ಆರ್ಯಸತ್ಯ
ಸಂಸಾರಬಂಧದಿಂದ ಬಿಡುಗಡೆಯನ್ನು ಅಪೇಕ್ಷಿಸುವವರು ಅವಶ್ಯ ತಿಳಿಯತಕ್ಕದ್ದನ್ನು ಬೌದ್ಧಧರ್ಮದಲ್ಲಿ ಹೀಗೆ ಹೆಸರಿಸಲಾಗಿದೆ. ಇದು ದುಃಖ, ಸಮುದಯ, ನಿರೋಧ, ಮಾರ್ಗ ಎಂದು ನಾಲ್ಕುವಿಧ. ಮೋಕ್ಷವನ್ನು ಅಪೇಕ್ಷಿಸುವಾತ ಮೊದಲು ದುಃಖದ ಸ್ವರೂಪವನ್ನು ತಿಳಿಯಬೇಕು. ಹಾಗೇ ಅದರ ಕಾರಣವನ್ನೂ ನಿವೃತ್ತ್ಯುಪಾಯವನ್ನೂ ಸಾಧನೆಯ ಮಾರ್ಗವನ್ನೂ ತಿಳಿಯಬೇಕು. ಇದನ್ನೇ ಚತುರಾರ್ಯಸತ್ಯ ಎಂದು ಹೇಳುವರು ಕುಟುಂಬ. ಬುದ್ಧನೇ ಈ ಅಂಶವನ್ನು ಉಪದೇಶಿಸಿದ (ಪ್ರಮಾಣವಾರ್ತಿಕ ಇತ್ಯಾದಿ). ಈ ನಾಲ್ಕು ವಿಧ ಆರ್ಯಸತ್ಯಗಳನ್ನು ಯಥಾವತ್ತಾಗಿ ಅರಿತವರನ್ನೂ ಆರ್ಯಸತ್ಯ ಎಂದು ಹೇಳುವ ಪದ್ಧತಿ ಮಹಾವ್ಯುತ್ಪತ್ತಿಯಲ್ಲಿ ಕಂಡುಬರುತ್ತದೆ.