ಇಂಟರ್ಲಾಕೆನ್

ಬರ್ನ್ ನ ಸ್ವಿಸ್ ಕ್ಯಾಂಟನ್ನಲ್ಲಿ ರೆಸಾರ್ಟ್ ಪಟ್ಟಣ

ಇಂಟರ್‍ಲಾಕೆನ್- ಸ್ವಿಟ್ಸರ್‍ಲೆಂಡಿನ ಬರ್ನ್ ಸಂಸ್ಥಾನದ ಒಂದು ಪಟ್ಟಣ. ಆರೆ ಎಂಬ ನದಿಯ ದಡದ ಮೇಲಿದೆ. ಪೂರ್ವದಲ್ಲಿ ಬ್ರೀನ್ಸ್ ಮತ್ತು ಪಶ್ಚಿಮದಲ್ಲಿ ಟೂನ್ ಈ ಎರಡೂ ಸರೋವರಗಳ ಮಧ್ಯದ ಬಯಲಲ್ಲಿರುವುದರಿಂದ ಈ ಹೆಸರು ಬಂದಿದೆ. ಪ್ರಸಿದ್ಧ ಪ್ರವಾಸಿಕೇಂದ್ರ ಮತ್ತು ಸುಂದರ ನಗರ.

ಇಂಟರ್ಲಾಕೆನ್
Population
ಟೆಂಪ್ಲೇಟು:Swiss populations NC
Websitewww.interlaken-gemeinde.ch
Switzerland location map.svg

ಪ್ರವಾಸೋದ್ಯಮ ಕೇಂದ್ರಸಂಪಾದಿಸಿ

ಹದಿಮೂರುವರೆಸಾವಿರ ಅಡಿ ಎತ್ತರವಿರುವ ಯೂಂಗ್‍ಫ್ರೌ ಶಿಖರದ ಭವ್ಯನೋಟ ಪ್ರವಾಸಿಗರನ್ನು ಆಕರ್ಷಿಸಿದೆ. ಊರಿನ ನಿವಾಸಿಗಳಿಗಿಂತ ಬಂದುಹೋಗುವ ಪ್ರವಾಸಿಗರೇ ಹೆಚ್ಚು. 1130ರಲ್ಲಿ ಕ್ರೈಸ್ತಧರ್ಮ ಮಂಡಲಿಯ ಸನ್ಯಾಸಿನಿ ಆಶ್ರಮವೊಂದನ್ನು ನಿರ್ಮಿಸಲಾಯಿತು. ಅವರೆಲ್ಲ ಆಗಸ್ಟೀನ್ ಪಂಥಕ್ಕೆ ಸೇರಿದವರಾಗಿದ್ದರು. 1528ರಲ್ಲಿ ಆ ಆಶ್ರಮವನ್ನು ನಿರ್ಮೂಲಗೊಳಿಸಲಾಯಿತು. ಹಿಂದಿನ ಆಶ್ರಮದ ಮುಖ್ಯ ಕಟ್ಟಡವನ್ನು ಸಂಸ್ಥಾನದ ಕೇಂದ್ರ ಕಚೇರಿಯನ್ನಾಗಿಯೂ ಇತರ ಕಟ್ಟಡಗಳನ್ನು ಆರಾಧನಾಮಂದಿರಗಳನ್ನಾಗಿಯೂ ಉಪಯೋಗಿಸಲಾಗುತ್ತಿದೆ.

ಉದ್ಯಮಸಂಪಾದಿಸಿ

ಇತ್ತೀಚೆಗೆ ಇಲ್ಲಿ ಉಣ್ಣೆ ನೇಯ್ಗೆ ಉದ್ಯಮ ಬೆಳೆದಿದೆ.ಪ್ರವಾಸೋದ್ಯಮ ಮುಖ್ಯ ಉದ್ಯಮ.

ಜನಸಂಖ್ಯೆಸಂಪಾದಿಸಿ

ಜನಸಂಖ್ಯೆ ೫,೬೮೩ (೨೦೧೪). ಇವರಲ್ಲಿ ಜರ್ಮನ್ ಭಾಷೆ ಬಳಸುವ ಪ್ರಾಟೆಸ್ಟಂಟರೇ ಹೆಚ್ಚು.ಚಾರಿತ್ರಿಕವಾಗಿ ಜನಸಂಖ್ಯಾ ಬೆಳವಣಿಗೆ ತಖ್ತೆ ಇಲ್ಲಿದೆ.[೧][೨]

ಉಲ್ಲೇಖಗಳುಸಂಪಾದಿಸಿ

ಬಾಹ್ಯ ಸಂಪರ್ಕಗಳುಸಂಪಾದಿಸಿ

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: