ಆಸ್ವಾನ್ ಕಟ್ಟೆ
ಆಸ್ವಾನ್ ಕಟ್ಟೆ ಈಜಿಪ್ಟ್ನ ಆಸ್ವಾನ್ ಪಟ್ಟಣದ ಬಳಿಯಲ್ಲಿ ಅದರ ದಕ್ಷಿಣಕ್ಕೆ ನೈಲ್ ನದಿಗೆ ಅಡ್ಡಲಾಗಿ ಕಟ್ಟಿರುವ ಕಟ್ಟೆ. ಇದರ ವೈಶಿಷ್ಟ್ಯ ಎಂದರೆ, ಗ್ರ್ಯಾನೈಟ್ ಕಲ್ಲಿನ ತಳಪಾಯದ ಮೇಲೆ ಕಟ್ಟಲಾಗಿದೆ.
ಹಿನ್ನೆಲೆ
ಬದಲಾಯಿಸಿಈಜಿಪ್ಟಿನಲ್ಲಿ ಮಳೆ ಇಲ್ಲ. ಬಿಸಿಲು ಬಹಳ ಹೆಚ್ಚು, ಪ್ರಾಚೀನ ಕಾಲದಿಂದಲೂ ಆ ದೇಶದ ಜೀವನಕ್ಕೆ ನೈಲ್ ನದಿಯ ನೀರೇ ಆಧಾರ. 5,760 ಕಿ.ಮೀ. ಉದ್ದವಾದ ನೈಲ್ ನದಿಯ ಕೊನೆಯ ಮಜಲಿನಲ್ಲಿ ಈಜಿಪ್ಟ್ ಇರುವುದರಿಂದ ಇಲ್ಲಿ ಪ್ರವಾಹಗಳು ಪ್ರತಿ ವರ್ಷವೂ ಒಂದೇ ಕಾಲದಲ್ಲಿ ಬರುತ್ತವೆ. ಆಗ ವರ್ಷದಲ್ಲಿ ಸುಮಾರು 50 ದಿನ ಈ ನದಿ ಈಜಿಪ್ಟಿನ ಬೆಂಗಾಡಿನಲ್ಲಿ ದಡಮೀರಿ ಹರಿದು ಬಯಲುಗಳ ಮೇಲೆ ವಿಶಾಲವಾಗಿ ಹರಡಿ ಫಲವತ್ತಾದ ಮೆಕ್ಕಲುಮಣ್ಣನ್ನು ಗದ್ದೆಗಳ ಮೆಲೆ ಕೆಡುವುತ್ತದೆ.[೧] ಕ್ರಿ.ಪೂ. 4500ರಿಂದಲೂ ಗದ್ದೆಗಳ ಸುತ್ತ ಅಡ್ಡಕಟ್ಟೆಗಳನ್ನು ಹಾಕಿ ಹೊಳೆ ಇಳಿದ ಮೇಲೊ ಮಣ್ಣು, ನೀರನ್ನು ಶೇಖರಿಸಿ ಐಗುಪ್ತರು ಹುಲುಸಾದ ಬೆಳೆಯನ್ನು ತೆಗೆಯುತ್ತಿದ್ದರು.[೨] ಇದು ನೈಸರ್ಗಿಕವಾದ ನೀರಾವರಿಯ ಕ್ರಮ. ಈಗ ಆಸ್ವಾನ್ ಕಟ್ಟೆಯ ನಿರ್ಮಾಣವಾದ ಮೇಲೆ ಜುಲೈ ತಿಂಗಳಿನ ಆದಿಯಲ್ಲಿ ಬರಿದಾಗಿರುವ ಜಲಾಶಯಕ್ಕೆ ಪ್ರವಾಹ ಬಂದು ಸೆಪ್ಟೆಂಬರಿನಲ್ಲಿ ಪರಮಾವಧಿ ಮುಟ್ಟುತ್ತದೆ.[೩] ನವಂಬರಿನಲ್ಲಿ ಇಳಿಯುತ್ತಿರುವ ಪ್ರವಾಹವನ್ನು ಶೇಖರಿಸಿ ಫೆಬ್ರವರಿಯಿಂದ ಜುಲೈ ತಿಂಗಳವರೆಗೆ ನಾಲೆಗಳ ಮೂಲಕ ಗದ್ದೆಗಳಿಗೆ ಬಿಡುತ್ತಾರೆ.
