈಗ ಕಳೆದುಹೋಗಿದೆ.
- ಮುಂದಿನ ಶತಮಾನಗಳಲ್ಲಿ ಈಸೋಪನ ನೀತಿಕಥೆಗಳ ಅನುವಾದವು ಮುಂದುವರೆದವು, ಮತ್ತು ಇತರ ಸಂಸ್ಸ್ಕೃತಿಗಳಲ್ಲೂ ಕೂಡ ಈಸೋಪನ ನೀತಿಕಥೆಗಳ ಅನುವಾದವಾಗುತ್ತಾ, ಅಲ್ಲಿನ ಸಂಸ್ಕೃತಿಗಳೂ ಸೇರಿ, ಅವುಗಳು ಸ್ವಂತ ಕಥೆಗಳಂತೆ ಮಾರ್ಪಾಡನ್ನು ಹೊಂದಿ, ಕೆಲವು ಸಂದರ್ಭಗಳಲ್ಲಿ ಈಸೋಪನ ಮೂಲ ಕಥೆಗಳಿಗೆ ಸಂಬಂಧವೇ ಇಲ್ಲದಿರುವಂತೆ ಭಾಸವಾಗುತ್ತವೆ.
- ಇಪ್ಪತ್ತನೇ ಶತಮಾನದ ಅಂತ್ಯದಲ್ಲಿನ ಈಸೋಪನ ಕಥೆಗಳ ಮೇಲಿನ ಪಂಡಿತೋಚಿತವಾದ ಆಸಕ್ತಿಗಳಿಂದಾಗಿ ಮೂಲ ಈಸೋಪನ ಕಥೆಗಳಿಗೆ ಸಂಪೂರ್ಣ ಹೋಲಿಕೆಯುಳ್ಳ ಕಥೆಗಳ ಗುಣಧರ್ಮಗಳನ್ನು ಅರಿಯುವ ಪ್ರಯತ್ನಗಳು ನಡೆದವು.[೨೪]
ದೈಹಿಕ ಚಹರೆ ಮತ್ತು ಆಫ್ರಿಕಾದ ಮೂಲದ ಬಗೆಗಿನ ಪ್ರಶ್ನೆ
ಬದಲಾಯಿಸಿ- ಅನಾಮಧೇಯವಾಗಿ ಬರೆಯಲ್ಪಟ್ಟ ಈಸೋಪ್ ರೊಮಾನ್ಸ್ ನಲ್ಲಿ(ಸಾಮಾನ್ಯವಾಗಿ ಕ್ರಿ.ಶ ಒಂದನೇ ಅಥವಾ ಎರಡನೇ ಶತಮಾನದ; ಮೇಲೆ ನೋಡಿ) ಈಸೋಪನನ್ನು ವಿವಿಧ ರೀತಿಯಲ್ಲಿ ವರ್ಣಿಸಲಾಗಿದೆ. ಅದರಲ್ಲಿ ಆತನು ಅಸಹ್ಯಕರವಾಗಿದ್ದನೆಂದು, ಗೂನುಬೆನ್ನಿನ ವಿಕಾರವಾದ ತಲೆಯನ್ನು ಹೊಂದಿದ, ನೇರ ಮೂಗಿನ, ಕಪ್ಪು ಬಣ್ಣದ, ಕುಳ್ಳದೇಹದ ಅಂಕುಡೊಂಕಾದ ಕಾಲಿನ, ಗಿಡ್ಡ ಕೈಗಳುಳ್ಳ, ವಕ್ರ ಕಣ್ಣುಗಳ, ದಪ್ಪ ತುಟಿಗಳುಳ್ಳ, ಅಶುಭಸೂಚಕ ಘೋರ ರೂಪ"ವುಳ್ಳವನಾಗಿದ್ದನು[೨೫]. ಅಥವಾ ಇನ್ನೊಂದು ಅನುವಾದದ ಪ್ರಕಾರ " ಪ್ರೊಮೆಥಿಯಸ್ ಅರೆನಿದ್ರೆಯಲ್ಲಿದ್ದಾಗ ಸೃಷ್ಟಿಸಿದ ಆಕಾರ"ದಂತಿದ್ದನು.[೨೬]
- ನಾಲ್ಕನೇ ಶತಮಾನದಲ್ಲಿ ಈಸೋಪನ ಕುರಿತಾಗಿ ಬರೆದ ಅತ್ಯಂತ ಮೊದಲ ಪುಸ್ತಕವದ ಹಿಮೇರಿಯಸ್‌ನ ಪುಸ್ತಕದಲ್ಲಿ ಇವನ ಉಲ್ಲೇಖ ಬರುತ್ತದೆ. ಅದರ ಪ್ರಕಾರ, "ಈಸೋಪನನ್ನು ನೋಡಿದರೇ ನಗುತ್ತಿದ್ದರು. ಕೇವಲ ಆತನ ಕಥೆಗಳಿಂದ ಅಲ್ಲ, ಬದಲಾಗಿ ಆತನ ಆಕಾರ ಮತ್ತು ರೂಪದಿಂದಲೂ ಮತ್ತು ಆತನು ಹೊಂದಿದ ಧ್ವನಿಯಿಂದಲೂ ಅತ ಜನರನ್ನು ರಂಜಿಸುತ್ತಾನೆ".[೨೭] ಈ ಎರಡೂ ಮೂಲಗಳಿಂದ ಬಂದ ಮಾಹಿತಿ ನಂಬಲಸಾಧ್ಯವಾಗಿದೆ . ಏಕೆಂದರೆ ಹಿಮೆರಿಯಸ್ ಈಸೋಪನಿಗಿಂತ ಸುಮಾರು ೮೦೦ ವರ್ಷಗಳ ನಂತರ ಜೀವಿಸಿದ್ದ.
- ಆತ ದ ಈಸೋಪ್ ರೊಮಾನ್ಸ್ ಎಂಬ ಕಲ್ಪಿತ ಪುಸ್ತಕದ ಆಧಾರದಿಂದ ಈಸೋಪನ ಕುರಿತು ತಿಳಿದು ಬರೆದಿದ್ದ ಎನ್ನಬಹುದಾಗಿದೆ. ಸತ್ಯವೋ ಸುಳ್ಳೋ, ಕೆಲವು ಕಾಲದ ನಂತರ ಈಸೋಪನ ಕೆಟ್ಟ ರೂಪವೇ ಜನರ ಮನಸ್ಸಿನಲ್ಲಿ ಪ್ರಸಿದ್ಧವಾಗಿ ಉಳಿಯಿತು.
- ಈ ರೀತಿಯ ಬಾಹ್ಯ ರಚನೆಯ ಸಂಸ್ಕೃತಿ ಹೇಗೆ ಬೆಳೆಯಿತು ಎಂಬ ಬಗ್ಗೆ ಅಧ್ಯಯನಗಳನ್ನು ನಡೆಸಲಾಗುತ್ತಿದೆ.[೨೮]
- ಪ್ರಾಚೀನ ಮೂಲಗಳು ಈಸೋಪನ ಎರಡು ರೀತಿಯ ಪ್ರಖ್ಯಾತ ಮೂರ್ತಿಗಳನ್ನು ಉಲ್ಲೇಖಿಸುತ್ತವೆ. ಒಂದನೆಯದು ಅರಿಸ್ಟೊಡೊಮೆಸ್‌ನಿಂದ ಮತ್ತು ಮತ್ತೊಂದು ಲೈಸಿಪಸ್‌ನಿಂದ. ಇದರ ಪ್ರಕಾರ ಈಸೋಪನ ಮೂರ್ತಿ ಗ್ರೀಸ್‌ನ ಏಳು ಮಹಾಜ್ಞಾನಿಗಳ ಚಿತ್ರಕ್ಕಿಂತ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಫಿಲಾಸ್ಟ್ರಸ್ ಹೇಳುವ ಪ್ರಕಾರ ಈ ಚಿತ್ರದಲ್ಲಿ ಈಸೋಪನ ಸುತ್ತ ಆತನ ಕತೆಯಲ್ಲಿ ಬರುವ ಪ್ರಾಣಿಗಳಿವೆ.[೨೯]
- ಆದರೆ ದುರ್ದೈವವಶಾತ್ ಅವುಗಳಲ್ಲಿ ಒಂದೇ ಒಂದು ಚಿತ್ರವೂ ಈಗಿನ ಕಾಲದಲ್ಲಿ ಲಭ್ಯವಿಲ್ಲ ಮತ್ತು ಆಗಿನ ಕಾಲದ ಚಿತ್ರಕಾರರು ಆತನನ್ನು ಹೇಗೆ ಚಿತ್ರಿಸಿದ್ದರು ಎಂದು ತಿಳಿಯಲು ಸಾದ್ಯ ಇಲ್ಲದಿರುವುದು ನಮ್ಮ ದೌರ್ಬಾಗ್ಯವಾಗಿದೆ.
- ನಂತರ ಬಂದ ಸಂಪ್ರದಾಯಗಳು ಈಸೋಪನನ್ನು ಇಥೋಪಿಯಾದಿಂದ ಬಂದ ಕಪ್ಪು ಆಫ್ರಿಕನ್ ಎಂದು ವರ್ಣಿಸಿದವು.[೩೦] ಈ ವಿಚಾರವನ್ನು ಪ್ರಥಮಬಾರಿಗೆ ಪ್ರಕಟಿಸಿದವನೆಂದರೆ ಬೆಜಂಟೈನ್‌ನ ತತ್ವಜ್ಞಾನಿಯಾದ ’ಪ್ಲಾನುಡಾಸ್’. ಈತನು ಕ್ರಿ.ಶ ಹದಿಮೂರನೇ ಶತಮಾನದಲ್ಲಿ ಬಾಳಿದ್ದನು.
