ಆರ್ಜುನಾಯನರು[] ಪಂಜಾಬ ಅಥವಾ ಈಶಾನ್ಯ ರಾಜಸ್ಥಾನದಲ್ಲಿ ನೆಲೆಗೊಂಡಿದ್ದ ಒಂದು ಪ್ರಾಚೀನ ಗಣತಂತ್ರವಾದಿ ಜನರಾಗಿದ್ದರು. ಇವರು ರಾಜಕೀಯ ಶಕ್ತಿಯಾಗಿ ಶುಂಗ ಕಾಲದಲ್ಲಿ (ಸುಮಾರು ಕ್ರಿ.ಪೂ. ೧೮೫ - ೭೩) ಹೊರಹೊಮ್ಮಿದರು. ಸಮುದ್ರಗುಪ್ತಅಲಾಹಾಬಾದ್ ಸ್ತಂಭ ಶಾಸನದಲ್ಲಿ, ಆರ್ಜುನಾಯನರು ಗುಪ್ತ ಸಾಮ್ರಾಜ್ಯದೊಂದಿಗೆ ಗಡಿ ಹೊಂದಿದ ಸ್ವಾಧಿಕಾರದ ರಾಜಕೀಯ ಸಮುದಾಯಗಳಲ್ಲಿ ಚಿತ್ರಿಸಲ್ಪಟ್ಟಿದ್ದಾರೆ ಮತ್ತು ಸಮುದ್ರಗುಪ್ತನ ಆಧಿಪತ್ಯವನ್ನು ಒಪ್ಪಿಕೊಂಡರು. ಇವರನ್ನು ವರಾಹಮಿಹಿರನ ಬೃಹತ್ ಸಂಹಿತಾದಲ್ಲೂ (ಕ್ರಿ.ಶ. ೬ನೇ ಶತಮಾನ) ಉಲ್ಲೇಖಿಸಲಾಗಿದೆ.

ಇತರ ಗುಂಪುಗಳಿಗೆ ಹೋಲಿಸಿದರೆ ಆರ್ಜುನಾಯನರ ನೆಲೆ: ಔದುಂಬರರು, ಕುಣಿಂದರು, ವೇಮಕರು, ವೃಷ್ಣಿಗಳು, ಯೌಧೇಯರು, ಮತ್ತು ಪೌರವರು.

ಆರ್ಜುನಾಯನರ ಮೂಲ ಅಸ್ಪಷ್ಟತೆಯಲ್ಲಿ ಮರೆಯಾಗಿದೆ. ಇವರು ಇತಿಹಾಸದಲ್ಲಿ ಮೊದಲು ಬಾರಿ ಅಲೆಕ್ಸಾಂಡರ್‍ನ ಆಕ್ರಮಣದ ಸ್ವಲ್ಪಕಾಲದ ನಂತರ ಕಾಣಿಸಿಕೊಳ್ಳುತ್ತಾರೆ ಮತ್ತು ಕ್ರಿ.ಪೂ. ೨ನೇ ಅಥವಾ ೧ನೇ ಶತಮಾನಕ್ಕೆ ಸೇರಿದ ತಮ್ಮ ನಾಣ್ಯಗಳಿಂದ ಮೊದಲು ದೃಢೀಕರಿಸಲ್ಪಟ್ಟರು. ಪಾಣಿನಿಯ ಗಾಣಪತದಲ್ಲಿ ಆರ್ಜುನಾವವನ್ನು ಭೌಗೋಳಿಕ ಪದವಾಗಿ ಉಲ್ಲೇಖಿಸಲಾಗಿದೆ.

