ಇಂಗಾಲದ ಸಾಲ
- ಈ ಲೇಖನ ಅಂತರ್ರಾಷ್ಟ್ರೀಯ ವ್ಯಾಪಾರದಲ್ಲಿ ಇಂಗಾಲದ ಸಾಲದ ಬಗೆಗಿದೆ.
- ವ್ಯಕ್ತಿಗಳಿಗೆ ಇಂಗಾಲದ ಸಾಲದ ಬಗೆಗೆ, ವೈಯಕ್ತಿಕ ಇಂಗಾಲದ ವ್ಯಾಪಾರ ನೋಡಿ. ಸ್ವಯಂಸೇವಾ ಯೋಜನೆಗಳಿಗೆ ಇಂಗಾಲದ ಆಫ್ಸೆಟ್ ಸಹ ನೋಡಿ.
ಹಸಿರುಮನೆ ಅನಿಲಗಳ (ಜಿಹಚ್ಜಿಗಳು) ಸಾಂದ್ರತೆಯ ಹೆಚ್ಚಳವನ್ನು ಕಡಿಮೆ ಮಾಡುವ ರಾಷ್ಟ್ರೀಯ ಹಾಗೂ ಅಂತರ್ರಾಷ್ಟ್ರೀಯ ಪ್ರಯತ್ನಗಳಲ್ಲಿ ಇಂಗಾಲದ ಸಾಲ ಕ್ಕೆ ಮುಖ್ಯ ಪಾತ್ರವಿದೆ. ಇಂಗಾಲದ ಒಂದು ಸಾಲ ಒಂದು ಟನ್ ಇಂಗಾಲಕ್ಕೆ ಸಮ. ಇಂಗಾಲದ ವ್ಯಾಪಾರ ವಿಸರ್ಜನೆಗಳ ವ್ಯಾಪಾರದ ವಿಧಾನದ ಒಂದು ಅನ್ವಯವಾಗಿದೆ. ಹಸಿರುಮನೆ ಅನಿಲಗಳ ವಿಸರ್ಜನೆಗೆ ಮಿತಿ ಹಾಕಿ ನಿಯಂತ್ರಿತ ಮೂಲಗಳ ಗುಂಪಿನಲ್ಲಿ ಈ ವಿಸರ್ಜನೆಗಳನ್ನು ವಿತರಿಸಲು ಮಾರುಕಟ್ಟೆಗಳನ್ನು ಬಳಸಲಾಗುತ್ತದೆ. ಔದ್ಯೋಗಿಕ ಮತ್ತು ವಾಣಿಜ್ಯ ಪ್ರಕ್ರಿಯೆಗಳನ್ನು ಕಡಿಮೆ ವಿಸರ್ಜನೆಗಳ ದಿಕ್ಕಿಗೆ ದೂಡಲು ಮಾರುಕಟ್ಟೆಯ ವ್ಯವಸ್ಥೆಗಳಿಗೆ ಅವಕಾಶ ಕಲ್ಪಿಸುವುದು ಇದರ ಉದ್ದೇಶ. ಇಂಗಾಲದ ಡೈಆಕ್ಸೈಡ್ ಮತ್ತಿತರ ಜಿಹೆಚ್ಜಿಗಳ ವಿಸರ್ಜನೆಯಿಂದ ಯಾವುದೇ ಖರ್ಚು ಇಲ್ಲದೆ ಇರುವಾಗಿಗಿಂತ ಆಗ ಕಡಿಮೆ "ಇಂಗಾಲ ಪ್ರಧಾನ" ವಿಧಾನಗಳು ಬಳಸಲ್ಪಡುವುವೆಂಬುದು ಇದರ ಗುರಿ. ಜಿಹೆಚ್ಜಿ ಕಡಿಮೆಗೊಳಿಸುವ ಯೋಜನೆಗಳು ಸಾಲಗಳನ್ನು ಉತ್ಪತ್ತಿಮಾಡುವುದರಿಂದ ಜಗತ್ತಿನಾದ್ಯಂತ ವ್ಯಾಪಾರದ ಭಾಗಿದಾರರಲ್ಲಿ ಇಂಗಾಲ ಕಡಿಮೆಮಾಡುವ ಯೋಜನೆಗಳಿಗೆ ಹಣಸಹಾಯ ಮಾಡಲು ಈ ವಿಧಾನವನ್ನು ಬಳಸಬಹುದು ಸ್ವತಃ ತಮ್ಮ ಇಂಗಾಲದ ಜಾಡನ್ನು ಕಡಿಮೆ ಮಾಡಲು ಇಚ್ಛಿಸುವ ವಾಣಿಜ್ಯ ಹಾಗೂ ವೈಯಕ್ತಿಕ ಗ್ರಾಹಕರಿಗೆ ಇಂಗಾಲದ ಸಾಲಗಳನ್ನು ಮಾರುವ ಅನೇಕ ಕಂಪೆನಿಗಳು ಸಹ ಇವೆ. ಈ ಇಂಗಾಲದ ಆಫ್ಸೆಟರ್ ಗಳು ಸಾಲಗಳನ್ನು ಹೂಡಿಕೆಯ ನಿಧಿ ಅಥವಾ ವೈಯಕ್ತಿಕ ಯೋಜನೆಗಳಿಂದ ಸಾಲಗಳನ್ನು ಸಂಗ್ರಹಿಸಿರುವ ಇಂಗಾಲದ ಅಭಿವೃದ್ಧಿ ಕಂಪೆನಿಯಿಂದ ಕೊಳ್ಳುತ್ತಾರೆ. ಸಾಲಗಳ ಗುಣಮಟ್ಟ ನಿಧಿಯ ಅಥವಾ ಇಂಗಾಲದ ಯೋಜನೆಯನ್ನು ಪ್ರಾಯೋಜಿಸಿದ ಅಭಿವೃದ್ಧಿ ಕಂಪೆನಿಯ ಮೌಲ್ಯಾಂಕನದ ಪ್ರಕ್ರಿಯೆ ಮತ್ತು ಶಿಷ್ಟತೆಯನ್ನು ಭಾಗಶಃ ಆಧರಿಸಿರುತ್ತದೆ. ಇದು ಅವುಗಳ ಬೆಲೆಯಲ್ಲಿ ಪ್ರತಿಫಲಿತವಾಗುತ್ತದೆ; ಸಾಮಾನ್ಯವಾಗಿ ಕಠಿಣ ಮೌಲ್ಯಾಂಕನ ಪಡೆದ ಶುದ್ಧ ಅಭಿವೃದ್ಧಿ ವ್ಯವಸ್ಥೆಗಳ ಮೂಲಕ ಮಾರಾಟವಾದ ಘಟಕಗಳಿಗಿಂತ ಸ್ವಯಂ ಸೇವಾ ಘಟಕಗಳಿಗೆ ಬೆಲೆ ಕಡಿಮೆಯಿರುತ್ತದೆ.[೧] ಎರಡು ವಿಭಿನ್ನ ಬಗೆಯ ಇಂಗಾಲದ ಸಾಲಗಳಿವೆ: ಇಂಗಾಲದ ಅಫ್ಸೆಟ್ ಸಾಲಗಳು (ಸಿಒಸಿಗಳು) ಮತ್ತು ಇಂಗಾಲ ಕಡಿಮೆಮಾಡುವ ಸಾಲಗಳು (ಸಿಆರ್ಸಿಗಳು). ಇಂಗಾಲದ ಆಫ್ಸೆಟ್ ಸಾಲಗಳಲ್ಲಿ ಶಕ್ತಿ ಉತ್ಪಾದನೆಯ ಸ್ವಚ್ಛ ರೂಪಗಳು, ಗಾಳಿಶಕ್ತಿ, ಸೌರ, ಜಲವಿದ್ಯುತ್ ಮತ್ತು ಜೈವಿಕ ಇಂಧನಗಳು ಸೇರಿವೆ. ಇಂಗಾಲ ಕಡಿಮೆಗೊಳಿಸುವ ಸಾಲಗಳಲ್ಲಿ ವಾಯುಮಂಡಲದಿಂದ ಜೈವಿಕ ಬೇರ್ಪಡಿಸುವಿಕೆಯಿಂದ ಇಂಗಾಲದ ಸಂಗ್ರಹ ಮತ್ತು ಶೇಖರಣೆ (ಅರಣ್ಯೀಕರಣ ಮತ್ತು ಪುನರರಣ್ಯೀಕರಣ), ಸಾಗರ ಮತ್ತು ಮಣ್ಣಿನ ಸಂಗ್ರಹ ಮತ್ತು ಶೇಕರಣೆಯ ಪ್ರಯತ್ನಗಳು ಸೇರಿವೆ. ಎರಡೂ ವಿಧಾನಗಳನ್ನು ಜಾಗತಿಕ ಇಂಗಾಲ ವಿಸರ್ಜನೆಯ ಬಿಕ್ಕಟ್ಟನ್ನು ಕಡಿಮೆಗೊಳಿಸಲು ಪರಿಣಾಮಕಾರಿ ಮಾರ್ಗಗಳೆಂದು ಗುರುತಿಸಲಾಗಿದೆ.
ಹಿನ್ನೆಲೆ
ಬದಲಾಯಿಸಿಅವಶೇಷ ಇಂಧನಗಳ ದಹನ ಔದ್ಯೋಗಿಕ ಹಸಿರುಮನೆ ಅನಿಲಗಳ ವಿಸರ್ಜನೆಯ ಮುಖ್ಯ ಮೂಲ, ವಿಶೇಷವಾಗಿ ಅವಶೇಷ ಇಂಧನಗಳನ್ನು (ಕಲ್ಲಿದ್ದಲು, ಕಲ್ಲಿದ್ದಲಿನಿಂದ ದೊರಕುವ ವಿದ್ಯುಚ್ಛಕ್ತಿ, ನೈಸರ್ಗಿಕ ಅನಿಲ ಮತ್ತು ಎಣ್ಣೆ) ಆಧರಿಸಿರುವ ಶಕ್ತಿ, ಸಿಮೆಂಟು, ಉಕ್ಕು, ವಸ್ತ್ರೋದ್ಯಮ, ರಸಗೊಬ್ಬರ ಮತ್ತು ಇನ್ನೂ ಅನೇಕ ಉದ್ಯಮಗಳು ಅದರ ಕಾರಣವಾಗಿವೆ. ಈ ಉದ್ಯಮಗಳು ವಿಸರ್ಜಿಸುವ ಮುಖ್ಯವಾದ ಹಸಿರುಮನೆ ಅನಿಲಗಳೆಂದರೆ ಇಂಗಾಲದ ಡೈಆಕ್ಸೈಡ್, ಮಿಥೇನ್, ನೈಟ್ರಸ್ ಆಕ್ಸೈಡ್, ಹೈಡ್ರೊಫ್ಲೊರೊಕಾರ್ಬನ್ ಗಳು (ಹಚ್ಚೆಫ್ಸಿಗಳು) ಇತ್ಯಾದಿ. ಇವುಗಳೆಲ್ಲ ಇನ್ಫ್ರಾರೆಡ್ ಶಕ್ತಿಯನ್ನು ಹಿಡಿದಿಡುವ ವಾಯುಮಂಡಲದ ಸಾಮರ್ಥ್ಯವನ್ನು ಹೆಚ್ಚಿಸಿ, ಹವಾಮಾನದ ಮೇಲೆ ಪ್ರಭಾವ ಬೀರುತ್ತವೆ. ವಿಸರ್ಜನೆಗಳನ್ನು ನಿಯಂತ್ರಿಸುವ ಅಗತ್ಯದ ಪ್ರಜ್ಞೆ ಬೆಳೆದುದರ ಫಲವಾಗಿ ಇಂಗಾಲದ ಸಾಲಗಳ ಪರಿಕಲ್ಪನೆ ಅಸ್ತಿತ್ವಕ್ಕೆ ಬಂದಿತು. ಐಪಿಸಿಸಿ (ಹವಾಮಾನ ಬದಲಾವಣೆಯ ಅಂತಸ್ಸರ್ಕಾರೀ ಸಮಿತಿ)[೨] ಹೀಗೆ ಗಮನಿಸಿದೆ:
ಇಂಗಾಲಕ್ಕೆ ನಿಜವಾದ ಅಥವಾ ಅಡಗಿರುವ ಬೆಲೆಯನ್ನು ನೀಡುವ ನೀತಿಗಳು ಉತ್ಪಾದಕರು ಮತ್ತು ಗ್ರಾಹಕರಿಗೆ ಕಡಿಮೆ ಜಿಹೆಚ್ಜಿ ಉತ್ಪನ್ನಗಳು, ತಂತ್ರಗಳು ಮತ್ತು ಪ್ರಕ್ರಿಯೆಗಳಲ್ಲಿ ಗಣನೀಯವಾಗಿ ಹಣ ಹೂಡಲು ಆಕರ್ಷಣೆಗಳನ್ನು ಸೃಷ್ಟಿಸುತ್ತವೆ. ಅಂತಹ ನೀತಿಗಳಲ್ಲಿ ಆರ್ಥಿಕ ಸಾಧನಗಳು, ಸರ್ಕಾರದ ಅನುದಾನ ಮತ್ತು ನಿಯಮಗಳು ಸೇರಿರಬಹುದು ,
ಪ್ರಾರಂಭದ ಹಂಚಿಕೆಯ ವ್ಯವಸ್ಥೆ ಮತ್ತು ದೀರ್ಘಾವಧಿ ಬೆಲೆಯ ಬಗ್ಗೆ ಸಮಂಜಸವಾದ ಮಟ್ಟದ ಮುನ್ನೋಟ ಇರುವವರೆಗೆ, ಔದ್ಯೋಗಿಕ ವಲಯದಲ್ಲಿ ಪರಿಸರಾತ್ಮಕವಾಗಿ ಪರಿಣಾಮಕಾರಿಯಾಗಿರುವ ನೀತಿಯ ಸಾಧನಗಳಲ್ಲಿ ಮಾರಬಹುದಾದ ಅನುಮತಿಯ ವ್ಯವಸ್ಥೆ ಸಹ ಒಂದಾಗಿದೆ ಎಂದು ರುಜುವಾತಾಗಿದೆ. ಈ ವ್ಯವಸ್ಥೆಯನ್ನು 170ಕ್ಕಿಂತ ಹೆಚ್ಚು ದೇಶಗಳ ಅಂತರ್ರಾಷ್ಟ್ರೀಯ ಒಪ್ಪಂದವಾದ ಕ್ಯೋಟೊ ಪ್ರೊಟೊಕಾಲ್ ನಲ್ಲಿ ಔಪಚಾರಿಕಗೊಳಿಸಲಾಯಿತು, ಮತ್ತು ಮಾರುಕಟ್ಟೆಯ ವ್ಯವ್ಸಸ್ಥೆಗಳನ್ನು ಆ ನಂತರದ ಮರಕೇಶ್ ಒಪ್ಪಂದದ ಮೂಲಕ ಒಪ್ಪಿಕೊಳ್ಳಲಾಯಿತು. ಇಲ್ಲಿ ಒಪ್ಪಿಕೊಂಡ ವ್ಯವಸ್ಥೆ ಕೆಲವು ಔದ್ಯೋಗಿಕ ಮಾಲಿನ್ಯಕಾರಕಗಳನ್ನು ಕಡಿಮೆಮಾಡುವುದರಲ್ಲಿ ಯಶಸ್ವಿಯಾದ ಯುಎಸ್ ಆಮ್ಲ ಮಳೆ ಕಾರ್ಯಕ್ರಮವನ್ನು ಹೋಲುತ್ತಿತ್ತು.
