ಇಸ್ಲಾಮೀ ಅಧ್ಯಯನ ಸಂಸ್ಥೆಗಳು

ಸಂಪ್ರದಾಯಗಳು ಬಹುಸಂಖ್ಯೆಯಲ್ಲಿ ಪ್ರಚುರವಾಗಿದ್ದ ನಾಲ್ಕನೆಯ ಅವಧಿಯಲ್ಲಿ ಯಾವುದನ್ನು ಸ್ವೀಕರಿಸಬೇಕು ಮತ್ತು ಯಾವುದನ್ನು ಬಿಡಬೇಕು ಎಂಬುದು ಜನತೆಗೆ ತಿಳಿಯದಾಯಿತಾದ ಕಾರಣ ಎಲ್ಲವನ್ನೂ ಅಧ್ಯಯನ ಮಾಡಿ ವಿಚಾರಮಥನ ಮಾಡಲು ಹುಟ್ಟಿಕೊಂಡ ಸಂಸ್ಥೆಗಳಿವು. ಮುಖ್ಯವಾಗಿ ಮದೀನ, ಮೆಕ್ಕ, ಕಫಾ, ಬಸ್ರಾ, ದಮಾಸ್ಕಸ್, ಈಜಿಪ್ಟ್ ಮತ್ತು ಯೆಮೆನ್‍ಗಳಲ್ಲಿ ಇಂಥ ಪ್ರಸಿದ್ಧ ಕೇಂದ್ರಗಳಿದ್ದುವು. ಈ ಕೇಂದ್ರಗಳಲ್ಲಿ ಅಂದು ಪ್ರಸಿದ್ಧರಾಗಿದ್ದ ವಿದ್ವಾಂಸರ ಹೆಸರುಗಳನ್ನಿಲ್ಲಿ ನಿರೂಪಿಸಿದೆ.

ಅಬ್ದುಲ್ಲ

ಬದಲಾಯಿಸಿ

ಮದೀನದಲ್ಲಿ ವಿಖ್ಯಾತನಾದ ಎರಡನೆಯ ಕಲೀಫನ ಮಗ ಅಬ್ದುಲ್ಲ ತನ್ನ ಭಕ್ತಿ, ಏಕಾಂತಜೀವನಗಳಿಂದಾಗಿ ಪ್ರಸಿದ್ಧನಾಗಿದ್ದ. ಮುಸ್ಸ್ಯಾಬನ ಮಗ ಸಯೀದ್, ಜóುಬೇರನ ಮಗ ಉರ್ವಾ, ಅಬ್ದುರ್-ರಹಮಾನನ ಮಗ ಅಬು ಬಕರ್, ಹುಸೇನನ ಮಗ ಆಲಿ, ಪ್ರವಾದಿಯ ಮರಿಮಗ ಹುಸೇನ್, ಅಬ್ದುಲ್ಲನ ಮಗ ಉಬೈದುಲ್ಲ, ಉಮರನ ಮಗ ಅಬ್ದುಲ್ಲನ ಮಗನಾದ ಸಾಲಿಂ, ಅಬು ಬಕರನ ಮಗ ಮಹಮ್ಮದನ ಮಗನಾದ ಖಾಸಿಂ. ನಫೆ ಎಂಬ ಇರಾನೀ-ಇವರೆಲ್ಲ ಈ ಕೇಂದ್ರದ ಪ್ರಮುಖರು.ಮೆಕ್ಕದಲ್ಲಿ ಅಬ್ಬಾಸನ ಮಗ ಅಬ್ದುಲ್ಲ, ಜóುಬೇರನ ಮಗ ಮುಜಹದ್, ಅಬಿರಬ್ಬಹ್‍ನ ಮಗ ಅತಾ ಇಕ್ರಮ ಮತ್ತು ಅಬು ಜóುಬೇರ್ ಮಹಮ್ಮದ್-ಇವರು ಮುಖ್ಯರು. ಇವರಲ್ಲಿ ಕೊನೆಯ ನಾಲ್ವರು ಅರಬ್ಬರಲ್ಲ. ಕಾಫಾದಲ್ಲಿ ಕಾಯಿಸನ ಮಗ ಅಲ್ಕಮ, ಅಜ್ಜನ ಮಗ ಮಸ್ತಕ್, ಅಮ್ರನ ಮಗ ಉಬೈದ, ಹನಿಯ ಮಗ ಷುರಿಹ್ (ಪ್ರಾಚೀನ ಧರ್ಮಶಾಸ್ತ್ರಜ್ಞರ ವರ್ಗಕ್ಕೆ ಸೇರಿದವ ಮತ್ತು ಸುಮಾರು ಅರವತ್ತು ವರ್ಷಗಳವರೆಗೆ ನ್ಯಾಯಾಧೀಶನಾಗಿ ಉಳಿದವ), ಮತ್ತು ಜóುಬೇರನ ಮಗ ಸಯಿದ್ (ಅರಬ್ಬನಲ್ಲ)-ಇವರು ಹೆಸರಾಗಿದ್ದರು.ಬಾಸ್ರಾದಲ್ಲಿ ಮಲಿಕ್‍ನ ಮಗ ಅನಸ್, ಮೆಹ್ರನ್ನನ ಮಗ ಅಬುಲ್ ಉರುಫ್ ರಫಿ (ಇರಾನಿ); ಯಾಸರ್‍ನ ಮಗ ಹಸನ್, ಸಿರೀನನ ಮಗ ಮಹಮ್ಮದ್ ಮತ್ತು ಕತಾದಾ-ಇವರು ಉಲ್ಲೇಖಾರ್ಹರು.ಡಮಾಸ್ಕಸ್‍ನಲ್ಲಿ ಘನೇಮನ ಮಗ ಅಬ್ದುರ್-ರಹಮಾನ್, ಅಬು ಇದ್ರಿಸ್ ಉಲ್-ಖುಲಮಿ, ಜóುವೇವಲನ ಮಗ ಕಬೀಸಾ ಮತ್ತು ಅಬ್ದುಲ್ ಅಜಿûೀಜûನ ಮಗ ಉಮರ್-ಇವರು ಗಣ್ಯರು.ಈಜಿಪ್ಟಿನಲ್ಲಿ ಆಸ್‍ನ ಮಗನಾದ ಉಮ್ರರನ ಮಗ ಅಬ್ದುಲ್ಲ, ಅಬ್ದುಲ್ಲನ ಮಗ ಮುರ್ಷದ್ ಮತ್ತು ಅಬಿ ಹಬೀಬನ ಮಗ ಯಜಿûೀದ್ (ಅರಬನಲ್ಲ)-ಇವರು ಮುಖ್ಯರು.ಯೆಮೆನಿನಲ್ಲಿ ಕೈಸನ್ನನ ಮಗ ತಾವೂಸ್ (ಅರಬ್ಬನಲ್ಲಿ), ಮುನಬ್ಬೇಯ ಮಗ ವಹಾಬ್ ಮತ್ತು ಕಥೇರನ ಮಗ ಯಾಹ್ಯ (ಅರಬ್ಬನಲ್ಲ) ಇವರು ಉಲ್ಲೇಖಾರ್ಹರು.[]

