ಮನೋವೀಕ್ಷಣವಾದ

(ಇಂಗಿತಜ್ಞ ಇಂದ ಪುನರ್ನಿರ್ದೇಶಿತ)

ಮನೋವೀಕ್ಷಣವಾದವು ಒಂದು ಪ್ರದರ್ಶನ ಕಲೆ. ಇದರಲ್ಲಿ ಮನೋವೀಕ್ಷಣವಾದಿಗಳು ಎಂದು ಕರೆಯಲ್ಪಡುವ ಇದರ ಅಭ್ಯಾಸಿಗಳು ಅತಿಯಾಗಿ ವಿಕಸಿತ ಮಾನಸಿಕ ಅಥವಾ ಸಾಕ್ಷಾತ್ಕರಿಸಿಕೊಂಡ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತಿರುವಂತೆ ಕಾಣುತ್ತದೆ. ಪ್ರದರ್ಶನಗಳಲ್ಲಿ ಸಂಮೋಹನ, ಅನ್ಯಮನಃಸ್ಪರ್ಶನ, ಅತೀಂದ್ರಿಯ ದೃಷ್ಟಿ, ಕಣಿ ಹೇಳುವಿಕೆ, ಪೂರ್ವವಿಷಯದ ಜ್ಞಾನ, ಮನಶ್ಚಾಲನೆ, ಪ್ರೇತ ಜ್ಞಾನವಿರುವಿಕೆ, ಮನಸ್ಸಿನ ನಿಯಂತ್ರಣ, ಜ್ಞಾಪಕಶಕ್ತಿಯ ಸಾಧನೆಗಳು, ಕಾರಣಪೂರ್ವಕ ಊಹನ ಮತ್ತು ಕ್ಷಿಪ್ರ ಗಣಿತ ಸೇರಿವೆ ಎಂದು ಕಾಣಬಹುದು. ಮನೋವೀಕ್ಷಣವಾದಿಗಳನ್ನು ಕೆಲವೊಮ್ಮೆ ಅತೀಂದ್ರಿಯ ಶಕ್ತಿಯುಳ್ಳ ಮನೋರಂಜನೆಗಾರರೆಂದು ವರ್ಗೀಕರಿಸಲಾಗುತ್ತದೆ, ಆದರೆ ಆ ವರ್ಗವು ಅತೀಂದ್ರಿಯ ಗ್ರಾಹಿಗಳು ಮತ್ತು ಬಿಜ಼ಾರಿಸ್ಟ್‌ಗಳಂತಹ ಮನೋವೀಕ್ಷಣವಾದಕ್ಕೆ ಸಂಬಂಧಿಸಿರದ ಪ್ರದರ್ಶನಕಾರರನ್ನೂ ಹೊಂದಿದೆ.

ಆಧುನಿಕ ಮನೋವೀಕ್ಷಣವಾದಿಗಳು ತಮ್ಮ ಪ್ರದರ್ಶನಗಳಲ್ಲಿ ತೋರಿಸುವ ಬಹುತೇಕ ಭಾಗವನ್ನು ನೇರವಾಗಿ ೧೯ನೇ ಶತಮಾನದಲ್ಲಿ ವಾಹಕರು, ಪ್ರೇತ ಸಂಪರ್ಕವಾದಿಗಳು, ಮತ್ತು ಅಭೌತಶಕ್ತಿಗಳುಳ್ಳವರು ಕೈಗೊಳ್ಳುತ್ತಿದ್ದ ಅಲೌಕಿಕ ಶಕ್ತಿಯ ಪರೀಕ್ಷೆಗಳಿಗೆ ಪತ್ತೆಹಚ್ಚಬಹುದು.[] ಆದರೆ, ಮನೋವೀಕ್ಷಣವಾದದ ಇತಿಹಾಸ ಇನ್ನಷ್ಟು ಹಿಂದಕ್ಕೆ ಹೋಗುತ್ತದೆ. ಕಾಲಜ್ಞಾನಿಗಳು ಮತ್ತು ಆರಕಲ್‍ಗಳ ವರದಿಗಳನ್ನು ಪ್ರಾಚೀನ ಗ್ರೀಕರ ಕೃತಿಗಳಲ್ಲಿ ಮತ್ತು ಬೈಬಲ್‍ಹಳೆ ಒಡಂಬಡಿಕೆಯಲ್ಲಿ ಕಾಣಬಹುದು. ಐಂದ್ರಜಾಲಿಕರ ಪೈಕಿ, ಸಾಮಾನ್ಯವಾಗಿ ೧೫೭೨ರಲ್ಲಿ ರಾಜತಂತ್ರಜ್ಞ ಮತ್ತು ಕೈಚಳಕದ ಐಂದ್ರಜಾಲಿಕ ಗಿರೋಲಾಮೊ ಸ್ಕೋಟೊ ತೋರಿಸಿದ ಮನೋವೀಕ್ಷಣವಾದ ಪ್ರದರ್ಶನವನ್ನು ದಾಖಲಿತವಾಗಿರುವ ಅತ್ಯಂತ ಮುಂಚಿನ ಪ್ರದರ್ಶನಗಳಲ್ಲಿ ಒಂದು ಎಂದು ಉಲ್ಲೇಖಿಸಲಾಗುತ್ತದೆ. ಮನೋವೀಕ್ಷಣವಾದದ ಪ್ರದರ್ಶನವು ಚಳಕಗಳು, ಕಳ್ಳಾಟಗಳು, ತಪ್ಪು ನಿರ್ದೇಶನ, ಮತ್ತು ಇಂದ್ರಜಾಲದ ಇತರ ಕೌಶಲಗಳ ಜೊತೆಗೆ ಈ ತತ್ತ್ವಗಳನ್ನು ಬಳಸಬಹುದು.