ವಿಸರ್ಜನೆಯ ಅವಕಾಶಗಳು
ಬದಲಾಯಿಸಿಅಭಿವೃದ್ಧಿ ಹೊಂದಿದ ಮತ್ತು ಹೊಂದುತ್ತಿರುವ ದೇಶಗಳಿಗೆ ಹಸಿರುಮನೆ ಅನಿಲಗಳ ವಿಸರ್ಜನೆಯ ಗರಿಷ್ಠ ಪ್ರಮಾಣದ ಮಿತಿ ಅಥವಾ ಕೋಟಾಗಳನ್ನು ಪ್ರೋಟೊಕಾಲ್ ನಲ್ಲಿ ಅದರ ಅನುಬಂಧ ಒಂದರಲ್ಲಿ ಪಟ್ಟಿಮಾಡಿದಂತೆ ಒಪ್ಪಿಕೊಳ್ಳಲಾಯಿತು[೩]. ಈ ದೇಶಗಳು ನಂತರ ಸ್ಥಳೀಯ ವ್ಯಾಪಾರಗಳು ಮತ್ತಿತರ ಸಂಸ್ಥೆಗಳ ಉದ್ದಿಮೆಗಳನ್ನು ಸಾಮಾನ್ಯವಾಗಿ "ಕಾರ್ಯನಿರತ"ರೆಂದು ಕರೆದು ಅವುಗಳ ವಿಸರ್ಜನೆಗಳಿಗೆ ಕೋಟಾಗಳನ್ನು ವಿಧಿಸುತ್ತವೆ. ದೇಶಗಳು ಇದನ್ನು ತಮ್ಮ ರಾಷ್ಟ್ರೀಯ ರಜಿಸ್ಟ್ರಿಗಳ ಮೂಲಕ ನಿರ್ವಹಿಸುತ್ತವೆ ಮತ್ತು ಇವುಗಳನ್ನು ಯುಎನ್ನೆಫ್ಸಿಸಿಸಿ ಮೌಲ್ಯಾಂಕನಗೊಳಿಸುತ್ತದೆ ಮತ್ತು ಅನುಸರಣೆಗಾಗಿ ಉಸ್ತುವಾರಿ ಮಾಡುತ್ತದೆ[೪]. ಪ್ರತಿ ಕಾರ್ಯನಿರತರಿಗೂ ಸಾಲಗಳ ಅವಕಾಶವಿರುತ್ತದೆ, ಇದರಿಂದ ಪ್ರತಿ ಘಟಕವೂ ಅದರ ಮಾಲೀಕರಿಗೆ ಒಂದು ಮೆಟ್ರಿಕ್ ಟನ್ನಿನಷ್ಟು ಇಂಗಾಲದ ಡೈಆಕ್ಸೈಡ್ ಅಥವಾ ಸಮಾನವಾದ ಇತರ ಹಸಿರುಮನೆ ಅನಿಲವನ್ನು ವಿಸರ್ಜಿಸುವ ಹಕ್ಕು ನೀಡುತ್ತದೆ. ತಮ್ಮ ಕೋಟಾಗಳನ್ನು ಉಪಯೋಗಿಸದಿರುವ ಕಾರ್ಯನಿರತರು ಅವುಗಲನ್ನು ಇಂಗಾಲದ ಸಾಲಗಳಾಗಿ ಮಾರಬಹುದು, ಮತ್ತು ತಮ್ಮ ಕೋಟಾಗಳನ್ನು ಮೀರುವ ಸಂಭವವಿರುವ ವ್ಯಾಪಾರಗಳು ಹೆಚ್ಚುವರಿ ಅವಕಾಶಗಳನ್ನು ಸಾಲಗಳಾಗಿ ಖಾಸಗಿಯಾಗಿ ಅಥವಾ ತೆರೆದ ಮಾರುಕಟ್ಟೆಯಲ್ಲಿ ಖರೀದಿಸಬಹುದು.
ಕಾಲಕ್ರಮೇಣ ಶಕ್ತಿಯ ಬೇಡಿಕೆ ಹೆಚ್ಚಿದಂತೆ, ಒಟ್ಟಾರೆ ವಿಸರ್ಜನೆಗಳು ಮಿತಿಯಲ್ಲೇ ಇರಬೇಕಾಗುತ್ತದೆ, ಆದರೆ ಇದಕ್ಕೆ ಅವಕಾಶ ಕೊಡಲು ಉದ್ಯೋಗಗಳಿಗೆ ಯೋಜನೆ ಮಾಡುವುದರಲ್ಲಿ ಸ್ವಲ್ಪ ಮಟ್ಟಿಗೆ ಸಡಿಲತನ ಮತ್ತು ಮುನ್ನೋಟದ ಅವಕಾಶ ಸಿಗುತ್ತದೆ. ಅವಕಾಶಗಳ ಮಾರಾಟಕ್ಕೆ ಅನುಮತಿ ಇರುವುದರಿಂದ ಒಬ್ಬ ಕಾರ್ಯನಿರತರು ತನ್ನ ವಿಸರ್ಜನೆಗಳನ್ನು ಕಡಿಮೆಮಾದಲು ಅತ್ಯಂತ ಲಾಭಪ್ರದ ವಿಧಾನವನ್ನು ಕಂಡುಕೊಳ್ಳಬಹುದು, ಅಂದರೆ ಹೆಚ್ಚು 'ಸ್ವಚ್ಛವಾದ' ಯಂತ್ರಗಳು ಮತ್ತು ಪದ್ಧತಿಗಳಲ್ಲಿ ಹಣ ಹೂಡಬಹುದು ಇಲ್ಲವೆ ವಿಸರ್ಜನೆಗಳನ್ನು ಹೆಚ್ಚುವರಿ 'ಕೋಟಾ' ಇರುವ ಇತರ ಕಾರ್ಯನಿರತರಿಂದ ಖರೀದಿಸಬಹುದು.
2005ರಿಂದ ಕ್ಯೋಟೋ ವ್ಯವಸ್ಥೆಯನ್ನು ಐರೋಪ್ಯ ಒಕ್ಕೂಟದಲ್ಲಿರುವ ಎಲ್ಲ ದೇಶಗಳು CO2 ವ್ಯಾಪಾರಕ್ಕಾಗಿ ಯೂರೋಪಿಯನ್ ಟ್ರೇಡಿಂಗ್ ಸ್ಕೀಂ (ಇಯು ಇಟಿಎಸ್) ಅಡಿಯಲ್ಲಿ ಅಂಗೀಕರಿಸಿವೆ ಮತ್ತು ಯೂರೋಪಿಯನ್ ಕಮಿಷನ್ ಅದರ ಮೌಲ್ಯಾಂಕನದ ಪ್ರಾಧಿಕಾರವಾಗಿದೆ[೫]. 2008 ರಿಂದ ಇಯು ಭಾಗಿದಾರರು ಪೋಟೋಕಾಲ್ ನ ಅನುಬಂಧ ಒಂದನ್ನು ಅಂಗೀಕರಿಸಿದ ಇತರ ಅಭಿವೃದ್ಧಿ ಹೊಂದಿದ ದೇಶಗಳೊಂದಿಗೆ ಜತೆಗೂಡಬೇಕು ಮತ್ತು ಮಾನವರಿಂದ ಉಂಟಾಗುವ ಅತ್ಯಂತ ಮುಖ್ಯವಾದ ಆರು ಹಸಿರುಮನೆ ಅನಿಲಗಳ ಮಾರಾಟ ಮಾಡಬೇಕು. ಕ್ಯೋಟೊ ಅಂಗೀಕರಿಸದ ಅಮೆರಿಕದಲ್ಲಿ ಮತ್ತು 2008 ರ ಮಾರ್ಚಿನಲ್ಲಿ ಅಂಗೀಕಾರ ಜಾರಿಗೊಳಿಸಿದ ಆಸ್ಟ್ರೇಲಿಯಾದಲ್ಲಿ ಅಂತಹುದೇ ವಿಧಾನಗಳನ್ನು ಪರಿಗಣಿಸಲಾಗುತ್ತಿದೆ.
ಕ್ಯೋಟೋದ 'ಸಡಿಲವಾದ ವ್ಯವಸ್ಥೆಗಳು’
ಬದಲಾಯಿಸಿಸಾಲವು ಮಿತವ್ಯಾಪಾರದ ರಾಷ್ಟ್ರೀಯ ಆಡಳಿತಗಾರರಿಂದ ಹಂಚಲಾದ ಅಥವಾ ಹರಾಜು ಮಾಡಲಾದ ವಿಸರ್ಜನೆಗಳ ಅವಕಾಶವಾಗಿರಬಹುದು ಅಥವಾ ವಿಸರ್ಜನೆಗಳ ಆಫ್ಸೆಟ್ ಆಗಿರಬಹುದು. ಅಂತಹ ಆಫ್ಸೆಟ್ ಮಾಡುವ ಅಥವಾ ಕಡಿಮೆಗೊಳಿಸುವ ಚಟುವಟಿಕೆಗಳು ಕ್ಯೋಟೊ ಪ್ರೋಟೊಕಾಲನ್ನು ಅಂಗೀಕರಿಸಿರುವ ಮತ್ತು ತನ್ನ ಇಂಗಾಲ ಯೋಜನೆಯನ್ನು ಯುಎನ್ನೆಫ್ಸಿಸಿಸಿಯ ಅನುಮೋದಿತ ವ್ಯವಸ್ಥೆಗಳಿಂದ ಮೌಲ್ಯಾಂಕನ ಗೊಳಿಸಲು ರಾಷ್ಟ್ರೀಯ ಒಪ್ಪಂದವನ್ನು ವಿಧಿಸಿರುವ ಯಾವುದೇ ಅಭಿವೃದ್ಧಿಹೊಂದುತ್ತಿರುವ ದೇಶದಲ್ಲಿ ನಡೆಯಬಹುದು. ಅನುಮೋದನೆಯಾದ ಬಳಿಕ ಈ ಘಟಕಗಳಿಗೆ ಪ್ರಮಾಣಿಸಿದ ವಿಸರ್ಜನೆ ಕಡಿಮೆಗೊಳಿಸುವಿಕೆ ಅಥವಾ ಸಿಇಆರ್ಗಳೆಂದು ಹೆಸರು. ಕ್ಯೋಟೊ ವ್ಯಾಪಾರದ ಅವಧಿಗೆ ಮುಂಚೆ ಈ ಯೋಜನೆಗಳನ್ನು ನಿರ್ಮಿಸಲು ಮತ್ತು ಸಾಲ ನೀಡಲು ಪ್ರೊಟೊಕಾಲ್ ಅವಕಾಶ ಕೊಡುತ್ತದೆ.
ಹಸಿರುಮನೆ ಅನಿಲಗಳನ್ನು ಕಡಿಮೆಮಾಡಲು ಸಾಲಗಳನ್ನು ಪಡೆಯಲು ದೇಶಗಳು ಅಥವಾ ಅಭಿವೃದ್ಧಿಹೊಂದಿದ ದೇಶಗಳ ಕಾರ್ಯನಿರತರಿಗೆ ಸಾಧ್ಯವಾಗಿಸುವ ಮೂರು ವ್ಯವಸ್ಥೆಗಳನ್ನು ಕ್ಯೋಟೊ ಪ್ರೊಟೊಕಾಲ್ ಒದಗಿಸುತ್ತದೆ[೬].
- ಜತೆಯಾಗಿ ಜಾರಿಗೊಳಿಸುವಿಕೆಯಲ್ಲಿ (ಜೆಐ) ಆಂತರಿಕ ಹಸಿರುಮನೆ ಕಡಿಮೆಗೊಳಿಸುವಿಕೆಯ ವೆಚ್ಚ ತೌಲನಿಕವಾಗಿ ಹೆಚ್ಚಾಗಿರುವ ಒಂದು ಅಭಿವೃದ್ಧಿಹೊಂದಿದ ದೇಶ ಮತ್ತೊಂದು ಅಭಿವೃದ್ಧಿಹೊಂದಿದ ದೇಶದಲ್ಲಿ ಯೋಜನೆಯನ್ನು ಸ್ಥಾಪಿಸುವುದು.
