ಆರ್.ವಿ.ಹೆಗಡೆ
ಆರ್.ವಿ.ಹೆಗಡೆ (ರಾಮಚಂದ್ರ ವಿಶ್ವೇಶ್ವರ ಹೆಗಡೆ) ಮೂಲತಃ ಸಿದ್ದಾಪುರ ತಾಲುಕಿನ, ಅಳವಳ್ಳಿ ಗ್ರಾಮದ ಆಯುರ್ವೇದ ವೈದ್ಯರಾಗಿದ್ದು, ಸಾಗರದಲ್ಲಿ ನೆಲೆಸಿದ್ದಾರೆ.[ಸೂಕ್ತ ಉಲ್ಲೇಖನ ಬೇಕು]
ಹಿನ್ನೆಲೆ
ಬದಲಾಯಿಸಿರಾಮಚಂದ್ರ ವಿ ಹೆಗಡೆ ಅವರು ಮೂಲತಃ ಸಿದ್ದಾಪುರ ತಾಲುಕಿನ ,ಅಳವಳ್ಳಿ ಗ್ರಾಮದವರು, ಹವ್ಯಕ ಬ್ರಾಹ್ಮಣರ ಕುಟುಂದಲ್ಲಿ ತಾಯಿ ಶಕುಂತಲ ವಿ ಹೆಗಡೆ ಹಾಗು ತಂದೆ ವಿಶ್ವೇಶರ ವಿ ಹೆಗಡೆ ಅವರ ಪ್ರಥಮ ಮಗನಾಗಿ ಜನಿಸಿದರು. ಕೃಷಿಕ ಕುಟುಂಬದಿಂದ ಬಂದ ಇವರು ೧೯೮೩ರಲ್ಲಿ ವಿಜಯ ಕೆಮಿಕಲ್ಸ್‌ನ್ನು ಸ್ಥಾಪಿಸಿ[ಸೂಕ್ತ ಉಲ್ಲೇಖನ ಬೇಕು], ೧೯೯೬ರಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಾಗರಕ್ಕೆ ಬಂದು ನೆಲೆಸಿದರು.
ವೈದ್ಯಕೀಯ ಹಿನ್ನೆಲೆ
ಬದಲಾಯಿಸಿರಾಜವೈದ್ಯ ಮನೆತನಕ್ಕೆ ಸೇರಿದ ಇವರಿಗೆ, ಆಯುರ್ವೇದವು ರಕ್ತಗತವಾಗಿ ಬಂದಂತದ್ದು. ಉತ್ತರ ಕರ್ನಾಟಕ ಜಿಲ್ಲೆಯ, ಸಿದ್ದಾಪುರ ತಾಲುಕಿನ ಬಿಳಗಿ ರಾಜರ ಆಸ್ಥಾನದಲ್ಲಿ ರಾಜವೈದ್ಯರಾಗಿದ್ದ ಇವರ ಹಿರಿಯರ ಕಾಲದಿಂದ, ಅವಿಚಿನ್ನವಾಗಿ ಇವರ ಮುತ್ತಾತ ಮೂಡ್ಲಯ್ಯ ಹೆಗಡೆ, ಇವರ ತಾತ ರಾಮಕೃಷ್ಣ ಹೆಗಡೆ, ಹಾಗು ತಂದೆ ವಿಶ್ವೇಶ್ವರ ಹೆಗಡೆ ಅವರಿಂದ ಆಯುರ್ವೇದವು ಹರಿದುಬಂದು ಈಗ ಇವರಿಂದ ಸಾಮಜಕ್ಕೆ ಉತ್ತಮ ಕೊಡುಗೆಯನ್ನು ನೀಡಿದೆ. ಇವರ ಹಿರಿಯರ ಆಯುರ್ವೇದ ಪಾಂಡಿತ್ಯವನ್ನು ಮೆಚ್ಚಿ ಹಾಗು ಇವರು ಸೇವೆಯನ್ನು ಮೆಚ್ಚಿ ೧೯೪೨ ರಲ್ಲಿ ಇದ್ದ ಸರ್ಕಾರವು ೫೨ ಎಕರೆ ಜಾಗವನ್ನು ವನಸ್ಪತಿಗಳನ್ನು ಬೆಳೆಯಲು ಬಳುವಳಿಯಾಗಿ ನೀಡಿತು.[ಸೂಕ್ತ ಉಲ್ಲೇಖನ ಬೇಕು]
ನಿರ್ಮಲ ಇಂಡಸ್ಟ್ರಿ
ಬದಲಾಯಿಸಿ೨೦೦೦ನೇ ಇಸುವಿಯಲ್ಲಿ ಹೆಗಡೆಯವರು ಈ ಸಂಸ್ಥೆಯನ್ನು ಸ್ಥಾಪಿಸಿದರು. ಸಮಾಜಸೇವೆಗಾಗಿಯೇ ಸ್ಥಾಪಿಸಲ್ಪಟ್ಟ ಈ ಸಂಸ್ಥೆಯು ನಂತರ "ಹೆಗಡೆ ಆಯುರ್ವೇದಿಕ್" ಎಂಬ ನಾಮಧೇಯ ವನ್ನು ಹೊತ್ತಿತು[ಸೂಕ್ತ ಉಲ್ಲೇಖನ ಬೇಕು]
ಕೊಡುಗೆ
ಬದಲಾಯಿಸಿಹೆಗಡೆ ಅವರು ಸಮಾಜಕ್ಕೆ ಕೊಟ್ಟ ಕೊಡುಗೆಗಳು ಅಪಾರ,ಹೆಗಡೆ ಅವರ ಚಿಕಿತ್ಸಾಪದ್ದತಿಯೆ ವಿಶೇಷವಾದದ್ದು,ಅಲ್ಲದೆ, ಇವರ ಉಚಿತ ಸೇವೆಯು ಇದೆ,ಸುಮಾರು ೧೦-೧೨ ಮಹಾ ಖಾಯಿಲೆಗೆ ಉಚಿತ ಔಷಧವನ್ನು ನೀಡುತ್ತಾರೆ. ಇವರಿನ್ನು ಕಾಣಲು ಬೇರೆ ಬೇರೆ ರಾಷ್ಟ್ರ ಗಳಿಂದ, ಬೇರೆ ಬೇರೆ ರಾಜ್ಯಗಳಿಂದ, ಜನರು ಬರುತ್ತಾರೆ. [ಸೂಕ್ತ ಉಲ್ಲೇಖನ ಬೇಕು]
೨೦೧೧ನೇ ಇಸುವಿಯಲ್ಲಿ "ಶಿಲಾಂಕುಶ" ಮೂತ್ರಪಿಂಡದ ಕಲ್ಲುಗಳಿಗೆ ಉತ್ತಮವಾದ ಔಷಧವನ್ನು ಕಂಡುಹಿಡಿಯಿತು.[ಸೂಕ್ತ ಉಲ್ಲೇಖನ ಬೇಕು]