ಸಮಕಾಲೀನ ಮನೋವೀಕ್ಷಣವಾದಿಗಳು ಹಲವುವೇಳೆ ತಮ್ಮ ಪ್ರದರ್ಶನವನ್ನು ಬೀದಿಗಳ ಮೇಲೆ ಒಯ್ಯುತ್ತಾರೆ ಮತ್ತು ಚಮತ್ಕಾರಗಳನ್ನು ವಾಸ್ತವ, ಸಂದೇಹಪಡದ ಪ್ರೇಕ್ಷಕರ ಮುಂದೆ ಪ್ರದರ್ಶಿಸುತ್ತಾರೆ. ಪ್ರೇಕ್ಷಕರಲ್ಲಿ ಯಾದೃಚ್ಛಿಕ ಸದಸ್ಯರನ್ನು ಸಮೀಪಿಸಿ ತಮ್ಮ ಅತೀಂದ್ರಿಯ ಶಕ್ತಿಗಳನ್ನು ತೋರಿಸಿಕೊಡುವಂತೆ ಕೇಳಿಕೊಳ್ಳುವ ಮೂಲಕ ಅವರು ಹೀಗೆ ಮಾಡುತ್ತಾರೆ. ಪ್ರದರ್ಶನದ ಈ ವಿಧಾನವನ್ನು ಅಳವಡಿಸಿಕೊಳ್ಳುವ ಡೆರೆನ್ ಬ್ರೌನ್‍ನಂತಹ ಪ್ರದರ್ಶನಕಾರರು ಅವರು ನೋಡಿದ್ದೆಲ್ಲವೂ ಭ್ರಮೆ ಮತ್ತು ನಿಜವಾಗಿಯೂ ಅವರ ಮನಸ್ಸನ್ನು ಓದಲಾಗುತ್ತಿಲ್ಲ ಎಂದು ಚಮತ್ಕಾರ ಶುರುವಾಗುವ ಮೊದಲು ತಮ್ಮ ಪ್ರೇಕ್ಷಕರಿಗೆ ಹೇಳುತ್ತಾರೆ. ಇದು ಇಂದ್ರಜಾಲ ಕ್ಷೇತ್ರದಲ್ಲಿ ಬಹಳ ವಿವಾದಕ್ಕೆ ಕಾರಣವಾಗಿದೆ ಏಕೆಂದರೆ ಈ ರೀತಿಯ ಜಾದುವು ನಿಜವಾದದ್ದು ಎಂದು ಪ್ರೇಕ್ಷಕರು ನಂಬಬೇಕೆಂದು ಕೆಲವು ಮನೋವೀಕ್ಷಣವಾದಿಗಳು ನಿರೀಕ್ಷಿಸುತ್ತಾರೆ, ಹಾಗೆಯೇ ಪ್ರೇಕ್ಷಕನಿಗೆ ಸುಳ್ಳು ಹೇಳುವುದು ನೈತಿಕವಾಗಿ ತಪ್ಪು ಎಂದು ಇತರರು ಭಾವಿಸುತ್ತಾರೆ.

ಉಲ್ಲೇಖಗಳು

ಬದಲಾಯಿಸಿ
  1. Cassidy, Bob: "Fundamentals of Professional Mentalism". Lybrary, 2007. pp. 7-9.