ಧರ್ಮಶಾಸ್ತ್ರ ಕೇಂದ್ರಗಳು

ಬದಲಾಯಿಸಿ

ಧರ್ಮಶಾಸ್ತ್ರ ಕೇಂದ್ರಗಳು ನಮಗೆ ಗೊತ್ತಿರುವ ಅತ್ಯಂತ ಪ್ರಾಚೀನ ನ್ಯಾಯಶಾಸ್ತ್ರ ರಚನೆಗೆ ತಮ್ಮ ಕೊಡುಗೆ ಸಲ್ಲಿಸಿದುವು. ಪ್ರತಿಯೊಬ್ಬ ಧರ್ಮಶಾಸ್ತ್ರಜ್ಞನಿಗೂ ಅನೇಕ ಅನುಯಾಯಿಗಳಿದ್ದು, ಅವರು ಪರಂಪರೆಯ ಖಂಡಗಳನ್ನು ಆಯಾ ಬೋಧಕನ ಹೆಸರಿನಲ್ಲಿ ನಿರೂಪಿಸುತ್ತಿದ್ದರು. ಅವರ ಸಂಖ್ಯೆ ಹೆಚ್ಚಿತು. ಆಳುತ್ತಿದ್ದ ಕಲೀಫನಾದ ಉಮ್ರ-ಅಬ್ದುಲ್ ಅಜಿûೀಜûನ ಮಗ-ಬಹಳ ಶ್ರದ್ಧಾಳುವಾಗಿದ್ದು, ಪರಂಪರೆಯ ಉಪಲಬ್ಧ ಖಂಡಗಳ ಸಂಗ್ರಹ ಸಂಕಲನಗಳಿಗೆ ಆಜ್ಞೆ ಹೊರಡಿಸಿದ. ಆ ಕೆಲಸವನ್ನು ಮಹಮ್ಮದನ ಮಗ ಅಬು ಬಕರ್ (ಹಿಜಿರ 170) ಮಾಡಿದ.[]

