ಇಡಯಿಲ್ಲಂ ಚಂದ್ರಶೇಖರನ್ (ಜನನ : ೨೬ ಡಿಸೆಂಬರ್ ೧೯೪೮) ಅವರು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ರಾಜಕಾರಣಿ ಮತ್ತು ಪಿಣರಾಯಿ ವಿಜಯನ್ ಸರಕಾರದಲ್ಲಿ ಕೇರಳದ ಪ್ರಸ್ತುತ ಕಂದಾಯ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇ. ಚಂದ್ರಶೇಖರನ್
ಇ ಚಂದ್ರಶೇಖರನ್

ಇ. ಚಂದ್ರಶೇಖರನ್

ಪ್ರಸಕ್ತ
ಅಧಿಕಾರ ಪ್ರಾರಂಭ 
೨೫ ಮೇ ೨೦೧೬
ಪೂರ್ವಾಧಿಕಾರಿ ಅಡೂರ್‌ ಪ್ರಕಾಶ್
ಪ್ರಸಕ್ತ
ಅಧಿಕಾರ ಪ್ರಾರಂಭ
೨೦೧೧

ಜನನ (1948-12-26) ೨೬ ಡಿಸೆಂಬರ್ ೧೯೪೮ (ವಯಸ್ಸು ೭೫)
ಪೆರುಂಬಳ, ಕಾಸರಗೋಡು, ಕೇರಳ, ಭಾರತ
ಪ್ರತಿನಿಧಿತ ಕ್ಷೇತ್ರ ಕಾಞ್ಞಂಗಾಡು
ರಾಜಕೀಯ ಪಕ್ಷ ಭಾರತೀಯ ಕಮ್ಯೂನಿಷ್ಟ್‌ ಪಕ್ಷ
ಜೀವನಸಂಗಾತಿ ಸಾವಿತ್ರಿ

ಅವರು ಪಿ. ಕುಞ್ಞಿರಾಮನ್ ನಾಯರ್ ಮತ್ತು ಎಡಯಿಲ್ಲಂ ಪಾರ್ವತಿ ಅಮ್ಮ ಅವರ ಪುತ್ರರಾಗಿ ಪೆರುಂಬಳದಲ್ಲಿ ಜನಿಸಿದರು. [೧]

ಅವರು ಪ್ರಸ್ತುತ ೨೦೧೧ ರಿಂದ ಕಾಞ್ಞಂಗಾಡು ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. [೨] ಅದರ ಜೊತೆಯಲ್ಲಿ ಭಾರತೀಯ ಕಮ್ಯೂನಿಷ್ಟ್ (ಸಿಪಿಐ)‌ ಪಕ್ಷದ ಕೇರಳ ರಾಜ್ಯ ಸಮಿತಿಯ ಸದಸ್ಯನಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಅವರು ಹೊಂದಿದ್ದ ಸ್ಥಾನಗಳು ಬದಲಾಯಿಸಿ

  • ತಾಲ್ಲೂಕು ಕಾರ್ಯದರ್ಶಿ, ಎ. ಐ. ವೈ. ಎಫ್, ಕಾಸರಗೋಡು (೧೯೭೦)
  • ಜಿಲ್ಲಾ ಕಾರ್ಯದರ್ಶಿ, ಎ. ಐ. ವೈ. ಎಫ್, ಕಣ್ಣೂರು (೧೯೭೫)
  • ಸದಸ್ಯ, ಸಿಪಿಐ, ರಾಜ್ಯ ಮಂಡಳಿ (೧೯೭೬)
  • ರಾಜ್ಯ ಜಂಟಿ ಕಾರ್ಯದರ್ಶಿ, ಎ. ಐ. ವೈ. ಎಫ್ (೧೯ ೭೯)
  • ಸದಸ್ಯ, ಸಿಪಿಐ ಕಾಸರಗೋಡು ತಾಲ್ಲೂಕು ಸಮಿತಿ
  • ಜಿಲ್ಲಾ ಸಚಿವಾಲಯದ ಸದಸ್ಯ, ಕಣ್ಣೂರು
  • ಸದಸ್ಯ, ಚೆಮ್ಮನಾಡು ಗ್ರಾಮ ಪಂಚಾಯತ್ (೧೯೭೯-೮೪)
  • ಸಹಾಯಕ ಜಿಲ್ಲಾ ಕಾರ್ಯದರ್ಶಿ, ಸಿಪಿಐ, ಕಾಸರಗೋಡು (೧೯೮೪)
  • ಜಿಲ್ಲಾ ಕಾರ್ಯದರ್ಶಿ, ಸಿಪಿಐ (೧೯೮೭)
  • ರಾಜ್ಯ ಕಾರ್ಯನಿರ್ವಾಹಕ ಸದಸ್ಯ, ಸಿಪಿಐ (೧೯೯೮)
  • ಸದಸ್ಯ, ಕೇರಳ ರಾಜ್ಯ ಗ್ರಾಮ ಅಭಿವೃದ್ಧಿ ಮಂಡಳಿ (೧೯೮೭-೯೧)
  • ನಿರ್ದೇಶಕ ಮಂಡಳಿ ಸದಸ್ಯ, ಕೇರಳ ಕೃಷಿ ಯಂತ್ರೋಪಕರಣಗಳ ನಿಗಮ (೧೯೯೧-೯೬)
  • ಸದಸ್ಯ, ರಾಜ್ಯ ಭೂ ಸುಧಾರಣಾ ಪರಿಶೀಲನಾ ಸಮಿತಿ (೨೦೦೮-೨೦೧೦)

ಉಲ್ಲೇಖಗಳು ಬದಲಾಯಿಸಿ

  1. "ಆರ್ಕೈವ್ ನಕಲು". Archived from the original on 2018-03-31. Retrieved 2020-12-15.
  2. "ಆರ್ಕೈವ್ ನಕಲು". Archived from the original on 2018-03-31. Retrieved 2020-12-15.