ಆಲಿಫಾಂಟ್, ಮಾರ್ಗರೇಟ್

ಆಲಿಫಾಂಟ್, ಮಾರ್ಗರೇಟ್ (೧೮೨೮-೯೭). ಸ್ಕಾಟ್ಲೆಂಡಿನ ಲೇಖಕಿ. ಕಾದಂಬರಿ, ಜೀವನಚರಿತ್ರೆ ಬರೆದಿದ್ದಾಳೆ.

ಮಾರ್ಗರೇಟ್ ಅಲಿಫಾಂಟ್
Margaret Oliphant, from the frontispiece of A Literary History of England from 1760 to 1825
ಜನನMargaret Oliphant Wilson
(೧೮೨೮-೦೪-೦೪)೪ ಏಪ್ರಿಲ್ ೧೮೨೮
Wallyford, Scotland
ಮರಣ25 June 1897(1897-06-25) (aged 69)
Wimbledon, London
ಪ್ರಕಾರ/ಶೈಲಿRomance

ಸಹಿ

ಜೀವನ ಬದಲಾಯಿಸಿ

೧೮೫೨ರಲ್ಲಿ ಫ್ರಾನ್ಸಿಸ್ ವಿಲ್ಸನ್ ಆಲಿಫಾಂಟ್ ಎಂಬಾತನನ್ನು ಮದುವೆಯಾದಳು. ೧೮೪೯ರಲ್ಲಿ ಪ್ರಕಟವಾದ ಮಿಸಸ್ ಮಾರ್ಗರೆಟ್ ಮೇಟ್ಲೆಂಡ್ ಎಂಬ ಈಕೆಯ ಕಾದಂಬರಿ ಹಾಸ್ಯ, ಕರುಣ ಪಾತ್ರರಚನೆಗಳ ಕೌಶಲದಿಂದ ಈಕೆಯ ಖ್ಯಾತಿಯನ್ನು ಹೆಚ್ಚಿಸಿತು. ಚರಿತ್ರೆ, ಜೀವನಕಥೆಗಳನ್ನೂ ಈಕೆ ಬರೆದಿದ್ದಾಳೆ.

ಸಾಹಿತ್ಯ ಬದಲಾಯಿಸಿ

ಅವಸರದಿಂದ ಬರೆಯುತ್ತಿದ್ದುದರಿಂದ ಶೈಲಿ, ವಸ್ತುನಿರೂಪಣೆಗಳಲ್ಲಿ ಅನೇಕ ದೋಷಗಳು ಕಂಡುಬರುತ್ತವೆ. ದಿ ಕ್ರಾನಿಕಲ್ಸ್ ಆಫ್ ಕಾರ್ಲಿಂಗ್ ಫರ್ಡ್ (೧೮೬೩-೭೬), ದಿ ಮಿನಿಸ್ಟರ್ಸ್ ವೈಫ಼್ (೧೮೬೯), ಎಫಿ ಆಗಿಲ್ವಿ (೧೮೮೬), ಕರ್ಸಟೀನ್ (೧೮೯೦), ಎ ಬಿಲೀಗರ್ಡ್ ಸಿಟಿ (೧೮೮೦), ಎ ಲಿಟಲ್ ಪಿಲ್ಗ್ರಿಂ ಇನ್ ದಿ ಅನ್ ಸೀನ್ (೧೮೮೨) ಎಂಬ ಕಾದಂಬರಿಗಳನ್ನೂ ಸ್ಕೆಚಸ್ ಆಫ್ ದಿ ರೇನ್ ಆಫ್ ಜಾರ್ಜ್ II (೧೮೬೯), ದಿ ಮೇಕರ್ಸ್ ಆಫ್ ಫ್ಲಾರೆನ್ಸ್ (೧೮೭೬), ಲಿಟರರಿ ಹಿಸ್ಟರಿ ಆಫ್ ಇಂಗ್ಲೆಂಡ್ ೧೭೯೦-೧೮೨೫ (೧೮೮೨), ರಾಯಲ್ ಎಡಿನ್ಬರೊ (೧೮೯೦), ಸೇಂಟ್ ಫ್ರಾನ್ಸಿಸ್ ಆಫ್ ಅಸಿಸಿ, ಎಡ್ವರ್ಡ್ ಇರ್ವಿಂಗ್ - ಇವೇ ಮುಂತಾದ ಜೀವನಕಥೆ ಗಳನ್ನೂ ಜೀವನಚರಿತ್ರೆಗಳನ್ನೂ ಈಕೆ ಬರೆದಿದ್ದಾಳೆ.

ಬಾಹ್ಯ ಸಂಪರ್ಕಗಳು ಬದಲಾಯಿಸಿ

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: