ಇರಿಟೆಬಲ್ ಬೊವೆಲ್ ಸಿಂಡ್ರೊಮ್

ಆರೋಗ್ಯ

ಬದಲಾಯಿಸಿ

ಇರಿಟೆಬಲ್ ಬೊವೆಲ್ ಸಿಂಡ್ರೊಮ್ ಅಂದರೆ ಆಗಾಗ್ಗೆ ಮಲವಿಸರ್ಜನೆಗೆ ಹೋಗುವಂತೆ ಆಗುವ ಅಸ್ವಸ್ಥತೆ. ಇದರಿಂದ ಬಳಲುವವರಿಗೆ ಹೊಟ್ಟೆನೋವು ಮತ್ತೆ ಪದೆ ಪದೆ ಮಲವಿಸರ್ಜನೆಗೆ ಹೋಗಬೇಕೆಂದಾಗಿ ಮಲವಿಸರ್ಜನೆಗೆ ಹೋಗುವುದು ಮತ್ತೆ ಹೊಟ್ಟೆ ಹಗುರಾದಂತೆನಿಸುವುದು. ಈ ಅಸ್ವಸ್ಥತೆಯು ಜಗತ್ತಿನ ಸುಮಾರು ೧೦% ಜನರನ್ನು ಬಾಧಿಸುತ್ತಿದೆ. ಅಂದರೆ ಸುಮಾರು ಒಂದು ಬಿಲಿಯನ್ ಜನರು ಈ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಹಲವರಿಗೆ ಇದರ ಬಗ್ಗೆ ಕಾಳಜಿ ವಹಿಸಲು ಸಾಧ್ಯವಿಲ್ಲ. ಇನ್ನು ಕೆಲವರು ಆ ಬಗ್ಗೆ ಕಾಳಜಿ ಹೊಂದಿರುವುದಿಲ್ಲ ಈಗಾಗಲೆ ಸಂಗ್ರಹಿಸಿದ ಲೆಕ್ಕದ ಪ್ರಕಾರ ಡಾಕ್ಟರರಲ್ಲಿ ಸಲಹೆ ಪಡೆಯಲು ಹೋದವರಿಗೂ ಮತ್ತು ಡಾಕ್ಟರರಲ್ಲಿ ಕನ್ಸಲ್ಟೇಶನ್ಗೆ ಹೋಗದವರ ನಡುವಿನ ಅಂತರ ತುಂಬ ಕಡಿಮೆಯಿದೆ. ರೋಗವಾಗಿ ಐಬಿಎಸ್ ನಿಜವಾದ ಅಳತೆ ಅಸ್ತಿತ್ವದಲ್ಲಿ ಇಲ್ಲ. ಅಸ್ವಸ್ಥತೆಯ ತೀವ್ರತೆಯು ವ್ಯಕ್ತಿಯು ತನ್ನ ಬಾಲ್ಯ ಕಾಲದಲ್ಲಿ ಏನನ್ನು ಕಲಿಯುತ್ತಾನೆ ಮತ್ತು ಅನುಭವಿಸುತ್ತಾನೆ ಇದರಿಂದ ಮತ್ತು ಅವನ ವ್ಯಕ್ತಿತ್ವದಿಂದ, ಅವನ ಮಾನಸಿಕ ಮತ್ತು ಮನೋವೈದ್ಯಕೀಯ ಪರಿಸ್ಥಿತಿಗಳಿಂದ ಪ್ರಭಾವಿತಗೊಂಡಿರುತ್ತದೆ. ವೈದ್ಯರ ಗುರಿಯು ರೋಗಿಯ ಖರ್ಚನ್ನು ಕಡಿಮೆ ಮಾಡುವುದಾದರೆ ಆಗ ಇದಕ್ಕೆ ಸಂಬಂಧಪಟ್ಟಿರುವ ವಿಷಯಗಳನ್ನು ಅರ್ಥಮಾಡಿಕೊಳ್ಳುವ ಮತ್ತು ನಿವಾವರಣೋಪಾಯಗಳನ್ನು ಕಂಡು ಹಿಡಿಯಬೇಕಿದೆ. ರೋಗಿಯ ಕುರಿತಾಗಿ ಕಾಳಜಿಯನ್ನು ಉತ್ತಮವಾಗಿಸಲು ಬಯಸುವುದಾದರೆ ವೈದ್ಯರು ಪರಿಣಾಮಕಾರಿಯಾಗಿ ಈ ವಿಷಯಗಳ ಕುರಿತು ಕ್ರಮ ಕೈಕೊಳ್ಳಬೇಕು.