- ಈತನು ’ಈಸೋಪ್ ರೊಮಾನ್ಸ್ ’ ಪುಸ್ತಕವನ್ನಾಧರಿಸಿ ಆತನ ಜೀವನ ಚರಿತ್ರೆಯನ್ನು ಬರೆದನು ಆತನ ಪ್ರಕಾರ ಈಸೋಪನು ಇಥಿಯೋಪಿಯಾಕ್ಕೆ ಸಂಬಂಧಿಸಿದವನಾಗಿದ್ದು ಅದರಿಂದಲೇ ಆತನಿಗೆ ಈಸೋಪನೆಂಬ ಹೆಸರು ಬಂದಿದೆ.[೩೧]
- ( ಗ್ರೀಕ್‌ನಲ್ಲಿ ಇಥಿಯೋಪಿಯನ್ ಎಂದರೆ ಸುಟ್ಟಮುಖದವನು ಎಂಬ ಅರ್ಥವಾಗುತ್ತದೆ. ಇಥಿಯೋಪಿಯನ್ನರು ಈ ಶಬ್ದವನ್ನು ತಮ್ಮ ಚರ್ಮ ಕಪ್ಪಾಗಲು ಕಾರಣವಾಗುವ ಸೂರ್ಯ ಉದಯದ ಸ್ಥಳವಾದ ಪೂರ್ವಕ್ಕೆ ಸಮೀಪದ ಸ್ಥಳಕ್ಕೆ ಈ ಹೆಸರಿನಿಂದ ಕರೆಯುತ್ತಿದ್ದರು.[೩೨]
- ೧೬೮೭ರಲ್ಲಿ ನಡೆದ ಪ್ಲಾನುಡೊಸ್ ಬರೆದ ಜೀವನ ಚರಿತ್ರೆಯ ಅನುವಾದದಲ್ಲಿ " ಆತನ ಮುಖಚರ್ಯೆಯು ಕಪ್ಪಾಗಿತ್ತು.ಈ ಕಪ್ಪು ವರ್ಣದಿಂದಲೇ ಈತನು ಈ ಹೆಸರನ್ನು ಪಡೆದನು(ಈಸೊಪಸ್ ಇದು ಕೂಡ ಈಥಿಯೋಪ್ಸ್ ನಂತಹುದೇ ಶಬ್ದವಾಗಿದೆ.) ಮತ್ತು ಆತನನ್ನು ಎಲ್ಲಿಯವನೆಂದು ಕೇಳಿದಾಗ ತಾನೊಬ್ಬ ನಿಗ್ರೋ ಜನಾಂಗಕ್ಕೆ ಸೇರಿದವನಾಗಿದ್ದೆನೆ. ಎಂದು ಪ್ರತಿಕ್ರಿಯಿಸಿದ್ದಾನೆ ಎಂದು ಬಹುಸಂಖ್ಯಾತ ಲೇಖನಗಳನ್ನು ಬರೆದ ಫ್ರಾಂಚಿಸ್ ಬಾರ್ಲೊ ಈಸೋಪನ ನುಡಿಗಳನ್ನು ಈ ರೀತಿ ತಿಳಿಸಿದ್ದಾನೆ.[೩೩]
- ಆದರೆ ಗ್ರೆಟ್ ಜಾನ್ ವನ್ ಡಿಜ್ಕ ಪ್ರಕಾರ ಪ್ಲಾನುಡಾಸ್ ಸಂಶೋಧಿಸಿದ ಈಸೋಪನು ಇಥಿಯೋಪಿಯಾದವನೆಂದು ಕರೆದುದು ವ್ಯುತ್ಪತ್ತಿಶಾಸ್ತ್ರದ ಪ್ರಕಾರ ತಪ್ಪುಮಾಹಿತಿಯಾಗಿದೆ[೩೪]. ಮತ್ತು ಪ್ರಾಂಕ್ ಸ್ನೋಡೆನ್ ಹೇಳಿದಂತೆ ಪ್ಲಾನುಡಾಸ್‌ನ ಅಧ್ಯಯನವು ’ಈಸೋಪನು ಇಥಿಯೋಪಿಯಾಕ್ಕೆ ಸೇರಿದವನು’ ಎಂಬ ಹೇಳಿಕೆಯಿಂದಾಗಿ ಮೌಲ್ಯ ಕಳೆದುಕೊಂಡಿದೆ ಎಂದು ಅಭಿಪ್ರಾಯ ಪಟ್ಟಿದ್ದಾನೆ.[೩೫][೩೫]
- ವಿಲಿಯಂ ಮಾರ್ಟಿನ್ ಲೀಕ್, ೧೮೫೬ರಲ್ಲಿ ಈಸೋಪನ ವ್ಯುತ್ಪತ್ತಿಮೂಲವು ಇಥಿಯೋಪ್ ಆಗಿದೆ ಎಂದು ಪುನರುಚ್ಚರಿಸಿದನು. ಈತನ ವಿವರಣೆಯ ಪ್ರಕಾರ ನಿಗ್ರೋಗಳ ತಲೆಯ ಆಕಾರವು ಪ್ರಾಚೀನ ಡೆಲ್ಪಿ ಗಳಲ್ಲಿ ಕಂಡು ಬರುತ್ತದೆ(ಕ್ರಿ.ಪೂ೫೨೦[೩೬] ರ ಪೂರ್ವಾರ್ಧದಕ್ಕೆ ಸಂಬಂಧಿಸಿದ)ಗಳು ಈಸೋಪನನ್ನು ಚಿತ್ರಿಸಿರಬಹುದೆಂದು ಮತ್ತು ಆತನನ್ನು ಡೆಲ್ಪಿಯೆಂದು[೩೭]
- ಸಂಬಾವ್ಯವಾಗಿ ಹೊಗಳಿರಬಹುದೆಂದು(ಮತ್ತು ಸಮಾಧಾನ ಪಡಿಸಿರಬಹುದೆಂದು) ಆದರೆ ಡೆಲ್ಪಿಗಳನ್ನು ಕಂಡುಹಿಡಿದ ಥೈಡೊರ್ ಪನೊಫ್ಕಾ ಪ್ರಕಾರ ಡೆಲ್ಪಿಗಳಿಗೆ[೩೮] ಅಂತಹ ತಲೆಯು ಒಂದು ಲಕ್ಷಣವಾಗಿದೆ ಎಂದು ಹೆಳಿದ್ದಾರೆ ಮತ್ತು ನಂತರದಲ್ಲಿ ಈತನನ್ನು ಪ್ರಾಚಿನ ಇತಿಹಾಸಕಾರನೆಂದು ಗುರುತಿಸಲಾಗಿದೆ.[೩೯]
- ಈಸೋಪನು ತನ್ನ ಕಥೆಗಳಲ್ಲಿ ಒಂಟೆ, ಆನೆ ಮತ್ತು ಮಂಗಗಳನ್ನು ಹೆಚ್ಚಾಗಿ ಬಳಸಿರುವುದರಿಂದ ಆತನು ಇಥಿಯೋಪಿಯಾದವನಿರಬಹುದೆಂಬ ವಾದವು ಮತ್ತೊಮ್ಮೆ ಪುಷ್ಟೀಕರಿಸಲ್ಪಟ್ಟಿತು. ಆಫ್ರಿಕಾದ ಬಹಳಷ್ಟು ವಸ್ತುಗಳು ಇಜಿಪ್ತ್ ಮತ್ತು ಲಿಬಿಯಾದಿಂದ ಬಂದವುಗಳಾಗಿದ್ದು ಇಥಿಯೋಪಿಯಾದಿಂದ ಬಂದವು ಕಡಿಮೆಯಾಗಿದೆ.
- ನೀತಿಕಥೆಗಳಲ್ಲಿ ಆಫ್ರಿಕಾಕ್ಕೆ ಸಂಬಂಧಿಸಿದ ಪ್ರಾಣಿಗಳನ್ನೇ ಬಳಸಿಕೊಂಡಿರುವುದರಿಂದ ಈಸೋಪನು ಆಫ್ರಿಕಾದಲ್ಲೇ ವಾಸಿಸಿರಬಹುದೆಂದು ವಾದವು ಹೇಳುತ್ತದೆ.[೪೦] ೧೯೩೨ರಲ್ಲಿ ಮಾನವಶಾಸ್ತ್ರಜ್ಞರಾದ ಜೆ.ಎಚ್.ಡ್ರೈಬರ್ಗ್ ಮತ್ತೊಮ್ಮೆ ಈಸೋಪ್ ಮತ್ತು ಎಥಿಯೋಪ್‌ನ ನಡುವಿನ ಸಂಬಂಧಗಳನ್ನು ಪುನರುಚ್ಚರಿಸುತ್ತಾ ’ಕೆಲವರು ಆತನು (ಈಸೋಪ್) ಪ್ರಿಜಿಯನ್‌ದವನಾಗಿದ್ದಾನೆಂದು ಹೇಳಿದರೂ ಕೂಡ ಸಾಮಾನ್ಯ ದೃಷ್ಟಿಯಿಂದ ನೋಡಿದರೆ ಆತನು ಆಫ್ರಿಕಾದವನಾಗಿದ್ದಾನೆ’.
- ಒಂದು ವೇಳೆ ಈಸೋಪನು ಆಫ್ರಿಕಾದವನಾಗಿರದೇ ಹೊದರೆ ಆತನು ಆಗಿರಬೇಕಾಗಿತ್ತು’[೪೧] ಎಂದಿದ್ದಾರೆ. ೨೦೦೨ರಲ್ಲಿ ರಿಚರ್ಡ್ ಎ. ಲೊಬ್ಬಾನ್ ಪ್ರಕಾರ ಈಸೋಪನು ತನ್ನ ಕಥೆಗಳಲ್ಲಿ ಆಫ್ರಿಕಾದ ಪ್ರಾಣಿಗಳು ಮತ್ತು ಈಸೋಪನ ನೀತಿಕಥೆಗಳಲ್ಲಿನ ಹಸ್ತಕೃತಿಯು ಈಸೋಪನು ಒಂದು ನ್ಯುಬಿಯನ್ ಕಥೆಗಾರನೆಂಬುದಕ್ಕೆ ಬಲವಾದ ಪುರಾವೆಗಳನ್ನು ಒದಗಿಸುತ್ತದೆ ಎಂದಿದ್ದಾನೆ.[೪೨]
- ಈಸೋಪನು ಕಪ್ಪುವರ್ಣದವನೆಂಬುದು ಠಕ್ಕ ಬ್ರೆಯರ್ ರೆಬಿಟ್ ಕಟ್ಟುಕಥೆಗಳ ಮೂಲಕ ಮತ್ತೂ ಪುಷ್ಟಿಯನ್ನು ಪಡೆದುಕೊಳ್ಳುತ್ತದೆ, ಇವುಗಳನ್ನು ಆಫ್ರಿಕಾದ-ಅಮೇರಿಕಾದ ಗುಲಾಮರು ಹೇಳುತ್ತಾರೆ ಮತ್ತು ಇದರಲ್ಲಿ ಈಸೋಪನ ಸಾಂಪ್ರದಾಯಿಕ ಪಾತ್ರವೆಂದರೆ " ಒಂದು ವಿಧಾನದಲ್ಲಿ ಹೇಗೆ ಮೇಲ್ವರ್ಗದವರನ್ನು ಚಾಣಾಕ್ಷತೆಯಿಂದ ನಿರ್ವಹಿಸಬೇಕು ಎಂದು ಸಾರುವ ಗುಲಾಮರ ಮತ್ತು ಜೀವನ (ಈಸೋಪನ )ದ ನಾಯಕನಾಗಿದ್ದು".[೪೩] ಆಫ್ರಿಕಾ-ಅಮೇರಿಕಾದ ಸಂಪ್ರದಾಯದಲ್ಲಿ ಈಸೋಪನನ್ನು ಹೇಗೆ ವರ್ಣಿಸಲಾಗಿದೆ ಎಂಬುದನ್ನು ೧೯೪೯ರಲ್ಲಿ ರೇಡಿಯೋದಲ್ಲಿ ಬಿತ್ತರವಾದ ’ದಿ ಡೆತ್ ಆಫ್ ಈಸೋಪ್ Archived 2011-07-15 ವೇಬ್ಯಾಕ್ ಮೆಷಿನ್ ನಲ್ಲಿ.’ ಎಂಬ ಕಾರ್ಯಕ್ರಮದಿಂದ ತಿಳಿಯಬಹುದಾಗಿದೆ.
- ೧೯೭೧ರಲ್ಲಿ ಅಮೇರಿಕಾದ ಪ್ರಸಿದ್ಧ ಹಾಸ್ಯಗಾರ ಬಿಲ್ ಕೊಸ್ಬಿಯವರಿಂದ ಟಿ.ವಿಯಲ್ಲಿಯೂ ಈಸೋಪನ ನೀತಿಕಥೆಗಳು [೪೪] ಎಂಬ ಶೀರ್ಷಿಕೆಯಡಿ ಕಾರ್ಯಕ್ರಮ ಪ್ರಸಾರವಾಯಿತು. ಮತ್ತು ದಕ್ಷಿಣ ಆಫ್ರಿಕಾದ ನಟ ಮ್ಲೆಕಾಯಿ ಮೊಸಿಯಾ ೨೦೧೦ರಲ್ಲಿ ಕೇಪ್ ಟೌನ್‌ನಲ್ಲಿ ಈಸೋಪನ ನೀತಿಯ ಸಂಗೀತ ಕಾರ್ಯಕ್ರಮವನ್ನು ನೀಡಿದನು.[೪೫]
ಚಿತ್ರಗಳಲ್ಲಿ ಮತ್ತು ಪ್ರಸಿದ್ಧ ಸಂಪ್ರದಾಯಗಳಲ್ಲಿ ಈಸೋಪನ ವರ್ಣನೆ
ಬದಲಾಯಿಸಿ- ೧೮೪೩ರಲ್ಲಿ ಪುರಾತತ್ವಜ್ಞನಾದ ಒಟ್ಟೋ ಜಾನ್‌ನ ಪ್ರಕಾರ ಈಸೋಪನು ಗ್ರೀಕ್ ರೆಡ್-ಫಿಗರ್ ಕಪ್ ca. ೪೫೦ BCಯಲ್ಲಿ ವ್ಯಾಟಿಕನ್ ಸಂಗ್ರಹಾಲಯದಲ್ಲಿ ವರ್ಣಿಸಲ್ಪಟ್ಟವನಾಗಿದ್ದಾನೆ.[೪೬]
- ಈಸೋಪನು ಕಲಿಸುವಾಗ ಸುಮ್ಮನೆ ಕುಳಿತು ಕೇಳಿಸಿಕೊಳ್ಳುತ್ತಿದ್ದ ಪೌಲ್ ಜಾಂಕರ್ ಪ್ರಕಾರ ಈಸೋಪನು’ಸಣ್ಣ ದೇಹದ ದೊಡ್ದ ತಲೆಯ, ಅಗಲ ಹಣೆಯ ಮತ್ತು ತೆರೆದ ಬಾಯಿಯ ಮನುಷ್ಯ’ನಾಗಿದ್ದಾನೆ. ಈತನು ತನ್ನ ಸಣಕಲ ದೇಹದ ಸುತ್ತಲೂ ತುಂಬಿರುವಂತಹ ತಲೆಯನ್ನು ಹೊಂದಿದ್ದನು.