- ಸ್ವಚ್ಛ ಅಭಿವೃದ್ಧಿ ವ್ಯವಸ್ಥೆಯಲ್ಲಿ (ಸಿಡಿಎಂ) ಒಂದು ಅಭಿವೃದ್ಧಿಹೊಂದಿದ ದೇಶ ಹಸಿರುಮನೆ ಅನಿಲಗಳನ್ನು ಕಡಿಮೆಗೊಳಿಸುವಿಕೆಯ ಯೋಜನೆಯ ಚಟುವಟಿಕೆಗಳ ವೆಚ್ಚ ಸಾಮಾನ್ಯವಾಗಿ ಕಡಿಮೆ ಇರುವ ಒಂದು ಅಭಿವೃದ್ಧಿಹೊಂದುತ್ತಿರುವ ದೇಶದಲ್ಲಿ ಹಸಿರುಮನೆ ಅನಿಲಗಳನ್ನು ಕಡಿಮೆಗೊಳಿಸುವಿಕೆಯ ಯೋಜನೆಯನ್ನು ಪ್ರಯೋಜಿಸಬಹುದು, ಆದರೆ ವಾಯುಮಂಡಲದ ಮೇಲಿನ ಪ್ರಭಾವ ಜಾಗತಿಕವಾಗಿ ಸಮಾನವಾಗಿರುತ್ತದೆ. ಅಭಿವೃದ್ಧಿಹೊಂದಿದ ದೇಶಕ್ಕೆ ತನ್ನ ವಿಸರ್ಜನೆ ಕಡಿಮೆಗೊಳಿಸುವಿಕೆಯ ಗುರಿಗಳನ್ನು ಸಾಧಿಸಿದ್ದಕ್ಕೆ ಸಾಲಗಳನ್ನು ಕೊಡಲಾಗುವುದು ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶ ಬಂಡವಾಳದ ಹೂಡಿಕೆ ಮತ್ತು ಸ್ವಚ್ಛವಾದ ತಂತ್ರಜ್ಞಾನ ಅಥವಾ ಭೂಮಿಯ ಉಪಯೋಗದಲ್ಲಿ ಲಾಭಕರ ಬದಲಾವಣೆಯನ್ನು ಪಡೆಯುವುದು.
- ಅಂತರ್ರಾಷ್ಟ್ರೀಯ ವಿಸರ್ಜನೆಗಳ ವ್ಯಾಪಾರದಡಿಯಲ್ಲಿ (ಐಇಟಿ) ದೇಶಗಳು ತಮ್ಮ ಅವಕಾಶಗಳ ಕೊರತೆಗಳನ್ನು ಪೂರೈಸಲು ಅಂತ್ರ್ರಾಷ್ಟ್ರೀಯ ಇಂಗಾಲದ ಸಾಲದ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಬಹುದು. ಹೆಚ್ಚುವರಿ ಸಾಲಗಳಿರುವ ದೇಶಗಳು ಅವುಗಳನ್ನು ಕ್ಯೋಟೊ ಪ್ರೊಟೊಕಾಲಿನಡಿಯಲ್ಲಿ ಮಿತವಾದ ವಿಸರ್ಜನೆಯ ಬಾಧ್ಯತೆಗಳಿರುವ ದೇಶಗಳಿಗೆ ಮಾರಬಹುದು.
ಈ ಇಂಗಾಲದ ಯೋಜನೆಗಳನ್ನು ಒಂದು ದೇಶದ ಸರ್ಕಾರ ಅಥವಾ ದೇಶದಲ್ಲಿನ ಕಾರ್ಯನಿರತರು ಸೃಷ್ಟಿಸಬಹುದು. ವಾಸ್ತವವಾಗಿ, ಬಹಳಷ್ಟು ವ್ಯವಹಾರಗಳನ್ನು ದೇಶಗಳ ಸರ್ಕಾರಗಳು ನಡೆಸುವುದಿಲ್ಲ ಆದರೆ ತಮ್ಮ ದೇಶದಿಂದ ಕೋಟಾಗಳು ವಿಧಿಸಲ್ಪಟ್ಟಿರುವ ಕಾರ್ಯನಿರತರು ನಡೆಸುತ್ತಾರೆ.
ವಿಸರ್ಜನೆಯ ಮಾರುಕಟ್ಟೆಗಳು
ಬದಲಾಯಿಸಿವ್ಯಾಪಾರಕ್ಕಾಗಿ, ಒಂದು ಅವಕಾಶ ಅಥವಾ ಸಿಇಆರನ್ನು ಒಂದು ಮೆಟ್ರಿಕ್ ಟನ್ CO2 ವಿಸರ್ಜನೆಗೆ ಸಮಾನವೆಂದು ಪರಿಗಣಿಸಲಾಗುತ್ತದೆ. ಈ ಅವಕಾಶಗಳನ್ನು ಖಾಸಗಿಯಾಗಿ ಮಾರಬಹುದು ಅಥವಾ ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಮಾರುಕಟ್ಟೆ ಬೆಲೆಗೆ ಮಾರಬಹುದು. ಇವು ಅಂತರ್ರಾಷ್ಟ್ರೀಯವಾಗಿ ಮಾರಾಟವಾಗುತ್ತವೆ ಮತ್ತು ಇತ್ಯರ್ಥವಾಗುತ್ತವೆ ಮತ್ತು ಅದರಿಂದ ದೇಶಗಳ ನಡುವೆ ಅವಕಾಶಗಳನ್ನು ವರ್ಗಾಯಿಸಬಹುದು. ಪ್ರತಿ ಅಂತರ್ರಾಷ್ಟ್ರೀಯ ವರ್ಗಾವಣೆಯನ್ನು ಯುಎನ್ನೆಫ್ಸಿಸಿಸಿ ಮೌಲ್ಯಾಂಕನ ಗೊಳಿಸುತ್ತದೆ. ಐರೋಪ್ಯ ಒಕ್ಕೂಟದ ಪ್ರತಿ ಮಾಲೀಕತ್ವದ ವರ್ಗಾವಣೆಯನ್ನು ಯೂರೋಪಿಯನ್ ಕಮಿಷನ್ ಹೆಚ್ಚುವರಿಯಾಗಿ ಮೌಲ್ಯಾಂಕನ ಗೊಳಿಸುತ್ತದೆ.
ಅವಕಾಶಗಳ ತಕ್ಷಣದ ಮಾರುಕಟ್ಟೆಗಾಗಿ ಹವಾಮಾನ ವಿನಿಮಯಗಳನ್ನು ಮತ್ತು ಮಾರುಕಟ್ಟೆ ಬೆಲೆಯನ್ನು ಪತ್ತೆಹಚ್ಚಲು ಮತ್ತು ಗತಿಶೀಲತೆಯನ್ನು ಉಳಿಸಿಕೊಳ್ಳಲು ಸಹಾಯವಾಗಲು ಫ್ಯೂಚರ್ಸ್ ಹಾಗೂ ಆಯ್ಕೆಗಳ ಮಾರುಕಟ್ಟೆಯನ್ನು ಸ್ಥಾಪಿಸಲಾಗಿದೆ. ಇಂಗಾಲದ ಬೆಲೆಗಳನ್ನು ಸಾಮಾನ್ಯವಾಗಿ ಇಂಗಾಲದ ಡೈ ಆಕ್ಸೈಡಿನ ಒಂದು ಟನ್ನಿಗೆ ಇಷ್ಟು ಯೂರೋಗಳೆಂದು ಅಥವಾ ಅದರ ಸಮಾನವಾಗಿ (CO2e) ಕೂಗಲಾಗುತ್ತದೆ. ಇತರ ಹಸಿರುಮನೆ ಅನಿಲಗಳನ್ನೂ ವ್ಯಾಪಾರ ಮಾಡಬಹುದು, ಆದರೆ ಅವುಗಳನ್ನು ಅವುಗಳ ಜಾಗತಿಕ ಉಷ್ಣೀಕರಣದ ಸಾಧ್ಯತೆಯನ್ನು ಆಧರಿಸಿ ಇಂಗಾಲದ ಡೈಆಕ್ಸೈಡಿನ ಅಪವರ್ತ್ಯಗಳಾಗಿ ಪರಿಗಣಿಸಲಾಗುತ್ತದೆ. ಈ ಲಕ್ಷಣಗಳು ವ್ಯಾಪಾರಗಳ ಮೇಲೆ ಕೋಟಾಗಳ ಆರ್ಥಿಕ ಪ್ರಭಾವವನ್ನು ಕಡಿಮೆಗೊಳಿಸುವುದಲ್ಲದೆ ರಾಷ್ಟ್ರೀಯ ಹಾಗೂ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಕೋಟಾಗಳ ಅನುಸರಣೆಯನ್ನು ಖಚಿತಪಡಿಸುತ್ತವೆ.
ಸದ್ಯಕ್ಕೆ ಇಂಗಾಲದ ಅವಕಾಶಗಳ ವ್ಯಾಪಾರ ನಡೆಯುತ್ತಿರುವ ಐದು ವಿನಿಮಯಗಳಿವೆ: ಚಿಕಾಗೊ ಹವಾಮಾನ ವಿನಿಮಯ, ಐರೋಪ್ಯ ಹವಾಮಾನ ವಿನಿಮಯ, ನಾರ್ಡ್ ಪೂಲ್, ಪವರ್ ನೆಕ್ಸ್ಟ್ ಮತ್ತು ಐರೋಪ್ಯ ಶಕ್ತಿ ವಿನಿಮಯ. ಇತ್ತೀಚೆಗೆ ನಾರ್ಡ್ ಪೂಲ್ ಪ್ರಮಾಣಿತ ವಿಸರ್ಜನೆ ಕಡಿಮೆಗೊಳಿಸುವಿಕೆಗಳು (ಸಿಇಆರ್ಗಳು) ಎಂದು ಕರೆಯಲ್ಪಡುವ ಸಿಡಿಎಂ ಇಂಗಾಲ ಯೋಜನೆಯಿಂದ ಉತ್ಪತ್ತಿಯಾದ ಆಫ್ಸೆಟ್ ಗಳನ್ನು ವ್ಯಾಪಾರ ಮಾಡಲು ಒಂದು ಕರಾರನ್ನು ಪಟ್ಟಿಮಾಡಿತು. ಅನೇಕ ಕಂಪೆನಿಗಳು ಈ ವಿನಿಮಯಗಳಲ್ಲಿ ಒಂದರಲ್ಲಿ ವ್ಯಾಪಾರ ಮಾಡಬಹುದಾದ ಸಾಲಗಳನ್ನು ಉತ್ಪತ್ತಿಮಾಡಲು ವಿಸರ್ಜನೆಗಳ ಕಡಿಮೆಗೊಳಿಸುವಿಕೆ, ಆಫ್ಸೆಟ್ ಮತ್ತು ಬೇರ್ಪಡಿಸುವಿಕೆಯ ಕಾರ್ಯಕ್ರಮಗಳನ್ನು ನಡೆಸುತ್ತವೆ. ಕನಿಷ್ಠ ಒಂದು ಖಾಸಗಿ ಎಲೆಕ್ಟ್ರಾನಿಕ್ ಮಾರುಕಟ್ಟೆಯನ್ನು 2008 ರಲ್ಲಿ ಸ್ಥಾಪಿಸಲಾಯಿತು: ಕ್ಯಾಂಟರ್ಸಿಒಟುಇ[೭].