ಐಬಿಎಸ್ ನ ಗುಣ ಲಕ್ಷಣಗಳು

ಬದಲಾಯಿಸಿ

ಮಲವಿಸರ್ಜನೆಯಾದ ನಂತರ ಹೊಟ್ಟೆನೋವು ನೀಗುವಿಕೆ, ನೋವು ಬಿರುಸಾಗಿ ಪ್ರಾರಂಭದೊಂದಿಗೆ ಲೂಸ್ ಮಲವಿಸರ್ಜನೆ, ನೋವಿನ ಪ್ರಾರಂಭದೊಂದಿಗೆ ಆಗಾಗ್ಗೆ ಮಲವಿಸರ್ಜನೆ, ಹೊಟ್ಟೆಯ ಉಬ್ಬರ, ಸಿಂಬಳ ಗುದನಾಳ, ಖಾಲಿಯಾದ ಮೇಲೂ ಪೂರ್ಣವಾಗದ ಭಾವನೆ, ಹೊಟ್ಟೆ ನೋವು, ಜಠರದಲ್ಲಿ ವಾಯು ಸೇರಿದ ಸ್ಥಿತಿ, ಅನಿಯಮಿತವಾದ ಮಲವಿಸರ್ಜನೆ, ಮಲವಿಸರ್ಜನೆ ಆಗಾಗ್ಗೆ ಆಗುವುದು, ಕೆಲವೊಮ್ಮೆ ತುರ್ತಾಗಿ ಮಲವಿಸರ್ಜನೆ ಮಾಡಬೇಕೆಂದಾಗುವುದು ಆಸಹಜ ಮಲವಿಸರ್ಜನೆ, ಮುದ್ದೆಯಾದಂತಹ ಅಥವಾ ಗಟ್ಟಿಯಾದ ಅಥವಾ ನೀರಿನಂತೆ ಮಲವಿಸರ್ಜನೆ, ಜಠರದಲ್ಲಿ ವಾಯು ಸೇರಿದ ಭಾವ, ಮಲವಿಸರ್ಜನೆಯಾದ ನಂತರ ಸಮಾಧಾನ ಅಥವಾ ರಿಲೀಫ್ ಆದಂತೆನಿಸುವುದು.

ಡಾಕ್ಟರರು ಏನು ಮಾಡಬೇಕು?