- ಆತನು ನೋಡಲು ವಿಕಾರವಾಗಿದ್ದು ಉದ್ದನೆಯ ಕೂದಲಿನ ಬಕ್ಕ ತಲೆಯ ಮತ್ತು ಎಂದೂ ಬಾಚದೇ ಹೋದ ಮಂಡೆಯನ್ನು ಹೊಂದಿದ್ದನು ಮತ್ತು ಇದರಿಂದ ಆತನು ತನ್ನ ದೇಹದ ಬಗ್ಗೆ ಸ್ವಲ್ಪವು ಲಕ್ಷವಹಿಸುವುದಿಲ್ಲವೆಂಬುದು ಸ್ಪಷ್ಟವಾಗಿತ್ತು.[೪೭]
ಕ್ರಿ.ಶ ನಾಲ್ಕನೇ ಶತಮಾನದಲ್ಲಿ ನಾಟಕಕಾರನಾದ ಅಲೆಕ್ಸಿಸ್ ಈಸೋಪನ ಕುರಿತಾಗಿ ಹಾಸ್ಯನಾಟಕ (ಈಸೋಪ್)ವೊಂದನ್ನು ರಚಿಸಿ ರಂಗಕ್ಕೆ ತಂದನು. ಇದರಲ್ಲಿ (ಅಥೇನಿಯಸ್ 10.432)
- ಕೆಲವು ಸಾಲುಗಳಲ್ಲಿ ಸೊಲೊನ್‌ನೊಂದಿಗೆ ಸಂವಾದ ನಡೆಸುವಾಗ ಅಥೆನ್‌ನಲ್ಲಿ ನಡೆಯುತ್ತಿದ್ದ ಪದ್ಧತಿಯಾದ ಮಧ್ಯದೊಂದಿಗೆ ನೀರನ್ನು ಬೆರೆಸುವ ಪದ್ಧತಿಯನ್ನು ಶ್ಲಾಘಿಸಿದ್ದಾನೆ.[೪೮] ಲೆಸ್ಲಿ ಕುರ್ಕೆ ಪ್ರಕಾರ ಆ ಕಾಲದಲ್ಲಿ ಈಸೋಪ್ ಒಬ್ಬ ’ವಿನೋದದ ಸರಕಾ’ಗಿದ್ದನು.[೪೯]
- ಕ್ರಿ.ಶ. ಮೂರನೇ ಶತಮಾನದಲ್ಲಿ ಪೆಲ್ಲಾದ ಕವಿಯಾದ ಪೊಸೆಡ್ಯೂಪಸ್ ಒಂದು "ಈಸೋಪಿಯಾ" ಎಂಬ ಹೆಸರಿನ ಕವನವನ್ನು ರಚಿಸಿದ್ದಾನೆ (ಆದರೆ ಈಗ ಅದು ಕಳೆದುಹೋಗಿದೆ.) ಅಥೆನಿಯಸ್ 13.596 ರ ಪ್ರಕಾರ ಅದರಲ್ಲಿ ಈಸೋಪನ ಅನುಯಾಯಿಯಾದ ಗುಲಾಮ ರೊಡಿಪಿಸ್(ಅವಳ ನಿಜವಾದ ಹೆಸರು ಡೊರಿಪಿಚಾ) ಹೆಸರನ್ನು ಆಗಾಗ ಬಳಸಿಕೊಂಡಿದ್ದಾನೆ.
- ಪ್ಲಿನಿ ನಂತರದಲ್ಲಿ ರೊಡೊಪಿಸ್ ಈಸೋಪನ ಪ್ರೇಯಸಿಯಾಗಿದ್ದಳೆಂದು ಕಂಡುಕೊಂಡಿದ್ದಾನೆ (ಕೆಳಗೆ ನೋಡಿ). ಕೆಲವು ಪ್ರಾಕೃತ ಶಾಸ್ರಜ್ಞರ ಪ್ರಕಾರ ರೋಮ್‌ನ ವಿಲ್ಲಾ ಅಲ್ಬಿನಿಯಲ್ಲಿರುವ ಗ್ರೀಕರ ಕಾಲದ ಅಪೂರ್ಣವಾದ ಮಾನವಾಕೃತಿಯು ಈಸೋಪನದಾಗಿದೆ (ಈ ಪುಟದಲ್ಲಿ ಎಲ್ಲಾದರೂ ಇರುವ ಚಿತ್ರವನ್ನು ನೋಡಿ) ಆದರೆ ಫ್ರಾಂಕೋಯಿಸ್ ಲಿಸ್ಸಾರ್ಗ್ಯೂ ಪ್ರಕಾರ ಬೇರೆ ಯಾರದೋ ನಮಗೆ ತಿಳಿಯದೇ ಇರುವ ಮನುಷ್ಯನ ಆಕಾರವಾಗಿರುವ ಸಾಧ್ಯತೆಗಳು ಇವೆ ಅಥವಾ ಹೆಲೆನೆಸ್ಟಿಕ್ ಚಿತ್ರಗಳ ಕಾಲದಲ್ಲಿ ಪರಿಚಿತನಾದ ಬೇರೆ ವ್ಯಕ್ತಿಯ ಚಿತ್ರವೂ ಆಗಿರಬಹುದಾಗಿದೆ.
- ಈ ವಾದವು ಮುಂದುವರೆಯುತ್ತಾ ಆತನು ಕಟ್ಟುಕಥೆಗಳಲ್ಲಿ ತುಂಬ ಜಾಣನಿದ್ದನೆಂದು ಕಂಡುಬರುತ್ತದೆ. ಆದರೆ ಈತನು ಸ್ವಲ್ಪ ಕೃಶಕಾಯದವನಾಗಿದ್ದನೆಂದು ಒಪ್ಪಿಕೊಳ್ಳಬಹುದಾಗಿದೆ.[೫೦] ಸ್ಯಾಟಿರಿಸ್ಟ್ ಲ್ಯೂಸಿಯಾನ್ ಕ್ರಿ.ಶ ಎರಡನೇ ಶತಮಾನದಲ್ಲಿ ಬರೆದ ಎ ಟ್ರೂ ಸ್ಟೋರಿ ಎಂಬ ಕಾದಂಬರಿಯಲ್ಲಿ ಈಸೋಪನು ರತ್ನಕಚಿತ ಉಬ್ಬು ಶಿಲ್ಪದಂತಹ ಪಾತ್ರವನ್ನು ಹೊಂದಿದ್ದಾನೆ.
- ಬರಹಗಾರನು ಹಾರೈಕೆಯ ಐಲೆಂಡ್‌ಗೆ ಬಂದಾಗ ಹಾಸ್ಯಗಾರನಾಗಿ ವರ್ತಿಸುತ್ತಿದ್ದ ಪೈರಿಗಿಯನ್‌ನ ಈಸೋಪ್ ಅಲ್ಲಿರುವುದನ್ನು ಗುರುತಿಸುತ್ತಾನೆ.[೫೧]
- ೧೪೭೬ರಲ್ಲಿ ಹೆರ್ನಿಚ್ ಸ್ಟೆನ್‌ಹೊವೆಲ್‌ನ ಆವೃತ್ತಿಯು ಪ್ರಾರಂಭವಾಗುವುದರೊಂದಿಗೆ ಪ್ಲಾನುಡಾಸ್‌ನ ’ಲೈಫ್ ಆಫ್ ಈಸೋಪ್’ ಸೇರಿದಂತೆ ಹಲವಾರು ಯುರೋಪಿಯನ್ ಬಾಷೆಗಳಲ್ಲಿ ನೀತಿಕಥೆಗಳು ಬಾಷಾಂತರ ಹೊಂದಿದ್ದವು. ಮತ್ತು ಆತನನ್ನು ಎಲ್ಲರೂ ಗೂನು ಬೆನ್ನಿನವನೆಂದೇ ಚಿತ್ರಿಸಿದ್ದರು. ಫ್ರಾನ್ಸಿಸ್ ಬಾರ್ಲೊದಿಂದ ಪ್ರಕಟವಾದ ೧೬೮೭ರಲ್ಲಿ ಪ್ರಕಟವಾದ ಈಸೋಪ್ಸ್ ಫೆಬಲ್ಸ್ ವಿಥ್ ಹೀಸ್ ಲೈಪ್: ಇನ್ ಇಂಗ್ಲಿಷ್, ಫ್ರೆಂಚ್, ಮತ್ತು ಲ್ಯಾಟಿನ್ Archived 2022-04-03 ವೇಬ್ಯಾಕ್ ಮೆಷಿನ್ ನಲ್ಲಿ.’ನಲ್ಲಿ ಆತನನ್ನು ಕುಳ್ಳದೇಹದವನಾಗಿ ಚಿತ್ರಿಸಿದ್ದು ಆತನ ಹೇಳಿಕೆಯಾದ (ಪು ೭) "ನಾನೊಬ್ಬ ನಿಗ್ರೋ" ಎಂಬ ಪದವನ್ನು ಎತ್ತಿ ತೋರಿಸಲಾಗಿದೆ (ಈ ಪುಟದ ಮೇಲಿನ ಬರಹವನ್ನು ನೋಡಿ). ಸ್ಪಾನಿಷ್‌ನ ಚಿತ್ರಕಾರನಾದ ಡೈಗೋವಾಲಾಜ್‌ಕ್ವಿಜ್ ಎಂಬಾತನು ಈಸೋಪನ ಬಾವಚಿತ್ರವೊಂದನ್ನು ರಚಿಸಿದ್ದಾನೆ( ೧೬೩೯-೪೦ನೇ ಸಾಲಿನಲ್ಲಿ ಚಿತ್ರಿಸಿದ ಚಿತ್ರವು ಈಗ ಮಸ್ಕೊ ಡೆಲ್ ಪ್ರಾಡೊ ಸಂಗ್ರಹಾಲಯದಲ್ಲಿದೆ).
- ಈ ಚಿತ್ರದಲ್ಲಿ ಈಸೋಪನು ಸಂಪೂರ್ಣವಾಗಿ ಒಳ್ಳೆಯ ದೇಹಾಕೃತಿಯನ್ನು ಹೊಂದಿಲ್ಲದೇ ಹೋದರೂ ಕೂಡ ಸ್ವಲ್ಪ ಮಟ್ಟಿಗೆ ಆತನ ದೇಹದ ಅವಯವಗಳು ಸರಿಯಾಗಿವೆ.
ಸರ್ ಜಾನ್ ವಾನ್‌ಬ್ರು ಬರೆದ ಹಾಸ್ಯನಾಟಕವಾದ "ಈಸೋಪ್" ೧೬೯೭ ರಲ್ಲಿ ಲಂಡನ್‌ನ ಡ್ರುರಿಲೈನ್‌ನಲ್ಲಿರುವ ರೊಯಲ್ ರಂಗಮಂದಿರದಲ್ಲಿ ತೆರೆಕಂಡಿತು. ಮತ್ತು ಮುಂದಿನ ಇಪ್ಪತ್ತು ವರ್ಷಗಳವರೆಗೂ ಆಗಿಂದಾಗ ಪ್ರದರ್ಶವನ್ನು ಕಂಡಿತು.
- ಲೆಸ್ ಫೆಬಲ್ಸ್ ಡೆ ಈಸೋಪ್ (ನಂತರ ಈಸೋಪ್ ಎ ಲಾ ವಿಲ್ಲೆ )ದ ಬಾಷಾಂತರವನ್ನು ಫ್ರೆಂಚ್‌ನ ನಾಟಕಕಾರನಾದ ಎಡ್ಮೆ ಬೊರುಸಾಲ್ಟ್ ಮಾಡಿದನು, ವನ್‌ಬ್ರು ವಿವರಿಸಿದಂತೆ ಶಾರೀರಿಕವಾಗಿ ಕೆಟ್ಟದಾಗಿರುವ ಈಸೋಪ್ ದೊಡ್ಡ ರಾಜ್ಯಾಧಿಕಾರಿಗಳಿಗೆ, ಕ್ರೊಸಸ್ ರಾಜನ ರಾಜ್ಯಪಾಲರಿಗೆ ಈತನು ಸಲಹೆಗಾರನಾಗಿದ್ದನು.
