ಈಚನೂರು ಜಯಲಕ್ಷ್ಮಿ

ಈಚನೂರು ಜಯಲಕ್ಷ್ಮಿಯವರು (ಜೂನ್ ೨೧, ೧೯೪೭ - ) ಜನಿಸಿದ್ದು ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಈಚನೂರು ಗ್ರಾಮದಲ್ಲಿ. ತಂದೆ ಪ್ರಸಿದ್ಧ ಸೂತ್ರದ ಬೊಂಬೆಯಾಟಗಾರ ಸೀತಾರಾಮಯ್ಯ ಮತ್ತು ತಾಯಿ ಸಾವಿತ್ರಮ್ಮ. ಜಯಲಕ್ಷ್ಮಿಯವರು ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ.ಪದವಿ ಪಡಿದಿದ್ದಾರೆ. ಅನೇಕ ಕಥೆಗಳು, ಇಪ್ಪತ್ತೈದಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ.ಇವರು ಬರೆದಿರುವ 'ಮುಂಜಾನೆಯ ಮಂಜು' ಎಂಬ ಪುಸ್ತಕದ ಆಧಾರದ ಮೇಲೆ, ಅದೇ ಹೆಸರಿನ ಕನ್ನಡ ಚಲನಚಿತ್ರವೊಂದನ್ನು ನಿರ್ಮಿಸಲಾಗಿದೆ.

ಕಾದಂಬರಿಗಳು

ಬದಲಾಯಿಸಿ
  • ಬಾಳ ಪಲ್ಲವಿ
  • ಮೋಡದ ಮನೆ
  • ಹೆಜ್ಜೆ ಮೂಡದ ಹಾದಿ
  • ಅಂತರ್ಗೀತ
  • ಆಗಂತುಕರು
  • ಹಿಮ ತೊಳೆದ ಹೂವು
  • ನಾಂದಿ
  • ಅಗ್ನಿರೇಖೆ
  • ಸಮಶೃತಿ
  • ಚುಕ್ಕಿ ತಪ್ಪಿದ ರಂಗೋಲಿ
  • ಕಡಲಿನ ಒಡಲು
  • ಅಸಹಾಯಕರು
  • ಮಾನಸರಾಗ
  • ಹಳೆಬೇರು ಹೊಸ ಚಿಗುರು
  • ವಸಂತ ಪಲ್ಲವಿ
  • ಪ್ರೇಮಬಂಧನ
  • ಹಿಮದ ಬೊಂಬೆ

ಕಥಾ ಸಂಕಲನಗಳು

ಬದಲಾಯಿಸಿ
  • ಒಳಗೂ ಹೊರಗೂ
  • ಅಂತರಾಳದಲ್ಲೊಂದು ಕಿರುದನಿ
  • ಒಮ್ಮೊಮ್ಮೆ
  • ಕಿರುದನಿ
  • ನಂಬಿಕೆ
  • ಬೊಂಬೆಯಾಟ