ಲಂಡನ್ ನಗರದಲ್ಲಿ ಆರ್ಥಿಕ ಸೇವೆಗಳಲ್ಲಿ ಬಹಳ ಬೇಗ ಬೆಳೆಯುತ್ತಿರುವ ವಲಯಗಳಲ್ಲಿ ವಿಸರ್ಜನೆಯ ನಿರ್ವಹಣೆಯೂ ಒಂದು. 30 ಬಿಲಿಯ ಯೂರೋ ಬೆಲೆಯ ಈ ಮಾರುಕಟ್ಟೆ ಒಂದು ದಶಕದೊಳಗಾಗಿ 1 ಟ್ರಿಲಿಯ ಯೂರೋಗಳಿಗೆ ಬೆಳೆಯಲಿದೆ[ಸಾಕ್ಷ್ಯಾಧಾರ ಬೇಕಾಗಿದೆ]. ಬಾರ್ಕ್ಲೇಸ್ ಕ್ಯಾಪಿಟಲ್ ನ ಪರಿಸರ ಮಾರುಕಟ್ಟೆಗಳ ಮುಖ್ಯಸ್ಥರಾದ ಲೂಯಿ ರೆಡ್ಶಾ "ಇಂಗಾಲ ಪ್ರಪಂಚದ ಅತಿದೊಡ್ಡ ದಿನಸಿ ಮಾರುಕಟ್ಟೆಯಾಗಲಿದೆ ಮತ್ತು ಅದು ಪ್ರಪಂಚದಲ್ಲೇ ಅತಿದೊಡ್ಡ ಮಾರುಕಟ್ಟೆಯೂ ಆಗಬಹುದು" ಎಂದು ಮುಂಗಾಣುತ್ತಾರೆ.[೮]
ಇಂಗಾಲಕ್ಕೆ ಮಾರುಕಟ್ಟೆ ಬೆಲೆಯನ್ನು ನಿಗದಿಪಡಿಸುವುದು
ಬದಲಾಯಿಸಿThis section includes a list of references, related reading or external links, but the sources of this section remain unclear because it lacks inline citations. (August 2008) |
ನಿಯಂತ್ರಿಸದಿದ್ದರೆ, ಶಕ್ತಿಯ ಉಪಯೋಗ ಮತ್ತು ತತ್ಫಲವಾಗಿ ವಿಸರ್ಜನೆಯ ಮಟ್ಟಗಳು ಕಾಲಕ್ರಮೇಣ ಹೆಚ್ಚುತ್ತಲೇ ಇರುವುವೆಂದು ಊಹಿಸಬಹುದಾಗಿದೆ. ಹೀಗಾಗಿ ಸಾಲಗಳನ್ನು ಕೊಳ್ಳಲು ಬಯಸುವ ಕಂಪೆನಿಗಳ ಸಂಖ್ಯೆ ಹೆಚ್ಚುವುದು, ಮತ್ತು ಪೂರೈಕೆ ಹಾಗೂ ಬೇಡಿಕೆಯ ನಿಯಮಗಳು ಮಾರುಕಟ್ಟೆಯ ಬೆಲೆಯನ್ನು ಹೆಚ್ಚಿಸುತ್ತವೆ, ಇದರಿಂದ ಹೆಚ್ಚು ಗುಂಪುಗಳಿಗೆ ಪರಿಸರಸ್ನೇಹಿ ಚಟುವಟಿಕೆಗಳನ್ನು ಕೈಗೊಳ್ಳಲು ಪ್ರೋತ್ಸಾಹ ದೊರೆತು ಇಂಗಾಲದ ಸಾಲಗಳನ್ನು ಸಹ ಉತ್ಪಾದಿಸುತ್ತವೆ.ಕ್ಯೋಟೊ ಅಸೈನ್ಡ್ ಅಮೌಂಟ್ ಯೂನಿಟ್ (ಏಏಯು) ನಂತಹ ವೈಯಕ್ತಿಕ ಅವಕಾಶ ಅಥವಾ ಅದಕ್ಕೆ ಬಹುಸಮೀಪವಾದ ಯುರೋಪಿಯನ್ ಯೂನಿಯನ್ ಅಲೊಯನ್ಸ್ (ಇಯುಎ)ಗೆ ಸಿಇಆರ್ ನಂತಹ ಆಫ್ಸೆಟ್ ಗಿಂತ ವಿಭಿನ್ನವಾದ ಮಾರುಕಟ್ಟೆ ಬೆಲೆ ಇರಬಹುದು. ಇದಕ್ಕೆ ಕಾರಣ ಸಿಇಆರ್ಗಳಿಗೆ ಅಭಿವೃದ್ಧಿಪಡಿಸಿರುವ ದ್ವಿತೀಯ ಮಾರುಕಟ್ಟೆ ಇಲ್ಲದಿರುವುದು, ಯೋಜನೆಗಳ ನಡುವೆ ಸಮರೂಪತೆ ಇಲ್ಲದಿರುವುದರಿಂದ ಬೆಲೆ ನಿಗದಿಪಡಿಸುವುದರಲ್ಲಿ ಕಷ್ಟ ಮತ್ತು ಪೂರಕತೆಯ ತತ್ವ ಮತ್ತು ಅದರ ಆಯಸ್ಸಿನ ಪ್ರಶ್ನೆಗಳು. ಇದಲ್ಲದೆ ಸ್ವಚ್ಛ ಅಭಿವೃದ್ಧಿ ವ್ಯವಸ್ಥೆಯಡಿಯಲ್ಲಿನ ಇಂಗಾಲದ ಯೋಜನೆಯಿಂದ ಉತ್ಪತ್ತಿಯಾದ ಆಪ್ಸೆಟ್ ಗಳ ಮೌಲ್ಯ ಸೀಮಿತವಾಗಿರುತ್ತದೆ ಏಕೆಂದರೆ ಇಯು ಇಟಿಎಸ್ ನಲ್ಲಿರುವ ಕಾರ್ಯನಿರತರಿಗೆ ಅವರ ಅವಕಾಶದ ಶೇಕಡಾ ಎಷ್ಟು ಭಾಗವನ್ನು ಈ ಸಡಿಲವಾದ ವ್ಯವಸ್ಥೆಗಳ ಮೂಲಕ ಪೂರೈಸಬಹುದೆಂದು ನಿರ್ಬಂಧವಿರುತ್ತದೆ.ಯಾಲೆ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರಾಚಾರ್ಯ ವಿಲಿಯಂ ನಾರದ ಹುಸ್ ಪ್ರಕಾರ ಹಸಿರುಮನೆ ಅನಿಲಗಳ ವಿಸರ್ಜನೆಗಳನ್ನು ಪರಿಣಾಮಕಾರಿಯಾಗಿ ಮಿತಗೊಳಿಸಲು ಅಗತ್ಯವಾದ ಆರ್ಥಿಕ ಉತ್ಪಾದನೆಯ ವ್ಯವಸ್ಥೆಗಳ ಬದಲಾವಣೆ ಮತ್ತು ನಡವಳಿಕೆಗಳಲ್ಲಿ ಬದಲಾವಣೆಯನ್ನು ಪ್ರೋತ್ಸಾಹಿಸಲು ಇಂಗಾಲದ ಬೆಲೆ ಸಾಕಷ್ಟು ಹೆಚ್ಚಾಗಿರಬೇಕು.
ಇಂಗಾಲದ ಬೆಲೆಯನ್ನು ಹೆಚ್ಚಿಸುವುದು ನಾಲ್ಕು ಗುರಿಗಳನ್ನು ಸಾಧಿಸುವುದು. ಮೊದಲಿಗೆ ಅದು ಯಾವ ವಸ್ತುಗಳು ಮತ್ತು ಸೇವೆಗಳು ಅಧಿಕ ಇಂಗಾಲದವು ಮತ್ತು ಅದರಿಂದ ಹೆಚ್ಚು ಮಿತವಾಗಿ ಬಳಸಬೇಕು ಎಂಬುದರ ಬಗ್ಗೆ ಗ್ರಾಹಕರಿಗೆ ಸಂಕೇತಗಳನ್ನು ನೀಡುವುದು. ಎರಡನೆಯದಾಗಿ ಅದು ಯಾವ ಕಚ್ಚಾವಸ್ತುಗಳು ಹೆಚ್ಚು ಇಂಗಾಲ ಬಳಸುವುವು (ಕಲ್ಲಿದ್ದಲು ಮತ್ತು ಎಣ್ಣೆಯಂತಹವು) ಮತ್ತು ಕಡಿಮೆ ಬಳಸುತ್ತವೆ ಅಥವಾ ಇಲ್ಲವೇ ಇಲ್ಲ (ನೈಸರ್ಗಿಕ ಅನಿಲ ಅಥವಾ ಅಣುಶಕ್ತಿಯಂತಹವು) ಎಂಬುದರ ಬಗ್ಗೆ ಉತ್ಪಾದಕರಿಗೆ ಸಂಕೇತಗಳನ್ನು ನೀಡುವುದು, ಆದ್ದರಿಂದ ಕಡಿಮೆ ಇಂಗಾಲವನ್ನು ಬಳಸುವ ಕಚ್ಚಾ ವಸ್ತುಗಳನ್ನು ಬದಲಾಗಿ ಉಪಯೋಗಿಸಲು ಕಂಪೆನಿಗಳಿಗೆ ಪ್ರೇರಣೆ ಸಿಗುವುದು. ಮೂರನೆಯದಾಗಿ ಆವಿಷ್ಕಾರಕರಿಗೆ ಮತ್ತು ಹೊಸತನ್ನು ಹುಡುಕುವವರಿಗೆ ಸದ್ಯದ ತಲೆಮಾರಿನ ತಂತ್ರಗಳನ್ನು ಬದಲಿಸುವ ಕಡಿಮೆ ಇಂಗಾಲದ ಉತ್ಪನ್ನಗಳು ಮತ್ತು ಪ್ರಕ್ರಿಯೆಗಳನ್ನು ಅಭಿವೃದ್ಧಿ ಪಡಿಸಲು ಮತ್ತು ಮತ್ತು ಪರಿಚಯಿಸಲು ಅದು ಮಾರುಕಟ್ಟೆ ಪ್ರೇರಣೆಯನ್ನು ಕೊಡುವುದು. ನಾಲ್ಕನೆಯದಾಗಿ, ಮುಖ್ಯವಾಗಿ, ಹೆಚ್ಚಾದ ಇಂಗಾಲದ ಬೆಲೆ ಈ ಮೂರೂ ಕೆಲಸಗಳನ್ನು ಮಾಡಲು ಅಗತ್ಯವಾದ ಮಾಹಿತಿಯ ಬೆಲೆಯನ್ನು ಕಡಿಮೆಗೊಳಿಸುವುದು.ಮಾರುಕಟ್ಟೆ ವ್ಯವಸ್ಥೆಯ ಮೂಲಕ ಹೆಚ್ಚಾದ ಇಂಗಾಲದ ಬೆಲೆ ಉತ್ಪನ್ನಗಳ ಬೆಲೆಗಳನ್ನು ಅವುಗಳ ಇಂಗಾಲದ ಅಂಶಕ್ಕೆ ಅನುಸಾರವಾಗಿ ಹೆಚ್ಚಿಸುವುದು. ಇಂದು ತಮ್ಮ "ಇಂಗಾಲದ ಜಾಡನ್ನು" ಕನಿಷ್ಠಗೊಳಿಸುವ ಆಶಿಸುತ್ತಿರುವ ನ್ಯಾಯಪರ ಗ್ರಾಹಕರಿಗೆ, 250 ಮೈಲಿಗಳನ್ನು ವಾಹನದಲ್ಲಿ ಅಥವಾ ವಿಮಾನದಲ್ಲಿ ಕ್ರಮಿಸುವುದರಲ್ಲಿ ಇಂಗಾಲದ ಬಳಕೆಯ ಹೋಲಿಕೆಯನ್ನು ನಿಖರವಾಗಿ ಲೆಕ್ಕಿಸುವ ಅವಕಾಶವಿಲ್ಲ. ವಸ್ತುವಿನ ಉತ್ಪಾದನೆಯ ಪ್ರತಿ ಹಂತದಲ್ಲಿ ವಿಸರ್ಜಿಸಲ್ಪಡುವ CO2 ಪ್ರಮಾಣದ ನಿಖರವಾದ ಅನುಪಾತದಲ್ಲಿ ವಸ್ತುವಿನ ಬೆಲೆಯನ್ನು ಸಮರಸಗೊಳಿಸಿದ ಇಂಗಾಲದ ತೆರಿಗೆ ಹೆಚ್ಚಿಸುವುದು. ಗೋಧಿ ಬೆಳೆದು, ಹಿಟ್ಟುಮಾಡಿ, ಸಾಗಿಸಿ ಒಂದು ಪೌಂಡು ಬ್ರೆಡ್ ಮಾಡುವುದರಿಂದ 0.01 ಟನ್ ನಷ್ಟು ಇಂಗಾಲದ ವಿಸರ್ಜನೆಗಳು ಉತ್ಪತ್ತಿಯಾದರೆ, ಆಗ ಟನ್ನಿಗೆ $30 ಇಂಗಾಲದ ತೆರಿಗೆ ವಿಧಿಸುವುದರಿಂದ ಬ್ರೆಡ್ಡಿನ ಬೆಲೆ $0.30 ಹೆಚ್ಚಾಗುವುದು. ಬೆಲೆಯ ವ್ಯವಸ್ಥೆಯಿಂದ "ಇಂಗಾಲದ ಜಾಡು" ಸ್ವಯಂಚಾಲಿತವಾಗಿ ಲೆಕ್ಕಿಸಲ್ಪಡುತ್ತದೆ. ಆದರೂ ಗ್ರಾಹಕರಿಗೆ ಬೆಲೆಯ ಎಷ್ಟು ಭಾಗ ಇಂಗಾಲದ ವಿಸರ್ಜನೆಗಳಿಂದ ಬಮ್ದಿದೆ ಎಂಬುದು ತಿಳಿಯದು, ಆದರೆ ತಮ್ಮ ಇಂಗಾಲದ ಜಾಡಿನ ಸಾಮಾಜಿಕ ವೆಚ್ಚಕ್ಕೆ ತಾವು ಬೆಲೆಯನ್ನು ಕೊಡುತ್ತಿದ್ದೇವೆಂಬ ವಿಶ್ವಾಸದೊಂದಿಗೆ ಅವರು ತಮ್ಮ ನಿರ್ಣಯಗಳನ್ನು ತೆಗೆದುಕೊಳ್ಳುವರು.
ಇಂಗಾಲದ ವಿಸರ್ಜನೆಗಳ ಸಾಮಾಜಿಕ ವೆಚ್ಚವನ್ನು ಆಧರಿಸಿ, ಇಂಗಾಲದ ಸೂಕ್ತವಾದ ಬೆಲೆ ಟನ್ನಿಗೆ ಸುಮಾರು $30 ಎಂದೂ ಹಣದುಬ್ಬರದೊಂದಿಗೆ ಇದು ಹೆಚ್ಚಬೇಕೆಂದೂ ನಾರ್ಡ್ ಹೌಸ್ ಸಲಹೆ ನೀಡಿದ್ದಾರೆ.
ಇಂಗಾಲದ ಸಾಮಾಜಿಕ ವೆಚ್ಚ ಒಂದು ಟನ್ ಹೆಚ್ಚುವರಿ ಇಂಗಾಲದ ವಿಸರ್ಜನೆಯಿಂದ ಉಂಟಾಗುವ ಹೆಚ್ಚುವರಿ ಹಾನಿ.... ಸೂಕ್ತವಾದ ಇಂಗಾಲದ ಬೆಲೆ ಅಥವಾ ಸೂಕ್ತವಾದ ಇಂಗಾಲದ ತೆರಿಗೆ, ಹವಾಮಾನದ ಹಾನಿಗಳನ್ನು ಕಡಿಮೆಗೊಳಿಸುವ ಹೆಚ್ಚಿನ ಲಾಭ ಒದಗಿಸುವ ಇಂಗಾಲದ ವಿಸರ್ಜನೆಗಳನ್ನು ಕಡಿಮೆಗೊಳಿಸುವಿಕೆಯ ಹೆಚ್ಚಿನ ವೆಚ್ಚಗಳನ್ನು ಸಮತೋಲನೆ ಮಾಡುವ, ಇಂಗಾಲದ ವಿಸರ್ಜನೆಗಳ ಮೇಲಿನ ಮಾರುಕಟ್ಟೆ ಬೆಲೆ (ಅಥವಾ ಇಂಗಾಲದ ತೆರಿಗೆ) ಆಗಿರುತ್ತದೆ.... ಒಂದು ದೇಶ ಒಂದು ಟನ್ ಇಂಗಾಲಕ್ಕೆ $30ನಷ್ಟು ಇಂಗಾಲದ ತೆರಿಗೆಯನ್ನು ವಿಧಿಸಬೇಕಾದರೆ ಪೆಟ್ರೋಲಿಗೆ ಪ್ರತಿ ಗ್ಯಾಲನ್ನಿಗೆ ಸುಮಾರು 9 ಸೆಂಟಿನಷ್ಟು ತೆರಿಗೆಯನ್ನು ವಿಧಿಸಬೇಕಾಗುವುದು. ಅದೇ ರೀತಿ ಕಲ್ಲಿದ್ದಲಿನಿಂದ ಉತ್ಪತ್ತಿಯಾಗುವ ವಿದ್ಯುಚ್ಛಕ್ತಿಯ ಮೇಲಿನ ತೆರಿಗೆ ಪ್ರತಿ kWhಗೆ 1 ಸೆಂಟ್, ಅಥವಾ ಪ್ರಸ್ತುತ ಚಿಲ್ಲರೆ ಬೆಲೆಯ ಶೇಕಡಾ 10ರಷ್ಟಾಗುವುದು. ಅಮೆರಿಕದಲ್ಲಿ ಈಗಿರುವ ಇಂಗಾಲದ ವಿಸರ್ಜನೆಗಳ ಮಟ್ಟದಲ್ಲಿ ಇಂಗಾಲದ ಒಂದು ಟನ್ನಿಗೆ $30 ತೆರಿಗೆ, ವರ್ಷಕ್ಕೆ $50 ಬಿಲಿಯ ಆದಾಯವನ್ನು ಹುಟ್ಟಿಸುವುದು.