ಅಳತೆ ಮತ್ತು ಖರ್ಚು
ಬದಲಾಯಿಸಿಪ್ರಾಕ್ತನ ವಿಮರ್ಶಕರು ಈಜಿಪ್ಟ್ನ ಅಬು ಸಿಂಬೆಲ್ ಎಂಬಲ್ಲಿರುವ ಪ್ರಾಚೀನ ದೇವಾಲಯಗಳ ಅವಶೇಷಗಳನ್ನು ಮುಳುಗಿಸಲು ಒಪ್ಪದೆ ಇದ್ದುದರಿಂದ ದೀರ್ಘಚರ್ಚೆಯ ಅನಂತರ ಕಟ್ಟೆಯ ಎತ್ತರವನ್ನು ಕಡಿಮೆ ಮಾಡಲಾಯಿತು. ಆದರೆ ನೀರು ಸಾಲದೆ ಬಂದದ್ದರಿಂದ ಎರಡನೆಯ ಮತ್ತು ಮೂರನೆಯ ಘಟ್ಟಗಳಲ್ಲಿ ಕಟ್ಟೆಯನ್ನು ಎತ್ತರಿಸಬೇಕಾಯಿತು. ಬ್ರಿಟಿಷ್ ಎಂಜಿನಿಯರ್ ಸರ್ ಬೆಂಜಮಿನ್ ಬೇಕರನ ನೇತೃತ್ವದಲ್ಲಿ 1899ರಲ್ಲಿ ಕಟ್ಟೆಯ ಕೆಲಸ ಪ್ರಾರಂಭವಾಗಿ 1902ರಲ್ಲಿ ಮುಗಿಯಿತು.[೪] ಕಟ್ಟೆಯನ್ನು ಗ್ರಾನೈಟ್ ಕಲ್ಲಿನ ತಳಪಾಯದ ಮೇಲೆ ಕಲ್ಲು ಮತ್ತು ಸಿಮೆಂಟ್ ಗಾರೆಯಿಂದ ಕಟ್ಟಿದ್ದಾರೆ. ಕಟ್ಟೆಯ ಕಲ್ಲು ಗಾರೆಯ ಭಾರದ ಮೇಲೆ ನಿಂತಿದೆ. ಈ ಘಟ್ಟದಲ್ಲಿ ಕಟ್ಟೆಯ ಎತ್ತರ 26 ಮೀ. ಉದ್ದ 2,000 ಮೀ. ಕಟ್ಟೆಯಿಂದ ನೀರನ್ನು ಹೊರಕ್ಕೆ ಬಿಡಲು [[ಕೃಷ್ಣರಾಜಸಾಗರ]ದಲ್ಲಿರುವ ಹಾಗೆ ಕಟ್ಟೆಯೊಳಗಡೆ ಒಟ್ಟು 180 ತೊಬುಗಳಿವೆ. ಇದಕ್ಕೆ ರೊಲರುಗಲ ಮೇಲೆ ಏರಿ ಇಳಿಯುವ ಉಕ್ಕಿನ ಬಾಗಿಲುಗಳನ್ನು ಜೋಡಿಸಿದ್ದಾರೆ. ಇವುಗಳಲ್ಲಿ ಕೆಳಮಟ್ಟದ 2 ಮೀ. ಅಗಲ ಮತ್ತು 7 ಮೀ. ಎತ್ತರದ 63 ತೊಬುಗಳು (ಇಳಿಸಿದ ಮಟ್ಟ) 87.5 