ಇಶಾನ್ ಖಟ್ಟರ್ (ಜನನ ೧ ನವೆಂಬರ್ ೧೯೯೫) ಒಬ್ಬ ಭಾರತೀಯ ನಟ. ನಟ ರಾಜೇಶ್ ಖಟ್ಟರ್ ಮತ್ತು ನೀಲಿಮಾ ಅಜೀಮ್ ಅವರ ಪುತ್ರ. ಶಾಹಿದ್ ಕಪೂರ್ ಇವನ ಸಹೋದರ. ಇಶಾನ್ ಖಟ್ಟರ್ ಅವರು ೨೦೦೫ ರಲ್ಲಿ ಚಿತ್ರ ವಾಹ್!ಲೈಫ್ ಹೋ ತೊ ಐಸಿ![] ಎಂಬ ಚಿತ್ರದ ಮೂಲಕ ಮೊದಲ ಬಾರಿಗೆ ಚಿತ್ರರಂಗದಲ್ಲಿ ಕಾಣಿಸಿಕೊಂಡರು. ೨೦೧೭ರಲ್ಲಿ ಮಜೀದ್ ಮಜೀಡಿ ಅವರ ನಾಟಕವಾದ ಬಿಯಾಂಡ್ ದಿ ಕ್ಲೌಡ್ಸ್ ನಲ್ಲಿ ಡ್ರಗ್ ವ್ಯಾಪಾರಿಯಾಗಿ ಪಾತ್ರ ವಹಿಸಿದರು. ೨೦೧೮ರಲ್ಲಿ ಧಡಕ್ ಎಂಬ ಚಿತ್ರದಲ್ಲಿ ಜಾನ್ವಿ ಕಪೂರ್ ಜೊತೆ ನಟಿಸಿದರು.

ಇಶಾನ್ ಖಟ್ಟರ್
Khatter at an event for ಧಡಕ್ in ೨೦೧೮
Born (1995-11-01) ೧ ನವೆಂಬರ್ ೧೯೯೫ (ವಯಸ್ಸು ೨೯)
ಮುಂಬೈ, ಮಹಾರಾಷ್ಟ್ರ, ಭಾರತ
Occupationಚಿತ್ರನಟ
Years active೨೦೧೭–present
Parent(s)ರಾಜೇಶ್ ಖಟ್ಟರ್
ನೀಲಿಮ ಅಜೀಮ್
Relativesಶಾಹಿದ್ ಕಪೂರ್ (brother)

ಬಾಲ್ಯ ಜೀವನ

ಬದಲಾಯಿಸಿ

ಖಟ್ಟರ್ ಬಾಲಿವುಡ್ ನಟರಾದ ನೀಲಿಮಾ ಅಝೀಮ್ ಮತ್ತು ರಾಜೇಶ್ ಖಟ್ಟರ್ ಅವರ ಮಗ.[] ಅವನ ಸಹೋದರ ಶಾಹಿದ್ ಕಪೂರ್.[] ಸಂಸ್ಕೃತಿ, ಸಿನೆಮಾ ಮತ್ತು ಪ್ರದರ್ಶನ ಕಲೆಗಳಲ್ಲಿ ಶ್ರೀಮಂತವಾದ ಮನೆಯಲ್ಲಿ ಬೆಳೆದಿದ್ದಾನೆ. ಖಟ್ಟರ್ ಅವರು ಜಮ್ನಾಬಾಯಿ ನರ್ಸೀ ಶಾಲೆ ಮತ್ತು ಮುಂಬೈಯ ಜುಹುದಲ್ಲಿನ ಬಿಲ್ಲಬೊಂಗ್ ಹೈ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ ವಿದ್ಯಾಭ್ಯಾಸ ಮಾಡಿದರು. []ಅವರು ಶಿಯಾಕ್ ದಾವಾರ್ ಅವರ ಅಕಾಡೆಮಿಯಲ್ಲಿ ನೃತ್ಯವನ್ನು ಅಧ್ಯಯನ ಮಾಡಿದ್ದಾರೆ.[][]