ವಿಲಿಯಂ ನಾರ್ಡ್ ಹೌಸ್, 2008. Archived 2008-09-10 ವೇಬ್ಯಾಕ್ ಮೆಷಿನ್ ನಲ್ಲಿ.ಎ ಕ್ವೆಶ್ಚನ್ ಆಫ್ ಬ್ಯಾಲೆನ್ಸ್ -ವೈಯಿಂಗ್ ದಿ ಆಪ್ಷನ್ಸ್ ಆನ್ ಗ್ಲೋಬಲ್ ವಾರ್ಮಿಂಗ್ ಪಾಲಿಸೀಸ್, ಯಾಲೆ ಯೂನಿವರ್ಸಿಟಿ ಪ್ರೆಸ್. Archived 2008-09-10 ವೇಬ್ಯಾಕ್ ಮೆಷಿನ್ ನಲ್ಲಿ.
ಇಂಗಾಲದ ಸಾಲಗಳನ್ನು ಕೊಳ್ಳುವುದು ವಿಸರ್ಜನೆಗಳನ್ನು ಹೇಗೆ ಕಡಿಮೆಗೊಳಿಸಬಲ್ಲುದು
ಬದಲಾಯಿಸಿThis section includes a list of references, related reading or external links, but the sources of this section remain unclear because it lacks inline citations. (August 2008) |
ಇಂಗಾಲದ ಸಾಲಗಳು ಗಾಳಿಯನ್ನು ಮಲಿನಗೊಳಿಸುವ ವೆಚ್ಚಕ್ಕೆ ಹಣದ ಬೆಲೆಯನ್ನು ಕಟ್ಟುವುದರಿಂದಾಗಿ ಹಸಿರುಮನೆ ವಿಸರ್ಜನೆಗಳನ್ನು ಕಡಿಮೆಗೊಳಿಸುವಿಕೆಗೆ ಮಾರುಕಟ್ಟೆಯನ್ನು ಸೃಷ್ಟಿಸುತ್ತವೆ. ವಿಸರ್ಜನೆಗಳು ವ್ಯಾಪಾರದ ಆಂತರಿಕ ವೆಚ್ಚವಾಗುತ್ತವೆ ಮತ್ತು ಕಚ್ಚಾವಸ್ತುಗಳು ಮತ್ತಿತರ ಬಾಧ್ಯತೆಗಳು ಅಥವಾ ಆಸ್ತಿಗಳ ಜತೆಯಲ್ಲಿ ಆರ್ಥಿಕ ಸ್ಥಿತಿ ವಿವರದ ಪಟ್ಟಿಯಲ್ಲೂ ಕಾಣಸಿಗುತ್ತವೆ. ಉದಾಹರಣೆಗೆ, ವರ್ಷಕ್ಕೆ 100,000 ಟನ್ ಗಳಷ್ಟು ಹಸಿರುಮನೆ ಅನಿಲಗಳ ವಿಸರ್ಜನೆಯನ್ನು ಹೊರಹಾಕುತ್ತಿರುವ ಕಾರ್ಖಾನೆಯ ಮಾಲೀಕತ್ವ ಹೊಂದಿರುವ ವ್ಯಾಪಾರವನ್ನು ಪರಿಗಣಿಸಿರಿ. ಅಲ್ಲಿನ ಸರ್ಕಾರ ಆ ವ್ಯಾಪಾರ ಉತ್ಪಾದಿಸಬಲ್ಲ ವಿಸರ್ಜನೆಗಳನ್ನು ಮಿತಗೊಳಿಸುವ ಕಾಯದೆಯನ್ನು ವಿಧಿಸುವ ಅನುಬಂಧ ಒಂದರ ದೇಶದ್ದಾಗಿದೆ. ಆದ್ದರಿಂದ ಕಾರ್ಖಾನೆಗೆ ವರ್ಷಕ್ಕೆ 80,000 ಟನ್ನುಗಳ ಕೋಟಾ ನೀಡಲಾಗುತ್ತದೆ. ಆಗ ಕಾರ್ಖಾನೆ ತನ್ನ ವಿಸರ್ಜನೆಗಳನ್ನು 80,000 ಟನ್ನುಗಳಿಗೆ ಕಡಿಮೆಗೊಳಿಸುತ್ತದೆ ಅಥವಾ ಹೆಚ್ಚುವರಿಯನ್ನು ಆಫ್ಸೆಟ್ ಮಾಡಲು ಇಂಗಾಲದ ಸಾಲಗಳನ್ನು ಕೊಳ್ಳಬೇಕಾಗುತ್ತದೆ.ಪರ್ಯಾಯಗಳ ವೆಚ್ಚಗಳನ್ನು ಅವಗಾಹಿಸಿದ ಬಳಿಕ ವ್ಯಾಪಾರವು ಆ ವರ್ಷ ಹೊಸ ಯಂತ್ರಗಳಿಗೆ ಹಣ ಹೂಡುವುದು ಮಿತವ್ಯಯವಲ್ಲ ಅಥವಾ ಅಸಾಧ್ಯವೆಂದು ನಿರ್ಣಯಿಸಬಹುದು ಬದಲಾಗಿ ಅದು ತೆರೆದ ಮಾರುಕಟ್ಟೆಯಲ್ಲಿ ಕಾನೂನು ಪ್ರಕಾರ ಇಂಗಾಲದ ಸಾಲಗಳನ್ನು ಮಾರಲು ಸಾಧ್ಯವೆಂದು ಅನುಮೋದಿತವಾಗಿರುವ ಸಂಸ್ಥೆಗಳಿಂದ ಇಂಗಾಲದ ಸಾಲಗಳನ್ನು ಕೊಳ್ಳಲು ನಿರ್ಧರಿಸಬಹುದು.ಪರ್ಯಾಯ ಶಕ್ತಿಮೂಲಗಳ ತಯಾರಿಕೆಯ ಪ್ರಭಾವವನ್ನು ನಾವು ಪರಿಗಣಿಸಬೇಕು.ಉದಾಹರಣೆಗೆ, ದೊಡ್ಡ ಗಾಳಿಯಂತ್ರದ ತಯಾರಿಕೆ ಮತ್ತು ಸಾಗಾಣಿಕೆಯಲ್ಲಿ ಬಳಕೆಯಾಗುವ ಶಕ್ತಿ ಮತ್ತು ಇಂಗಾಲದ ವಿಸರ್ಜನೆ, ನಿರ್ದಿಷ್ಟ ಸಮಯದವರೆಗೆ ಸಾಲ ನೀಡುವಿಕೆಯನ್ನು ನಿಷೇಧಿಸಬಹುದು.
- ಮುಂಚೆ ಅವಶೇಷ ಇಂಧನವನ್ನು ಬಳಸುತ್ತಿದ್ದ ವಿದ್ಯುದುತ್ಪಾದನೆಯ ಕೇಂದ್ರಕ್ಕೆ ಪೂರೈಸಲು ಹಂದಿಸಾಕಣೆ ಕೇಂದ್ರದಿಂದ ಮಿಥೇನನ್ನು ಪಡೆಯುವ ಯೋಜನೆಯನ್ನು ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ ಸ್ಥಾಪಿಸುವುದರಿಂದ, ವಿಸರ್ಜನೆಗಳನ್ನು ಆಫ್ಸೆಟ್ ಮಾಡಲು ಮುಂದೆಬರುವ ಕಂಪೆನಿ ಒಬ್ಬ ಮಾರಾಟಗಾರರಾಗಬಹುದು. ಆದ್ದರಿಂದ ಕಾರ್ಖಾನೆಯು ಅನಿಲಗಳನ್ನು ವಿಸರ್ಜಿಸುತ್ತ ಮುಂದುವರಿದರೂ, ಆ ವರ್ಷ ವಾಯುಮಂಡಲದಿಂದ 20,000 ಟನ್ನುಗಳಷ್ಟು ಇಂಗಾಲದ ಡೈಆಕ್ಸೈಡ್ ವಿಸರ್ಜನೆಯ ಸಮತೂಕವನ್ನು ಕಡಿಮೆಗೊಳಿಸಲು ಇನ್ನೊಂದು ಗುಂಪಿಗೆ ಪಾವತಿಮಾಡುವುದು.
- ಈಗಾಗಲೇ ಹೊಸ ಕಡಿಮೆ ವಿಸರ್ಜನೆಯ ಯಂತ್ರಗಳಲ್ಲಿ ಹಣಹೂಡಿ, ತತ್ಫಲವಾಗಿ ಹೆಚ್ಚುವರಿ ಅವಕಾಶಗಳನ್ನು ಹೊಂದಿರುವ ಮತ್ತೊಬ್ಬ ಮಾರಾಟಗಾರರಿರಬಹುದು. ಅವರಿಂದ 20,000 ಟನ್ನುಗಳ ಅವಕಾಶಗಳನ್ನು ಕೊಳ್ಳುವುದರಿಂದ ಕಾರ್ಖಾನೆ ತನ್ನೆ ವಿಸರ್ಜನೆಗಳಿಗೆ ಪರಿಹಾರ ನೀಡಬಹುದು. ಅವಕಾಶಗಳ ಮಾರಾಟದಿಂದ ಮಾರಾಟಗಾರರಿಗೆ ಹೊಸ ಯಂತ್ರದ ವೆಚ್ಚಕ್ಕೆ ಸಬ್ಸಿಡಿ ಸಿಗಬಹುದು. ಕೊಳ್ಳುವವರು ಮತ್ತು ಮಾರುವವರು ಇಬ್ಬರೂ ತಮ್ಮ ಅವಕಾಶಗಳನ್ನು ಸರಿಯಾಗಿ ಉಪಯೋಗಿಸಿರುವುದನ್ನು ರುಜುವಾತು ಪಡಿಸಲು ಲೆಕ್ಕಗಳನ್ನು ಸಲ್ಲಿಸುವರು.
ಸಾಲಗಳು ಮತ್ತು ತೆರಿಗೆಗಳ ಹೋಲಿಕೆ
ಬದಲಾಯಿಸಿಇಂಗಾಲದ ಸಾಲಗಳು ಮತ್ತು ಇಂಗಾಲದ ತೆರಿಗೆಗಳು ಎರಡಕ್ಕೂ ತಮ್ಮ ಲಾಭಗಳುಂಟು. ಕ್ಯೋಟೊ ಪ್ರೋಟೊಕಾಲ್ ಗೆ ಸಹಿಮಾಡಿದವರು ಇಂಗಾಲದ ತೆರಿಗೆಗಳಿಗೆ ಪರ್ಯಾಯವಾಗಿ ಸಾಲಗಳನ್ನು ಆರಿಸಿಕೊಂಡರು ತೆರಿಗೆ ವಿಧಿಸುವ ಯೋಜನೆಗಳ ಒಂದು ಟೀಕೆಯೆಂದರೆ, ಬಹಳೊಮ್ಮೆ ಅವಕ್ಕೆ ಅಡಮಾನ ಇರುವುದಿಲ್ಲ ಮತ್ತು ಸರ್ಕಾರ ಗಳಿಸಿದ ಸ್ವಲ್ಪ ಅಥವಾ ಎಲ್ಲ ತೆರಿಗೆಗಳನ್ನು ಪರಿಣಾಮಕಾರಿಯಾಗಿ ಬಳಸದಿರಬಹುದು ಅಥವಾ ಪರಿಸರಕ್ಕೆ ಲಾಭಕಾರಕವಾಗಿ ಬಳಸದಿರಬಹುದು.ವಿಸರ್ಜನೆಗಳನ್ನು ಮಾರುಕಟ್ಟೆಯ ವಸ್ತುವಾಗಿ ಪರಿಗಣಿಸುವುದರಿಂದ ವ್ಯಾಪಾರಗಳಿಗೆ ತಮ್ಮ ಚಟುವಟಿಕೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ನಿರ್ವಹಿಸಲು ಸುಲಭವಾಗುತ್ತದೆ ಮತ್ತು ಚೆನ್ನಾಗಿ ಅರ್ಥವಾಗಿರುವ ಮಾರುಕಟ್ಟೆಯ ತತ್ವಗಳನ್ನು ಬಳಸಿ ಅರ್ಥಶಾಸ್ತ್ರಜ್ಞರು ಮತ್ತು ವ್ಯಾಪಾರಿಗಳು ಭವಿಷ್ಯದ ಬೆಲೆಗಳನ್ನು ಮುಂಗಾಣಲು ಪ್ರಯತ್ನಿಸಬಹುದು. ಹೀಗಾಗಿ ಇಂಗಾಲದ ತೆರಿಗೆಗೆ ಹೋಲಿಸಿದರೆ ಮಾರಬಹುದಾದ ಇಂಗಾಲದ ಸಾಲದ ಮುಖ್ಯ ಲಾಭಗಳು ಹೀಗಿವೆ:
- ಬೆಲೆ ನ್ಯಾಯವಾದುದೆಂದು ಅದನ್ನು ಪಾವತಿ ಮಾಡುವವರು ಭಾವಿಸುವ ಸಾಧ್ಯತೆ ಹೆಚ್ಚು[೯]. ಸಾಲಗಳಲ್ಲಿ ಹಣ ಹೂಡುವವರಿಗೆ ತಮ್ಮ ವೆಚ್ಚಗಳ ಮೇಲೆ ಹೆಚ್ಚಿನ ನಿಯಂತ್ರಣವಿರುತ್ತದೆ.[ಸಾಕ್ಷ್ಯಾಧಾರ ಬೇಕಾಗಿದೆ]
- ಕ್ಯೋಟೊ ಪ್ರೊಟೊಕಾಲಿನ ಸಡಿಲವಾದ ವ್ಯವಸ್ಥೆಗಳು ಎಲ್ಲ ಹೂಡಿಕೆಯೂ ಅದರ ಅಂತರ್ರಾಷ್ಟ್ರೀಯವಾಗಿ ಒಪ್ಪಿಕೊಂಡ ಮೌಲ್ಯಾಂಕನದ ಮೂಲಕ ನಿಜವಾದ ಮತ್ತು ದಿರ್ಘಾವಧಿ ಇಂಗಾಲವನ್ನು ಕಡಿಮೆಗೊಳಿಸುವ ಯೋಜನೆಗಳಿಗೆ ಹೋಗುತ್ತದೆಂದು ಖಚಿತಪಡಿಸುತ್ತವೆ.