ಮೀ. ಮಟ್ಟದಲ್ಲಿವೆ. ನಡುವೆ 5 ಮೀ. ಅಗಲದ ನಯವಾದ ಕಲ್ಲಿನ ದಿಮ್ಮಿಗಳಿವೆ. ನಡುವಣ ಮಟ್ಟದ (ಇಳಿಸಿದ ಮಟ್ಟ 92 ಮೀಟರ್) 75 ತೊಬುಗಳಲ್ಲಿ 25ಕ್ಕೆ ಸ್ಟೋನಿಯ ಮಾದರಿಯ ರೋಲರುಗಳಿವೆ. ಉಳಿದ 50ಕ್ಕೆ ರೋಲರುಗಳಿಲ್ಲ. ಪೂರ್ವ ದಿಕ್ಕಿನ ದಡದಲ್ಲಿ ನಾಲೆಯೊಳಕ್ಕೆ ನೀರನ್ನು ಬಿಡಲು 100 ಮೀ. ಮಟ್ಟದಲ್ಲಿ 2 ಮೀ. ಅಗಲ 3ಳಿ ಮೀ. ಎತ್ತರದ 22 ತೊಬುಗಳೂ ಪಶ್ಚಿಮದ ದಡದಲ್ಲಿ 96 ಮೀ. ಮಟ್ಟದಲ್ಲಿ ಅದೇ ಅಳತೆಯ 18 ತೊಬುಗಳೂ ಇವೆ. ಈ ಘಟ್ಟದಲ್ಲಿ ತುಂಬು ಕಟ್ಟೆಯ ಮಟ್ಟ 106 ಮೀ. ಶೇಖರಿಸಿದ ನೀರಿನ ಅಳತೆ 98 ಕೋಟಿ ಸಲೆ ಮೀ. ತಗಲಿದ ಖರ್ಚು 29 ಲಕ್ಷ ಪೌಂಡು. ಈ ನೀರಿನಿಂದ ಪ್ರತಿ ವರ್ಷವೂ 4,20,000 ಎಕರೆ ಜಮೀನಿಗೆ ನೀರು ಒದಗಿಸುತ್ತಿದ್ದರು.
ಬಳಕೆ
ಬದಲಾಯಿಸಿಕಟ್ಟೆಯ ಕೆಳಗಡೆ ಸಾಗುವಳಿಯಾಗುವ ಜಮೀನಿನ ವಿಸ್ತೀರ್ಣ ಬೇಗ ಹೆಚ್ಚಿತು. 1907-1912ರ ಅವಧಿಯಲ್ಲಿ ಕಟ್ಟೆಯ ಅಗಲವನ್ನು 5 ಮೀ. ಹೆಚ್ಚಿಸಿ ತಕ್ಕಬು ಸರೋವರದ ಮಟ್ಟವನ್ನು 106-113 ಮೀ. ಎತ್ತರಿಸಲಾಯಿತು. ಕಟ್ಟೆಯ ಮೇಲಿನ ರಸ್ತೆಯ ಮಟ್ಟ 109ರಿಂದ 114 ಮೀ. ವರೆಗೊ ಮೇಲುಗಡೆ ರಸ್ತೆಯ ಒಳ ಅಗಲ 5ಳಿ ಮೀ. 7ಳಿ ಮೀ. ಏರಿತು. ಈ ಕೆಲಸಕ್ಕೆ 15 ಲಕ್ಷ ಪೌಂಡು ತಗಲಿತು.
ಬೇಸಗೆಯಲ್ಲಿ ಕಲ್ಲುಗಾರೆ ಹಿಗ್ಗಿದಾಗಲೂ ಚಳಿಗಾಲದಲ್ಲಿ ಕುಗ್ಗಿದಾಗಲೊ ಬಿರುಕು ಬಿಡದಂತೆ ಹಳೆಯ ಕಟ್ಟೆಗೂ ಹೊಸ ಕಲ್ಲುಗಾರೆಯ ಕೆಲಸಕ್ಕೂ ನಡುವೆ 15 ಸೆಂ. ಮೀ. ಜಾಗವನ್ನು ಬಿಟ್ಟು ಎರಡು ದಿಕ್ಕುಗಳಲ್ಲೂ 1¼ ವ್ಯಾಸ ಮತ್ತು 8¼ ಉದ್ದದ ಉಕ್ಕಿನ ಕಂಬಿಗಳನ್ನು ಒಂದು ಮೀ. ಅಂತರದಲ್ಲಿ ಹಳೆಯ ಕಟ್ಟೆಯನ್ನು ಕೊರೆದು ಕೊರಿಸಿದ್ದಾರೆ. ಈ ಕಂಬಿಗಳು ಹೊಸ ಕಲ್ಲುಗಾರೆಯ ತೂಕವನ್ನು ಹಳೆಯ ಕಟ್ಟೆಗೆ ಸಾಗಿಸುತ್ತವೆ. ಹಳೆಯ ಮತ್ತು ಹೊಸ ಕಲ್ಲುಗಾರೆಯ ತೊಕವನ್ನು ಹಿಗ್ಗುವಿಕೆಯಲ್ಲಿ ಅಥವಾ ಕುಗ್ಗುವಿಕೆಯಲ್ಲಿ ಏನಾದರೂ ವ್ಯತ್ಯಾಸವಾದರೆ ಅದರಿಂದ ಒದಗಿದ ತ್ರಾಸವನ್ನು ತಡೆದುಕೊಳ್ಳುತ್ತವೆ. ಕೆಲವು ಕಾಲದ ಅನಂತರ ಕಟ್ಟೆಯ ಎರಡು ಭಾಗಗಳೊ ಒಂದೇ ಉಷ್ಣತೆಗೆ ಬಂದಮೇಲೆ 15 ಸೆಂ.ಮೀ. ಸಂದಿಯಲ್ಲಿ ಸಿಮೆಂಟ್ ಗಾರೆಯನ್ನು ನೀರಾಗಿ ಕದರಿ ಸುರಿದು ಭರ್ತಿ ಮಾಡಿದ್ದಾರೆ.
1932ರಲ್ಲಿ ಬೆಂಗಳೂರಿಗೆ ಕುಡಿಯುವ ನೀರನ್ನು ಸರಬರಾಜು ಮಾಡಲು ಕೈಗೊಂಡ ಯೋಜನೆಯಂತೆ ತಿಪ್ಪಗೊಂಡನಹಳ್ಳಿ ಜಲಾಶಯ ಕಲ್ಲುಗಾರೆಯ ಕಟ್ಟೆಯ ಮೊದಲನೆಯ ಘಟ್ಟದ ಅಗಲವನ್ನು ಬಲಧ ದಡದಲ್ಲಿ ಹೆಚ್ಚಿಸಬೇಕಾಗಿ ಬಂದಾಗ ಇದೇ ಕ್ರಮವನ್ನೆ ಬಳಸಿಕೊಂಡಿದೆ.
