ಭಾರತದ ಎಲ್ಲೆಡೆ ಮರಳಿನ ನೆಲದಲ್ಲಿ ಬೆಳೆಯುವ ಇಂದ್ರವಾರುಣಿಯನ್ನು ಆಂಗ್ಲಭಾಷೆಯಲ್ಲಿ ಬಿಟ್ಟರ್ ಆಪಲ್ ಎಂದೂ ವೈಜ್ಞಾನಿಕವಾಗಿ ಸಿಟ್ರುಲ್ಲಸ್ ಕೊಲೋಸಿಂಥಿಸ್ ಎಂದು ಕರೆಯುತ್ತಾರೆ. ನೆಲದಲ್ಲಿ ಹಬ್ಬಿ ಬೆಳೆಯಲು ೩ ವಿಧಗಳಿವೆ. ಚಿಕ್ಕ,ದೊಡ್ಡ ಹಾಗೂ ಕೆಂಪು ಬಣ್ಣದ ಇಂದ್ರವಾರುಣಿಗಳೂ ಇವೆ. ಇಂದ್ರವಾರುಣಿಯು ಕೊಲೋಸಿಂತಿನ್ ಎಂಬ ರಾಸಾಯನಿಕ ದ್ರವ್ಯವನ್ನು ಮುಖ್ಯವಾಗಿ ಹೊಂದಿದೆ. ಜೊತೆಗೆ ಕೊಲೋಸಿಂಥೆಟಿನ್, ಆಲ್ಚುಮಿನ್, ತ್ಐಲಾಂಶವನ್ನೂ ಹೊಂದಿದೆ. ಇಂರದ್ವಾರುಣಿ ಮುಖ್ಯವಾಗಿ ಕಫ ಹಾಗೂ ಪಿತ್ತಹರವಾಗಿದೆ.ಇದರ ಔಷಧೀಯ ಗುಣಗಳನ್ನು ಅರಿಯೋಣ.

  1. ಇಂದ್ರವಾರುಣಿಯ ಬೀಜದ ತೈಲವನ್ನು ಲೇಪಿಸಿದರೆ ಕೂದಲು ಕಪ್ಪಾಗಿ ಮತ್ತು ಸೊಂಪಾಗಿ ಬೆಳೆಯುತ್ತದೆ. ಇದರ ಜೊತೆಗೆ ಇಂದ್ರವಾಣಿಯ ಬೇರನ್ನು ಅರೆದು ಒಂದು ಚಮಚದಷ್ಟು ತೆಗೆದುಕೊಂಡು ಹಾಲಲ್ಲಿ ಬೆರೆಸಿ ಸೇವಿಸಿದರೆ ಕೂದಲು ಕಪ್ಪಾಗಿ ಮತ್ತು ಕಾಂತಿಯುತವಾಗಿ ಹೊಳೆಯುತ್ತದೆ.
  2. ದೀರ್ಫಕಾಲೀನ ಕೆಮ್ಮು ಕಫ ದಮ್ಮಿನಿಂದ ಬಳುವವರಿಗೆ ಈ ಮದ್ದು ಉಪಯುಕ್ತ.ಇಂದ್ರವಾಣಿಯ ಹಣ್ಣನ್ನು ತೆಗೆದುಕೊಂಡು ಅದರಲ್ಲಿ ತೂತುಮಾಡಿ ಬಳಿಕ ಕಾಳುಮೆಣಸುಗಳನ್ನು ಹಾಕಬೇಕು. ಇದನ್ನು ಸೂರ್ಯನ ಬಿಸಿಲಿನಲ್ಲಿ ಚೆನ್ನಾಗಿ ಒಣಗಲು ಬಿಟ್ಟು ನಂತರ ಓಣಗಿದ ಹಣ್ಣನ್ನು ಕತ್ತರಿಸಿ ಅದರಲ್ಲಿನ ಮೆಣಸಿನ ಕಾಳುಗಳನ್ನು(೫-೭) ಜೇನುತುಪ್ಪ ಹಾಗೂ ಅಶ್ವತ್ಥದ ಕೆಮ್ಮು ಕಫ,ದಮ್ಮು ಶಮನವಾಗುತ್ತದೆ.
  3. ಇಂದ್ರವಾಣಿಯ ಬೀಜಗಳನ್ನು ವಿರೇಚನಕ್ಕಾಗಿ ಬಳಸಲಾಗುತ್ತದೆ.
  4. ಕಾಲಾರಾ ಕಾಯಿಲೆಯಲ್ಲಿ ಇಂದ್ರವಾಣಿಯ ಹಣ್ಣಿನ ತಿರುಳು(೧ಚಮಚ) ಓಮದ ಹುಡಿಯೊಂದಿಗೆ ಬೆರೆಸಿ ಬಿಸಿ ನೀರಿನಲ್ಲಿ ಸೇವಿಸಲು ನೀಡಿದರೆ ಹಿತಕಾರಿ.
  5. ಸ್ತನ ವಿದ್ರಧಿ ಉಂಟಾದಾಗ ಇಂದ್ರವಾಣಿಯ ಬೇರಿನ ಅರೆದು ಲೇಪಿಸಿದರೆ ಶಮನಕಾರಿ.
  6. ಇಂದ್ರವಾಣಿಯ ಹಣ್ಣಿನ ಜಾಮ್ ತಯಾರಿಸಿ ಮಕ್ಕಳಿಗೆ ನಿತ್ಯ ಸೇವಿಸಲು ನೀಡಿದರೆ ಪಚನ ಶಕ್ತಿ ವರ್ಧಿಸುತ್ತದೆ.ಹಸಿವೆ ಹೆಚ್ಚುತ್ತದೆ.
ಇಂದ್ರವಾರುಣಿ