ಇಂಟರ್ನೇಷನಲ್ ಟೆಕ್ ಪಾರ್ಕ್

ಇಂಟರ್ನೇಷನಲ್ ಟೆಕ್ ಪಾರ್ಕ್ ಅಥವಾ ಐ.ಟಿ.ಪಿ.ಎಲ್/ ಐ.ಟಿ.ಪಿ.ಬಿ. (ಇಂಟರ್ನೇಷನಲ್ ಟೆಕ್ ಪಾರ್ಕ್ ಬೆಂಗಳೂರು )ಎಂದು ಕರೆಯಲ್ಪಡುವ ಇದೊಂದು ದೇಶದ ಉನ್ನತ ಮಟ್ಟದ ತಾಂತ್ರಿಕ ಪಾರ್ಕ ಆಗಿದ್ದು, ಅಸ್ಸೆಂಡಾಸ ನಿಂದ ನಿರ್ಮಾಣಗೊಂಡು ನಿಭಾಯಿಸಲ್ಪಡುತ್ತಿದೆ. ಐ.ಟಿ.ಬಿ.ಪಿ ಯು 2,00,000 ಚ.ಅಡಿ ವಿಸ್ತಿರ್ಣ ಹೊಂದಿದ್ದು ಒಟ್ಟು 233 ಕಂಪನಿಗಳನ್ನೊಳಗೊಂಡಿದೆ. 1998 ರಲ್ಲಿ ಉದ್ಘಾಟನೆಗೊಂಡ ಇದು, ವೈಟ್ ಫಿಲ್ಡ್ ರೋಡನಲ್ಲಿದ್ದು ಬೆಂಗಳೂರಿನ ಕೇಂದ್ರಭಾಗದಿಂದ 18ಕಿ.ಮೀ. ದೂರದಲ್ಲಿದೆ. ಐ.ಟಿ.ಬಿ.ಪಿ ಯು ಡಿಸ್ಕವರರ್, ಇನ್ನೊವೆಟರ್, ಕ್ರಿಯೇಟರ್, ಪಿಯೊನೀರ್ ಮತ್ತು ವೋಯೆಜರ್ ಎಂಬ ಕಟ್ಟಡಗಳನ್ನು ಒಳಗೊಂಡಿದೆ. ಕೇಂದ್ರಸ್ಥಾನದಿಂದ ನಿಯಂತ್ರಿಸಲ್ಪಡುವ ಹವಾ ನಿಯಂತ್ರಕಗಳು, ಲಿಫ್ಟ್ ಗಳು, ಅಗ್ನಿ ಪ್ರತಿರೋಧಕಗಳು, ನೀರಿನ ಮಟ್ಟಗಳು ಹಾಗು ಬೆಳಕಿನ ವ್ಯವಸ್ಥೆಯು ಕಟ್ಟಡಗಳ ನಿರ್ವಹಣೆಯನ್ನು ಸುಲಲಿತವನ್ನಾಗಿ ಮಾಡುತ್ತದೆ. ಭಾರತದ ಆರು ಮಂಚೂಣಿಯಲ್ಲಿರುವ ದೂರವಾಣಿ ಕೇಂದ್ರಗಳು ಇದರಲ್ಲಿ ತಮ್ಮ ಸ್ಥಾನಗಳನ್ನು ಹೊಂದಿವೆ. ಐ.ಟಿ.ಬಿ.ಪಿ ಯು 24 ಘಂಟೆ ಕಣ್ಗಾವಲಿನ ವ್ಯವಸ್ಥೆಯನ್ನು ಹೊಂದಿದ್ದು, ಎಂತಹ ವಿಪರೀತ ಪರಿಸ್ಥಿತಿಯನ್ನೂ ನಿಭಾಯಿಸಬಲ್ಲ ತರಬೇತಿ ಪಡೆದ ಸಿಬ್ಬಂದಿಯನ್ನು ಹೊಂದಿದೆ. ಕಾರ್ಯನಿರ್ವಹಣೆಯನ್ನು ಇನ್ನೂ ಸುಗಮಗೊಳಿಸಲು ನೀರು ಶೇಖರಣೆ ಮತ್ತು ಶುದ್ಧಿಕರಣ ವ್ಯವಸ್ಥೆಯನ್ನೂ ಹೊಂದಿದೆ. ದೇಶದ ಉನ್ನತ ಬ್ಯಾಂಕುಗಳ ಬ್ಯಾಂಕಿಂಗ್ ಹಾಗು ಎ.ಟಿ.ಎಮ್ ಗಳ ಸೌಲಭ್ಯವೂ ಇಲ್ಲಿದೆ. ಇಲ್ಲಿರುವ ಇನ್ನೂ ಕೆಲವು ಸೌಲಭ್ಯಗಳೆಂದರೆ ಚಿತ್ರಮಂದಿರ, ವ್ಯಾಯಮಶಾಲೆ, ಮೊಬೈಲ್ ಫೊನುಗಳ ಶಾಖೆ, ಗಣಕ ಯಂತ್ರದ ಉಪಕರಣಗಳ ಅಂಗಡಿಗಳು, ಪುಸ್ತಕ ಮಳಿಗೆಗಳು ಮತ್ತು ಉಪಹಾರಗೃಹಗಳು.

ಸ್ಥಳ ನಿರ್ದೇಶನ ಬದಲಾಯಿಸಿ

ಹೊರಗಿನ ಕೊಂಡಿಗಳು ಬದಲಾಯಿಸಿ