- ಈತನ ನೀತಿಗಳನ್ನು ಪ್ರಣಯ ಸಮಸ್ಯೆಗಳು ಮತ್ತು ಸ್ವಲ್ಪಮಟ್ಟಿನ ರಾಜಕಾರಣದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಬಳಸುತ್ತಿದ್ದರು.[೫೨] ಪ್ಯಾರಿಸ್‌ನಲ್ಲಿ ಯಶಕಂಡನಂತರ ಬೊರ್‌ಸಾಲ್ಟ್ ಸಿಕ್ಷಿಲ್(ಈಸೋಪ್ ಎ ಲಾ ಕೊರ್ , ಈಸೋಪ್ ಎಟ್ ಕೋರ್ಟ, ಗಳು ೧೭೦೧ರಲ್ಲಿ ತೆರೆಕಂಡವು)ನ್ನು ಬರೆದನು. * ಇದು ಇನ್ನೂ ಜನಪ್ರೀಯವಾಯಿತು ಮತ್ತು ಅದರಿಂದಾಗಿ ಇಟಾಲಿಯನ್ ಭಾಷೆಗೆ ಭಾಷಾಂತರಿಸಲಾಯಿತು.[೫೩]
- ಆದರೆ ಇಂಗ್ಲಿಷ್‌ಗೆ ಭಾಷಾಂತರಿಸಲಿಲ್ಲ. ಇದರಿಂದಾಗಿ ಆತನ ಉಪಪತ್ನಿ ರೊಡೊಪ್‌ನ ಪರಿಚಯವಾಗಲು ಸಾಧ್ಯವಾಯಿತು. ೧೭೮೦ರಲ್ಲಿ ಅನಾಮಧೇಯವಾದ ಒಂದು ಕಾದಂಬರಿಯು ಬರೆಯಲ್ಪಟ್ಟಿತು. ರೊಡೊಪ್‌ನ ’ದಿ ಹಿಸ್ಟರಿ ಎಂಡ್ ಅಮೊರಸ್ ’ ಪುಸ್ತಕವು ಲಂಡನ್‌ನಲ್ಲಿ ಪ್ರಕಟವಾಯಿತು. ಹೆರೊಡೊಟಸ್ 2.134-5 Archived 2012-07-12 at Archive.is ರಲ್ಲಿ ಒಮ್ಮೆ ರೊಡೊಪಿಸ್‌ನಿಂದ ಆಳ್ವಿಕೆ ಒಳಗಾದವನೆಂದು ಕುರುಹುಗಳು ದೊರೆಯುತ್ತವೆ., ಮತ್ತು %3A1999.02.0137% 3Abook% 3D36% 3Achapter%3D17 ಪ್ಲಿನಿ 36.17 ರ ಪ್ರಕಾರ ಆಕೆಯು ಈಸೋಪನ ಪ್ರೇಯಸಿಯೂ ಆಗಿದ್ದಳು ಜೊತೆಗೆ ಈ ಕಥೆಯಿಂದ ಅವರಿಬ್ಬರೂ ಪ್ರೇಮಿಗಳಾಗಿದ್ದಿರಬಹುದು ಎಂದು ತೋರುತ್ತದೆ.
- ಇದರಲ್ಲಿ ಒಬ್ಬನು ಕುರುಪಿಯಾಗಿದ್ದರೆ ಆಕೆಯು ಸುಂದರಿಯಾಗಿದ್ದಳು. ನಂತರ ಆಕೆಯು ಈಸೋಪನಿಂದ ದೂರವಾಗಿ ಈಜಿಪ್ಟ್‌ನ ಪೆರೊ(ರಾಜ)ನನ್ನು ಮದುವೆಯಾದಳು. ಕೆಲವು ಆವೃತ್ತಿಗಳು ಚಿತ್ರಕಾರ ಅಂಜೆಲಿಕಾ ಕಾಫ್‌ಮನ್ ಈಸೋಪ್ ಮತ್ತು ರೋಡೋಪ್‌ರ ಚಿತ್ರದ ಫ್ರಾಂಕೆಸ್ಕೋ ಬಾರ್ಟೊಲೊಜಿ ಉಕ್ಕು ಕೆತ್ತನೆ ಮಾಡಿದ ಚಿತ್ರಣದೊಂದಿಗೆ ರಚಿಸಲ್ಪಟ್ಟಿತ್ತು.
- ವಾಲ್ಟರ್ ಸೆವೆಜ್ ಲ್ಯಾಂಡರ್ ಪ್ರಕಟಿಸಿದ ಸರಣಿಯಲ್ಲಿ ಈಸೋಪ್ ಮತ್ತು ರೊಡೊಪ್‌ನ ನಡುವೆ ನಡೆದ ಕಲ್ಪನೆಯ ಸಂವಾದವನ್ನು ಚಿತ್ರಸಿದ್ದಾನೆ. ಈಸೋಪ್ ಮತ್ತು ರೊಡೊಪ್ ನ ಮಾಹಿತಿಯು ದಿ ಬುಕ್ ಆಫ್ ಬ್ಯೂಟಿ ಯಲ್ಲಿ ಈಸೋಪನು "ನಾನು ಸಣ್ಣವನಾದೆ ಮತ್ತು ಸಂಪೂರ್ಣ ನಾಶವಾದೆ" ಎಂದಿದ್ದಾನೆ.
- ತುರ್ಹಾನ್ ಬೆ ೧೯೪೬ರಲ್ಲಿ ತನ್ನ ಚಲನಚಿತ್ರವಾದ ’ನೈಟ್ ಇನ್ ಪೆರಡೈಸ್ ’ ನಲ್ಲಿ ಈಸೋಪನನ್ನು ಚಿತ್ರಿಸಿದ್ದಾನೆ. ಈತನ ಪ್ರಕಾರ ಈಸೋಪನು ಕ್ರೋಸಸ್ ರಾಜನ ಸಲಹೆಗಾರನಾಗಿದ್ದನು, ಮತ್ತು ಅರಸನು ತನಗೆ ನಿಶ್ಚಿತವಾದ ಹುಡುಗಿಯನ್ನು (ಪರ್ಶಿಯನ್ ರಾಜಕುಮಾರಿ, ಮರ್ಲೆ ಒಬೆರಾನ್ ಪಾತ್ರ ಮಾಡಿದ್ದರು) ಅತಿಯಾಗಿ ಪ್ರೀತಿಸುತ್ತಿದ್ದನು.
- ೧೯೫೩ರಲ್ಲಿ ಹೆಲೆನೆ ಹಾಂಪ್‌ಳು ರಚಿಸಿದ ಟಿವಿ ನಾಟಕ ’ಈಸೋಪ್ ಎಂಡ್ ರೊಡೊಪ್’ ಎಂಬ ನಾಟಕ ಹಾಲ್‌ಮಾರ್ಕ್ ಹಾಲ್ ಆಫ್ ಫೇಮ್‌ನಲ್ಲಿ ಪ್ರದರ್ಶನಗೊಂಡಿತು.
- ಇದರಲ್ಲಿ ಲೊಮೊಂಟ್ ಜೊನ್‌ಸೆನ್‌ನು ’ಈಸೋಪ್’ ಪಾತ್ರ ಮಾಡಿದ್ದ. "ಎ ರಪೋಸಾ ಈ ಎಸ್ ಉವಾಸ್" (ನರಿ ಮತ್ತು ದ್ರಾಕ್ಷಿಯ ಕಥೆ)ಯನ್ನು ಈಸೋಪನ ಜೀವನ ಚರಿತ್ರೆಯೊಂದಿಗೆ ಬ್ರೆಜಿಲ್‌ನ ನಾಟಕಕಾರನಾದ ಗುಲೆರ್ಮ ಫಿಗುರೈಡೊ ೧೯೫೩ರಲ್ಲಿ ಪ್ರಕಟಿಸಿದನು ಮತ್ತು ಇದು ಹಲವಾರು ದೇಶಗಳಲ್ಲಿ ತೆರೆಕಂಡಿತು. ಇದು ೨೦೦೦ದಲ್ಲಿ ಚಿನಾದಲ್ಲಿ ತಯಾರಿಸಲಾದ ಚಲನ ಚಿತ್ರ ಹು ಲಿ ಯು ಪು ತಾವೊ ಅಥವಾ 狐狸与葡萄 ನ್ನು ಒಳಗೊಂಡಿತ್ತು.
ಟಿಪ್ಪಣಿಗಳು
ಬದಲಾಯಿಸಿ- ↑ ವೆಸ್ಟ್, ಪು. ೧೦೬ and ೧೧೯.
- ↑ ಬ್ರಿಲ್ಸ್ ನ್ಯೂ ಪೌಲಿ: ಎನ್‌ಸೈಕ್ಲೋಪೀಡಿಯಾ ಆಫ್ ದ ಆಯ್‌ನ್ಸಿಯೆಂಟ್ ವರ್ಲ್ಡ್ (ಇನ್ನುಮುಂದೆ ಬಿಎನ್‌ಪಿ ) ೧:೨೫೬.
- ↑ ಕ್ಯಾಲಿಮ್ಯಾಕಸ್, ಲ್ಯಾಂಬಸ್ ೨ (ಲೋಬ್ ಫ್ರಾಗ್ಮೆಂಟ್ ೧೯೨)
- ↑ ಮ್ಯಾಕ್ಸಿಮಸ್ ಆಫ್ ಟೈರ್, ಒರೇಶನ್ ೩೬.೧
- ↑ ಅರಿಸ್ಟಾಟಲ್, ರೆಟರಿಕ್ 2.20.
- ↑ [10] ^ ಹೆರೊಡೋಟಸ್, ಹಿಸ್ಟರೀಸ್ ೨.೧೩೪.
- ↑ ಪ್ಲುಟಾರ್ಕ್, ಆನ್ ದ ಡಿಲೇಸ್ ಆಫ್ ಡಿವೈನ್ ವೆಂಜಿಯೆನ್ಸ್ ; ಬ್ಯಾಂಕೆಟ್ಸ್ ಆಫ್ ದ ಸೆವೆನ್ ಸೇಜಸ್ ; ಲೈಫ್ ಆಫ್ ಸೋಲೊನ್ .
- ↑ ಕುರ್ಕೆ ೨೦೧೦, ಪು. ೧೩೫.
- ↑ ಬೆನ್ ಎಡ್ವಿನ್ ಪೆರ್ರಿ, ಇಂಟ್ರಡಕ್ಷನ್ ಟು ಬಾರ್ಬಿಯಸ್ ಅಂಡ್ ಫೇಡ್ರಸ್ , ಪು. xxxviii-xlv.
- ↑ ಬಿಎನ್‌ಪಿ ೧:೨೫೬.
- ↑ ಫೇಡ್ರಸ್ ೧.೨
- ↑
- ಗ್ರಾಮ್ಯಾಟಿಕಿ ಎ. ಕಾರ್ಲಾ ಬರೆದ Vita Aesopi: Ueberlieferung, Sprach und Edition einer fruehbyzantinischen Fassung des Aesopromans ದ ವಿಲಿಯಮ್ ಹ್ಯಾನ್ಸೆನ್ ವಿಮರ್ಶೆ, ಬ್ರಿನ್ ಮಾವ್ರ್ ಕ್ಲಾಸಿಕಲ್ ರಿವ್ಯೂ 2004.09.39.
- ↑ ದ ಕಲ್ಚರ್ಸ್ ವಿಥಿನ್ ಆಯ್‌ನ್ಸಿಯೆಂಟ್ ಗ್ರೀಕ್ ಕಲ್ಚರ್: ಕಾಂಟ್ಯಾಕ್ಟ್, ಕಾನ್‌ಫ್ಲಿಕ್ಟ್, ಕೊಲ್ಯಾಬೊರೇಶನ್ ನಲ್ಲಿರುವ ಲೆಸ್ಲಿ ಕುರ್ಕೆ,
- "ಈಸೋಪ್ ಅಂಡ್ ದ ಕಾಂಟೆಸ್ಟೇಶನ್ ಆಫ್ ಡೆಲ್ಫಿಕ್ ಅಥಾರಿಟಿ" ಸಂ. ಕೆರೋಲ್ ಡವಾರ್ಟಿ ಮತ್ತು ಲೆಸ್ಲಿ ಕುರ್ಕೆ, ಪು. ೭೭.
- ↑ ಫ್ರಾಂಕಾಯಿಸ್ ಲಿಸ್ಸಾರೇಗ್, "ಈಸೋಪ್, ಬಿಟ್ವೀನ್ ಮ್ಯಾನ್ ಅಂಡ್ ಬೀಸ್ಟ್: ಆಯ್‌ನ್ಸಿಯೆಂಟ್ ಪೋರ್ಟ್ರೇಟ್ಸ್ ಅಂಡ್ ಇಲ್ಲಸ್ಟ್ರೇಶನ್ಸ್",
- ನಾಟ್ ದ ಕ್ಲಾಸಿಕಲ್ ಐಡಿಯಲ್: ಅಥೆನ್ಸ್ ಅಂಡ್ ದ ಕನ್ಸ್‌ಟ್ರಕ್ಷನ್ ಆಫ್ ದ ಅಧರ್ ಇನ್ ಗ್ರೀಕ್ ಆರ್ಟ್ ಇದರಲ್ಲಿ, ಸಂ. ಬೆಥ್ ಕೋಹೆನ್ (ಇನ್ನುಮುಂದೆ, ಲಿಸ್ಸಾರ್ರೇಗ್), ಪು. ೧೩೩.
- ↑ ಲಿಸ್ಸಾರ್ರೇಗ್, ಪು. ೧೧೩.
