ಇಸ್ಲಾಮಿಕ್ ಬ್ಯಾಂಕಿಂಗ್
ಪರಿಚಯ
ಬದಲಾಯಿಸಿಇಸ್ಲಾಮಿಕ್ ಬ್ಯಾಂಕಿಂಗ್ ಎನ್ನುವುದು ಇಸ್ಲಾಮಿಕ್ ಕಾನೂನು ತತ್ವವನ್ನು ಆಧರಿಸಿರುವ ಶರಿಯಾ ಕಾನೂನು ಒಳಗೊಂಡಿರುವ ಒಂದು ಬ್ಯಾಂಕಿಂಗ್ ವ್ಯವಸ್ಥೆಯಾಗಿದೆ.[೧] ಇಸ್ಲಾಮಿಕ್ ಬ್ಯಾಂಕಿನ ಹಣಕಾಸಿನ ವಹಿವಾಟುಗಳು ಸಾಂಪ್ರದಾಯಿಕವಾಗಿ ವಿಭಿನ್ನವಾಗಿದೆ. ಈ ಬ್ಯಾಂಕಿಂಗ್ ವ್ಯವಸ್ಥೆಯ ತತ್ವಗಳು ಕುರಾನ್‌ನ ಮೇಲೆ ಆಧಾರಿತವಾಗಿದೆ. ಇಸ್ಲಾಮಿಕ್ ಬ್ಯಾಂಕಿನ ಮೂಲವು ೭ನೇ ಶತಮಾನದಷ್ಟು ಹಿಂದಿನದ್ದು, ಇಸ್ಲಾಮಿಕ್ ಹಣಕಾಸು ವ್ಯವಸ್ಥೆಯು ಬಡ್ಡಿ ವಿಧಿಸದೆ ಇರುವ ತತ್ವಗಳ ಮೇಲೆ ಕಾರ್ಯನಿರ್ವಹಿಸುತ್ತದೆ. ಇದರ ಅನ್ವಯ ಹರಾಮ್ ಎಂದು ಪರಿಗಣಿಸಲ್ಪಡುವ ಯಾವುದೇ ವ್ಯವಹಾರದಲ್ಲಿ ಹೂಡಿಕೆಯನ್ನು ನಿಷೇಧಿಸಲಾಗಿರುತ್ತದೆ. ಬ್ಯಾಂಕುಗಳು ಸಂಗ್ರಹಿಸುವ ಹಣವನ್ನು ಶರಿಯಾ ಕಾನೂನಿಗೆ ಅನುಗುಣವಾಗಿ ಹೂಡಿಕೆ ಅಥವಾ ಬಳಕೆ ಮಾಡಲಾಗುತ್ತದೆ. [೨]
ಭಾರತದಲ್ಲಿ ಇಸ್ಲಾಮಿಕ್ ಬ್ಯಾಂಕಿಂಗ್
ಬದಲಾಯಿಸಿಇಸ್ಲಾಮಿಕ್ ಬ್ಯಾಂಕಿಂಗ್ ಪರಿಕಲ್ಪನೆಯು ಪರಿಶುದ್ದ ಬ್ಯಾಂಕಿಂಗ್ ವ್ಯವಸ್ಥೆಯ ಹಾಗೂ ಆಧುನಿಕ ಬ್ಯಾಂಕಿನ ವ್ಯವಸ್ಥೆಯ ಪರಿಕಲ್ಪನೆಯುಳ್ಳ ಇಬ್ಬರಿಂದಲೂ ಟೀಕೆಗೊಳಗಾಯಿತು. ಇಸ್ಲಾಮಿಕ್ ಬ್ಯಾಂಕಿಂಗ್ ಮತ್ತು ಸಾಂಪ್ರಾದಾಯಿಕ ಬ್ಯಾಂಕಿಂಗ್ ವಿವಿಧ ಪರಿಭಾಷೆಯಲ್ಲಿ ಒಂದೇ ಉದ್ದೇಶವನ್ನು ಹೊಂದಿದೆ. ಸಾಕಷ್ಟು ಇಸ್ಲಾಮಿಕ್ ಅಲ್ಲದ ದೇಶಗಳಾದ ಜರ್ಮನಿ, ಯು.ಎಸ್.ಎ, ಯು.ಕೆ, ಹೀಗೆ ಮುಂತಾದ ದೇಶಗಳು ಇಸ್ಲಾಮಿಕ್ ಬ್ಯಾಂಕಿನ ಸೇವೆಯನ್ನು ಒದಗಿಸುತ್ತಿದೆ. ಇದನ್ನು ಬ್ಯಾಂಕಿನ ವ್ಯವಸ್ಥೆಯಲ್ಲಿ ಇಸ್ಲಾಮಿಕ್ ವಿಂಡೋ ಎನ್ನುತ್ತಾರೆ.