ನೀರಾವರಿ ಮತ್ತು ಕಾಲುವೆ ಮಾರ್ಗ
ಬದಲಾಯಿಸಿಆಸ್ವಾನ್ ಕಟ್ಟೆಯ ಎತ್ತರ ಹೆಚ್ಚಾದ ಮೇಲೆ ಕೆಳಮಟ್ಟದ ತೊಬುಗಳಿಂದ ಹೆಚ್ಚಿನ ವೇಗದಲ್ಲಿ ಹೊರಕ್ಕೆ ಬರುವ ನೀರಿನ ವೇಗವನ್ನು ತಡೆಯಲು 87.5 ಮೀ, ಮಟ್ಟದಲ್ಲಿ ಈ ಕೊನೆಯಿಂದ ಆ ಕೊನೆಯವರೆಗೂ ಕಲ್ಲುಗಾರೆಯ ದಪ್ಪವಾದ ನೆಲಹಾಸನ್ನು ಕಟ್ಟಿದ್ದಾರೆ. ಈಜಿಪ್ಟಿನ ಜನಸಂಖ್ಯೆ ಹೆಚ್ಚಾದ ಹಾಗೂ ಸಾಗುವಳಿಯಾಗುವ ಜಮೀನು ಹೆಚ್ಚಾಗಿ ಬೇಸಾಯಕ್ಕೆ ನೀರು ಸಾಲದಾಯಿತು. ಆಗ 1999-1933ರ ಅವಧಿಯಲ್ಲಿ ಆಸ್ವಾನ್ ಕಟ್ಟೆಯನ್ನು 35ಳಿ ಮೀ. ನೀರು ಹಿಡಿಯುವ ಹಾಗೆ ಎತ್ತಿದರು. ಕಟ್ಟೆಯ ಉದ್ದ 7,000 ಕಟ್ಟೆಯಲ್ಲಿ 16,000 ಕೋಟಿ ಸಲೆ ಅಡಿ ನೀರು ಹಿಡಿಯುತ್ತದೆ. ಆಸ್ವಾನ್ ಕಟ್ಟೆಯ ಕೆಳಗಡೆ 560 ಕಿ.ಮೀ. ದೂರದಲ್ಲಿ ಆಸ್ವಿಟ್ ಕಟ್ಟೆಯನ್ನು ಕಟ್ಟಿ ಇಬ್ರಾಮಿಯಾ ನಾಲೆಯೊಳಕ್ಕೆ ನೀರನ್ನು ಬಿಟ್ಟಿದ್ದಾರೆ.[೫]
ವಿದ್ಯುತ್ ಶಕ್ತಿ
ಬದಲಾಯಿಸಿಈಗ ಆಸ್ವಾನ್ ಕಟ್ಟೆಯ ಬಳಿ ವಿದ್ಯುಜ್ಜನಕ ಯಂತ್ರಗಳು ಸ್ಥಾಪಿತವಾಗಿವೆ. ನೀರಾವರಿ ಕ್ರಮದಲ್ಲಿ ಮೇಲ್ಪಾಡುಗಳಾಗಿವೆ. ಇದುವರೆಗೆ ಈ ಕಟ್ಟೆಯ ಕೆಲಸಗಳಿಗಾಗಿ ಒಟ್ಟು 1 ಕೋಟಿ ಪೌಂಡು ತಗಲಿದೆ. ಜನರಿಗೆ ಸೌಕರ್ಯಗಳು ಅನೇಕ ಬಗೆಗಳಲ್ಲಿ ಹೆಚ್ಚಿವೆ. ಆಸ್ವಾನ್ ಎತ್ತರ ಕಟ್ಟೆ : ಹಳೆಯ ಆಸ್ವಾನ್ ಕಟ್ಟೆಯ ಮೇಲುಗಡೆಗೆ ನಾಲ್ಕು ಮೈಲಿಗಳ ಅಂತರದಲ್ಲಿ ನಿರ್ಮಿತವಾಗುತ್ತಿರವುದೇ ಎತ್ತರದ ಕಟ್ಟೆ. 1960ರಲ್ಲಿ ಇದರ ಕಾರ್ಯಾರಂಭವಾಯಿತು. ಈಜಿಪ್ಟಿನಲ್ಲಿ ಇನ್ನೂ ನೀರಾವರಿಗೆ ಒಳಪಡದ ವಿಸ್ಥಾರ ಭೂಪ್ರದೇಶದಲ್ಲಿ ಹಸಿರು ಕೊನರಿಸಿ, ಗೋದಿ, ಹತ್ತಿ ಮುಂತಾದ ಬೆಳಸು ತೆಗೆಯುವ ಕನಸೇ ಈ ಯೋಜನೆಯ ಹಿಂದೆ ಇರುವ ಪ್ರೇರಕಶಕ್ತಿ. ಒಮ್ಮೆ ಅತಿಯಾಗಿ ಉಬ್ಬಿ, ಮತ್ತೊಮ್ಮೆ ವಿಪರೀತ ತಗ್ಗಿ, ಸುತ್ತಣ ಜನರನ್ನು ಸರ್ವದಾ ಅನಿಶ್ಚಯದಲ್ಲಿ ತಳ್ಳಿ ತಬ್ಬಿಬ್ಬು ಮಾಡುವ ನೈಲ್ ನದಿಯನ್ನು ಅಂಕೆಗೆ ಒಳಪಡಿಸಿ, ಪ್ರವಾಹಕಾಲದಲ್ಲಿ ಅವರ ಹೆಚ್ಚು ನೀರನ್ನು ಹಿಡಿದು ನಿಲ್ಲಿಸಿ ಶೇಖರಿಸುವುದು ಇದರಿಂದ ಸಾಧ್ಯ. ಕಟ್ಟೆ ಪೂರೈಸಿದಾಗ ಈ ಜಲಾಶಯದಲ್ಲಿ 12,56,00,000 ಘ.ಅ. (1,54, 93,00,00,000 ಘನ ಮೀಟರ್) ನೀರನ್ನು ಶೇಖರಿಸಬಹುದೆಂದು ನಿರೀಕ್ಷಿಸಲಾಗಿದೆ. ತಲಾ 1,75,000 ಕಿ.ವಾ. ಗಳಂತೆ ಒಟ್ಟು 2,100 ಸಾವಿರ ಕಿ.ವಾ. ವಿದ್ಯುದುತ್ಪಾದನ ಸಾಮಥ್ರ್ಯವುಳ್ಳ ಜಲವಿದ್ಯುದಾಗಾರದ ನಿರ್ಮಾಣವೂ ಈ ಯೋಜನೆಯ ಅಂಗವಾಗಿದೆ.
ನಿರ್ಮಾಣ
ಬದಲಾಯಿಸಿಈ ಕಟ್ಟೆಯ ನಿರ್ಮಾಣಕಾರ್ಯ ಎರಡು ಹಂತಗಳಲ್ಲಿ ನಡೆದಿದೆ. ಮೊದಲನೆಯ ಹಂತ 1960ರ ಜನವರಿಯಲ್ಲಿ ಪ್ರಾರಂಭವಾಗಿ 1964ರಲ್ಲಿ ಮುಗಿಯಿತು. ಆ ವರ್ಷದ ನವಂಬರಿನಲ್ಲಿ ಎರಡನೆಯ ಹಂತದ ಕಾರ್ಯಾರಂಭವಾಯಿತು. ಸೋವಿಯತ್ ರಾಜ್ಯದ ತಾಂತ್ರಿಕ ಸಹಕಾರದೊಂದಿಗೆ, 30,000 ಈಜಿಪ್ಷಿಯನ್ ಕೆಲಸಗಾರರಿಂದಲೊ 2,000 ಮಂದಿ ಸೋವಿಯತ್ ತಜ್ಞರಿಂದಲೂ ಈ ಕಾರ್ಯ ಮುಂದುವರಿಯಿತು. ಇದು ಈಗ ಮುಕ್ತಾಯದ ಘಟ್ಟದಲ್ಲಿದೆ. ವಿದ್ಯುದಾಗಾರದ ನಿರ್ಮಾಣದೊಂದಿಗೆ ವಿದ್ಯುತ್ತಿನ ಪಾರೇಪಣ (ಟ್ರಾನ್ಸ್ಮಿಷನ್) ವ್ಯವಸ್ಥೆಯ ನಿರ್ಮಾಣದ ಕೆಲಸವೂ ಸಾಗಿತು. ಅಖಿಲ ಈಜಿಪ್ಟ್ ವಿದ್ಯುಜ್ವಾಲ (ಗ್ರಿಡ್ ಸಿಸ್ಟಂ) ನಿಯಂತ್ರಣ ಕೇಂದ್ರವನ್ನು ಕೈರೊ ನಗರದ ಬಳಿಯಲ್ಲಿ ನಿರ್ಮಿಸಲಾಗಿದೆ. ನೀರಾವರಿಯ ಜೊತೆಗೆ ಕಡಿಮೆ ವೆಚ್ಚದಲ್ಲಿ ವಿದ್ಯುತ್ ಸರಬರಾಜೂ ಸಾಧ್ಯವಾಗಿ, ಇದರಿಂದ ಈಜಿಪ್ಟಿನ ಕೈಗಾರಿಕೆಗಳ ಬೆಳೆವಣಿಗೆಗೆ ಸಹಾಯವಾಗಿದೆ.