- ↑ http://www.theoi.com/Text/HesiodWorksDays.html
- ↑ BNP ೧:೨೫೭; West, ಪು. ೧೨೧; ಹಾಗ್, ಪು. ೪೭.
- ↑ ಹಾಗ್, ಪು. ೪೭; ವೆಸ್ಟ್, ಪು. ೧೨೨ ಸಹಾ ನೋಡಿ.
- ↑ ಅಥೇನಿಯಸ್13.82.
- ↑ ಪ್ಲ್ಯಾಟೋ, ಫೇಡೊ' 61b Archived 2010-01-23 ವೇಬ್ಯಾಕ್ ಮೆಷಿನ್ ನಲ್ಲಿ..
- ↑ ಡಯಾಜಿನಸ್ ಲಾರ್ಟಿಯಸ್, ಲೈವ್ಸ್ ಅಂಡ್ ಒಪಿನಿಯನ್ಸ್ ಆಫ್ ಎಮಿನೆಂಟ್ ಫಿಲಾಸಫರ್ಸ್ 2.5.42 Archived 2010-03-02 ವೇಬ್ಯಾಕ್ ಮೆಷಿನ್ ನಲ್ಲಿ.: "ಈತನೂ ಈಸೋಪನ ಶೈಲಿಯಲ್ಲಿ ನೀತಿಕತೆಗಳನ್ನು ರಚಿಸಿದ.
- ಅವೇನೂ ಅಷ್ಟು ಕಲಾತ್ಮಕವಾಗಿರಲಿಲ್ಲ, ಮತ್ತು ಅದು ಈ ರೀತಿ ಶುರುವಾಗುತ್ತದೆ—Aesop one day did this sage counsel give / To the Corinthian magistrates: not to trust / The cause of virtue to the people's judgment."
- ↑ ಔಲಸ್ ಜೆಲ್ಲಿಯಸ್, ಅಟ್ಟಿಕ್ ನೈಟ್ಸ್ 2.29.
- ↑ ಔಸೋನಿಯಸ್, ಎಪಿಸಲ್ಸ್ 12.
- ↑ BNP ೧:೨೫೮-೯; ವೆಸ್ಟ್; ನಿಕ್ಲಾಸ್ ಹಾಲ್ಸ್‌ಬರ್ಗ್, ದ ಆಯ್‌ನ್ಸಿಯೆಂಟ್ ಫೇಬಲ್: ಎನ್ ಇಂಟ್ರಡಕ್ಷನ್ , ಪು. ೧೨-೧೩; ಇವನ್ನೂ ನೋಡಿ ಐನೋಯಿ, ಲೋಗೋಯಿ, ಮಿಥೋಯಿ: ಫೇಬಲ್‌ಸ್ ಇನ್ ಆರ್ಕೇಯಿಕ್, ಕ್ಲಾಸಿಕಲ್ , ಅಂಡ್ ಹೆಲೆನಿಸ್ಟಿಕ್ ಗ್ರೀಕ್ ಬರೆದವರು ಜೆರ್ಟ್-ಜಾನ್ ವಾನ್ ಡಿಕ್ ಮತ್ತು ಹಿಸ್ಟರಿ ಆಫ್ ದ ಗ್ರೀಕೊ-ಲ್ಯಾಟಿನ್ ಫೇಬಲ್ ಬರೆದವರು ಫ್ರಾನ್ಸಿಸ್ಕೊ ರಾಡ್ರಿಗ್ಸ್ ಅಡ್ರ್ಯಾಡೊ.
- ↑
- ದ ಈಸೋಪ್ ರೋಮ್ಯಾನ್ಸ್ , ಅನುವಾದಿಸಿದವರು ಲಾಯ್ಡ್ ಡಬ್ಲೂ. ಡಾಲಿ, ಆಂಥಾಲಜಿ ಆಫ್ ಆಯ್‌ನ್ಸಿಯೆಂಟ್ ಗ್ರೀಕ್ ಪಾಪ್ಯುಲರ್ ಲಿಟರೇಚರ್ ನಲ್ಲಿ, ಸಂ. ವಿಲಿಯಮ್ ಹ್ಯಾನ್ಸೆನ್, ಪು. ೧೧೧.
- ↑ ಪಪಾಡೆಮೆಟ್ರಿಯು, ಪು. ೧೪-೧೫.
- ↑
- ಹಿಮೇರಿಯಸ್, ಒರೇಶನ್ಸ್ ೪೬.೪, ಅನುವಾದಿಸಿದವರು ರಾಬರ್ಟ್ ಜೆ. ಪೆನೆಲ್ಲಾ, ಮ್ಯಾನ್ ಅಂದ್ ದ ವರ್ಡ್: ದ ಒರೇಶನ್ಸ್ ಆಫ್ ಹಿಮೇರಿಯಸ್ , ಪು. ೨೫೦ ದಿಂದ.
- ↑ ನೋಡಿ ಲಿಸ್ಸಾರೇಜ್; ಪಪಾಡೆಮೆಟ್ರಿಯು; ಕಾಂಪ್ಟನ್, ವಿಕ್ಟಿಮ್ ಆಫ್ ದ ಮ್ಯೂಸಸ್ ; ಲೆಫ್ಕೋವಿಟ್ಸ್, "ಅಗ್ಲಿನೆಸ್ ಅಂಡ್ ವ್ಯಾಲ್ಯೂ ಇನ್ ದ ಲೈಫ್ ಆಫ್ ಈಸೋಪ್" ಕಕೋಸ್: ಬ್ಯಾಡ್‌ನೆಸ್ ಅಂಡ್ ಆಂಟಿ-ವ್ಯಾಲ್ಯೂ ಇನ್ ಕ್ಲಾಸಿಕಲ್ ಆಂಟಿಕ್ವಿಟಿ ನಲ್ಲಿ ಸಂ. ಸ್ಲುಯಿಟರ್ ಮತ್ತು ರೋಸೆನ್.
- ↑ BNP ೧:೨೫೭.
- ↑ ಲೋಬ್ಬನ್, ೨೦೦೪, ಪು. ೮-೯.
- ↑ "...niger, unde & nomen adeptus est (idem enim Aesopus quod Aethiops)" ಇದು ಪ್ಲಾನುಡೆಸ್‌ನ ಗ್ರೀಕ್ ಪುಸ್ತಕದ ಲ್ಯಾಟಿನ್ ಅನುವಾದವಾಗಿದೆ; ನೋಡಿ Aesopi Phrygis Fabulae, ಪು. ೯.
- ↑ ಜೆ.ಆರ್. ಮಾರ್ಗನ್, ಕಲೆಕ್ಟೆಡ್ ಆಯ್‌ನ್ಸಿಯೆಂಟ್ ಗ್ರೀಕ್ ನಾವೆಲ್ಸ್ ನಲ್ಲಿನ ಎನ್ ಇಥಿಯೋಪಿಯನ್ ಸ್ಟೋರಿ ಕುರಿತ ಟಿಪ್ಪಣಿ, ಸಂ. ಬಿ.ಪಿ. ರಿಯರ್ಡನ್, ಪು. ೪೩೨; Aithiops ಯ ಕುರಿತು ಲಿಡ್ಡೆಲ್ ಮತ್ತು ಸ್ಕಾಟ್‌ರ A ಗ್ರೀಕ್-ಇಂಗ್ಲೀಷ್ ಲೆಕ್ಸಿಕಾನ್ ನಲ್ಲಿ ಆನ್ಲೈನ್ ನಮೂದನ್ನೂ ನೋಡಿ.
- ↑ ಥೋ. ಫಿಲಿಪಾಟ್ (ಪ್ಲಾನುಡೆಸ್ ಅನುವಾದ), ಈಸೋಪ್ಸ್ ಫೇಬಲ್ಸ್ ವಿಥ್ ಹಿಸ್ ಲೈಫ್ : ಇಂಗ್ಲೀಷ್, ಫ್ರೆಂಚ್ ಮತ್ತು ಲ್ಯಾಟಿನ್ Archived 2022-04-03 ವೇಬ್ಯಾಕ್ ಮೆಷಿನ್ ನಲ್ಲಿ. ನಲ್ಲಿ, ಪು. ೧ ಮತ್ತು ೭.
- ↑ ಜೆರ್ಟ್-ಜಾನ್ ವ್ಯಾನ್ ಡಿಕ್, "ಈಸೋಪ" ಕುರಿತ ನಮೂದು ದ ಎನ್‌ಸೈಕ್ಲೋಪೀಡಿಯಾ ಆಫ್ ಆಯ್‌ನ್ಸಿಯೆಂಟ್ ಗ್ರೀಸ್ ನಲ್ಲಿ, ಸಂ. ನೈಗೆಲ್ ವಿಲ್ಸನ್, ಪು. ೧೮.
- ↑ ೩೫.೦ ೩೫.೧ ಫ್ರಾಂಕ್ ಎಂ. ಸ್ನೋಡೆನ್,ಜೂ., ಬ್ಲ್ಯಾಕ್ಸ್ ಇನ್ ಆಂಟಿಕ್ವಿಟಿ: ಇಥಿಯೋಪಿಯನ್ಸ್ ಇನ್ ದ ಗ್ರೀಕೋ-ರೋಮನ್ ಎಕ್ಸ್‌ಪೀರಿಯೆನ್ಸ್ (ಇನ್ನುಮುಂದೆ ಸ್ನೋಡೆನ್), ಪು. ೨೬೪.
- ↑ ಆಯ್‌ನ್ಸಿಯೆಂಟ್ ಕಾಯಿನ್ಸ್ ಆಫ್ಹ್ ಫೋಸಿಸ್ ವೆಬ್ ಪುಟ್, ಪಡೆದ ದಿನಾಂಕ ೧೧-೧೨-೨೦೧೦.
- ↑ ವಿಲಿಯಮ್ ಮಾರ್ಟಿನ್ ಲೀಕೆ, ನ್ಯೂಮಿಸ್‌ಮಾಟಾ ಹೆಲೆನಿಕಾ: ಎ ಕೆಟಲಗ್ ಆಫ್ ಗ್ರೀಕ್ ಕಾಯಿನ್ಸ್ , ಪು. 45.
- ↑ ಥಿಯೊಡೋರ್ ಪಾನೋಫ್ಕಾ, Antikenkranz zum fünften Berliner Winckelmannsfest: Delphi und Melaine , ಪು. 7; ಸಂಬಂಧಿತ ನಾಣ್ಯದ ಚಿತ್ರಣ ಮುಂದೆ ಇದೆ ಪು. ೧೬.
- ↑ ಸ್ನೋಡೆನ್, ಪು. ೧೫೦-೫೧ ಮತ್ತು ೩೦೭-೮.
- ↑ ರಾಬರ್ಟ್ ಟೆಂಪಲ್, ಇಂಟ್ರಡಕ್ಷನ್ ಟು ಈಸೋಪ್: ದ ಕಂಪ್ಲೀಟ್ ಫೇಬಲ್ಸ್ , ಪು. xx-xxi.
- ↑ ಡ್ರಿಬರ್ಗ್, ೧೯೩೨.
- ↑ ಲೋಬ್ಬನ್, ೨೦೦೨.
- ↑ ಕುರ್ಕೆ ೨೦೧೦, ಪು. ೧೧-೧೨.
- ↑ YouTube ನಲ್ಲಿ ಲಭ್ಯವಿದೆ
- ↑ http://whatsonsa.co.za/news/index.php/whats-on/in-cape-town/೧೭-theatre/೬೫೩-aesops-fables-at-the-fugard-೧೦-june-೧೦-july-೨೦೧೦.htm ಆನ್ಲೈನ್ ಸುದ್ದಿ
- ↑ ಲಿಸ್ಸಾರ್ರೇಗ್, ಪು. ೧೩೭.
- ↑ ಪೌಲ್ ಝಾಂಕರ್, ದ ಮಾಸ್ಕ್ ಆಫ್ ಸಾಕ್ರಟೀಸ್ , ಪು. ೩೩-೩೪.
- ↑ ಈ ಸಾಲುಗಳನ್ನು ಈಸೋಪ ಬರೆದಿರಬಹುದು ಎನ್ನುವುದು ಊಹಾತ್ಮಕವಾಗಿದೆ; ಕುರ್ಕೆಯ ಬರಹದಲ್ಲಿ ಉಲ್ಲೇಖ ಮತ್ತು ಪಾದಸೂಚಿಗಳನ್ನು ನೋಡಿ ೨೦೧೦, ಪು ೩೫೬.
- ↑ ಕುರ್ಕೆ ೨೦೧೦, ಪು. ೩೫೬.
- ↑ ಲಿಸ್ಸಾರ್ರೇಗ್, ಪು. ೧೩೯.