೨೦೦೫ ರ ಚಿತ್ರವಾದ ವಾಹ್!ಲೈಫ್ ಹೋ ತೋ ಐಸಿ ! ಚಿತ್ರದಲ್ಲಿ ಮಗುವಿನ ಪಾತ್ರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡನು. ೨೦೧೨ ರಲ್ಲಿ ಖಟ್ಟರ್ ತನ್ನ ಚಿತ್ರ ಉಡ್ತಾ ಪಂಜಾಬ್ ಅಭಿಷೇಕ್ ಚೌಬೆ ಅವರಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು ಮತ್ತು ೨೦೧೭ರಲ್ಲಿ ಸ್ವತಂತ್ರ ಚಿತ್ರ ಹಾಫ್ ವಿಡೋವ್ ಡ್ಯಾನಿಶ್ ರೆನ್ಜು. ೨೦೧೭ರಲ್ಲಿ ಮಜೀದ್ ಮಜೀಡಿ ಅವರ ನಾಟಕವಾದ ಬಿಯಾಂಡ್ ದಿ ಕ್ಲೌಡ್ಸ್ ನಲ್ಲಿ ಡ್ರಗ್ ವ್ಯಾಪಾರಿಯಾಗಿ ಪಾತ್ರವಹಿಸಿದರು. ಇದು ಬಿಎಫ್ಐ ಲಂಡನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಪ್ರಥಮ ಪ್ರದರ್ಶನ ನೀಡಿ ೨೦೧೮ ರಲ್ಲಿ ನಾಟಕೀಯ ರೂಪದಲ್ಲಿ ಬಿಡುಗಡೆಯಾಯಿತು.[] ೫ ನೇಯ ಅಂತರಾಷ್ಟ್ರೀಯ ಬೊಸ್ಪೊರಸ್ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಮತ್ತು ಫಿಲ್ಮ್ಫೇರ್ ಅತ್ಯುತ್ತಮ ಪುರುಷ ನಟ ಪ್ರಶಸ್ತಿಯನ್ನು ಗೆದ್ದರು. [] ೨೦೧೮ರಲ್ಲಿ ಧಡಕ್ ಎಂಬ ಚಿತ್ರದಲ್ಲಿ ಜಾನ್ವಿ ಕಪೂರ್ ಜೊತೆ ನಟಿಸಿದರು.[] ಇದು ಗ್ರಾಮೀಣ ರಾಜಸ್ಥಾನದ ಇಬ್ಬರು ಯುವ ಪ್ರೇಮಿಗಳ ಕಥೆಯನ್ನು ಹೇಳುತ್ತದೆ. ಅವರು ಜಾತಿ ತಾರತಮ್ಯದಿಂದಾಗಿ ಅವರ ಸಂಬಂಧದ ರಾಜಕೀಯ ವಿರೋಧವನ್ನು ಎದುರಿಸುವ ಬಗ್ಗೆ ಈ ಚಿತ್ರದಲ್ಲಿ ಚಿತ್ರಿತವಾಗಿದೆ. ಧಡಕ್ ಚಿತ್ರವು ವಿಶ್ವದಾದ್ಯಂತ ₹ ೧.೧ ಶತಕೋಟಿಯಷ್ಟು (US $ 16 ಮಿಲಿಯನ್) ಗಳಷ್ಟು ಆದಾಯ ಗಳಿಸಿ, ವಾಣಿಜ್ಯ ಯಶಸ್ಸು ಗಳಿಸಿತು.[೧೦][೧೧]

ಫಿಲ್ಮೋಗ್ರಾಫಿ

ಬದಲಾಯಿಸಿ
Year Film Role Notes
೨೦೦೫ ವಾಹ್!ಲೈಫ್ ಹೋ ತೊ ಐಸಿ! ಇಶಾನ್
೨೦೧೬ ಉಡ್ತಾ ಪಂಜಾಬ್ ಹೆಸರಿಸದ Cameo; also assistant director[೧೨]
೨೦೧೭ ಹಾಫ್ ವಿಡೋವ್ Assistant director[೧೩]
ಬಿಯಾಂಡ್ ದಿ ಕ್ಲೌಡ್ಸ್ (೨೦೧೭ ಚಲನಚಿತ್ರ) | ಬಿಯಾಂಡ್ ದಿ ಕ್ಲೌಡ್ಸ್ ಅಮಿರ್
೨೦೧೮ ಧಡಕ್ ಮಧುಕರ್ ಬಾಗ್ಲ