ಉಮಾಯದ್ ಅವಧಿಯ ಅಂತ್ಯ

ಬದಲಾಯಿಸಿ

ಉಮಾಯದ್ ಅವಧಿಯ ಅಂತ್ಯದ ಹೊತ್ತಿಗೆ ಪರಂಪರೆಯ ವಿಷಯದ ಬಗ್ಗೆ ಮತ್ತು ಪ್ರವಾದಿಯ ಒಂದು ಜೀವನ ಚರಿತ್ರೆಯ ಬಗ್ಗೆ ಮಹಾ ಧರ್ಮಶಾಸ್ತ್ರಜ್ಞರಿಂದ ಸಾಕಷ್ಟು ಸಾಮಗ್ರಿ ಸಂಗ್ರಹಗೊಂಡಿತ್ತು. ಇವರು ಮುಸ್ಲಿಂ ಕಾನೂನು ಹಾಗೂ ನ್ಯಾಯಶಾಸ್ತ್ರದ ಸ್ಥಾಪಕರಾಗಿ ಪರಿಣಮಿಸಿದರು. ಈ ವಿಷಯಗಳ ಬಗ್ಗೆ ಅತ್ಯುನ್ನತ ಪ್ರಮಾಣಗಳೆಂದೂ ಇಂದಿಗೂ ಇವರು ಜಗತ್ತಿನಾದ್ಯಂತ ಪರಿಗಣಿತರಾಗಿದ್ದಾರೆ. ಅಲ್ಲದೆ, ಸಂಪ್ರದಾಯವಾದಿಗಳು ಮತ್ತು ಧರ್ಮಶಾಸ್ತ್ರಜ್ಞರೂ, ಕುರಾನಿನ ವಾಚಕರೂ (ಅವರಿಗೆ ಕರಿ ಎಂದು ಹೆಸರು) ತಾವೇ ಒಂದು ಪ್ರತ್ಯೇಕ ಸಂಸ್ಥೆಯಾಗಿ ರೂಪುಗೊಂಡರು. ಇವರು ಕುರಾನಿನ ಇಲ್ಮೆ-ತಜ್‍ವಿದ್ ವಾಚನದಲ್ಲಿ ತಜ್ಞತೆ ಪಡೆದುಕೊಂಡರು. ಅನಂತರ ಅದು ಇಲ್ಮೆ-ತಜ್‍ವಿದ್ ಎಂಬ ಸ್ವತಂತ್ರ ಶಾಸ್ತ್ರವಾಗಿ ಪರಿಣಮಿಸಿತು. ಏಳು ಮಂದಿ ಕರಿಗಳು ಆಥವಾ ವಾಚಕರು ಇದ್ದರು. ಇವರನ್ನು ಪವಿತ್ರಗ್ರಂಥ ವಾಚನದ ಕಲೆಯಲ್ಲಿ ನಿಷ್ಣಾತರೆಂದು ಪರಿಗಣಿಸಲಾಗಿದೆ; ಮತ್ತು ಇವರ ವಾಚನ ವಿಧಾನವನ್ನು ಇಸ್ಲಾಮೀ ಜಗತ್ತಿನಲ್ಲೆಲ್ಲ ವಾಚಕರು ಅನುಸರಿಸುತ್ತ ಬಂದಿದ್ದಾರೆ.1 ಅಬ್ದುಲ್ಲ - ಕಾಥಿರನ ಮಗ, ಮೆಕ್ಕದ ಒಬ್ಬ ಇರಾನೀ; 2 ಅಬು ಉಮ್ರ್-ಇರಾನಿನ ಕeóÉೀರನಿನ ಅಲ್ ಉಲ್‍ನ ಮಗ; 3 ಅಬ್ದುಲ್ಲ-ಅಮೀರನ ಮಗ; 4 ಅಬು ಬಕರ್ ಅಸೆಮ್-ಅಬಿನ್-ನುಜದ್‍ನ ಮಗ; 5 ಹಂಜû-ಹಬೀಬನ ಮಗ; 6 ನಫೆ-ಅರಬ್ಬನಲ್ಲದ ಆಲಿ ನಯಿಮ್‍ನ ಮಗ; 7 ಆಲಿ-ಇರಾನಿನ ಹಂಜû ಕಿಸಾಯಿಯ ಮಗ-ಇವರು ಕುರಾನ್ ವಾಚನ ಕಲೆಯಲ್ಲಿ ಸುಪ್ರಸಿದ್ಧರೆಂದು ಖ್ಯಾತರಾಗಿದ್ದಾರೆ.

ಉಲ್ಲೇಖಗಳು

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2016-04-09. Retrieved 2016-10-24.
  2. http://sanmarga.com/2015/12/%E0%B2%AC%E0%B2%A6%E0%B2%B2%E0%B2%BE%E0%B2%97%E0%B3%81%E0%B2%A4%E0%B3%8D%E0%B2%A4%E0%B2%BF%E0%B2%B0%E0%B3%81%E0%B2%B5-%E0%B2%9C%E0%B2%BE%E0%B2%97%E0%B2%A4%E0%B2%BF%E0%B2%95-%E0%B2%A6%E0%B3%83%E0%B2%B6/#.WA2q8_l97IU