ಆಲೂ ಚಾಟ್

ಭಾರತೀಯ ತಿಂಡಿ

ಆಲೂ ಚಾಟ್ ಭಾರತೀಯ ಉಪಖಂಡದಿಂದ ಹುಟ್ಟಿಕೊಂಡ ಒಂದು ಬೀದಿ ಆಹಾರದ ಹೆಸರಾಗಿದೆ. ಇದು ಉತ್ತರ ಭಾರತ, ಪಾಕಿಸ್ತಾನ, ಮತ್ತು ಸಿಲ್ಹೆಟ್ ಹಾಗೂ ಪಶ್ಚಿಮ ಬಂಗಾಳದ ಭಾಗಗಳಲ್ಲಿಯೂ ಜನಪ್ರಿಯವಾಗಿದೆ. ಇದನ್ನು ಆಲೂಗಡ್ಡೆ ಚೂರುಗಳನ್ನು ಎಣ್ಣೆಯಲ್ಲಿ ಕರಿದು, ನಂತರ ಸಂಬಾರ ಪದಾರ್ಥಗಳು ಮತ್ತು ಚಟ್ನಿಯನ್ನು ಸೇರಿಸಿ ತಯಾರಿಸಲಾಗುತ್ತದೆ.

ಆಲೂ ಚಾಟ್
ಮೂಲ
ಮೂಲ ಸ್ಥಳಭಾರತೀಯ ಉಪಖಂಡ
ಪ್ರಾಂತ್ಯ ಅಥವಾ ರಾಜ್ಯಉತ್ತರ ಭಾರತ, ಪಾಕಿಸ್ತಾನ, ಪಶ್ಚಿಮ ಬಂಗಾಳ, ಸಿಲ್ಹೆಟ್
ವಿವರಗಳು
ನಮೂನೆಬೀದಿ ಆಹಾರ
ಮುಖ್ಯ ಘಟಕಾಂಶ(ಗಳು)ಆಲೂಗಡ್ಡೆಗಳು, ಎಣ್ಣೆ, ಸಂಬಾರ ಪದಾರ್ಥಗಳು, ಚಟ್ನಿ

ಇದನ್ನು ಲಘು ಆಹಾರವಾಗಿ, ಪಕ್ಕ ಖಾದ್ಯವಾಗಿ ಅಥವಾ ಹಗುರ ಊಟವಾಗಿ ಬಡಿಸಬಹುದು.[] ಇದನ್ನು ಚೌಕಾಕಾರದ ಚೂರುಗಳಾಗಿ ಕತ್ತರಿಸಿಕೊಂಡ ಬೇಯಿಸಿದ ಮತ್ತು ಕರಿದ ಆಲೂಗಡ್ಡೆಯಿಂದ ತಯಾರಿಸಲಾಗುತ್ತದೆ. ಚಾಟ್ ಮಸಾಲಾದ ಜೊತೆಗೆ ಬಡಿಸಲಾಗುತ್ತದೆ. ಇದು ಬಹುಮುಖಿ ಖಾದ್ಯವಾಗಿದ್ದು ಅನೇಕ ಪ್ರಾದೇಶಿಕ ರೂಪಗಳನ್ನು ಹೊಂದಿದೆ.[] ಚಾಟ್ ಶಬ್ದ ಹಿಂದಿಯ ಚಾಟ್‍ನಾ ಶಬ್ದದಿಂದ ವ್ಯುತ್ಪನ್ನವಾಗಿದೆ ಮತ್ತು ಇದರರ್ಥ ರುಚಿ ನೋಡುವುದು. ಹಾಗಾಗಿ, ಆಲೂ ಚಾಟ್ ಅಂದರೆ ಖಾರದ ಆಲೂಗಡ್ಡೆ ಖಾದ್ಯ.

ಉಲ್ಲೇಖಗಳು

ಬದಲಾಯಿಸಿ
  1. India. Sydney: Murdoch Books. 2010. p. 23. ISBN 1741964385.
  2. Dalal, Tarla (2007). Punjabi khana. Mumbai: Sanjay. p. 107. ISBN 8189491547.