ಬದಲಾಯಿಸಿ

ಅವರು ಹೇಳುವ ರೋಗ ಲಕ್ಷಣಗಳ ವರ್ಣನೆಯನ್ನು ಪಡೆಯುವುದಕ್ಕಿಂತ ಮೊದಲು ರೋಗಿಗೆ ಯಾವ ಚಿಂತೆಗಳು ಅಥವಾ ಯಾವ ಕಾಳಜಿಗಳು ಕಾಡುತ್ತಿವೆ ಎಂಬುದನ್ನು ಪಡೆಯುವುದು ಮುಖ್ಯವಾಗಿರುತ್ತದೆ. ಐಬಿಎಸ್ ಇದೆ ಎಂದು ಖಚಿತವಾದ ಮೇಲೆ, ರೋಗದ ಬಗ್ಗೆ ಹೊಸ ಬಗೆಯ ಕಾರಣಗಳು ಕಂಡು ಹಿಡಿಯಲಾಗದು. ಡಾಕ್ಟರರು ಹೆಚ್ಚಿನ ರೋಗಿಗಳಲ್ಲಿ ಅವರಲ್ಲಿರುವ ಕೆಲವು ನಿಶ್ಚಿತ ರೋಗ ಲಕ್ಷಣಗಳನ್ನು ಗುರುತಿಸಿ, ಪರೀಕ್ಷೆ ಮಾಡಿ ಮತ್ತು ವೈಯುಕ್ತಿಕ ಟೆಸ್ಟುಗಳನ್ನು ಮಾಡಿ ರೋಗಿಯಲ್ಲಿರುವ ಐಬಿಎಸ್ ನ್ನು ಪತ್ತೆ ಹಚ್ಚುವುದು. ಭೋಜನಾ ನಂತರ ಈ ರೋಗ ಲಕ್ಷಣಗಳು ಐಬಿಎಸ್ ನಲ್ಲಿ ತುಂಬ ಸಲ ಕಂಡು ಬರುವುದು. ಗುದನಾಳದಲ್ಲಿ ರಕ್ತಸ್ರಾವವಾದರೆ ಅದಕ್ಕೆ ವಿಶೇಷ ತನೀಖೆ ಅಥವಾ ಪರೀಕ್ಷೆಯಾಗಬೇಕು. ದೈಹಿಕ ತಪಾಸಣೆ ಗುದನಾಳದ ಪರೀಕ್ಷೆ ಆಗ ಮಾಡಲೇಬೇಕಾಗುತ್ತದೆ. ಮಾನಸಿಕ ಸಮಸ್ಯೆಗಳು ಐಬಿಎಸ್ ಸಾಮಾನ್ಯವಾಗಿ ಒಟ್ಟೊಟ್ಟಿಗೆ ಇರುತ್ತವೆ. ಎಲ್ಲ ಸಮುದಾಯಗಳಲ್ಲಿ ಐಬಿಎಸ್ ಸಾಮಾನ್ಯವಾಗಿ ಕಂಡು ಬರುತ್ತದೆ.ಆದರೆ ಅಲ್ಪ ಸಂಖ್ಯೆಯ ರೋಗಿಗಳು ಮಾತ್ರ ಡಾಕ್ಟರಲ್ಲಿಗೆ ಹೋಗುತ್ತಾರೆ. ಇದಕ್ಕೆ ಕಾರಣವೇನೆಂದರೆ ಗಂಭೀರ ಕಾಯಿಲೆಗಳ ಕುರಿತಾಗಿ ಆತಂಕ, ವಿಶೇಷವಾಗಿ ಕ್ಯಾನ್ಸರಿನ ಕುರಿತಾಗಿ ಆತಂಕ, ಮತ್ತು ರೋಗಿಯ ಮಾನಸಿಕ ಹಿನ್ನೆಲೆಗಳೂ ಇದರಲ್ಲಿ ಒಳಗೊಂಡಿವೆ. ಐಬಿಈಸ್ ನ ಧನಾತ್ಮಕ ಪತ್ತೆಗೆ ಪ್ರಯತ್ನಿಸಬೇಕೆ ವಿನಹ ಉಳಿದ ರೋಗಗಳ ಹೊರತುಪಡಿಸುವ ರೋಗನಿದಾನವಲ್ಲ ಅಥವಾ ಪತ್ತೆ ಹಚ್ಚುವುದಲ್ಲ. ಎಚ್ಚರಿಕೆ ಅಥವಾ ಅಲಾರ್ಮ್ ಲಕ್ಷಣಗಳು, ವಿಶೇಷವಾಗಿ ಗುದದ್ವಾರದ ರಕ್ತಸ್ರಾವ, ವ್ಯವಸ್ಥಿತವಾದ ಅಸ್ವಸ್ಥತೆ ಮತ್ತು ಎಡಬಿಡದ ನೋವು, ಮತ್ತು ಪ್ರಯೋಗಶಾಲೆಯ ಅಸಾಮಾನ್ಯ ಟೆಸ್ಟುಗಳು ಈ ವಿಷಯಗಳಿಗೆ ಲಕ್ಷ್ಯವನ್ನು ಕೊಡಬೇಕು. ಯಾಕೆಂದರೆ ಉರಿಯೂತದ ತಪ್ಪು ರೋಗ ಪತ್ತೆ ಹಚ್ಚುವ ಅಥವಾ ಕೆಳ ಹೊಟ್ಟೆಯ ಕ್ಯಾನ್ಸರ್ ಕಾರಕ ರೋಗಗಳ ತಪ್ಪು ಪತ್ತೆ ಹಚ್ಚುವ ಸಾಧ್ಯತೆ ಇದೆ. ಇದರ ನಿರ್ವಹಣೆಯು ರೋಗಿಗಳಿಗೆ ಅದರ ಕಾರಣಗಳು ಮತ್ತು ಲಕ್ಷಣಗಳ ಅಂತರಾರ್ಥವನ್ನು ಸ್ಪಷ್ಟವಾದ ತಿಳುವಳಿಕೆಯ ವಿವರಣೆಯ ಮೇಲೆ ನಿಂತಿದೆ. ತನ್ಮೂಲಕ ರೋಗಿಯ ಭಯ ಮತ್ತು ಆತಂಕಗಳ ನಿವಾರಣೆಯಾಗಬೇಕಿದೆ. ಐಬಿಎಸ್ ನ ಚಿಕಿತ್ಸೆಯು ಪ್ರಾಥಮಿಕವಾಗಿ ವ್ಯಕ್ತಿಗತವಾಗಿರಬೇಕು. ರೋಗಿಯ ಪ್ರಧಾನವಾದ ರೋಗ ಲಕ್ಷಣಗಳ ಮೇಲೆ ಕೇಂದ್ರೀಕರಿಸಬೇಕು. ಮತ್ತು ಅದು ಔಷಧಿಗಳು ಮತ್ತು ಔಷ್ಧಿಯೇತರ ಚಿಕಿತ್ಸೆಯನ್ನು ಒಳಗೊಂಡಿರಬೇಕು. ರೋಗಿಯ ಐಬಿಎಸ್ ಕುರಿತಾದ ನಂಬಿಕೆಗಳು ಮತ್ತು ಚಿಕಿತ್ಸೆಯಿಂದ ಅವರ ನಿರೀಕ್ಷೆಣೆಗಳು ಇವು ರೋಗ ಪತ್ತೆ ಬೇಗ ಆಗಲು ಸಹಾಯಕಾರಿ.

