ಮುರಬ್ಬ
ಮುರಬ್ಬ (ಮೊರಬ್ಬ, ಗುಳಂಬ) ಪದವು ಹಣ್ಣಿನ ಸಿಹಿ ಸಂರಕ್ಷಿತ ಖಾದ್ಯವನ್ನು ಸೂಚಿಸುತ್ತದೆ. ಇದು ಮಧ್ಯ ಏಷ್ಯಾ, ದಕ್ಷಿಣ ಏಷ್ಯಾ ಹಾಗೂ ಮಧ್ಯಪ್ರಾಚ್ಯದಲ್ಲಿ ಜನಪ್ರಿಯವಾಗಿದೆ. ಇದನ್ನು ಸಾಮಾನ್ಯವಾಗಿ ಹಣ್ಣುಗಳು, ಸಕ್ಕರೆ (ಅಥವಾ ಬೆಲ್ಲ) ಮತ್ತು ಸಂಬಾರ ಪದಾರ್ಥಗಳಿಂದ ತಯಾರಿಸಲಾಗುತ್ತದೆ.
ಹಣ್ಣಿನ ಮೊರಬ್ಬ
ಬದಲಾಯಿಸಿಸಕ್ಕರೆ ಪಾಕದಲ್ಲಿ ಬೇಯಿಸಿದ ಜನಪ್ರಿಯ ಹಣ್ಣುಗಳೆಂದರೆ ಸೇಬು, ಜರದಾಳು, ನೆಲ್ಲಿಕಾಯಿ, ಮಾವು, ಪ್ಲಮ್, ಕ್ವಿನ್ಸ್. ಇವನ್ನು ದೀರ್ಘಕಾಲದವರೆಗೆ ಹಸಿ ಮುರಬ್ಬ ಅಥವಾ ಒಣ ರೂಪದಲ್ಲಿ ಸಂರಕ್ಷಿಸಿಡಬಹುದು, ಮತ್ತು ಇವು ಔಷಧೀಯ ಗುಣಗಳನ್ನು ಹೊಂದಿವೆ ಎಂದು ಹೇಳಲಾಗಿದೆ. ಇದನ್ನು ಭಾರತೀಯ ಸಾಂಪ್ರದಾಯಿಕ ಹಾಗೂ ಜನಪದ ಔಷಧಿಯಲ್ಲಿ ವ್ಯಾಪಕವಾಗಿ ಬಳಸಲಾಗಿದೆ.
ಶುಂಠಿ ಮುರಬ್ಬ
ಬದಲಾಯಿಸಿಶುಂಠಿ ಮುರಬ್ಬವನ್ನು ಶುಂಠಿ, ಸಕ್ಕರೆ ಇತ್ಯಾದಿಗಳಿಂದ ತಯಾರಿಸಲಾಗುತ್ತದೆ. ಇದನ್ನು ಬೇಯಿಸಿ ಆಯತಾಕಾರದ ತುಂಡುಗಳಾಗಿ ಕತ್ತರಿಸಲಾಗುತ್ತದೆ. ಇದು ಒಂದು ಜನಪದ ಔಷಧಿಯಾಗಿದ್ದು ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಬಹಳ ಜನಪ್ರಿಯವಾಗಿದೆ. ಅಜೀರ್ಣ, ವಾಕರಿಕೆ, ಮುಂಜಾವಿನ ಕಾಯಿಲೆಗೆ ಚಿಕಿತ್ಸೆ ಮಾಡಲು ಇದನ್ನು ವ್ಯಾಪಕವಾಗಿ ಸೇವಿಸಲಾಗುತ್ತದೆ. ಇದನ್ನು ಮಿಠಾಯಿಯಾಗಿಯೂ ತಿನ್ನಲಾಗುತ್ತದೆ.
ಬಾಹ್ಯ ಸಂಪರ್ಕಗಳು
ಬದಲಾಯಿಸಿ