ಇಮಾ ಕೇಥಲ್ (ಅಮ್ಮಂದಿರ ಮಾರುಕಟ್ಟೆ) (ಇಮಾ ಮಾರುಕಟ್ಟೆ ಅಥವಾ ನೂಪಿ ಕೇಥಲ್ ಎಂದೂ ಪರಿಚಿತವಾಗಿದೆ) ಮಣಿಪುರ ರಾಜ್ಯದ ಇಂಫಾಲದಲ್ಲಿರುವ ಕೇವಲ ಮಹಿಳೆಯರು ನಡೆಸುವ ಒಂದು ಮಾರುಕಟ್ಟೆಯಾಗಿದೆ.[][] ಇದು ಮಣಿಪುರ ರಾಜ್ಯದಲ್ಲಿ ಒಂದು ವಾಣಿಜ್ಯ ಕೇಂದ್ರ ಮತ್ತು ಜನಪ್ರಿಯ ಪ್ರವಾಸಿ ಆಕರ್ಷಣೆಯಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಇದು ತನ್ನ ಸ್ಥಳವನ್ನು ಇಂಫಾಲ್ ನಗರದೊಳಗೆ ಬದಲಾಯಿಸಿದೆ ಮತ್ತು ಪ್ರಸಕ್ತವಾಗಿ ಖವೈರಾಬಂದ್ ಬಜ಼ಾರ್‌ನಲ್ಲಿ ಸ್ಥಿತವಾಗಿದೆ.[] ಇದನ್ನು ೧೬ನೇ ಶತಮಾನದಲ್ಲಿ ಸ್ಥಾಪಿಸಲಾಯಿತು ಮತ್ತು ವಿವಿಧ ಉತ್ಪನ್ನಗಳನ್ನು ಮಾರುವ ಸುಮಾರು ೫,೦೦೦-೬,೦೦೦ ಮಹಿಳಾ ಮಾರಾಟಗಾರರನ್ನು ಹೊಂದಿದೆ.[][] ಈ ಮಾರುಕಟ್ಟೆಯಲ್ಲಿ ತರಕಾರಿಗಳು, ಹಣ್ಣುಗಳು, ವಸ್ತ್ರಗಳು, ಆಟಿಕೆಗಳು, ಮೀನು, ಸಂಬಾರ ಪದಾರ್ಥಗಳು ಮತ್ತು ಪಾತ್ರೆಪಡಗಗಳಂತಹ ಉತ್ಪನ್ನಗಳು ಲಭ್ಯವಿವೆ.[] ಇದು ಏಷ್ಯಾದಲ್ಲಿನ ಅತಿ ದೊಡ್ಡ ಮಹಿಳಾ ಮಾರುಕಟ್ಟೆಯಾಗಿದೆ.[]

ಉಲ್ಲೇಖಗಳು

ಬದಲಾಯಿಸಿ
  1. "India's Mother's Market run by women". BBC News. 19 May 2015. Archived from the original on 21 January 2018.
  2. "Manipur's historic women's only market damaged in earthquake". The News Minute. 4 January 2016. Archived from the original on 8 ಮಾರ್ಚ್ 2021.
  3. Vinayak, Akshatha (14 May 2018). "Ima Keithal : World's Only Women's Market". Native Planet. Archived from the original on 21 July 2016.
  4. "Incredible India | Ima Keithel/ Ima Market/ Khwairamband Bazar". Incredible India. Retrieved 2020-02-02.
  5. Chakravarty, Ipsita (6 January 2016). "The earthquake has damaged a nerve centre of life in Manipur: the Ima Keithel or Mother's Market". Scroll.in (in ಅಮೆರಿಕನ್ ಇಂಗ್ಲಿಷ್).
  6. Binayak, Poonam (5 January 2018). "Ima Keithel: Asia's Largest All Women's Market". Culture Trip.
  7. "3-storey market building coming up at Pureiromba Keithel in Imphal". Northeast Now. 30 December 2019.