ಐಬಿಎಸ್ ನ ನಿರ್ವಹಣೆಯಲ್ಲಿ ಪರಿಗಣಿಸಬೇಕಾದ ಚೆಕ್ ಲೀಸ್ಟುಗಳು

ಬದಲಾಯಿಸಿ

ಜಾಗ್ರತೆಯಿಂದ, ಅನುಕಂಪದಿಂದ ರೋಗಿಯ ಇತಿಹಾಸವನ್ನು ತೆಗೆದುಕೊಳ್ಳುವುದು, ಸರಿಯಾದ ಮತ್ತು ಸಂಪೂರ್ಣವಾದ ಪರೀಕ್ಷೆ ಮಾಡುವುದು, ಮಾನಸಿಕ ಮತ್ತು ಸಾಮಾಜಿಕ ಅಂಶಗಳ ಹಾಗೂ ದೈಹಿಕ ಲಕ್ಷಣಗಳ ಪೂರ್ಣ ಅಳೆಯುವಿಕೆ, ರಿಸ್ಕ್ ಇದ್ದರೆ ಆ ಕುರಿತು ಅರಿವು, ಉದಾಹರಣೆಗಾಗಿ ಕೆಂಪು ಅಪಾಯ ಸೂಚಕಗಳಿದ್ದರೆ ತುರ್ತಾಗಿ ಗಮನ ಹರಿಸುವುದು, ಐಬಿಎಸ್ ನ ಸರಿಯಾದ ಆಧಾರದ ಮೇಲೆ ಧನಾತ್ಮಕ ಪತ್ತೆ ಹಚ್ಚುವುದು, ವಿವರಣೆ, ಭಯನಿವಾರಣೆ, ಮತ್ತು ಪೂರ್ವ ಸೂಚನೆಯನ್ನು ಸ್ಪಷ್ಟವಾಗಿ ಯಾವುದೆ ಮುಚ್ಚು ಮರೆಯಿಲ್ಲದೆ ಕೊಡುವುದು, ಸರಿಯಾದ ಔಷಧಿ ಮತ್ತು ಔಷಡೆತರ ಚಿಕಿತ್ಸೆ ಕೊಡುವುದು.

