.

ಎಡಗಡೆ ಕೊಬ್ಬರಿ ತುರಿಯಲು ಸಾಧ್ಯವಿರುವ ಈಳಿಗೆಮಣೆ. ಬಲಗಡೆಯದನ್ನು ಹಣ್ಣು, ತರಕಾರಿ, ಮಾಂಸ, ಮೀನು, ಇತ್ಯಾದಿಗಳನ್ನು ಕತ್ತರಿಸಲು ಬಳಸಲಾಗುತ್ತದೆ

ಈಳಿಗೆಮಣೆಯು ಒಂದು ಕತ್ತರಿಸುವ ಉಪಕರಣ,[] ಮತ್ತು ದಕ್ಷಿಣ ಏಷ್ಯಾದಲ್ಲಿ ಅತ್ಯಂತ ಪ್ರಚಲಿತವಾಗಿದೆ.

ಮೆಟ್ಟುಗತ್ತಿ

ಈಳಿಗೆ ಎಂದರೆ ಒಂದು ಉದ್ದನೆಯ, ಬಾಗಿರುವ ಅಲಗು. ಇದನ್ನು ಕಾಲಿನಿಂದ ಕೆಳಗೆ ನೆಲದ ಮೇಲೆ ಒತ್ತಿ ಹಿಡಿದು ಕತ್ತರಿಸಲು ಬಳಸಲಾಗುತ್ತದೆ. ಎರಡೂ ಕೈಗಳನ್ನು ಕತ್ತರಿಸುತ್ತಿರುವುದುನ್ನು ಹಿಡಿಯಲು ಮತ್ತು ಅಲಗಿನ ಮೇಲೆ ಚಲಿಸಲು ಬಳಸಲಾಗುತ್ತದೆ. ಚೂಪಾಗಿರುವ ಬದಿಯು ಬಳೆಕದಾರನ ಎದುರಿಗಿರುತ್ತದೆ.[] ಈ ವಿಧಾನವು ಕತ್ತರಿಸುವ ಪ್ರಕ್ರಿಯೆಯಲ್ಲಿ ಅತ್ಯುತ್ತಮ ನಿಯಂತ್ರಣವನ್ನು ನೀಡುತ್ತದೆ ಮತ್ತು ಇದನ್ನು ಏನನ್ನಾದರೂ ಕತ್ತರಿಸಲು ಬಳಸಬಹುದು, ಸಣ್ಣದಾದ ಸೀಗಡಿಯಿಂದ ಹಿಡಿದು ದೊಡ್ಡ ಕುಂಬಳಕಾಯಿವರೆಗೆ.

ಈಳಿಗೆಮಣೆಯ ಒಂದು ದೊಡ್ಡದಾದ ಬಗೆಯಲ್ಲಿ, ಅಲಗು ಹೆಚ್ಚು ದೊಡ್ಡದಾಗಿರುತ್ತದೆ ಮತ್ತು ಇದನ್ನು ಮೀನನ್ನು ಕತ್ತರಿಸಲು ಬಳಸಲಾಗುತ್ತದೆ. ಈಳಿಗೆಮಣೆಯ ಮತ್ತೊಂದು ಬಗೆಯಲ್ಲಿ, ಕೊಬ್ಬರಿ ತುರಿಯಲು ಈಳಿಗೆಯ ಕೊನೆಯಲ್ಲಿ ಚಪ್ಪಟೆಯಾದ, ದುಂಡಗಿನ ತುದಿ ಇರುತ್ತದೆ. ಇದರ ಸುತ್ತಲಿನಲ್ಲಿ, ಚೂಪಾದ ತಿಮಿಂಗಲದಂತಹ ಹಲ್ಲುಗಳಿರುತ್ತವೆ ಮತ್ತು ಇದು ಕೊಬ್ಬರಿ ತುರಿಯಲು ನೆರವಾಗುತ್ತದೆ.

ಮೂಲತಃ ಇದು ಅಡುಗೆ ಮಾಡುವವರಿಗಾಗಿ ನೆಲದ ಮೇಲೆ ಕುಳಿತುಕೊಂಡು ತರಕಾರಿ ಹಾಗೂ ಮಾಂಸವನ್ನು ಕತ್ತರಿಸಲು ಸೃಷ್ಟಿಸಲಾಗಿದೆ. ಒಂದು ಕಾಲನ್ನು ಮಡಚಿ ಕಟ್ಟಿಗೆಯ ಆಧಾರದ ಮೇಲಿಡಬಹುದು ಮತ್ತು ಇನ್ನೊಂದು ಕಾಲನ್ನು ಚಾಚಬಹುದು.


ಉಲ್ಲೇಖಗಳು

ಬದಲಾಯಿಸಿ
  1. Chitrita, Banerji (Spring 2001). "The Bengali Bonti". Gastronomica. 1 (2): 23-26.
  2. WildFilmsIndia (2015-02-19), Women cutting vegetables at a Bengali wedding - India, retrieved 2017-07-26