೨೦೦೮ ರಲ್ಲಿ ರಘುರಾಮ ರಾಜನ್ (ರಿಸರ್ವ್ ಬ್ಯಾಂಕ್ ಗವರ್ನರ್) ರವರು ಭಾರತದಲ್ಲಿ ಇಸ್ಲಾಮಿಕ್ ಬ್ಯಾಂಕಿಂಗ್ ಪರಿಚಯವನ್ನು ನೀಡಿದರು. ದೊಡ್ಡ ಮಟ್ಟದಲ್ಲಿ ಬಡ್ಡಿ ರಹಿತ ಬ್ಯಾಂಕಿಂಗ್ ವಿಧಾನವನ್ನು ಅನುಸರಿಸಿ, ಯಾರು ಬ್ಯಾಂಕಿಂಗ್ ವ್ಯವಸ್ಥೆಯಿಂದ ವಂಚಿತರಾಗಿದ್ದಾರೋ ಅವರಿಗೆ ಬ್ಯಾಂಕಿಂಗ್ ವ್ಯವಸ್ಥೆ ಹಾಗೂ ಸೌಲಭ್ಯ ಎಟಕುವ ರೀತಿಯಲ್ಲಿ ಬ್ಯಾಂಕಿಂಗ್ ಕಾರ್ಯಗಳನ್ನು ನಿರ್ವಹಿಸುವ ಕುರಿತಾದ ಶಿಫಾರಸ್ಸುಗಳನ್ನು ಮಾಡಿದರು. ಆದರೆ, ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ ವತಿಯಿಂದ ಇಸ್ಲಾಮಿಕ್ ವಿಂಡೋ (ವ್ಯವಸ್ಥೆ) ತೆರೆಯುವ ಕುರಿತಾದ ಪ್ರಸ್ತಾವನೆಗೆ ವಿವಿಧ ವಲಯಗಳಿಂದ ಮಿಶ್ರ ಪ್ರತಿಕ್ರಿಯೆ ಸ್ವೀಕೃತವಾದ ಹಿನ್ನೆಲೆಯಲ್ಲಿ ಭಾರತದಲ್ಲಿ ಇಸ್ಲಾಮಿಕ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಪರಿಚಯಿಸುವ ಪ್ರಸ್ತಾವನೆಯನ್ನು ಮುಂದುವರಿಸಬಾರದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತೀರ್ಮಾನಿಸಿದೆ.
ಆರ್‌ಬಿಐ ನೀತಿಗಳು
ಬದಲಾಯಿಸಿಭಾರತದಲ್ಲಿ ಇಸ್ಲಾಮಿಕ್ ಬ್ಯಾಂಕಿಂಗ್ ಪ್ರಾರಂಭಿಸುವುದಕ್ಕೆ ಸಂಬಂಧಿಸಿದ ಪ್ರಸ್ತಾವನೆಯೊಂದಿಗೆ ಮುಂದುವರೆಯುವುದಿಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಪಷ್ಟಪಡಿಸಿದೆ. ಆರ್‌ಟಿಐ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ಆರ್‌ಬಿಐ, ಇಸ್ಲಾಮಿಕ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಜಾರಿಗೆ ತರುವುದರ ಬಗ್ಗೆ ಆರ್‌ಬಿಐ ಹಾಗೂ ಭಾರತ ಸರ್ಕಾರ ಪರಿಶೀಲನೆ ನಡೆಸಿದೆ. ಆದರೆ ಈಗಾಗಲೇ ಇರುವ ಬ್ಯಾಂಕಿಂಗ್ ವ್ಯವಸ್ಥೆ ಹಾಗೂ ಆರ್ಥಿಕ ಸೇವೆಗಳು ಎಲ್ಲಾ ನಾಗರಿಕರಿಗೂ ಲಭ್ಯವಿದ್ದು, ಇಸ್ಲಾಮಿಕ್ ಬ್ಯಾಂಕಿಂಗ್ ಪ್ರಾರಂಭಿಸುವ ಪ್ರಸ್ತಾವನೆಯೊಂದಿಗೆ ಮುಂದುವರೆಯದಿರಲು ನಿರ್ಧರಿಸಲಾಗಿದೆ ಎಂದು ಸೆಂಟ್ರಲ್ ಬ್ಯಾಂಕ್ ತಿಳಿಸಿದೆ.[೩]
ಉಲ್ಲೇಖಗಳು
ಬದಲಾಯಿಸಿ- ↑ Farooq, Muhammad Omar (November 2005). "The Riba-Interest Equation and Islam: Reexamination of the Traditional Arguments" (Draft). Archived from the original on 24 September 2015. Retrieved 11 August 2015.
- ↑ "ಆರ್ಕೈವ್ ನಕಲು". Archived from the original on 2016-07-22. Retrieved 2018-02-08.
- ↑ https://timesofindia.indiatimes.com/business/india-business/not-to-pursue-islamic-banking-in-india-says-rbi/articleshow/61614253.cms