ಐಬಿಎಸ್ ಪತ್ತೆ ಹಚ್ಚುವುದು ಹೇಗೆ

ಬದಲಾಯಿಸಿ

ಐಬಿಎಸ್ ನ್ನು ಪತ್ತೆ ಹಚ್ಚುವ ಯಾವುದೆ ಧನಾತ್ಮಕ ಸಲಕರಣೆಗಳಾಗಲಿ, ಸಾಧನಗಳಾಗಲಿ ಇಲ್ಲ. ಇದರ ಪತ್ತೆ ಹಚ್ಚುವುದು ಕರುಳು ಮತ್ತು ಜಠರಗಳ ಗಂಭೀರ ರೋಗಗಳನ್ನು ಹೊರತುಪಡಿಸಿದಾಗ ಪತ್ತೆ ಹಚ್ಚಬಹುದು. ಸರಿಸುಮಾರಾಗಿ ೫೦% ಕೇಸುಗಳಲ್ಲಿ ಅಹಾರ ನಿಯಂತ್ರಣದ ಚಿಕಿತ್ಸೆಗೆ ರೋಗಿಗಳು ಸ್ಪಂದಿಸುತ್ತಾರೆ. ಹೆಚ್ಚಿನ ಪರೀಕ್ಷೆಗಳು ಈ ಆಹಾರ ನಿಯಂತ್ರಣ ಚಿಕಿತ್ಸೆ ಸುಧಾರಿಸಿದಾಗ ಬೇಕಾಗುತ್ತದೆ. ಆದಾಗ್ಯೂ ಆಹಾರ ನಿಯಂತ್ರಣ ಚಿಕಿತ್ಸೆ ಕೊಡುವ ಮೊದಲು ರೋಗಿಗಳ ಆತಂಕ ಸ್ಥಿತಿಯನ್ನು ಗುರುತಿಸುವುದು ಕ್ಷೇಮ, ಇಲ್ಲದಿದ್ದರೆ ಅದೆ ಒಂದು ಹೆಚ್ಚಿನ ಆತಂಕಕ್ಕೆ ಕಾರಣವಾಗುತ್ತದೆ.

ದೂರವಿಡಬೇಕಾದ ಪದಾರ್ಥಗಳು

ಬದಲಾಯಿಸಿ

ದನದ ಮಾಂಸ, ಧಾನ್ಯದ ಹಿಟ್ಟಿನಲ್ಲಿರುವ ಮೀನು ಅಥವಾ ಬ್ರೆಡ್ಡಿನ ತುಂಡುಗಳು, ಆಲೂಗಡ್ಡೆ, ನೀರುಳ್ಳಿ, ಸಿಹಿ ಮೆಕ್ಕೆ ಜೋಳದ ಕಾಳುಗಳು, ಸೊಸ್ ನಲ್ಲಿನ ಡಬ್ಬಿಯಲ್ಲಿಟ್ಟ ತರಕಾರಿಗಳು, ಕಿತ್ತಳೆ, ನಿಂಬೆ ಹಣ್ಣಿನ ಜಾತಿಗೆ ಸೇರಿದ ಹಣ್ಣುಗಳು,ಗೋದಿ, ರೈ, ಓಟ್ಸ್, ಬಾರ್ಲಿ, ಡೈರಿ ಉತ್ಪಾದನೆಗಳು, ಆಡು/ಕುರಿಯ ಹಾಲು, ತತ್೬ತಿಗಳು, ಟೀ, ಕಾಫಿ, ಮದ್ಯ, ನಿಂಬೆ ಹಣ್ಣಿನ ಜ್ಯೂಸ್, ನಲ್ಲಿಯಲ್ಲಿನ ನೀರು, ಯೀಸ್ಟ್, ಗ್ರೇವಿ ಮಿಕ್ಸ್, ಸಲಾಡ್ ಕ್ರೀಮ್, ಹಣ್ಣಿನ ಮುರಬ್ಬ, ವಿನೆಗರ್, ನಟ್ಸ್, ಚಿಕೊಲೇಟ್,

ಸೇವಿಸಬಹುದಾದ ಪದಾರ್ಥಗಳು

ಬದಲಾಯಿಸಿ

ಎಲ್ಲ ಉಳಿದ ಮಾಂಸಗಳು, ಮತ್ತು ಸಾಕು ಕೋಳಿಗಳು, ಬಿಳಿ/ಕೊಬ್ಬುಳ್ಳ ಉಪ್ಪುಳ್ಳ ಟಿನ್ನಿನಲ್ಲಿಟ್ಟ ಮೀನು/ಎಣ್ಣೆಗಳು, ಉದಾಹರಣೆಗಾಗಿ ಸನ್ ಫ್ಲವರ್, ಸೊಯಾ, ಒಲಿವ್, ಉಳಿದೆಲ್ಲ ತರಕಾರಿಗಳು, ಹುಳಿದೆಲ್ಲ ಹಣ್ಣುಗಳು, ಅಕ್ಕಿ, ಆರಾರೂಟ್, ಮರಗೆಣಸು, ಸಬ್ಬಕ್ಕಿ ಅಥವಾ ಸೀಮೆಅಕ್ಕಿ,ರಾಗಿ, ನವಣೆ, ಸಜ್ಜೆ, ಜೋಳದಂತಹ ಯಾವುದೇ ಆಹಾರ ಧಾನ್ಯ, ಸೋಯಾ ಹಾಲು, ಹಾಲುಮುಕ್ತ ಕೃತಕ ಬೆಣ್ಣೆ, ಬೆಣ್ಣೆಯ ಬದಲಿಗೆ ಖಾದ್ಯ ತೈಲಗಳು, ಹರ್ಬಲ್ ಟೀ,ಇತರ ಹಣ್ಣಿನ ಜ್ಯೂಸುಗಳು, ಮಿನರಲ್ ವಾಟರ್, ಗಿಡಮೂಲಿಕೆಗಳು, ಸಾಂಬಾರು ಪದಾರ್ಥಗಳು,ಜೇನುತುಪ್ಪ, ಸಕ್ಕರೆ, ಒಣಗಿದ ಹಣ್ಣು/ಬೀಜಗಳು