- ಸರಿಯಾಗಿ ಜಾರಿಗೊಳಿಸಿದರೆ ವಿಸರ್ಜನೆಯನ್ನು ಕಡಿಮೆಗೊಳಿಸುವಿಕೆಯ ಮಟ್ಟದ ಗುರಿಯನ್ನು ಖಂಡಿತವಾಗಿ ಸಾಧಿಸಬಹುದು ಆದರೆ ತೆರಿಗೆಯ ವಿಧಾನದಲ್ಲಿ ಕಾಲಕ್ರಮೇಣ ವಾಸ್ತವವಾದ ವಿಸರ್ಜನೆಗಳು ಬದಲಾಗಬಹುದು.
- ಗಿಡಗಳನ್ನು ನೆಡುವ ಅಥವಾ ಬೇರೆ ವಿಧಾನದಿಂದ ಇಂಗಾಲವನ್ನು ಬೇರ್ಪಡಿಸುವ ಜನರು ಅಥವಾ ಕಂಪೆನಿಗಳಿಗೆ ಪುರಸ್ಕಾರ ನೀಡುವ ಚೌಕಟ್ಟನ್ನು ಅದು ಒದಗಿಸುತ್ತದೆ.
ಇಂಗಾಲದ ತೆರಿಗೆಯ ಲಾಭಗಳು ಹೀಗಿವೆ:
- ಜಾರಿಗೊಳಿಸಲು ಬಹುಶಃ ಸರಳ, ಕಡಿಮೆ ವೆಚ್ಚ ಮತ್ತು ಕಡಿಮೆ ಸಮಯ ಹಿಡಿಯುವುದು. ಈ ಲಾಭ ಪೆಟ್ರೋಲ್ ಅಥವಾ ಮನೆ ಉಷ್ಣೀಕರಣದ ಎಣ್ಣೆಯಂತಹ ಮಾರುಕಟ್ಟೆಗಳಿಗೆ ಅನ್ವಯಿಸಿದಾಗ ವಿಶೇಷವಾಗಿ ಹೆಚ್ಚಾಗಿರುತ್ತದೆ.
- ಸಾಲಗಳು ಮತ್ತು ತೆರಿಗೆಗಳು ಎರಡರಲ್ಲೂ ವಿಸರ್ಜನೆಗಳನ್ನು ಪ್ರಮಾಣೀಕರಿಸಬೇಕಾದರೂ, ಬಹುಶಃ ಕೆಲವು ಬಗೆಯ ಮೋಸಗಳ ಅಪಾಯ ಕಡಿಮೆಯಿರಬಹುದು.
- ಸಾಲಗಳನ್ನು ಹಳೆಯ ವಿಸರ್ಜನೆಗಳ ಅನುಪಾತದಲ್ಲಿ ವಿತರಿಸಿದರೆ, ಮೂಲರೇಖೆಯನ್ನು ಸ್ಥಾಪಿಸುವ ಮುಂಚೆ ದಕ್ಷತೆಯ ಸುಧಾರಣೆಗಳನ್ನು ಜಾರಿಗೊಳಿಸುವುದನ್ನು ವಿಳಂಬಗೊಳಿಸುವ ಕಂಪೆನಿಗಳಿಗೆ ಕಡಿಮೆಯಾದ ಪ್ರೋತ್ಸಾಹ.
- ಸಾಲಗಳನ್ನು ವಿತರಿಸುವಾಗ ಹೊಸ ಮತ್ತು ಬೆಳೆಯುತ್ತಿರುವ ಕಂಪೆನಿಗಳು ಸ್ಥಾಪಿತವಾಗಿರುವ ಕಂಪೆನಿಗಳಿಗೆ ಹೋಲಿಸಿದರೆ ಅನಾಕೂಲವಾಗುತ್ತದೆ.
- ಶಕ್ತಿಯ ಬೆಲೆಯ ಮೇಲೆ ನೀತಿಯ ಪ್ರಭಾವ ಏನೆಂಬುದು ಸ್ಪಷ್ಟವಾಗಿದೆ.[೧೦]
ನಿಜವಾದ ಇಂಗಾಲದ ಸಾಲಗಳನ್ನು ಸೃಷ್ಟಿಸುವುದು
ಬದಲಾಯಿಸಿಕ್ಯೋಟೊ ಪ್ರೊಟೊಕಾಲಿನಲ್ಲಿರುವ ಪೂರಕತೆಯ ತತ್ವದ ಅರ್ಥವೆಂದರೆ ಒಂದು ದೇಶ ಇಂಗಾಲದ ಸಾಲಗಳನ್ನು ಕೊಳ್ಳುವ ಮುಂಚೆ ಆಂತರಿಕವಾಗಿ ವಿಸರ್ಜನೆಗಳನ್ನು ಕಡಿಮೆಮಾಡುವಿಕೆಗೆ ಪ್ರಧಾನ್ಯ ನೀಡಿರಬೇಕು. ಆದಾಗ್ಯೂ ಅದು ಸ್ವಚ್ಛ ಅಭಿವೃದ್ಧಿ ವ್ಯವಸ್ಥೆಯನ್ನು ಸಡಿಲವಾದ ವ್ಯವಸ್ಥೆಯಾಗಿ ಸ್ಥಾಪಿಸಿತು, ಇದರಿಂದ ಮಿತಿತಲುಪಿದ ಸಂಸ್ಥೆಗಳು, ಮಿತಿಯ ಹೊರಗಿನ ವಲಯಗಳಲ್ಲಿ ನಿಜವಾದ, ಅಳೆಯಬಹುದಾದ, ಶಾಶ್ವತವಾದ ವಿಸರ್ಜನೆಯ ಕಡಿಮೆಗೊಳಿಸುವಿಕೆಯನ್ನು ಸ್ವತಃ ಅಭಿವೃದ್ಧಿಪಡಿಸಬಹುದು ಇಂಗಾಲದ ಸಾಲಗಳ ಅನೇಕ ಟೀಕೆಗಳಿಗೆ ಕಾರಣವೆಂದರೆ CO2 ಸಮಾನವಾದ ಹಸಿರುಮನೆ ಅನಿಲದ ವಿಸರ್ಜನೆಯನ್ನು ನಿಜವಾಗಿ ಕಡಿಮೆಮಾಡಲಾಗಿದೆಯೆಂದು ರುಜುವಾತು ಪಡಿಸುವುದು ಸಂಕೀರ್ಣವಾದ ಪ್ರಕ್ರಿಯೆಯಾಗಿದೆ. ಇಂಗಾಲದ ಯೋಜನೆಯ ಪರಿಕಲ್ಪನೆ ಕಳೆದ 10 ವರ್ಷಗಳಲ್ಲಿ ಸುಸಂಸ್ಕೃತವಾದಂತೆ ಈ ಪ್ರಕ್ರಿಯೆ ಬೆಳೆದುಬಂದಿದೆ.ಒಂದು ಇಂಗಾಲದ ಯೋಜನೆ ಕಾನೂನು ಪ್ರಕಾರ ನಿಜವಾದ, ಅಳೆಯಬಹುದಾದ, ಶಾಶ್ವತವಾದ ವಿಸರ್ಜನೆಯ ಕಡಿಮೆಗೊಳಿಸುವಿಕೆಯನ್ನು ಸಾಧಿಸಿದೆಯೆ ಅಥವಾ ಇಲ್ಲವೆ ಎಂದು ನಿರ್ಧರಿಸುವುದರ ಮೊದಲ ಹೆಜ್ಜೆ ಎಂದರೆ ಸಿಡಿಎಂ ವಿಧಾನದ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳುವುದು. ಇದು ಯೋಜನೆಯ ಪ್ರಯೋಜಕರು ಡೆಸಿಗ್ನೇಟೆಡ್ ಆಪರೇಷನಲ್ ಎಂಟಿಟಿ (ಡಿಒಇ)ಯ ಮೂಲಕ, ವಿಸರ್ಜನೆಯ ಕಡಿಮೆಗೊಳಿಸುವಿಕೆಯ ಸಾಧನೆಗೆ ತಮ್ಮ ಪರಿಕಲ್ಪನೆಯನ್ನು ಸಲ್ಲಿಸುವ ಪ್ರಕ್ರಿಯೆಯಾಗಿರುತ್ತದೆ. Tಸಿಡಿಎಂ ಕಾರ್ಯಕಾರಿ ಮಂಡಳಿ, ಸಿಡಿಎಂ ವಿಧಾನದ ಸಮಿತಿ ಮತ್ತು ಅವರ ತಜ್ಞ ಸಲಹೆಗಾರರೊಡನೆ, ಪ್ರತಿಯೊಂದು ಯೋಜನೆಯನ್ನು ಸಮೀಕ್ಷಿಸಿ ಅವು ಹೆಚ್ಚುವರಿ ಕಡಿಮೆಗೊಳಿಸುವಿಕೆಯನ್ನು ನಿಜವಾಗಿ ಉಂಟುಮಾದುವುವೆ ಮತ್ತು ಹೇಗೆ ಎಂಬುದನ್ನು ನಿರ್ಧರಿಸುವರು[೧೧].
