ಎಂ. ಎಸ್. ಆಶಾದೇವಿ
ಭಾರತೀಯ ಲೇಖಕಿ, ವಿಮರ್ಶಕಿ ಮತ್ತು ಅನುವಾದಕಿ
(ಆಶಾದೇವಿ.ಎಂ.ಎಸ್ ಇಂದ ಪುನರ್ನಿರ್ದೇಶಿತ)
ಎಂ. ಎಸ್. ಆಶಾದೇವಿ, ಕನ್ನಡ ಭಾಷೆಯ ಈಗಿನ ಪ್ರಮುಖ ವಿಮರ್ಶಕಿ, ಲೇಖಕಿ, ಅನುವಾದಕಿ ಮತ್ತು ಪ್ರಾಧ್ಯಾಪಕಿ. ಮಹಿಳಾವಾದದ ನೆಲೆಯಲ್ಲಿ ಸಾಹಿತ್ಯವನ್ನು ಪರಾಂಬರಿಸುವ ಆಶಾದೇವಿ ಅವರಿಗೆ ೨೦೨೦ನೇ ಕರ್ನಾಟಕ ಸಾಹಿತ್ಯ ಅಕಾಡೆಮಿ ನೀಡುವ ಸಾಹಿತ್ಯಶ್ರೀ ಪ್ರಶಸ್ತಿ ದೊರೆತಿದೆ.
ಎಂ. ಎಸ್. ಆಶಾದೇವಿ | |
---|---|
ಜನನ | ೨೬ ಫೆಬ್ರವರಿ ೧೯೬೬ ನೇರಳಿಗೆ, ದಾವಣಗೆರೆ, ಕರ್ನಾಟಕ |
ವೃತ್ತಿ |
|
ಭಾಷೆ | ಕನ್ನಡ |
ಪ್ರಮುಖ ಪ್ರಶಸ್ತಿ(ಗಳು) | ಸಾಹಿತ್ಯಶ್ರೀ ಪುರಸ್ಕಾರ |
ಶಿಕ್ಷಣ
ಬದಲಾಯಿಸಿಕನ್ನಡದಲ್ಲಿ ಎಂ.ಎ ಹಾಗೂ ‘ನವೋದಯ ವಿಮರ್ಶೆಯ ಮೇಲೆ ಪಾಶ್ಚಾತ್ಯ ವಿಮರ್ಶೆಯ ಪ್ರಭಾವ’ ಎನ್ನುವ ವಿಷಯದ ಮೇಲೆ ಪಿ.ಎಚ್.ಡಿ ಪದವಿ ಪಡೆದಿದ್ದಾರೆ.
ಅಂಕಣ
ಬದಲಾಯಿಸಿಪ್ರಜಾವಾಣಿಯ ಭಾನುವಾರದ ಪುರವಣಿ 'ಮುಕ್ತಛಂದ'ದಲ್ಲಿ ನಾರಿಕೇಳಾ ಎಂಬ ಅಂಕಣವನ್ನು ಬರೆಯುತ್ತಿದ್ದರು. ಈ ಅಂಕಣದಲ್ಲಿ ಅವರು ಸ್ತ್ರೀವಾದದ ಬಗ್ಗೆ ಬರೆಯುತ್ತಿದ್ದರು.
ಕೃತಿಗಳು
ಬದಲಾಯಿಸಿ೧. ಸ್ತ್ರೀಮತವನುತ್ತರಿಸಲಾಗದೆ ? (ಸಾಹಿತ್ಯ- ಸಂಸ್ಕೃತಿಯನ್ನು ಕುರಿತ ಲೇಖನಗಳ ಸಂಗ್ರಹ)
೨. ಹುದುಗಲಾರದ ದುಃಖ.(ಅನುವಾದ)
೩. ನಡುವೆ ಸುಳಿವ ಆತ್ಮ.
೪. ಭಾರತದ ಬಂಗಾರ.
ಪ್ರಶಸ್ತಿ
ಬದಲಾಯಿಸಿ- ೨೦೨೦ - ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡುವ ಸಾಹಿತ್ಯಶ್ರೀ ಪ್ರಶಸ್ತಿ [೧]
- ಜಿಎಸ್ಸೆಸ್ ಪ್ರಶಸ್ತಿ
- ವಿ.ಎಂ.ಇನಾಂದಾರ್ ವಿಮರ್ಶಾ ಪ್ರಶಸ್ತಿ
- ದೇವದುರ್ಗದ ಖೇಣೆದ್ ಮುರಿಗೆಪ್ಪ ಪ್ರತಿಷ್ಠಾನದಿಂದ ಖೇಣೆದ್ ಮುರಿಗೆಪ್ಪ ಸ್ಮಾರಕ ಪ್ರಶಸ್ತಿ
ಉಲ್ಲೇಖಗಳು
ಬದಲಾಯಿಸಿ- ↑ "Annual awards announced". Prajavani. 26 February 2021. Retrieved 14 April 2021.