ಐಬಿಎಸ್ ಗೆ ಕೊಡುವ ಔಷಧಿಗಳು

ಬದಲಾಯಿಸಿ

ಸೆಳೆವು ನಿರೋಧಕ ದೂತರು(ಎಂಟಿಸ್ಪೆಸ್ಮೊಡಿಕ್ ಏಜೆಂಟ್ಸ್), ಕರುಳಿನ ಮೆತ್ತಗಿನ ಸ್ನಾಯುವನ್ನು ನಿರಾಳಗೊಳಿಸುತ್ತವೆ.ಮೇದಸ್ಸಿನ ಚಯಾಪಚಯದ ಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸುವ ಮದ್ದಿಗೆ ಪ್ರವರ್ತಿಸಿ ಸಂವೇದಿ ನರಕ್ಕೆ ಸಂಜ್ನೆಯನ್ನು ರವಾನಿಸುವ ಅಂಗದ ಮೇಲೆ ಕ್ರಿಯೆ ನಡೆಸಿ, ಕರುಳನ್ನು ನಿರಾಯಾಸಗೊಳಿಸುತ್ತವೆ. ಅಥವಾ ಈ ಅಂಗವನ್ನು ಶಮನಗೊಳಿಸುತ್ತವೆ. ಅಥವಾ ನೋವು ತಿಳಿಯದಂತೆ ಮಾಡುತ್ತವೆ. ಅಥವಾ ಬಹುವಾಗಿ ಸಿಗುವ ಕ್ಯಾಲ್ಸಿಯಮ್ ಕಾರ್ಬೊನೇಟ್ ರೂಪದಲ್ಲಿ ಸಿಗುವ ವಾಹಿನಿಗಳ ನುಣ್ಣಗಿನ ಸ್ನಾಯು ಮತ್ತು ಕರುಳಿಗೆ ಸಂಬಂಧಿಸಿದ ನ್ಯೂಟ್ರಾನನ್ನು ನಿರಾಳಗೊಳಿಸುತ್ತದೆ. ಈ ಕೆಳ್ಖಗಿನ ಔಷಧಿಗಳನ್ನು ರೋಗಿಯನ್ನು ಕ್ಲಿನಿಕಲಿ ಪರಿಶೀಲಿಸುವುದರ ಮೂಲಕ ಉಪಯೋಗಿಸಬಹುದಾಗಿದೆ. ಸಿಮೆಟ್ರೋಪಿಡಮ್, ಟ್ರಿಮೆಂಬ್ಯುಟೈನ್, ಒಕ್ಟಿಲಿಯಮ್, ಮೆಬೆವೆರಿನೆ, ಮತ್ತು ಪಿನಾವೆರಿಯಮ್ ಹೊಟ್ಟೆಯ ನೋವನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ. ಹೊಸಬಗೆಯ ಸೆಳೆವು ನಿರೋಧಕ ದೂತರು(ನ್ಯೂರೋಕಿನಿಕ್[ಎನ್ ಕೆ]೨ಬೆಳಕು, ಶಾಖ ಮತ್ತು ಮತ್ತು ಮದ್ದಿಗೆ ಪ್ರವರ್ತಿಸಿ ಸಂವೇದಿ ನರಕ್ಕೆ ಸಂಜ್ನೆ ರವಾನಿಸುವ ಅಂಗಕ್ಕ ಸ್ನಾಯುಗಳ ವಿರುದ್ಧ ಪ್ರವರ್ತಿಯಾಗಿ ಮತ್ತು ನಿರಾಳತೆಯ ಪರಿಣಾಮವನ್ನು ನುಣ್ಣಗಿನ ಸ್ನಾಯುಗಳ ಮ್ರೇಲೆ ತೋರಿಸಿದೆ. ಕ್ಯಾಲ್ಸಿಯಮ್ ಚೆನೆಲ್ ಬ್ಲೊಕರ್ ಗಳಾದ ನಿಫೆಡಿಪೈನ್, ಡಿಲ್ಟ್ರಿಯಾಝಮ್, ಮತ್ತು ವೆರಾಪಮಿಲ್, ಮತ್ತು ಚತುಷ್ಟಯ ಅಮೋನಿಯಾ ಅಣುವಿನ ಹೈಡ್ರೋಜನ್ ಪರಮಾಣುಗಳನ್ನು ಆಮ್ಲೀಯವಲ್ಲದ ಕಾರ್ಬನಿಕ್ ರ್ಯಾಡಿಕಲ್ ಗಳಿಂದ ಸ್ಥಳಾಂತರದಿಂದಾಗುವ ಸಂಯುಕ್ತ ಅಮೀನ್ ಗಳಾದ ಒಕ್ಟೈಲೊನಿಯಮ್ ಮತ್ತು ಪಿನಾವೆರಿಯಮ್ ಇವು ಐಬಿಎಸ್ ರೋಗಿಗಳಿಗೆ ಶ್ಸಕ್ತಿಶಾಲಿ ಚಿಕಿತ್ಸಿಕ ಔಷಧಿಗಳಾಗಿವೆ. ಐಬಿಎಸ್ ಗೂ ಮತ್ತು ಮನೋವೈದ್ಯಶಾಸ್ತ್ರೀಯ ಅಸ್ತವ್ಯಸ್ತತೆಯೊಂದಿಗೆ ಸಂಬಂಧ ಐಬಿಎಸ್ ರೋಗಿಯ ಮೌಲ್ಯಮಾಪನವು ಅವನ ಮಾನಸಿಕ ಬೇಗುದಿಯನ್ನು, ವ್ಯಕ್ತಿತ್ವ, ಸದ್ಯದ ಸಾಮಾಜಿಕ ಒತ್ತಡಗಳನ್ನು ಮತ್ತು ಅಸಹಜ ವರ್ತನೆಯ ಅಸ್ವಸ್ಥತೆಯನ್ನು ಒಳಗೊಂಡಿರಬೇಕಾಗುತ್ತದೆ. ಆತಂಕ, ಮಾನಸಿಕೈರುಸು ಮುರುಸು, ಖಿನ್ನತೆ, ಮಾನಸಿಕ ಕುಸಿತ ಇವೆಲ್ಲವೂ ಐಬಿಎಸ್ ನಲ್ಲಿ ಕಂಡು ಬರುವ ಮನೋವೈದ್ಯಕೀಯ ಅಸ್ವಸ್ಥತೆಗಳು ಅವು ಐಬಿಎಸ್ ನ ಲಕ್ಷಣಗಳ್ಖನ್ನು ಉಲ್ಬಣಗೊಳಿಸುತ್ತದೆ. ಆದರೂ ಅದನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಮತ್ತು ತಕ್ಷಣದ ಚಿಕಿತ್ಸೆಗೆ ಅವರು ಚೆನ್ನಾಗಿಯೇ ಸ್ಪಂದಿಸುತ್ತಾರೆ. ಐಬಿಎಸ್ ರೋಗಿಗಳಲ್ಲಿ ಕಂಡು ಬರುವ ವಿಶಿಷ್ಟ ವರ್ತನೆಯಲ್ಲಿನ ಅಸ್ವಸ್ಥತೆಯು ಡಾಕ್ಟರರಿಂದ ಪದೆ ಪದೆ ಅಭಯವನ್ನು ನಿರೀಕ್ಷಿಸುವುದು, ಉದಾಹರಣೆಗಾಗಿ `ಡಾಕ್ಟ್ರೆ, ಬೇಗ ಗುಣ ಅಗುತ್ತಲ್ಲ? ಈ ಕಾಯಿಲೆ ವಾಸಿ ಆದೀತಾ?' ಎಂದು ಕೇಳಿ ಅವರು ಅಭಯವನ್ನಿತ್ತರೂ ಮತ್ತೆ ಮತ್ತೆ ಕೇಳುವುದು; ಇದು ಈಗಾಲೆ ಇರುವ ರೋಗವು ಸದ್ಯದ ಡಿಪ್ರೆಸ್ಸಿನಿಂದಾಗಿ ಇನ್ನೂ ಹೆಚ್ಚು ಕೆಡುವುದು. ಅನನುಕೂಲ ಹಾನಿಕಾರಕ ಬದುಕಿನ ಘಟನೆಗಳು ಐಬಿಎಸ್ ಬರುವ ಮೊದಲೆ ಬರುವ ಸಂಗತಿಗಳಾಗಿವೆ. ಅದು ಅತಿ ಹಿಂದಿನದ್ದಿರಬಹುದು, ಉದಾಹರಣೆಗಾಗಿ ಬಾಲ್ಯದಲ್ಲಿ ಅನುಭವಿಸಿದ ಆಘಾತಕಾರಿ ವಿಷಯಗಳಾಗಿರಬಹುದು, ಅಥವಾ ಇತ್ತೀಚಿಗಿನ ದುರಂತವೂ ಅಗಿರಬಹುದು. ಉದಾಹರಣೆಗಾಗಿ ವಿವಾಹ ವಿಚ್ಛೇದನ; ಗ್ಯಾಸ್ಟ್ರೋಎಂಟಿರಿಯೊಲೊಜಿಸ್ಟ್ ಈ ಕೊಂಡಿಯನ್ನು ಗುರುತಿಸಲು ಸಹಾಯ ಮಾಡುತ್ತಾನೆ. ಸಾಮಾನ್ಯವಾಗಿ ಈ ರೋಗದ ಕುರಿತಾಗಿರುವ ರೋಗಿಯ ಭಯವನ್ನು ನಿವಾರಿಸುತ್ತಾನೆ. ಈ ಮಾನಸಿಕ ಅಸ್ತಿರತೆಗಳನ್ನು ಮೌಲ್ಯಮಾಪನ ಮಾಡುವ ಸಲಕರಣೆಗಳನ್ನು ತುಂಬ ಎಚ್ಚರದಿಂದ ಆರಿಸಬೇಕು. ಯಾಕೆಂದರೆ ಐಬಿಎಸ್ ಮತ್ತು ಖಿನ್ನತೆ ಒಂದರ ಮೇಲೆ ಇನ್ನೊಂದು ಪ್ರಭಾವ ಬೀರುತ್ತದೆ. ಅತ್ಯಾಚಾರ ಮತ್ತು ದೈಹಿಕ ಹಲ್ಲೆಗೊಳಗಾದವರ ಇತಿಹಾಸವುಳ್ಳ ರೋಗಿಗಳ ರೋಗನಿದಾನದ ಫಲಿತಾಂಶವು ತುಂಬ ಅಯಶಸ್ವಿಯಾಗಿರುತ್ತವೆ. ದೈಹಿಕ ಹಲ್ಲೆ ಅಥವಾ ಲೈಂಗಿಕ ಅತ್ಯಾಚಾರಕೊಳಗಾದ ಐಬಿಎಸ್ ಪೇಶಾಂಟುಗಳ್ನ್ನು ಮೌಲ್ಯಮಾಪನ ಮಾಡಲು ಮತ್ತು ಚಿಕಿತ್ಸೆ ನೀಡಲು ಮಾರ್ಗದರ್ಶನ ಸೂತ್ರಗಳಿವೆ.