ಒಬ್ಬ ಗ್ರೀಕ್ ಚರಿತ್ರಕಾರನು ಈಶಾನ್ಯ ಅಫ್‍ಘಾನಿಸ್ತಾನದ ಒಂದು ನಗರದ ನಿವಾಸಿಗಳ ಬಗ್ಗೆ ಹೇಳುತ್ತಾ, ಇವರು ಕ್ರಿ.ಪೂ. ೩೨೭ರಲ್ಲಿ ಅಲೆಕ್ಸಾಂಡರ್‍ನಿಗೆ ಪ್ರಬಲ ಸವಾಲೊಡ್ಡಿದರು, ಮತ್ತು ತಮ್ಮ ನಗರದ ರಕ್ಷಣೆ ಕಠಿಣವಾದಾಗ ನಗರಕ್ಕೆ ಬೆಂಕಿ ಹಚ್ಚಿ ಪರ್ವತ ಪ್ರದೇಶಗಳಿಗೆ ಪಲಾಯನ ಮಾಡಿದರು. ಅಲೆಕ್ಸಾಂಡರ್ ಇವರನ್ನು ಬೆನ್ನಟ್ಟಿ ಹೋದನು ಮತ್ತು ಅಲ್ಲಿ ನಡೆದ ಕಾಳಗದಲ್ಲಿ ಸುಮಾರು ೪೦,೦೦೦ರಷ್ಟು ಯೋಧರನ್ನು ಬಂಧಿಯಾಗಿಸಿ ಮ್ಯಾಸೆಡೋನಿಯಾಕ್ಕೆ ಕರೆದೊಯ್ದನು. ಕೆಲವು ವಿದ್ವಾಂಸರು ಈ ನಿವಾಸಿಗಳನ್ನು ಪಾಣಿನಿ ಉಲ್ಲೇಖಿಸಿದ ಆರ್ಜುನಾವರಿಗೆ ಸಮೀಕರಿಸುತ್ತಾರೆ. ಈ ವ್ಯಾಖ್ಯಾನ ಸರಿ ಎಂದಾದರೆ, ಆರ್ಜುನಾಯನರ ಸಂಭಾವ್ಯ ಮೂಲವನ್ನು ಬಹುಶಃ ಊಹಿಸಬಹುದು.

ಕೌಟಿಲ್ಯನ ಅರ್ಥಶಾಸ್ತ್ರ ಪ್ರಾಜ್ಜುನಕ ಎಂಬ ರಾಷ್ಟ್ರವನ್ನು ಉಲ್ಲೇಖಿಸಿ, ಅಲ್ಲಿಯ ವಿದೂಷಕರು, ಕುಶಲಕರ್ಮಿಗಳು ಮತ್ತು ವೃತ್ತಿಪರ ಗಾಯಕರು ಹಾಗೂ ನಟರನ್ನು ಉಲ್ಲೇಖಿಸುತ್ತದೆ. ಇದು ಗಾಂಧಾರದ ಹತ್ತಿರ ಸ್ಥಿತವಾಗಿತ್ತು ಎಂದು ಊಹಿಸಲಾಗಿದೆ. ಪ್ರಾಜ್ಜುನಕ ಶಬ್ದವು ಸಂಸ್ಕೃತ ಆರ್ಜುನಾಯನಕರು ಶಬ್ದದ ರೂಪಾಂತರವೆಂದು ಕೆಲವು ವಿದ್ವಾಂಸರು ಊಹಿಸಿದ್ದಾರೆ. ಈ ವಾದ ಸರಿಯಿದ್ದರೆ, ಆರ್ಜುನಾಯನರ ಮೂಲ ನೆಲೆ ಗಾಂಧಾರದ ಹತ್ತಿರದ ಸ್ವಾತ್-ಕುನಾರ್ ಕಣಿವೆಗಳೆಂದು ಆಗುತ್ತದೆ.

ಆರ್ಜುನಾಯನರ ಪ್ರಾಂತ್ಯ ದೆಹಲಿ-ಜೈಪುರ್-ಆಗ್ರಾದಿಂದ ರೂಪಗೊಂಡ ತ್ರಿಕೋನದಲ್ಲಿ ಸ್ಥಿತವಾಗಿತ್ತು ಎಂದು ಆರ್ಜುನಾಯನರ ನಾಣ್ಯಗಳ ಲಬ್ಧ ಸ್ಥಳ ಸೂಚಿಸುತ್ತದೆ. ಆರ್ಜುನಾಯನರ ನಾಣ್ಯಗಳು ಯೌಧೇಯ ನಾಣ್ಯಗಳನ್ನು ಹೋಲುತ್ತವೆ, ಹಾಗಾಗಿ ಇದು ಅವರಿಬ್ಬರ ಸಮಕಾಲೀನತೆಯನ್ನು ತೋರಿಸುತ್ತದೆ. ಇವುಗಳಲ್ಲಿ ಹಲವು ವೈವಿಧ್ಯಗಳಿವೆ. ಒಂದು ಪ್ರಕಾರದಲ್ಲಿ, ಮೇಲ್ಮುಖವು ಗೂಳಿಯನ್ನು ಮತ್ತು ಹಿಮ್ಮುಖವು ನಿಂತಿರುವ ದೇವತೆಯನ್ನು ತೋರಿಸುತ್ತದೆ. ಇನ್ನೊಂದು ಪ್ರಕಾರದಲ್ಲಿ, ಒಂದು ಮರದ ಮುಂದೆ ಗೂಳಿ ನಿಂತಿದೆ.

ಉಲ್ಲೇಖಗಳು

ಬದಲಾಯಿಸಿ
  1. Journal of Ancient Indian History,1972, p 318, University of Calcutta. Dept. of Ancient Indian History and Culture, Editor D. C. Sircar.