ಹೆಚ್ಚುವರಿತನ ಮತ್ತು ಅದರ ಮುಖ್ಯತ್ವ
ಬದಲಾಯಿಸಿThis section includes a list of references, related reading or external links, but the sources of this section remain unclear because it lacks inline citations. (August 2008) |
ಯಾವುದೇ ಇಂಗಾಲದ ಸಾಲಕ್ಕೆ (ಆಫ್ಸೆಟ್) ಹೆಚ್ಚುವರಿತನ ಎಂಬ ಪರಿಗಣನೆಯನ್ನು ರುಜುವಾತು ಪಡಿಸಬೇಕಾದುದೂ ಬಹಳ ಮುಖ್ಯ. ಯೋಜನೆಯು ಹೇಗಾದರೂ, ಇಂಗಾಲದ ಸಾಲಗಳಿಂದ ಆದಾಯ ಇಲ್ಲದಿದ್ದರೂ ಸಹ ನಡೆದುಬಿಡುತ್ತಿತ್ತೆ ಎಂಬ ಪ್ರಶ್ನೆಯನ್ನು ಹೆಚ್ಚುವರಿತನದ ಪರಿಗಣನೆ ಉದ್ದೇಶಿಸುತ್ತದೆ. ಸಾಧಾರಣ ವ್ಯಾಪಾರಕ್ಕೆ "ಹೆಚ್ಚುವರಿಯಾದ" ಯೋಜನೆಗಳಿಂದ ಬರುವ ಇಂಗಾಲದ ಸಾಲಗಳು ಮಾತ್ರ ಒಟ್ಟಾರೆ ಪರಿಸರಕ್ಕೆ ಆಗುವ ಲಾಭಗಳನ್ನು ಪ್ರತಿಬಿಂಬಿಸುತ್ತವೆ. ಇಂಗಾಲದ ಸಾಲಗಳ ಆದಾಯ ಇಲ್ಲದಿದ್ದರೂ ಸಹ ಪ್ರಬಲವಾದ ಆರ್ಥಿಕ ಆದಾಯವನ್ನು ಕೊಡುವಂತಹ ಇಂಗಾಲದ ಯೋಜನೆಗಳು; ಅಥವಾ ಕಾನೂನು ಪ್ರಕಾರ ಮಾಡಲೇ ಬೇಕಾದವು; ಅಥವಾ ಒಂದು ಉದ್ಯಮದ ಸಾಮಾನ್ಯ ಪದ್ಧತಿಯನ್ನು ಪ್ರತಿನಿಧಿಸುವಂತಹವನ್ನು ಹೆಚ್ಚುವರಿ ಎಂದು ಪರಿಗಣಿಸಲಾಗುವುದಿಲ್ಲ ಆದರೂ ಸಹ ಹೆಚ್ಚುವರಿತನದ ಪೂರ್ತಿ ನಿರ್ಧಾರಕ್ಕೆ ವಿಶೇಷತಜ್ಞರ ಸಮೀಕ್ಷೆ ಅಗತ್ಯವಾಗುತ್ತದೆ.ಸ್ವಂತದ ಇಂಗಾಲದ ಆಫ್ಸೆಟ್ ಯೋಜನೆಗಳು ಇಂಗಾಲದ ಸಾಲದ (ಆಫ್ಸೆಟ್) ಉಪಯೋಗದಿಂದ ಉಂಟಾಗುವ ಪರಿಸರ ರಕ್ಷಣೆಯ ಕ್ಲೈಂಗಳ ನ್ಯಾಯಬದ್ಧತೆಯನ್ನು ಖಚಿತಪಡಿಸಿಕೊಳ್ಳಬೇಕಾದರೆ ಹೆಚ್ಚುವರಿತನವನ್ನೂ ಸಹ ರುಜುವಾತು ಪಡಿಸಬೇಕೆಂದು ಸಾಮಾನ್ಯವಾಗಿ ಒಪ್ಪಿಕೊಳ್ಳಲಾಗಿದೆ. ವರ್ಲ್ಡ್ ರಿಸೋರ್ಸಸ್ ಇಂಸ್ಟಿಟ್ಯೂಟ್/ ವರ್ಲ್ಡ್ ಬಿಸಿನೆಸ್ ಕೌನ್ಸಿಲ್ ಫಾರ್ ಸಸ್ಟೈನಬಲ್ ಡೆವೆಲಪ್ಮೆಂಟ್ (ಡಬಲ್ಯೂಅರೈ/ಡಬಲ್ಯೂಬಿಸಿಎಸ್ಡಿ) ಪ್ರಕಾರ: "ಜಿಹಚ್ಜಿ ವಿಸರ್ಜನೆ ವ್ಯಾಪಾರದ ಕಾರ್ಯಕ್ರಮಗಳು ನಿರ್ದಿಷ್ಟ ಸಂಖ್ಯೆಯ ಪ್ರತ್ಯೇಕ ಸೌಲಭ್ಯಗಳು ಅಥವಾ ಮೂಲಗಳ ವಿಸರ್ಜನೆಗಳಿಗೆ ಮಿತಿ ವಿಧಿಸುವ ಮೂಲಕ ಜಾರಿಯಾಗುತ್ತವೆ. ಈ ಕಾರ್ಯಕ್ರಮಗಳಲ್ಲಿ ಒಳಗೊಳ್ಳದ ಮೂಲಗಳಲ್ಲಿ ನಡೆಯುವ ಯೋಜನಾಧಾರಿತ ಜಿಹೆಚ್ಜಿ ಕಡಿಮೆಗೊಳಿಸುವಿಕೆಗೆ ಮಾರಬಹುದಾದ ’ಆಫ್ಸೆಟ್ ಸಾಲಗಳನ್ನು’ ವಿತರಿಸಲಾಗುತ್ತದೆ. ಪ್ರತಿ ಆಫ್ಸೆಟ್ ಸಾಲ ವಿಸರ್ಜನೆಗಳು ಮಿತಿಯಾಗಿರುವ ಸೌಲಭ್ಯಗಳಿಗೆ, ಸಾಲ ಪ್ರತಿನಿಧಿಸುವ ಜಿಹೆಚ್ಜಿ ಕಡಿಮೆಗೊಳಿಸುವಿಕೆಯ ಅನುಪಾತದಲ್ಲಿ ಹೆಚ್ಚು ವಿಸರ್ಜಿಸಲು ಅವಕಾಶ ನೀಡುತ್ತದೆ. ಇದರ ಉದ್ದೇಶ ಜಿಹೆಚ್ಜಿ ವಿಸರ್ಜನೆಗಳಲ್ಲಿ ನಿವ್ವಳ ಶೂನ್ಯ ಹೆಚ್ಚಳವನ್ನು ಸಾಧಿಸುವುದು, ಏಕೆಂದರೆ ಹೆಚ್ಚಿದ ವಿಸರ್ಜನೆಗಳ ಪ್ರತಿ ಟನ್ ಯೋಜನಾಧಾರಿತ ಜಿಹೆಚ್ಜಿ ಕಡಿಮೆಗೊಳಿಸುವಿಕೆಯಿಂದ ’ಆಫ್ಸೆಟ್’ ಆಗುತ್ತದೆ. ಸಮಸ್ಯೆ ಎನೆಂದರೆ ಜಿಹೆಚ್ಜಿ ವಿಸರ್ಜನೆಗಳನ್ನು ಕಡಿಮೆಗೊಳಿಸುವ ಅನೇಕ ಯೋಜನೆಗಳು (ಚಾರಿತ್ರಿಕ ಮಟ್ಟಗಳ ತುಲನೆಯಲ್ಲಿ) ಜಿಹೆಚ್ಜಿ ಕಾರ್ಯಕ್ರಮದ ಅಸ್ತಿತ್ವವಿಲ್ಲದಿದ್ದರೂ, ಹವಾಮಾನ ಬದಲಾವಣೆಯ ಯಾವುದೇ ಪರಿವೆಯಿಲ್ಲದೆ ನಡೆದೇ ನಡೆಯುವಂತಹವು.ಒಂದು ಯೊಜನೆ ’ಹೇಗಾದರೂ ನಡೆಯುವಂತಿದ್ದರೆ’ ಆಗ ಅದರ ಜಿಹೆಚ್ಜಿ ಕಡಿಮೆಗೊಳಿಸುವಿಕೆಗೆ ಆಫ್ಸೆಟ್ ಸಾಲಗಳನ್ನು ಕೊಡುವುದು ವಾಸ್ತವವಾಗಿ ಜಿಹಚ್ಜಿ ವಿಸರ್ಜನೆಗಳಲ್ಲಿ ನಿವ್ವಳ ಸಕಾರಾತ್ಮಕ ಹೆಚ್ಚಳಿಕೆಗೆ ಅವಕಾಶ ಕೊಡುತ್ತವೆ, ಇದರಿಂದ ಜಿಹೆಚ್ಜಿ ಕಾರ್ಯಕ್ರಮದ ವಿಸರ್ಜನೆಗಳ ಗುರಿಗೆ ಧಕ್ಕೆಯಾಗುವುದು. ಹೀಗಾಗಿ ಹೆಚ್ಚುವರಿತನ ಯೋಜನಾಧಾರಿತ ಜಿಹೆಚ್ಜಿ ಕಡಿಮೆಗೊಳಿಸುವಿಕೆಯನ್ನು ಗುರುತಿಸುವ ಜಿಹೆಚ್ಜಿ ಕಾರ್ಯಕ್ರಮಗಳ ಯಶಸ್ಸು ಮತ್ತು ಸಮಗ್ರತೆಗೆ ಬಹಳಮುಖ್ಯವಾಗುತ್ತದೆ.
ಟೀಕೆಗಳು
ಬದಲಾಯಿಸಿಪರಿಸರಾತ್ಮಕ ನಿರ್ಬಂಧಗಳು ಮತ್ತು ಚಟುವಟಿಕೆಗಳನ್ನು ವ್ಯಾಪಾರಗಳ ಮೇಲೆ ಕಾಯಿದೆಯಿಂದ ಹೇರಲಾಗಿದೆ. ವಿಸರ್ಜನೆಯ ನಿರ್ವಹಣೆಗೆ ಈ ವಿಧಾನ ಅನೇಕರಿಗೆ ಸಮ್ಮತವಲ್ಲ. ಕ್ಯೋಟೊ ವ್ಯವಸ್ಥೆ ಒಂದೇ ಇಂಗಾಲದ ಸಾಲದ ಚಟುವಟಿಕೆಗಳನ್ನು ನಿಯಂತ್ರಿಸಲು ಅಂತರ್ರಾಷ್ಟ್ರೀಯವಾಗಿ ಒಪ್ಪಿಗೆಯಾಗಿರುವ ವ್ಯವಸ್ಥೆ ಮತ್ತು ಅದು ಮುಖ್ಯವಾಗಿ ಹೆಚ್ಚುವರಿತನ ಮತ್ತು ಉಟ್ಟಾರೆ ಪರಿಣಾಮಕಾರಕತೆಯ ಪರೀಕ್ಷೆಗಳನ್ನು ಒಳಗೊಂಡಿದೆ. ನಿರ್ಧಾರಗಳ ಜಾರಿಗೊಳಿಸುವಿಕೆ ರಾಷ್ಟ್ರೀಯ ಸಹಕಾರವನ್ನು ಆಧರಿಸಿದ್ದರೂ, ಅದನ್ನು ಬೆಂಬಲಿಸುವ ಸಂಸ್ಥೆ, ಯುಎನ್ನೆಫ್ಸಿಸಿಸಿ, ವಿಸರ್ಜನೆ ನಿಯಂತ್ರಿಸುವ ವ್ಯವಸ್ಥೆಗಳ ಒಟ್ಟಾರೆ ಪರಿಣಾಮಕಾರಕತೆಯ ಬಗ್ಗೆ ಜಾಗತಿಕ ಅನುಮತಿಯಿರುವ ಏಕಮಾತ್ರ ಸಂಸ್ಥೆಯಾಗಿದೆ. ಕ್ಯೋಟೊ ವ್ಯಾಪಾರದ ಅವಧಿ 2008 ರಿಂದ 2012ರ ವರೆಗಿನ ಐದು ವರ್ಷಗಳ ಕಾಲ ಮಾತ್ರ ಅನ್ವಯಿಸುತ್ತದೆ. ಇಯು ಇಟಿಎಸ್ ವ್ಯವಸ್ಥೆಯ ಮೊದಲ ಹಂತ ಬದಕ್ಕೆ ಮುಮ್ಚೆ ಪ್ರಾರಂಭವಾಯಿತು ಮತ್ತು ನಂತರ ಮೂರನೆಯ ಹಂತದಲ್ಲಿ ಮುಂದುವರಿಯುವ ನಿರೀಕ್ಷೆಯಿದೆ ಮತ್ತು ಅಂತರ್ರಾಷ್ಟ್ರೀಯವಾಗಿ ಒಪ್ಪಿಗೆಯಾದುದನ್ನೆಲ್ಲ ಸಂಯೋಜಿಸಬಹುದು ಆದರೆ ಕ್ಯೋಟೊ ಪ್ರೊಟೊಕಾಲ್ ನಂತರದ ಹಸಿರುಮನೆ ಅನಿಲಗಳ ವಿಸರ್ಜನೆಯ ಮಾತುಕತೆಗಳಲ್ಲಿ ಏನು ಒಪ್ಪಿಗೆಯಾಗಬಹುದು ಎಂಬುದರ ಬಗ್ಗೆ ಸಾಮಾನ್ಯ ಅನಿಶ್ಚಿತತೆಯಿದೆ. ವ್ಯಾಪಾರದ ಹೂಡಿಕೆ ದಶಕಗಳ ಕಾಲದಲ್ಲಿ ನಡೆಯುವುದರಿಂದ ಇದು ಅವುಗಳ ಯೋಜನೆಗಳಿಗೆ ಅಪಾಯ ಮತ್ತು ಅನಿಶ್ಚಿತತೆಯನ್ನು ಹೆಚ್ಚಿಸುತ್ತದೆ. ಜಾಗತಿಕ ವಿಸರ್ಜನೆಗಳ ಬಹುದೊಡ್ಡ ಭಾಗಕ್ಕೆ ಕಾರಣವಾಗಿರುವ ಅನೇಕ ದೇಶಗಳು (ವಿಶೇಷವಾಗಿ ಅಮೆರಿಕ, ಆಸ್ಟ್ರೇಲಿಯ ಮತ್ತು ಚೀನಾ) ಕಡ್ಡಾಯ ಮಿತಿಗಳನ್ನು ವಿರೊಧಿಸುತ್ತಿವೆ, ಅಂದರೆ ಇದರರ್ಥ ಮಿತಿಯಿರುವ ದೇಶಗಳಲ್ಲಿನ ವ್ಯಾಪಾರಗಳು ಮಿತಿಯಿಲ್ಲದ ದೇಶಗಳ ವ್ಯಾಪಾರಗಳಿಗೆ ಹೋಲಿಸಿದರೆ, ತಮ್ಮ ಇಂಗಾಲದ ವೆಚ್ಚಗಳಿಗೆ ಅವರು ನೇರವಾಗಿ ಪಾವತಿ ಮಾಡುತ್ತಿರುವುದರಿಂದ, ಸ್ಪರ್ಧೆಯ ಅನಾನುಕೂಲತೆಯನ್ನು ಅನುಭವಿಸಿದಂತೆ ಭಾವಿಸಬಹುದು. ಮಿತಿ ಮತ್ತು ವ್ಯಾಪಾರದ ವ್ಯವಸ್ಥೆಯ ಮುಖ್ಯ ಪರಿಕಲ್ಪನೆಯೆಂದರೆ ರಾಷ್ಟ್ರೀಯ ಕೋಟಾಗಳನ್ನು ನಿಜವಾದ ಹಾಗೂ ಅರ್ಥಪೂರ್ಣವಾದ ರಾಷ್ಟ್ರೀಯ ವಿಸರ್ಜನೆಗಳನ್ನು ಕಡಿಮೆಗೊಳಿಸುವಿಕೆಯನ್ನು ಪ್ರತಿನಿಧಿಸುವಂತೆ ಆರಿಸಿಕೊಳ್ಳಬೇಕು. ಇದರಿಂದ ಒಟ್ಟಾರೆ ವಿಸರ್ಜನೆಗಳು ಕಡಿಮೆಯಾಗುವುದು ಖಚಿತವಾಗುವುದಷ್ಟೇ ಅಲ್ಲ ವಿಸರ್ಜನೆಗಳ ಮಾರಾಟದ ವೆಚ್ಚ ಮಾರಾಟದ ವ್ಯವಸ್ಥೆಯ ಎಲ್ಲ ಪಕ್ಷಗಳಿಗೂ ನ್ಯಾಯವಾಗಿ ಹಂಚಿಕೆಯಾಗುತ್ತದೆ. ಆದಾಗ್ಯೂ, ಮಿತಿ ಹಾಕಿರುವ ದೇಶಗಳ ಸರ್ಕಾರಗಳು ಏಕಪಕ್ಷೀಯವಾಗಿ ತಮ್ಮ ಬದ್ಧತೆಗಳನ್ನು ದುರ್ಬಲಗೊಳಿಸಲು ಪ್ರಯತ್ನಿಸಬಹುದು. ಇದನ್ನು ಇಯು ಇಟಿಎಸ್ ಹಲವಾರು ದೇಶಗಳ 2006 ಮತ್ತು 2007ರ ರಾಷ್ಟ್ರೀಯ ವಿತರಣೆಯ ಯೋಜನೆಗಳಲ್ಲಿ ಕಾಣಬಹುದಾಯಿತು, ಇವುಗಳನ್ನು ತಡವಾಗಿ ಸಲ್ಲಿಸಲಾಯಿತು ಮತ್ತು ಅವುಗಳು ಮೊದಲಿಗೆ ಬಹಲ ದುರ್ಬಲವೆಂದು ಯೂರೋಪಿಯನ್ ಕಮಿಷನ್ ನಿಂದ ತಿರಸ್ಕರಿಸಲ್ಪಟ್ಟವು[೧೨].ಅವಕಾಶಗಳಿಗೆ ಅಧಿಕ ಬೆಂಬಲದ ಬಗ್ಗೆ ಪ್ರಶ್ನೆ ಎದ್ದಿದೆ. ಇಯು ಇಟಿಎಸ್ ನಲ್ಲಿರುವ ದೇಶಗಳು ತಮ್ಮಲ್ಲಿನ ವ್ಯಾಪಾರಿಗಳಿಗೆ ತಮ್ಮಲ್ಲಿನ ಅವಕಾಶಗಳ ಬಹಳಷ್ಟನ್ನು ಉಚಿತವಾಗಿ ನೀಡಿವೆ. ಇದನ್ನು ಅವರ ಮಾರುಕಟ್ಟೆಗಳ ಹೊಸ ಪ್ರವೇಶಕರಿಗೆ ಒಡ್ಡುವ ಸಂರಕ್ಷಕ ಅದಚಣೆಯೆಂದು ಕೆಲವೊಮ್ಮೆ ಭಾವಿಸಬಹುದು.
