ಇಕೆಬಾನ ((生け花?, "arranging flowers") ಎನ್ನುವುದು ಹೂವುಗಳನ್ನು ಜೋಡಿಸಿ ವಿನ್ಯಾಸಗೊಳಿಸುವ ಒಂದು ಜಪಾನಿ ಕಲೆ[೧]. ಇದಕ್ಕೆ ಕಡೊ (華道?, the "way of flowers") ಎಂದೂ ಹೇಳುತ್ತಾರೆ. ಈ ಕಲೆಯು ಪ್ರಾರಂಭ ೭ನೇ ಶತಮಾನದಲ್ಲಿಯೇ ಆಯಿತು. ಇದು ಬೌದ್ಧ ಗುರುಗಳ ಪ್ರಭಾವದಿಂದ ೧೬ನೆಯ ಶತಮಾನದಲ್ಲಿ ಪರಾಕಾಷ್ಠೆ ತಲುಪಿತು. ನೂರಾರು ವರ್ಷಗಳಿಂದ ಈ ಕಲೆಯು ಬೆಳೆದು ಬಂದಿದ್ದು ಜಪಾನ್ ಮತ್ತು ವಿಶ್ವದ ಹಲವು ಕಡೆಗಲಲ್ಲಿ ಸಾವಿರಕ್ಕೂ ಹೆಚ್ಚು ಇಕೆಬಾನ ಶಾಲೆಗಳಿವೆ. ಅವುಗಳಲ್ಲಿ ಪ್ರಸಿದ್ಧವಾದುವೆಂದರೆ ಇಕೆನೊಬೊ, ಒಹರ-ರ್ಯು ಮತ್ತು ಸೊಗೆಟ್ಸು-ರ್ಯು.

ಒಂದು ಇಕೆಬಾನ ವಿನ್ಯಾಸ

ಪದೋತ್ಪತ್ತಿ ಬದಲಾಯಿಸಿ

'ಇಕೆರು'(生ける?) ಮತ್ತು 'ಹಾನ'(花?) ಎಂಬ ಜಪಾನಿ ಪದಗಳಿಂದ 'ಇಕೆಬಾನ' ಹುಟ್ಟಿದೆ. ಅದರಲ್ಲಿ 'ಇಕೆರು' ಎಂದರೆ 'ಜೀವಂತವಾಗಿಡು', 'ಜೋಡಿಸು', 'ಜೀವನ' ಎಂದರ್ಥ ಮತ್ತು 'ಹಾನ' ಅಂದರೆ ಹೂವು. ಇಕೆಬಾನದ ಭಾವಾರ್ಥ ಹೂವುಗಳಿಗೆ ಜೀವ ಕೊಡುವುದು ಅಥವಾ ಹೂವುಗಳ ಜೋಡಣೆ ಎಂದು ಆಗುತ್ತದೆ.[೨]

ವಿಧಾನ ಬದಲಾಯಿಸಿ

ಇಕೆಬಾನ ಎನ್ನುವುದು ಕೇವಲ ಹೂವುಗಳನ್ನು ಹೂದಾನಿಯಲ್ಲಿ ಹಾಕಿಡುವುದಕ್ಕಿಂತ ಹೆಚ್ಚಾಗಿ, ನಿಸರ್ಗ ಮತ್ತು ಮಾನವೀಯತೆಯನ್ನು ಒಟ್ಟುಸೇರಿಸುವ ಒಂದು ಶಿಸ್ತಿನ ಕಲೆ ಎಂದು ಹೇಳಲಾಗುತ್ತದೆ. ಈ ಕಲೆಯು ಕೇವಲ ವಿವಿಧಬಣ್ಣಗಳ ಹೂವುಗಳ ಜೋಡಣೆಯಾಗಿರದೇ ಗಿಡಗಳ ಇತರ ಭಾಗಗಳಾದ ಕಾಂಡ, ಎಲೆಗಳನ್ನೂ ಒಳಗೊಂಡಿದ್ದು ಆಕಾರ, ಸಾಲು ಮತ್ತು ಸ್ವರೂಪಗಳ ವಿನ್ಯಾಸಕ್ಕೂ ಒತ್ತುಕೊಡುತ್ತದೆ.

ಇತಿಹಾಸ ಬದಲಾಯಿಸಿ

ಇತ್ತೀಚಿನ ಇತಿಹಾಸ ಸಂಶೋಧನಾ ವರದಿಗಳ ಪ್ರಕಾರ 'ತತೆಬಾನ'(ನಿಂತಿರುವ ಹೂವುಗಳು) ಕಲೆಯು ಬೌದ್ಧ ಮತ್ತು ಶಿಂಟೋ ನಂಬಿಕೆಗಳ ಮಿಳಿತವಾಗಿದೆ. ಇದು ಈ ಇಕೆಬಾನ ಕಲೆಗೆ ಮೂಲವಾಗಿರಬಹುದೆಂದು ಹೇಳಲಾಗಿದೆ. ಹಳೆಯಕಾಲದಲ್ಲಿ ಬುದ್ಧ ಆರಾಧನೆಯ ಸಮಯದಲ್ಲಿ ಪೂಜಾ ವೇದಿಕೆಯ ಮೇಲೆ ಹೂವುಗಳನ್ನಿಡುವುದು ಸಂಪ್ರದಾಯವಾಗಿತ್ತು. ಇಕೆಬಾನವು ಈ ಬೌದ್ಧ ಪೂಜಾಪದ್ದತಿ ಮತ್ತು 'ಕಾಮಿ'ಗಳನ್ನು ನಿತ್ಯಹರಿದ್ವರ್ಣ ವಸ್ತುಗಳಿಂದ ಆಕರ್ಷಿಸುವ ಶಿಂಟೋ ಯೊರಿಶಿರೋ ನಂಬಿಕೆಯಿಂದ ವಿಕಾಸಹೊಂದಿರಬಹುದು. ಇವೆರಡೂ ಸೇರಿ ಈಗಿನ ಜಪಾನಿ ಕಲೆ ಇಕೆಬಾನಕ್ಕೆ ಮೂಲವಾಗಿವೆ. ಮೊದಲ ವ್ಯವಸ್ಥಿತ ಶಾಸ್ತ್ರೀಯ ಶೈಲಿಯ ಇಕೆಬಾನವು ಹದಿನೈದನೇ ಶತಮಾನದ ನಡುವಿನಲ್ಲಿ ಆರಂಭವಾಯಿತು. ಇಕೆನೊಬೊ[೩] ಬೌದ್ಧ ಬಿಕ್ಕುಗಳು ಮತ್ತು ಬೌದ್ಧ ಸಮುದಾಯದ ಸದಸ್ಯರು ಇದರ ವಿದ್ಯಾರ್ಥಿಗಳಾಗಿದ್ದರು. ಕಾಲಕಳೆದಂತೆ ಇತರ ಶಾಲೆಗಳು ಹುಟ್ಟಿದವು, ವಿನ್ಯಾಸಗಳು ಶೈಲಿಗಳು ಬದಲಾದವು. ತದನಂತರ ಇಡೀ ಜಪಾನಿ ಸಮಾಜದಲ್ಲಿ ಈ ಕಲೆಯು ಒಂದು ಸಂಪ್ರದಾಯವಾಯಿತು.

ಉಲ್ಲೇಖಗಳು ಬದಲಾಯಿಸಿ

  1. What is Ikebana? Archived 2014-07-12 ವೇಬ್ಯಾಕ್ ಮೆಷಿನ್ ನಲ್ಲಿ., Ikebanahq.org
  2. The Modern Reader's Japanese-English Character Dictionary, Charles E. Tuttle Company, ISBN 0-8048-0408-7
  3. Ikenobo

ಹೊರಕೊಂಡಿಗಳು ಬದಲಾಯಿಸಿ

ಚಿತ್ರಸಂಪುಟ ಬದಲಾಯಿಸಿ

"https://kn.wikipedia.org/w/index.php?title=ಇಕೆಬಾನ&oldid=1053436" ಇಂದ ಪಡೆಯಲ್ಪಟ್ಟಿದೆ