ಈ ಕಟ್ಟೆ ಪೂರ್ಣಗೊಂಡು, ಪೂರ್ತಿಯಾಗಿ ನೀರು ಶೇಖರವಾದಾಗ ಈ ನದೀ ಕಣಿವೆಯಲ್ಲಿ 400 ಮೈಲಿಗಳÀವರೆಗೆ (644 ಕಿ.ಮೀ.) ನೀರು ಒದ್ದು ನಿಲ್ಲುತ್ತದೆ. ಇದು ಸೂಡಾನ್ ಪ್ರದೇಶದೊಳಕ್ಕೂ ಚಾಚುತ್ತದೆ. ಇದರಿಂದ ಈಜಿಪ್ಟ್ ಹಾಗೂ ಸೊಡಾನಿನ ಸುಮಾರು 90,000 ರೈತರು ನೆಲೆಯಿಲ್ಲದವರಾಗುತ್ತಾರೆಂದು ಅಂದಾಜು ಮಾಡಲಾಗಿತ್ತು. ಇವರಿಗೆ ಈಜಿಪ್ಟ್ ಸೂಡಾನ್‍ಗಳಲ್ಲಿ ಬೇರೆ ಕಡೆಗಳಲ್ಲಿ ವಸತಿಯನ್ನೊ ಬೇಸಾಯದ ನೆಲವನ್ನೂ ಒದಗಿಸಿಕೊಡುವುದು ಅಗತ್ಯವಾಯಿತು.
ಈ ಎತ್ತರ ಕಟ್ಟೆಯನ್ನೊತ್ತಿ ನೀರು ಶೇಖರವಾದಾಗ ಅಮೂಲ್ಯವಾದ ಪ್ರಾಚೀನ ದೇವಾಲಯಗಳೂ ವಸ್ತುಗಳೂ ಮುಳುಗಿ ನಾಶವಾಗುವುದನ್ನು ತಪ್ಪಿಸಲು ಅವನ್ನೆಲ್ಲ ಬೇರೆಡೆಗೆ ಸಾಗಿಸಲು ವ್ಯವಸ್ಥೆ ಮಾಡಬೇಕಾಯಿತು. [೬]ವಿಶ್ವಸಂಸ್ಥೆಯ ನೆರವಿನಿಂದ ಇದನ್ನು ಜೋಪಾನಗೊಳಿಸಿಕೊಳ್ಳುವುದು ಸಾಧ್ಯವಾಯಿತು.
ಉಲ್ಲೇಖಗಳು
ಬದಲಾಯಿಸಿ- ↑ https://www.scopus.com/record/display.url?eid=2-s2.0-0030713996&origin=inward&txGid=3B5DAAC24D6CBD5871423EF41A9859DF.y7ESLndDIsN8cE7qwvy6w%3a2
- ↑ https://web.archive.org/web/20050513224447/http://www.collectstocks.com/egyptbond.html
- ↑ "ಆರ್ಕೈವ್ ನಕಲು". Archived from the original on 2015-01-15. Retrieved 2020-01-11.
- ↑ https://books.google.com/books?id=jO2gLXNNa2wC&pg=PA694
- ↑ https://web.archive.org/web/20110615032505/http://www.inwent.org/E+Z/zeitschr/de602-11.htm
- ↑ http://www.hss.caltech.edu/~tzs/50%20Dam%20Survey.pdf