ವಿದ್ಯುತ್ ಉತ್ಪಾದಕರು ಈ ವಿಸರ್ಜನೆಗಳ ’ಶುಲ್ಕ’ಗಳನ್ನು ತಮ್ಮ ಗ್ರಾಹಕರಿಗೆ ವಿಧಿಸಿ ’ಅದೃಷ್ಟವಶಾತ್’ ಲಾಭ ಸಂಪಾದಿಸಿರುವ ಆಪಾದನೆಗಳೂ ಇವೆ[೧೩]. ಇಯು ಇಟಿಎಸ್ ತನ್ನ ಎರಡನೆಯ ಹಂತಕ್ಕೆ ಬಂದು ಕ್ಯೋಟೊದೊಂದಿಗೆ ಸೇರಿಕೊಂಡಂತೆ ಹೆಚ್ಚು ಅವಕಾಶಗಳ ಹರಾಜು ಆಗಿ ಈ ಸಮಸ್ಯೆಗಳು ಕಡಿಮೆಯಾಗುವ ಸಾಧ್ಯತೆಯಿದೆ.ಅರ್ಥಪೂರ್ಣವಾದ ಆಫ್ಸೆಟ್ ಯೋಜನೆಯನ್ನು ಸ್ಥಾಪಿಸುವುದು ಕ್ಲಿಷ್ಟವಾದ ಕೆಲಸ: ಸಿಡಿಎಂ ವ್ಯವಸ್ಥೆಯ ಹೊರಗೆ ಸ್ವಂತ ಆಪ್ಸೆಟ್ ಚಟುವಟಿಕೆಗಳು ಅನಿಯಂತ್ರಿತವಾದವು ಮತ್ತು ಈ ಅನಿಯಂತ್ರಿತವಾದ ಚಟುವಟಿಕೆಗಳಲ್ಲಿ ನಡೆಯುವ ಆಫ್ಸೆಟ್ ನ ಬಗ್ಗೆ ಟೀಕೆಗಳಿವೆ. ಮಿತಿ ವಿಧಿಸದ ದೇಶಗಳಲ್ಲಿನ ಕೆಲವು ಸ್ವಯಂಸೇವಾ ಕಾರ್ಪೊರೇಟ್ ಯೋಜನೆಗಳಿಗೆ ಮತ್ತು ಕೆಲವು ವೈಯಕ್ತಿಕ ಇಂಗಾಲ ಆಫ್ಸೆಟ್ ಯೋಜನೆಗಳಿಗೆ ಇದು ವಿಶೇಷವಾಗಿ ಅನ್ವಯಿಸುತ್ತದೆ.ಸಿಡಿಎಂ ಸಾಲಗಳ ಮೌಲ್ಯಾಂಕನದ ಬಗ್ಗೆಯೂ ಕೆಲವು ಪ್ರಶ್ನೆಗಳು ಎದ್ದಿವೆ. ಹೆಚ್ಚುವರಿತನದ ನಿಖರವಾದ ಮೌಲ್ಯಾಂಕನಕ್ಕೆ ಸಂಬಂಧಿಸಿರುವುದು ಒಂದು ಪ್ರಶ್ನೆ. ಉಳಿದವು ಒಂದು ಯೋಜನೆಗೆ ಅನುಮೋದನೆ ಪಡೆಯಲು ತಗುಲುವ ಶ್ರಮ ಮತ್ತು ಸಮಯಕ್ಕೆ ಸಂಬಂಧಿಸಿವೆ. ಕೆಲವು ಯೋಜನೆಗಳ ಪರಿಣಾಮಕಾರಕತೆಯ ಮೌಲ್ಯಾಂಕನದ ಬಗ್ಗೆಯೂ ಪ್ರಶ್ನೆಗೆಳು ಉಂಟಾಗಬಹುದು; ಅನೇಕ ಯೋಜನೆಗಳು ಅವುಗಳನ್ನು ಲೆಕ್ಕಪರಿಶೋಧನೆ ಮಾಡಿದ ಬಳಿಕ ನಿರೀಕ್ಷಿತ ಲಾಭವನ್ನು ಸಾಧಿಸಲಾರವಾಗಿ ಕಂಡುಬಂದಿದೆ, ಮತ್ತು ಸಿಡಿಎಂ ಮಂಡಳಿ ಅವಕ್ಕೆ ಕಡಿಮೆ ಸಿಇಆರ್ ಸಾಲಗಳನ್ನು ಮಾತ್ರ ಅನುಮೋದಿಸಬಲ್ಲುದು ಉದಾಹರಣೆಗೆ, ಒಂದು ಯೋಜನೆಯನ್ನು ಜಾರಿಗೊಳಿಸಲು ಮೊದಲು ಯೋಜಿಸಿದುದಕ್ಕಿಂತ ಹೆಚ್ಚು ಸಮಯ ಹಿಡಿಯಬಹುದು, ಅಥವಾ ಅರಣ್ಯೀಕರಣದ ಯೋಜನೆ ಖಾಯಿಲೆ ಇಲ್ಲವೆ ಬೆಂಕಿಯ ಕಾರಣ ಕುಂಠಿತವಾಗಬಹುದು. ಈ ಕಾರಣಗಳಿಂದ ಕೆಲವು ದೇಶಗಳು ತಮ್ಮ ಸ್ಥಳೀಯ ಜಾರಿಗೊಳಿಸುವಿಕೆಯ ಮೇಲೆ ಹೆಚ್ಚಿನ ನಿರ್ಬಂಧಗಳನ್ನು ಹಾಕುತ್ತವೆ ಮತ್ತು ಅರಣ್ಯೀಕರಣ ಅಥವಾ ಭೂಉಪಯೋಗದಂತಹ ಕೆಲವು ಬಗೆಯ ಇಂಗಾಲದ ತೊಟ್ಟಿಯ ಚಟುವಟಿಕೆಗಳಿಗೆ ಸಾಲಗಳನ್ನು ಅನುಮತಿಸುವುದಿಲ್ಲ.
ಇದನ್ನೂ ನೋಡಿರಿ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ ಯುಎನ್ನೆಫ್ಸಿಸಿಸಿ ಪ್ರೆಸ್ ಬ್ರೀಫಿಂಗ್ Archived 2009-12-18 ವೇಬ್ಯಾಕ್ ಮೆಷಿನ್ ನಲ್ಲಿ. 20 ನವೆಂಬರ್ 2007
- ↑ "Climate Change 2007: Mitigation of Climate Change, Summary for Policymakers from [[IPCC Fourth Assessment Report]]" (PDF). Working Group III, IPCC. pp. Item 25 and Table SPM.7, pages 29-31. Archived from the original (PDF) on 2007-05-18. Retrieved 2007-05-10.
{{cite web}}
: Check date values in:|accessdate=
(help); URL–wikilink conflict (help); Unknown parameter|published=
ignored (help) - ↑ ಯುಎನ್ನೆಫ್ಸಿಸಿಸಿ ಕಂಟ್ರೀಸ್’1990 ಟು 2012 ಎಮಿಷನ್ಸ್ ಟಾರ್ಗೆಟ್ಸ್
- ↑ ಯುಎನ್ನೆಫ್ಸಿಸಿಸಿ ಕಪ್ಲಯನ್ಸ್ ಅಂಡರ್ ದಿ ಕ್ಯೋಟೊ ಪ್ರೊಟೊಕಾಲ್
- ↑ ಇಯು ಕ್ಲೈಮೆಟ್ ಚೇಂಜ್ ಪಾಲಿಸೀಸ್: ಕಮಿಶನ್ ಅಸ್ಕ್ಸ್ ಮೆಂಬರ್ ಸ್ಟೇಟ್ಸ್ ಟು ಫುಲ್ಫಿಲ್ ದೇರ್ ಆಬ್ಲಿಗೇಶನ್ಸ್
- ↑ ಯುಎನ್ನೆಫ್ಸಿಸಿಸಿ ದಿ ಮೆಕ್ಯಾನಿಸಮ್ಸ್ ಅಂಡರ್ ದಿ ಕ್ಯೋಟೊ ಪ್ರೊಟೊಕಾಲ್
- ↑ https://archive.is/20130103025645/www.highbeam.com/doc/1G1-184638199.html
- ↑ ಹೆರಾಲ್ಡ್ ತ್ರಿಬ್ಯೂನ್ ಬಿಸಿನೆಸ್: ಕಾರ್ಬನ್ ಟ್ರೇಡಿಂಗ್ ವೇರ್ ಗ್ರೀಡ್ ಈಸ್ ಗ್ರೀನ್
- ↑ a http://www.hy-bon.com/credits/index.htm
- ↑ http://www.carbontax.org/issues/carbon-taxes-vs-cap-and-trade/ Archived 2010-01-16 ವೇಬ್ಯಾಕ್ ಮೆಷಿನ್ ನಲ್ಲಿ. ಟ್ಯಾಕ್ಸ್ ವರ್ಸಸ್ ಕ್ಯಾಪ್ ಅಂಡ್ ಟ್ರೇಡ್, ಬೈ ದಿ ಕಾರ್ಬನ್ ಟ್ಯಾಕ್ಸ್ ಸೆಂಟರ್
- ↑ ಯುಎನ್ನೆಫ್ಸಿಸಿಸಿ ಸಿಡಿಎಂ ಪ್ರಾಜೆಕ್ಟ್ ಡೇಟಾಬೇಸ್
- ↑ ರಾಯಿಟರ್ಸ್ 13 ಡಿಸೆಂ 2006: ಫ್ರಾನ್ಸ್ ಅಂಡ್ ಇಟಲಿ ಸಿಕ್ ಟು ಅವಾಯ್ಡ್ ಇಯು ಕಾರ್ಬನ್ ಕ್ಲ್ಯಾಷ್
- ↑ "ಬ್ಲೂಂಬರ್ಗ್ ಜುಲೈ 17 2006: ಯೂರೋಪ್ ಫೈಲ್ಸ್ ಕ್ಯೋಟೊ ಸ್ಟಾಂಡರ್ಡ್ಸ್ ಯಾಸ್ ಟ್ರೇಡಿಂಗ್ ಸ್ಕೀಮ್ ಹೆಲ್ಪ್ಸ್ ಪೊಲ್ಯೂಟರ್ಸ್". Archived from the original on 2009-12-18. Retrieved 2009-12-15.
ಬಾಹ್ಯ ಲಿಂಕ್‌ಗಳು
ಬದಲಾಯಿಸಿ- ಇಂಗಾಲದ ಸಾಲ ಮತ್ತು ಇಂಗಾಲದ ಆಫ್ಸೆಟ್ ಗಳ ವ್ಯತ್ಯಾಸ. [ಶಾಶ್ವತವಾಗಿ ಮಡಿದ ಕೊಂಡಿ].
- ಕೊಮೆಟ್-ವಿಆರ್: ಭೂ ನಿರ್ವಹಣೆ ಆಯ್ಕೆಗಳನ್ನು ಆಧರಿಸಿ ಇಂಗಾಲವನ್ನು ಅಳೆಯಲು ಮತ್ತು ನಮೂನೆ ಮಾಡಲು ಕೃಷಿ ಉತ್ಪಾದಕರಿಗೆ, ಭೂ ನಿರ್ವಾಹಕರಿಗೆ, ಮಣ್ಣು ವಿಜ್ಞಾನಿಗಳಿಗೆ ಮತ್ತಿತರ ಕೃಷಿ ಆಸಕ್ತರಿಗೆ ನಿರ್ಣಯ ಬೆಂಬಲ ವ್ಯವಸ್ಥೆ. .
- 1605(ಬಿ)ಎ ಯುಎಸ್ ವಾಲಂಟರಿ ರಿಪೋರ್ಟಿಂಗ್ ರಿಜಿಸ್ಟ್ರಿ. .
- ದಿ ಗ್ರೇಟ್ ಕಾರ್ಬನ್ ಕ್ರೆಡಿಟ್ ಕಾನ್: ವೈ ಆರ್ ವಿ ಪೇಯಿಂಗ್ ದಿ ಥರ್ಡ್ ವರ್ಲ್ಡ್ ಟು ಪಾಯ್ಸನ್ ಇಟ್ಸ್ ಎಂವಿರಾಂಮೆಂಟ್?, , ದಿ ಡೈಲಿ ಮೈಲ್, ಮೇ 31, 2009
- ಕಾರ್ಬನ್ ಕ್ರೆಡಿಟ್ ಅಂಡ್ ಟ್ರೇಡಿಂಗ್ - ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ವಿಸರ್ಜನೆ ವ್ಯಾಪಾರದ ಯೋಜನೆಗಳ ಮುಖ್ಯ ಅಂಶ. [ಶಾಶ್ವತವಾಗಿ ಮಡಿದ ಕೊಂಡಿ]