- ↑ Lucian, Verae Historiae (ಎ ಟ್ರೂ ಸ್ಟೋರಿ) ೨.೧೮ (ರಿಯರ್ಡನ್ ಅನುವಾದ).
- ↑ ಮಾರ್ಕ್ ಲವ್‌ರಿಜ್, ಎ ಹಿಸ್ಟರಿ ಆಫ್ ಅಗಸ್ಟನ್ ಫೇಬಲ್ (ಇನ್ನುಮುಂದೆ ಲವ್‌ರಿಜ್), ಪು. ೧೬೬-೬೮.
- ↑ =frontcover &dq=%22Boursault%22++Esope&source=bl&ots=4AwpHQxgVy&sig=5q1A7sZbyPPsgB-0L1G9WFh6XSg&hl =en&ei=zFyXTebaNcGHhQf4m7WCCQ &sa=X&oi=book_result&ct=result&resnum=6&ved=0CDQQ6AEwBTgK#v=onepage&q&f=false ಗೂಗಲ್ ಬುಕ್ಸ್ ನಲ್ಲಿ ಈ ಪಠ್ಯ ಲಭ್ಯವಿದೆ
ಉಲ್ಲೇಖಗಳು
ಬದಲಾಯಿಸಿ- ಅಡ್ರ್ಯಾಡೊ, ಫ್ರಾನ್ಸಿಸ್ಕೊ ರಾಡ್ರಿಗ್ಸ್, ೧೯೯೯-೨೦೦೩. ಹಿಸ್ಟರಿ ಆಫ್ ದ ಗ್ರೀಕೊ-ಲ್ಯಾಟಿನ್ ಫೇಬಲ್ (ಮೂರು ಸಂಪುಟಗಳು). ಲೀಡೆನ್/ಬೋಸ್ಟನ್: ಬ್ರಿಲ್ ಅಕಾಡೆಮಿಕ್ ಪಬ್ಲಿಷರ್ಸ್.
- ಕ್ಯಾನ್ಸಿಕ್, ಹ್ಯೂಬರ್ಟ್, ಮುಂತಾದವು., ೨೦೦೨. ಬ್ರಿಲ್ಸ್ ನ್ಯೂ ಪೌಲಿ: ಎನ್‌ಸೈಕ್ಲೋಪೀಡಿಯಾ ಆಫ್ ದ ಆಯ್‌ನ್ಸಿಯೆಂಟ್ ವರ್ಲ್ಡ್. ಲೀಡೆನ್/ಬೋಸ್ಟನ್: ಬ್ರಿಲ್ ಅಕಾಡೆಮಿಕ್ ಪಬ್ಲಿಷರ್ಸ್.
- ಕೋಹೆನ್, ಬೆಥ್ (ಸಂಪಾದಕರು), ೨೦೦೦. ನಾಟ್ ದ ಕ್ಲಾಸಿಕಲ್ ಐಡಿಯಲ್: ಅಥೆನ್ಸ್ ಅಂಡ್ ದ ಕನ್ಸ್‌ಟ್ರಕ್ಷನ್ ಅಫ್ ದ ಅರ್ ಇನ್ ಗ್ರೀಕ್ ಆರ್ಟ್ . ಲೀಡೆನ್/ಬೋಸ್ಟನ್: ಬ್ರಿಲ್ ಅಕಾಡೆಮಿಕ್ ಪಬ್ಲಿಷರ್ಸ್. ಇದರಲ್ಲಿ ಫ್ರಾಂಕಾಯಿಸ್ ಲಿಸ್ಸಾರೇಗ್ ಬರೆದ "ಈಸೋಪ, ಬಿಟ್ವೀನ್ ಮ್ಯಾನ್ ಅಂಡ್ ಬೀಸ್ಟ್: ಆಯ್‌ನ್ಸಿಯೆಂಟ್ ಪೋರ್ಟ್ರೇಟ್ಸ್ ಅಂಡ್ ಇಲ್ಲಸ್ಟ್ರೇಶನ್ಸ್" ಸೇರಿದೆ.
- ಡವಾರ್ಟಿ, ಕೆರೋಲ್ ಮತ್ತು ಲೆಸ್ಲಿ ಕುರ್ಕೆ(ಸಂಪಾದಕರು), ೨೦೦೩. ದ ಕಲ್ಚರ್ ವಿಥಿನ್ ಆಯ್‌ನ್ಸಿಯೆಂಟ್ ಗ್ರೀಕ್ ಕಲ್ಚರ್: ಕಾಂಟ್ಯಾಕ್ಟ್, ಕಾನ್‌ಫ್ಲಿಕ್ಟ್, ಕೊಲ್ಯಾಬೊರೇಶನ್. ಕೇಂಬ್ರಿಡ್ಜ್ ಯುನಿವರ್ಸಿಟಿ ಪ್ರೆಸ್ ಲೆಸ್ಲಿ ಕುರ್ಕೆಯ "ಈಸೋಪ ಅಂಡ್ ದ ಕಾಂಟೆಸ್ಟೇಶನ್ ಆಫ್ ಡೆಲ್ಫಿಕ್ ಅಥಾರಿಟಿ" ಯನ್ನು ಒಳಗೊಂಡಿದೆ.
- ಡ್ರಿಬರ್ಗ್, ಜೆ.ಎಚ್., ೧೯೩೨. "ಈಸೋಪ", ದ ಸ್ಪೆಕ್ಟೇಟರ್ , ಸಂ. ೧೪೮ #೫೪೨೫, ಜೂನ್ ೧೮, ೧೯೩೨, ಪು. ೮೫೭–೮.
- ಹ್ಯಾನ್ಸೆನ್, ವಿಲಿಯಮ್ (ಸಂಪಾದಕರು), ೧೯೯೮. ಆಂಥಾಲಜಿ ಆಫ್ ಆಯ್‌ನ್ಸಿಯೆಂಟ್ ಗ್ರೀಕ್ ಪಾಪ್ಯುಲರ್ ಲಿಟರೇಚರ್ . ಬ್ಲೂಮಿಂಗ್‌ಟನ್: ಇಂಡಿಯಾನಾ ಯುನಿವರ್ಸಿಟಿ ಪ್ರೆಸ್. ದ ಈಸೋಪ ರೋಮ್ಯಾನ್ಸ್ (ದ ಬುಕ್ ಆಫ್ ಕ್ಸಾಂಥಸ್ ದ ಫಿಲಾಸಫರ್ ಅಂಡ್ ಈಸೋಪ ಹಿಸ್ ಸ್ಲೇವ್ ಅಥವಾ ದ ಕರಿಯರ್ ಆಫ್ ಈಸೋಪ) , ಅನುವಾದಿಸಿದವರು ಲಾಯ್ಡ್ ಡಬ್ಲೂ. ಡಾಲಿ, ಅನ್ನು ಒಳಗೊಂಡಿದೆ.
- ಹಾಗ್, ತೋಮಸ್, ೨೦೦೪. ಪಾರ್ಥೆನೋಪ್: ಸೆಲೆಕ್ಟೆಡ್ ಸ್ಟಡೀಸ್ ಇನ್ ಆಯ್‌ನ್ಸಿಯೆಂಟ್ ಗ್ರೀಕ್ ಫಿಕ್ಷನ್ (೧೯೬೯-೨೦೦೪) . ಕೋಪನ್‌ಹೆಗನ್: ಮ್ಯೂಸಿಯಮ್ ಟುಸ್ಕುಲಾನಮ್ ಪ್ರೆಸ್. ಅನ್ನು ಒಳಗೊಂಡಿದೆ. ಹಾಗ್'s "ಎ ಪ್ರೊಫೆಸರ್ ಅಂಡ್ ಹಿಸ್ ಸ್ಲೇವ್: Conventions and Values in ದ ಲೈಫ್ ಆಫ್ ಈಸೋಪ ", ಮೊದಲು ಪ್ರಕಟಣೆಗೊಂಡ ವರ್ಷ ೧೯೯೭.
- ಹ್ಯಾನ್ಸೆನ್, ವಿಲಿಯಮ್, ೨೦೦೪. ಗ್ರಾಮಾಟಿಕಿ ಎ. ಕರ್ಲ ಬರೆದ Vita Aesopi: Ueberlieferung, Sprach und Edition einer fruehbyzantinischen Fassung des Aesopರೋಮನ್s ಪುಸ್ತಕದ ವಿಮರ್ಶೆ. ಬ್ರಿನ್ ಮಾವ್ರ್‌ಕ್ಲಾಸಿಕಲ್ ರಿವ್ಯೂ 2004.09.39.
- ಹಾಲ್ಸ್‌ಬರ್ಗ್, ನಿಕ್ಲಾಸ್, ೨೦೦೨. ದ ಆಯ್‌ನ್ಸಿಯೆಂಟ್ ಫೇಬಲ್: ಎನ್ ಇಂಟ್ರಡಕ್ಷನ್ , ಅನುವಾದಿಸಿದವರು ಕ್ರಿಸ್ಟಿನ್ ಜಾಕ್ಸನ್-ಹಾಲ್ಸ್‌ಬರ್ಗ್. ಬ್ಲೂಮಿಂಗ್‌ಟನ್ & ಇಂಡಿಯಾನಾಪೊಲಿಸ್: ಇಂಡಿಯಾನಾ ಯುನಿವರ್ಸಿಟಿ ಪ್ರೆಸ್.
- ಕೆಲ್ಲರ್, ಜಾನ್ ಇ., ಮತ್ತು ಕೀಟಿಂಗ್, ಎಲ್. ಕ್ಲಾರ್ಕ್, ೧೯೯೩. ಈಸೋಪ್ಸ್ ಫೇಬಲ್ಸ್ , ವಿತ್ ಎ ಲೈಫ್ ಆಫ್ ಈಸೋಪ. ಲೆಕ್ಸಿಂಗ್‌ಟನ್: ಯುನಿವರ್ಸಿಟಿ ಆಫ್ ಕೆಂಟುಕಿ ಪ್ರೆಸ್. ೧೪೮೯ ರ ವರ್ಷದ ಈಸೋಪನ ಸ್ಪ್ಯಾನಿಷ್ ಆವೃತ್ತಿಯ ಮೊದ ಇಂಗ್ಲೀಷ್ ಅನುವಾದ, La vida del Ysopet con sus fabulas historiadas ; ದ ಲೈಫ್ ಆಫ್ ಈಸೋಪ ಇದು ಪ್ಲಾನುಡೆಸ್ ಆವೃತ್ತಿಯಾಗಿದೆ.
- ಕುರ್ಕೆ, ಲೆಸ್ಲೀ, ೨೦೧೦. ಈಸೋಪಿಕ್ ಕಾನ್ವರ್ಸೇಶನ್ಸ್: ಪಾಪ್ಯುಲರ್ ಟ್ರಡಿಶನ್, ಕಲ್ಚರಲ್ ಡೈಯಲಾಗ್, ಅಂಡ್ ದ ಇನ್ವೆನ್ಶನ್ ಆಫ್ ಗ್ರೀಕ್ ಪ್ರೋಸ್. ಪ್ರಿನ್ಸ್‌ಟನ್ ಯುನಿವರ್ಸಿಟಿ ಪ್ರೆಸ್.
- ಲೀಕೆ, ವಿಲಿಯಮ್ ಮಾರ್ಟಿನ್, ೧೮೫೬. ನ್ಯೂಮಿಸ್‌ಮಾಟಾ ಹೆಲೆನಿಕಾ: ಎ ಕೆಟಲಗ್ ಆಫ್ ಗ್ರೀಕ್ ಕಾಯಿನ್ಸ್ . ಲಂಡನ್: ಜಾನ್ ಮರ್ರೇ.
- ಲವ್‌ರಿಜ್, ಮಾರ್ಕ್, ೧೯೯೮. ಎ ಹಿಸ್ಟರಿ ಆಫ್ ಅಗಸ್ಟನ್ ಫೇಬಲ್ . ಕೇಂಬ್ರಿಡ್ಜ್ ಯುನಿವರ್ಸಿಟಿ ಪ್ರೆಸ್
- ಲೋಬ್ಬನ್, ರಿಚರ್ಡ್ ಎ., ಜೂ.., ೨೦೦೨. "ವಾಸ್ ಈಸೋಪ ಎ ನ್ಯೂಬಿಯನ್ ಕುಮ್ಮಾಜಿ (ಫೋಕ್‌ಟೆಲ್ಲರ್)?", ನಾರ್ಥ್‌ಈಸ್ಟ್ ಆಫ್ರಿಕನ್ ಸ್ಟಡೀಸ್ , ೯:೧ (೨೦೦೨), ಪು. ೧೧–೩೧.
- ಲೋಬ್ಬನ್, ರಿಚರ್ಡ್ ಎ., ಜೂ.., ೨೦೦೪. ಹಿಸ್ಟಾರಿಕಲ್ ಡಿಕ್ಷನರಿ ಆಫ್ ಆಯ್‌ನ್ಸಿಯೆಂಟ್ ಅಂಡ್ ಮಿಡೀವಲ್ ನುಬಿಯಾ. ಲನ್‌ಹಾಮ್, ಮೇರಿಲ್ಯಾಂಡ್: ಸ್ಕೇರ್‌ಕ್ರೋ ಪ್ರೆಸ್.
- ಪಾನೋಫ್ಕಾ, ಥಿಯೊಡೋರ್, ೧೮೪೯. Antikenkranz zum fünften ಬರ್ಲಿನ್er Winckelmannsfest: Delphi und Melaine . ಬರ್ಲಿನ್: ಜೆ. ಗುಟೆನ್‌ಟ್ಯಾಗ್.
- ಪಪಾಡೆಮೆಟ್ರಿಯು, J. Th., ೧೯೯೭. ಈಸೋಪ ಆಯ್‌ಸ್ ಎನ್ ಆರ್ಕಿಟೈಪಲ್ ಹೀರೋ. ಸ್ಟಡೀಸ್ ಅಂಡ್ ರೀಸರ್ಚ್ ೩೯ . ಅಥೆನ್ಸ್: ಹೆಲೆನಿಕ್ ಸೊಸೈಟಿ ಫಾರ್ ಹ್ಯುಮ್ಯಾನಿಸ್ಟಿಕ್ ಸ್ಟಡೀಸ್.
- ಪೆನೆಲ್ಲಾ, ರಾಬರ್ಟ್ ಜೆ., ೨೦೦೭. ಮ್ಯಾನ್ ಅಂಡ್ ದ ವರ್ಲ್ಡ್: ದ ಒರೇಶನ್ಸ್ ಆಫ್ಹ್ ಹಿಮೇರಿಯಸ್." ಬರ್ಕ್‌ಲೀ: ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಮುದ್ರಣಾಲಯ.
- ಪೆರ್ರಿ, ಬೆನ್ ಎಡ್ವಿನ್ (ಅನುವಾದಕ), ೧೯೬೫. ಬಾರ್ಬಿಯಸ್ ಮತ್ತು ಫೇಡ್ರಸ್. ಕೇಂಬ್ರಿಡ್ಜ್ : ಹಾರ್ವರ್ಡ್ ವಿಶ್ವವಿದ್ಯಾಲಯ ಮುದ್ರಣಾಲಯ.
- ಫಿಲಿಪಾಟ್, ಥೋ. (ಅನುವಾದಕ), ೧೬೮೭. ಈಸೋಪ್ಸ್ ಫೇಬಲ್ಸ್ ವಿಥ್ ಹಿಸ್ ಲೈಫ್: ಇಂಗ್ಲೀಷ್, ಫ್ರೆಂಚ್ ಮತ್ತು ಲ್ಯಾಟಿನ್ ಭಾಷೆಗಳಲ್ಲಿ Archived 2022-04-03 ವೇಬ್ಯಾಕ್ ಮೆಷಿನ್ ನಲ್ಲಿ.. ಲಂಡನ್: ಎಚ್. ಹಿಲ್ಸ್ ಜುನ್. ಫ್ರಾನ್ಸಿಸ್ ಬರ್ಲೋ ಗಾಗಿ ಪ್ರಕಟಿಸಲಾಗಿದೆ. ಅನ್ನು ಒಳಗೊಂಡಿದೆ. ಪ್ಲಾನುಡೆಸ್‌ನ ಲೈಫ್ ಆಫ್ ಈಸೋಪ ದ ಫಿಲಿಪಾಟ್‌ನ ಇಂಗ್ಲೀಷ್ ಅನುವಾದ, ಫ್ರಾನ್ಸಿಸ್ ಬರ್ಲೋನ ಚಿತ್ರಗಳೊಂದಿಗೆ.
- ರಿಯರ್ಡನ್, ಬಿ.ಪಿ. (ಸಂಪಾದಕರು), ೧೯೮೯. ಸಂಗ್ರಹಿಸಲ್ಪಟ್ಟ ಪ್ರಾಚೀನ ಗ್ರೀಕ್ ಕಾದಂಬರಿಗಳು. ಬರ್ಕ್‌ಲೀ: ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಮುದ್ರಣಾಲಯ. ಎನ್ ಇಥಿಯೋಪಿಯನ್ ಸ್ಟೋರಿ ಬರೆದವರು ಹೆಲಿಓಡೋರಸ್, ಅನುವಾದಿಸಿದವರು ಜೆ.ಆರ್. ಮಾರ್ಗನ್, ಮತ್ತು ಎ ಟ್ರೂ ಸ್ಟೋರಿ ಬರೆದವರು ಲೂಸಿಯನ್, ಅನುವಾದಿಸಿದವರು ಬಿ.ಪಿ. ರಿಯರ್ಡನ್, ಇವುಗಳನ್ನು ಒಳಗೊಂಡಿದೆ.
- ಸ್ನೋಡೆನ್,ಜೂ., ಫ್ರಾಂಕ್ ಎಂ., ೧೯೭೦. ಬ್ಲ್ಯಾಕ್ಸ್ ಇನ್ ಎಂಟಿಕ್ವಿಟಿ: ಈಥಿಯೋಪಿಯನ್ ಇನ್ ದ ಗ್ರೀಕೋ-ರೋಮನ್ ಎಕ್ಸ್‌ಪೀರಿಯೆನ್ಸ್ . ಕೇಂಬ್ರಿಡ್ಜ್ : ಹಾರ್ವರ್ಡ್ ವಿಶ್ವವಿದ್ಯಾಲಯ ಮುದ್ರಣಾಲಯ.
- ಟೆಂಪಲ್, ರಾಬರ್ಟ್ ಮತ್ತು ಒಲೀವಿಯಾ (ಅನುವಾದಕರು), ೧೯೯೮. ಈಸೋಪ: ದ ಕಂಪ್ಲೀಟ್ ಫೇಬಲ್ಸ್ . ನ್ಯೂಯಾರ್ಕ್: ಪೆಂಗ್ವಿನ್ ಬುಕ್ಸ್.
- ವಾನ್ ಡಿಕ್, ಜೆರ್ಟ್-ಜನವರಿ, ೧೯೯೭. ಏಯಿನೋಯಿ, ಲೋಗೋಯಿ, ಮೈಥೋಯಿ: ಫೇಬಲ್ಸ್ ಇನ್ ಆರ್ಕೇಯಿಕ್, ಕ್ಲಾಸಿಕಲ್ , ಅಂಡ್ ಹೆಲೆನಿಸ್ಟಿಕ್ ಗ್ರೀಕ್. ಲೀಡೆನ್/ಬೋಸ್ಟನ್: ಬ್ರಿಲ್ ಅಕಾಡೆಮಿಕ್ ಪಬ್ಲಿಷರ್ಸ್.
- West, M.L., ೧೯೮೪. "ದ ಅಸ್ಕ್ರಿಪ್ಷನ್ ಆಫ್ ಫೇಬಲ್ಸ್ ಟು ಈಸೋಪ ಇನ್ ಆರ್ಕೇಯಿಕ್ ಅಂಡ್ ಕ್ಲಾಸಿಕಲ್ ಗ್ರೀಸ್", La Fable (Vandœuvres–Genève: Fondation Hardt, Entretiens XXX), ಪು. ೧೦೫–೩೬.
- ವಿಲ್ಸನ್, ನೈಗೆಲ್, ೨೦೦೬. ಎನ್‌ಸೈಕ್ಲೋಪೀಡಿಯಾ of ಆಯ್‌ನ್ಸಿಯೆಂಟ್ ಗ್ರೀಸ್ . ನ್ಯೂಯಾರ್ಕ್: ರೌಟ್ಲೆಡ್ಜ್.
- ಝಾಂಕರ್, ಪೌಲ್, ೧೯೯೫. ದ ಮಾಸ್ಕ್ ಆಫ್ ಸಾಕ್ರಟೀಸ್: ದ ಇಮೇಜ್ ಆಫ್ ದ ಇಂಟೆಲೆಕ್ಚುವಲ್ ಇನ್ ಆಂಟಿಕ್ವಿಟಿ . ಬರ್ಕ್‌ಲೀ: ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಮುದ್ರಣಾಲಯ.
ಹೆಚ್ಚಿನ ಓದಿಗಾಗಿ
ಬದಲಾಯಿಸಿ- ಅನಾಮಿಕ, ೧೭೮೦. ದ ಹಿಸ್ಟರಿ ಆಫ್ಹ್ ಅಮರ್ಸ್ ಆಫ್ ರೋಡೋಪ್ . ಲಂಡನ್: ಇ.ಎಂ.ಡೀಮರ್ ಗಾಗಿ ಮುದ್ರಿತ.
- ಆಂಥೋನಿ, ಮೇವಿಸ್, ೨೦೦೬. ದ ಲೆಜೆಂಡರಿ ಲೈಫ್ ಅಂಡ್ ಫೇಬಲ್ಸ್ ಆಫ್ ಈಸೋಪ . ಟೊರೋಂಟೊ: ಮಾಯಂಟ್ ಪ್ರೆಸ್. ಮಕ್ಕಳಿಗಾಗಿ ದ ಲೈಫ್ ಆಫ್ ಈಸೋಪ ಕಥೆಗಳು.
- ಕಾವುರ್ಸಿನ್, ವಿಲಿಯಮ್, ದ ಸೀಜ್ ಆಫ್ ರೋಡ್ಸ್ , ಲಂಡನ್ (೧೪೮೨), ಈಸೋಪಸ್, ದ ಬುಕ್ ಆಫ್ ಸಟಲ್ ಹಿಸ್ಟರೀಸ್ ಆಫ್ ಫೇಬಲ್ಸ್ ಆಫ್ಹ್ ಈಸೋಪ್ (೧೪೮೪). ಫ್ಯಾಕ್‌ಸಿಮಿಲಿ ಸಂ., ೨ ಸಂಪುಟ. in ೧, ಸ್ಕಾಲರ್ಸ್ ಫ್ಯಾಕ್‌ಸಿಮಿಲಿಸ್ & ರೀಪ್ರಿಂಟ್ಸ್, ೧೯೭೫. ISBN ೯೭೮-೦-೮೨೦೧-೧೧೫೪-೪.
- ಕಾಕ್ಸ್‌ಟನ್, ವಿಲಿಯಮ್, ೧೪೮೪. ದ ಹಿಸ್ಟರಿ ಅಂಡ್ ಫೇಬಲ್ಸ್ ಆಫ್ ಈಸೋಪ್ , ವೆಸ್ಟ್‌ಮಿನಿಸ್ಟರ್. ಆಧುನಿಕ ಮರುಮುದ್ರಣ ಸಂಪಾದಿಸಿದವರು ರಾಬರ್ಟ್ ಟಿ. ಲೆನಾಘನ್ (ಹಾರ್ವರ್ಡ್ ಯುನಿವರ್ಸಿಟಿ ಪ್ರೆಸ್: ಕೇಂಬ್ರಿಜ್, ೧೯೬೭). ಅನ್ನು ಒಳಗೊಂಡಿದೆ. ಕಾಕ್ಸ್‌ಟನ್ಸ್ ಎಪಿಲಾಗ್ ಟು ದ ಫೇಬಲ್ಸ್, ದಿನಾಂಕ ಮಾರ್ಚ್ ೨೬, ೧೪೮೪.
- ಕ್ಲೇಟನ್, ಎಡ್ವರ್ಡ್ . "ಈಸೋಪ, ಅರಿಸ್ಟಾಟಲ್, ಅಂಡ್ ಎನಿಮಲ್ಸ್: ದ ರೋಲ್ ಆಫ್ಹ್ ಫೇಬಲ್ಸ್ ಇನ್ ಹ್ಯೂಮನ್ ಲೈಫ್" Archived 2023-03-17 ವೇಬ್ಯಾಕ್ ಮೆಷಿನ್ ನಲ್ಲಿ.. ಹ್ಯೂಮ್ಯಾನಿಟಾಸ್ , ಸಂಪುಟ XXI, Nos. ೧ and ೨, ೨೦೦೮, ಪು. ೧೭೯–೨೦೦. ಬೋವೀ, ಮೇರಿಲ್ಯಾಂಡ್: ನ್ಯಾಶನಲ್ ಹ್ಯುಮ್ಯಾನಿಟೀಸ್ ಇನ್ಸ್ಟಿಟ್ಯೂಟ್ .