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು

ಬದಲಾಯಿಸಿ
Year Award Category Film Result Ref.
೨೦೧೭ ಇಂಟರ್ನ್ಯಾಷನಲ್ ಬೊಸ್ಪೊರಸ್ ಫಿಲ್ಮ್ ಫೆಸ್ಟಿವಲ್. ಅತ್ಯುತ್ತಮ ನಟ ಬಿಯಾಂಡ್ ದಿ ಕ್ಲೌಡ್ಸ್ ಗೆಲುವು
೨೦೧೮ ಸ್ಕ್ರೀನ್ ಪ್ರಶಸ್ತಿಗಳು ಅತ್ಯುತ್ತಮ ಪುರುಷ ನಟ ಬಿಯಾಂಡ್ ದಿ ಕ್ಲೌಡ್ಸ್ ಗೆಲುವು
2019 ಝಿe ಸಿನೆ ಅವಾರ್ಡ್ ಅತ್ಯುತ್ತಮ ಪುರುಷ ನಟ ಬಿಯಾಂಡ್ ದಿ ಕ್ಲೌಡ್ಸ್ ಗೆಲುವು
ಫಿಲ್ಮ್ಫೇರ್ ಪ್ರಶಸ್ತಿ ಅತ್ಯುತ್ತಮ ಪುರುಷ ನಟ ಬಿಯಾಂಡ್ ದಿ ಕ್ಲೌಡ್ಸ್ ಗೆಲುವು

ಉಲ್ಲೇಖಗಳು

ಬದಲಾಯಿಸಿ
  1. ://www.hindustantimes.com/bollywood/dhadak-karan-johar-shares-poster-for-jhanvi-kapoor-ishaan-khattar-s-bollywood-debut/story-OHmGQl3NNbyyJ0fWUIidoN.html
  2. www.india.com/showbiz/rajesh-khattar-reacts-to-nepotism-allegations-on-son-ishaan-khattar-in-dhadak-2649278/
  3. https://www.hindustantimes.com/bollywood/ishan-khattar-dances-just-like-big-brother-shahid-kapoor-in-video-check-it-out/story-qE6LwbQkEoiTTemDHu8ZTP.html
  4. ://www.huffingtonpost.in/2018/04/07/ishaan-khatter-on-privilege-peculiar-family-dynamics-and-the-quest-for-acting-glory_a_23404819/
  5. ://www.hindustantimes.com/bollywood/ishan-khattar-dances-just-like-big-brother-shahid-kapoor-in-video-check-it-out/story-qE6LwbQkEoiTTemDHu8ZTP.html
  6. https://www.indiatvnews.com/entertainment/bollywood-shiamak-davar-proud-of-dhadak-star-ishaan-khattar-450997
  7. https://www.screendaily.com/reviews/beyond-the-clouds-london-review/5123286.article
  8. https://m.filmfare.com/news/bollywood/all-winners-of-the-64th-vimal-filmfare-awards-2019_-33004-3.html
  9. https://indianexpress.com/article/entertainment/bollywood/karan-johar-sairat-remake-starring-janhvi-kapoor-and-ishaan-khatter-dhadak-first-look-see-photo-4938670/
  10. https://boxofficeindia.com/report-details.php?articleid=4133
  11. ://www.bollywoodhungama.com/news/box-office-special-features/box-office-worldwide-collections-day-wise-breakup-dhadak/
  12. "Photos: Ishaan Khattar On The Set Of Udta Punjab". Business of Cinema. 18 ಜೂನ್ 2016. Archived from the original on 14 ಜೂನ್ 2018. Retrieved 14 ಜೂನ್ 2018. {{cite web}}: Unknown parameter |dead-url= ignored (help)
  13. Dedhia, Sonal (8 ಏಪ್ರಿಲ್ 2018). "Ishaan Khatter: Not Dyslexic, But Often Felt Like Ishaan From Taare Zameen Par". Mid Day. Archived from the original on 14 ಜೂನ್ 2018. Retrieved 14 ಜೂನ್ 2018. {{cite news}}: Unknown parameter |dead-url= ignored (help)