ಇಗೋ ಕನ್ನಡ
ಇಗೋ ಕನ್ನಡ ಪ್ರೊ. ಜಿ ವೆಂಕಟಸುಬ್ಬಯ್ಯನವರು ೧೨, ಮೇ, ೧೯೯೧ ರಿಂದ ಪ್ರಜಾವಾಣಿ ಪತ್ರಿಕೆಯಲ್ಲಿ ಬರೆಯುತ್ತಿರುವ ಜನಪ್ರಿಯ ಭಾಷಾ ವಿಷಯಕವಾದ ಅಂಕಣ. ಇದರಲ್ಲಿ ಆಸಕ್ತಿ ಉಳ್ಳವರು ಮುಖ್ಯವಾಗಿ ಕನ್ನಡ ಅಧ್ಯಾಪಕರು ಮತ್ತು ಪ್ರೌಢಶಾಲೆ/ಕಾಲೇಜಿನ ಕನ್ನಡ ವಿದ್ಯಾರ್ಥಿಗಳು. ಇದಕ್ಕೆ ಪ್ರಪಂಚದ ಅನೇಕ ಕಡೆಗಳಿಂದ ಪ್ರಶ್ನೆಗಳು ಬರುತ್ತಿವೆ. ಒಂದು ವಾರವೂ ತಪ್ಪದೆ ಹದಿನೈದು ವರ್ಷಗಳ ಕಾಲ ನಡೆದು ಬಂದಿದೆ.