- ಕಾಂಪ್ಟನ್, ಟಾಡ್, ೧೯೯೦. "ದ ಟ್ರಯಲ್ ಆಫ್ ದ ಸೆಟೈರಿಸ್ಟ್: ಪೋಯೆಟಿಕ್ ವಿಟೇ (ಈಸೋಪ, ಆರ್ಚಿಲೋಕಸ್, ಹೋಮರ್) ಆಯ್‌ಸ್ ಬ್ಯಾಕ್‌ಗ್ರೌಂಡ್ ಫಾರ್ ಪ್ಲ್ಯಾಟೋಸ್ ಅಪಾಲಜಿ", ದ ಅಮೆರಿಕನ್ ಜರ್ನಲ್ ಆಫ್ ಫಿಲಾಲಜಿ , ಸಂ. ೧೧೧, ನಂ. ೩ (ಆಟಂ, ೧೯೯೦), ಪು. ೩೩೦–೩೪೭. ಬಾಲ್ಟಿಮೋರ್: ದ ಜಾನ್ಸ್ ಹಾಪ್ಕಿನ್ಸ್ ಯುನಿವರ್ಸಿಟಿ ಪ್ರೆಸ್.
- ಕಾಂಪ್ಟನ್, ಟಾಡ್, ೨೦೦೬. ವಿಕ್ಟಿಮ್ ಆಫ್ ದ ಮ್ಯೂಸಸ್: ಪೋಯೆಟ್ ಆಯ್‌ಸ್ ಸ್ಕೇಪ್‌ಗೋಟ್, ವಾರಿಯರ್ ಅಂಡ್ ಹೀರೋ ಇನ್ ಗ್ರೀಕೋ-ರೋಮನ್ ಅಂಡ್ ಇಂಡೋ-ಯುರೋಪಿಯನ್ ಮಿಥ್ ಅಂಡ್ ಹಿಸ್ಟರಿ . ವಾಶಿಂಗ್‌ಟನ್, ಡಿ.ಸಿ.: ಸೆಂಟರ್ ಫಾರ್ ಹೆಲೆನಿಕ್ ಸ್ಟಡೀಸ್.
- ಡಾಲಿ, ಲಾಯ್ಡ್ ಡಬ್ಲೂ., ೧೯೬೧. ಈಸೋಪ್ ವಿಥೌಟ್ ಮಾರಲ್ಸ್: ದ ಫೇಮಸ್ ಫೇಬಲ್ಸ್, ಅಂಡ್ ಎ ಲೈಫ್ ಆಫ್ ಈಸೋಪ, ನ್ಯೂಲಿ ಟ್ರಾನ್ಸ್‌ಲೇಟೆಡ್ ಅಂಡ್ ಎಡಿಟೆಡ್ . ನ್ಯೂಯಾರ್ಕ್ ಅಂಡ್ ಲಂಡನ್: ಥೋ.ಮಸ್ ಯೋಸೆಲಾಫ್. ಡಾಲಿಯ ದ ಈಸೋಪ ರೋಮ್ಯಾನ್ಸ್ ನ ಅನುವಾದವನ್ನು ಒಳಗೊಂಡಿದೆ.
- Figueiredo, Guilherme, ೧೯೫೩? ದ ಫಾಕ್ಸ್ ಅಂಡ್ ದ ಗ್ರೇಪ್ಸ್ (A raposa e as uvas ಪುಸ್ತಕದ ಇಂಗ್ಲೀಷ್ ಅನುವಾದ ). ನ್ಯೂಯಾರ್ಕ್ : ಬ್ರೆಜಿಲಿಯನ್-ಅಮೆರಿಕನ್ ಕಲ್ಚರಲ್ ಇನ್ಸ್ಟಿಟ್ಯೂಟ್ .
- ಗಿಬ್ಸ್, ಲಾರಾ (ಅನುವಾದಕ), ೨೦೦೨, ಮರುಪ್ರಕಟಣೆ ೨೦೦೮. ಈಸೋಪ್ಸ್ ಫೇಬಲ್ಸ್ ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್
- ಗಿಬ್ಸ್, ಲಾರಾ. "ಈಸೋಪ ಇಲ್ಲಸ್ಟ್ರೇಶನ್ಸ್: ಟೆಲ್ಲಿಂಗ್ ದ ಸ್ಟೋರಿ ಇನ್ ಇಮೇಜಸ್", ಜರ್ನಿ ಟು ದ ಸೀ (ಆನ್ಲೈನ್ ಜರ್ನಲ್ ), ಸಂಚಿಕೆ ೬, ಡಿಸೆಂಬರ್ ೧, ೨೦೦೮.
- ಗಿಬ್ಸ್, ಲಾರಾ. "ಲೈಫ್ ಆಫ್ ಈಸೋಪ್: ದ ವೈಸ್ ಫೂಲ್ ಅಂಡ್ ದ ಫಿಲಾಸಫರ್", ಜರ್ನಿ ಟು ದ ಸೀ (ಆನ್ಲೈನ್ ಜರ್ನಲ್ ), ಸಂಚಿಕೆ ೯, ಮಾರ್ಚ್ ೧, ೨೦೦೯.
- ಜಾಕೋಬ್ಸ್, ಜೋಸೆಫ್ , ದ ಫೇಬಲ್ಸ್ ಆಫ್ ಈಸೋಪ್: ವಿಲಿಯಮ್ ಕಾಕ್ಸ್‌ಟನ್ ೧೪೮೪ ರಲ್ಲಿ ಪ್ರಕಟಿಸಿದಂತೆ , ಲಂಡನ್ : ಡೇವಿಡ್ ನಟ್, ೧೮೮೯.
- ಪೆರ್ರಿ, ಬೆನ್ ಎಡ್ವಿನ್ (ಸಂಪಾದಕರು), ೧೯೫೨, ೨ನೇ ಆವೃತ್ತಿ ೨೦೦೭. ಈಸೋಪಿಕಾ: ಎ ಸೀರೀಸ್ ಆಫ್ಹ್ ಟೆಕ್‌ಸ್ಟ್ಸ್ ರಿಲೇಟಿಂಗ್ ಟು ಈಸೋಪ್ ಆರ್ ಅಸ್ಕ್ರೈಬ್ಡ್ ಟು ಹಿಮ್. ಅರ್ಬನಾ: ಯುನಿವರ್ಸಿಟಿ ಆಫ್ ಇಲ್ಲಿನೋಯಿಸ್ ಪ್ರೆಸ್.
- ಸ್ಲೂಟರ್, ಇನೇಕೆ ಮತ್ತು ರೋಸೆನ್, ರಾಲ್ಫ್ ಎಂ. (ಸಂಪಾದಕರು), ೨೦೦೮. ಕಾಕೋಸ್: ಬ್ಯಾಡ್‌ನೆಸ್ ಅಂಡ್ ಎಂಟಿ-ವ್ಯಾಲ್ಯೂ ಇನ್ ಕ್ಲಾಸಿಕಲ್ ಆಂಟಿಕ್ವಿಟಿ. ನೆಮೊಸಿನೆ: ಸಪ್ಲಿಮೆಂಟ್ಸ್. ಹಿಸ್ಟರಿ ಅಂಡ್ ಆರ್ಕಿಯಾಲಜಿ ಆಫ್ ಕ್ಲಾಸಿಕಲ್ ಆಂಟಿಕ್ವಿಟಿ; ೩೦೭ . ಲೀಡೆನ್/ಬೋಸ್ಟನ್: ಬ್ರಿಲ್ ಅಕಾಡೆಮಿಕ್ ಪಬ್ಲಿಷರ್ಸ್. ಅನ್ನು ಒಳಗೊಂಡಿದೆ. "ಅಗ್ಲಿನೆಸ್ ಅಂಡ್ ವ್ಯಾಲ್ಯೂ ಇನ್ ದ ಲೈಫ್ ಆಫ್ ಈಸೋಪ" ಬೈ ಜೆರೆಮಿ ಬಿ ಲೆಫ್‌ಕೋವಿಟ್ಸ್.
- ಟೆಂಪಲ್, ರಾಬರ್ಟ್, "ನೀತಿಕಥೆಗಳು, ರಿಡಲ್ಸ್, ಅಂಡ್ ಮಿಸ್ಟರೀಸ್ ಆಫ್ ಡೆಲ್ಫಿ", ಪ್ರೊಸೀಡಿಂಗ್ಸ್ ಆಫ್ ೪ಥ್ ಫಿಲಾಸಫಿಕಲ್ ಮೀಟಿಂಗ್ ಆನ್ ಕಂಟೆಂಪರರಿ ಪ್ರಾಬ್ಲೆಮ್ಸ್ , ನಂ ೪, ೧೯೯೯ (ಅಥೆನ್ಸ್, ಗ್ರೀಸ್) ಇನ್ ಗ್ರೀಕ್ ಅಂಡ್ ಇಂಗ್ಲೀಷ್.
- ವಿಲ್ಸ್, ಲಾರೆನ್ಸ್ ಎಂ., ೧೯೯೭. ದ ಕ್ವೆಸ್ಟ್ ಆಫ್ ದ ಹಿಸ್ಟಾರಿಕಲ್ ಗಾಸ್ಪೆಲ್: ಮಾರ್ಕ್, ಜಾನ್, ಅಂಡ್ ದ ಒರಿಜಿನ್ಸ್ ಆಫ್ ದ ಗಾಸ್ಪೆಲ್ ಜೆನರ್ . ಲಂಡನ್ ಮತ್ತು ನ್ಯೂಯಾರ್ಕ್: ರೌಟ್‌ಲೆಜ್. ಒಂದು ಅನುಬಂಧವನ್ನು ಒಳಗೊಂಡಿದೆ, ವಿಲ್ಸ್ ಇಂಗ್ಲೀಷ್ ಅನುವಾದ, ದ ಲೈಫ್ ಆಫ್ ಈಸೋಫ್ , ಪು. ೧೮೦–೨೧೫.
ಬಾಹ್ಯ ಕೊಂಡಿಗಳು
ಬದಲಾಯಿಸಿವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
Wikiquote has quotations related to Aesop.
Wikimedia Commons has media related to Aesop.
- ಈಸೋಪನ ನೀತಿಕಥೆಗಳು ಉಚಿತ ಆಡಿಯೋ ಡೌನ್ಲೋಡ್ಗಳು
- ಈಸೋಪನ ನೀತಿಕಥೆಗಳು ಮಕ್ಕಳಿಗಾಗಿ
- ಈಸೋಪನ ನೀತಿಕಥೆಗಳು Archived 2010-04-17 ವೇಬ್ಯಾಕ್ ಮೆಷಿನ್ ನಲ್ಲಿ. ವಿ.ಎಸ್. ವರ್ನನ್ ಜೋನ್ಸ್ರಿಂದ
- ಈಸೋಪನ ನೀತಿಕಥೆಗಳು Archived 2010-01-26 ವೇಬ್ಯಾಕ್ ಮೆಷಿನ್ ನಲ್ಲಿ. ಹ್ಯಾರಿಸನ್ ವೀರ್, ಜಾನ್ ಟೆನ್ನಿಯೆಲ್, ಎರ್ನಸ್ಟ್ ಗ್ರಿಸೆಟ್, ಮತ್ತು ಇತರರ ಚಿತ್ರಗಳೊಂದಿಗೆ
- AesopFables.com ನೀತಿಕಥೆಗಳ ದೊಡ್ಡ ಸಂಗ್ರಹ; ಈಸೋಪನ ಕಥೆಗಳಲ್ಲದೇ ಇತರ ಕಥೆಗಳೂ ಸೇರಿವೆ.
- Aesopica.net ಸುಮಾರು ೬೦೦ ನೀತಿಕಥೆಗಳು ಇಂಗ್ಲೀಷ್, ಲ್ಯಾಟಿನ್ ಮತ್ತು ಗ್ರೀಕ್ ಪಠ್ಯಗಳಲ್ಲಿದ್ದು, ಹುಡುಕಲು ಸಾಧ್ಯವಿದೆ.
- ಕಾರ್ಲ್ಸನ್ ಫೇಬಲ್ ಕಲೆಕ್ಷನ್ ಅಟ್ ಕ್ರೀಗ್ಟನ್ ಯುನಿವರ್ಸಿಟಿ ಅನ್ನು ಒಳಗೊಂಡಿದೆ. ನೀತಿಕತೆಗಳ ಕುರಿತಾಗಿ ಆನ್ಲೈನ್ ಕೆಟಲಾಗ್ ಸಹಾ ಲಭ್ಯವಿದೆ.
- Vita Aesopi ಈಸೋಪನ ಜೀವನ ಚರಿತ್ರೆ ಕುರಿತಂತೆ ಆನ್ಲೈನ್ ಮಾಹಿತಿ
- Works by Aesop at Project Gutenberg
f