ಆನೆ ಕನ್ನಂಬಾಡಿ ಎಂಬುದು ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಒಂದು ಗ್ರಾಮ. ಇದು ಹಾಸನ - ಮೈಸೂರು ರಾಜ್ಯ ಹೆದ್ದಾರಿಯಲ್ಲಿ  ಹೊಳೆನರಸೀಪುರದಿಂದ ಸುಮಾರು 25 ಕಿ.ಮೀ. ದೂರದಲ್ಲಿದೆ.

ನಾರಾಯಣಸ್ವಾಮಿ ದೇವಸ್ಥಾನ

ಬದಲಾಯಿಸಿ

ಆನೆ ಕನ್ನಂಬಾಡಿಯಲ್ಲಿರುವ ನಾರಾಯಣಸ್ವಾಮಿ ದೇವಸ್ಥಾನವು ಹೊಯ್ಸಳ ಸಾಮ್ರಾಜ್ಯದ ಅಷ್ಟು ಜನಪ್ರಿಯವಲ್ಲದ ದೇವಾಲಯವಾಗಿದೆ, ಇದನ್ನು 12 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. [] []

ದೇವಾಲಯವು ಮುಖ್ಯವಾಗಿ ಮೂರು ವಿಗ್ರಹಗಳನ್ನು ಹೊಂದಿದೆ - ಕೇಶವ (ನಾರಾಯಣಸ್ವಾಮಿ), ಲಕ್ಷ್ಮೀನರಸಿಂಹ ಮತ್ತು ಗೋಪಾಲಕೃಷ್ಣ. ದೇವಾಲಯದ ಹೊರ ವಲಯಗಳಲ್ಲಿ ಗಣಪತಿ ಮತ್ತು ಮಹಿಷಾಸುರ ಮರ್ದಿನಿ (ಚಾಮುಂಡೇಶ್ವರಿ) ವಿಗ್ರಹಗಳೂ ಇವೆ.

ಕ್ರಿ.ಶ.೧೨೪೪ಕ್ಕೆ ಸೇರಿದ ಒಂದು ಶಾಸನವು ಆನೆ ಕನ್ನಂಬಾಡಿಯನ್ನು 'ಅಗ್ರಹಾರ'ವನ್ನಾಗಿ ಪರಿವರ್ತಿಸಿ ಆ ಸಮಯದಲ್ಲಿ ದಾನವಾಗಿ ನೀಡಲಾಯಿತು ಎಂದು ತಿಳಿಸುತ್ತದೆ. ಹಾಗೂ ದೇವಾಲಯವು 12 ನೇ ಶತಮಾನದ ಆರಂಭದಲ್ಲಿ ಆನೆಗಳಿಗೆ ನೆಲೆಯಾಗಿ ಸೇವೆ ಸಲ್ಲಿಸಿದೆ ಎಂದು ತಿಳಿದುಬಂದಿದೆ.

ಉಲ್ಲೇಖಗಳು

ಬದಲಾಯಿಸಿ
  1. Hardy(1995), pp. 317–348
  2. "Monuments of Bengaluru circle". ASI Bengaluru circle. Archaeological Survey of India. Archived from the original on 2012-06-25. Retrieved 2012-08-30.