ಆನಂದಿ ಸದಾಶಿವರಾವ್
ಶ್ರೀಮತಿ ಆನಂದಿ ಸದಾಶಿವರಾವ್ ಮಂಗಳೂರಿನ ಹಿರಿಯ ಲೇಖಕಿ. ಕನ್ನಡ ಮತ್ತು ಆಂಗ್ಲಭಾಷೆಗಳಲ್ಲಿ ಸಾಹಿತ್ಯವನ್ನು ರಚಿಸುವ ಪರಿಣಿತಿ ಹೊಂದಿದ್ದರೂ ಕನ್ನಡ ಭಾಷೆಗೇ ಮೊದಲ ಪ್ರಾಶಸ್ತ್ಯ ನೀಡಿದ್ದಾರೆ.
ಬಾಲ್ಯ ಜೀವನ
ಬದಲಾಯಿಸಿಆನಂದಿಯವರದ್ದು ಸುಸಂಸ್ಕೃತ ಹಿನ್ನೆಲೆಯ ಬ್ರಾಹ್ಮಣ ಕುಟುಂಬ. ಇವರ ತಂದೆ-ನರ್ಸಪ್ಪಯ್ಯ, ತಾಯಿ-ಕಾವೇರಿ ಬಾಯಿ. ನರ್ಸಪ್ಪಯ್ಯನವರು ಮಂಗಳೂರಿನಲ್ಲಿ ನ್ಯಾಯವಾದಿಯಾಗಿದ್ದರು. ತಾಯಿ ಗೃಹಿಣಿ. ಈ ದಂಪತಿಗಳಿಗೆ ಐದು ಮಕ್ಕಳು. ಇವರಲ್ಲಿ ಆನಂದಿಯವರು ಮೊದಲ ಮಗಳು. ಇವರು ೧೯೨೯ನೇ ಜನವರಿ ೨೦ರಂದು ಜನಿಸಿದರು. ನಂತರ ಕ್ರಮವಾಗಿ ನಾರಾಯಣ, ಶಿವ, ಸೀತಾರಾಮ ಹಾಗೂ ಕಮಲಿನಿ ಎಂಬ ಮಕ್ಕಳು ಜನಿಸಿದರು. ಆನಂದಿಯವರು ತಮ್ಮ ಒಡಹುಟ್ಟಿದವರೊಡನೆ ಕಾಂತಾವರದಲ್ಲಿದ್ದ ಅಜ್ಜಿಯ ಮನೆಯಲ್ಲಿ ಬೆಳೆದರು. ಕಾಂತಾವರದ ವಾತಾವರಣವು ಈ ಮಕ್ಕಳಿಗೆ ಬಹಳ ಇಷ್ಟವಾಗಿತ್ತು.
ವಿದ್ಯಾಭ್ಯಾಸ
ಬದಲಾಯಿಸಿಆನಂದಿಯವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮಂಗಳೂರಿನ ಬೆಸೆಂಟ್ ಬಾಲಿಕಾ ಪಾಠಶಾಲೆಯಲ್ಲಿ ಪಡೆದರು.ಮುಂದೆ ಇಂಟರ್ ಮೀಡಿಯೆಟ್ ವ್ಯಾಸಂಗಕ್ಕಾಗಿ ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜಿಗೆ ಸೇರಿದರು. ಪ್ರಾಥಮಿಕ ಶಾಲೆಯಲ್ಲಿದ್ದಾಗಲೇ ಸಣ್ಣ ಸಣ್ಣ ಕಥೆ-ಕವನಗಳನ್ನು ಬರೆಯುತ್ತಿದ್ದರು. ಕಾಲೇಜಿನಲ್ಲಿದ್ದಾಗ ಇವರ ಗುರುಗಳಾದ ಖ್ಯಾತ ಕವಿ ಶ್ರೀ ಕಡೆಂಗೋಡ್ಲು ಶಂಕರಭಟ್ಟ ರ ಪ್ರೋತ್ಸಾಹ,ಪ್ರಭಾವಗಳಿಂದ ಆನಂದಿಯವರಲ್ಲಿದ್ದ ಸಾಹಿತ್ಯಾಸಕ್ತಿ ಮತ್ತಷ್ಟೂ ವೃಧ್ಧಿಯಾಯಿತು.
ವೈವಾಹಿಕ ಜೀವನ
ಬದಲಾಯಿಸಿ೧೯೪೭ರಲ್ಲಿ ತಮ್ಮ ಕಾಲೇಜು ವಿದ್ಯಾಭ್ಯಾಸ ಮುಗಿಸಿದ ಕೂಡಲೇ ಆನಂದಿಯವರಿಗೆ ಕಂಕಣಬಲ ಕೂಡಿ ಬಂದಿತು. ೧೯೪೭ರಲ್ಲಿ ಮಂಗಳೂರಿನ ಖ್ಯಾತ ನ್ಯಾಯವಾದಿ ಸದಾಶಿವರಾವ್ ಎಂಬವರೊಡನೆ ಆನಂದಿಯವರ ವಿವಾಹವು ನೆರವೇರಿತು. ಸದಾಶಿವರಾಯರು ಸರಳ ಮನಸ್ಕರು, ಸುಸಂಸ್ಕೃತರು, ನ್ಯಾಯವಾದಿಯಷ್ಟೇ ಅಲ್ಲದೆ ಸಾಹಿತ್ಯ ಪ್ರೇಮಿ, ಸಂಗೀತ ಪ್ರಿಯರೂ ಆಗಿದ್ದರು. ಬರಹಗಾರ್ತಿಯಾಗಿದ್ದ ತಮ್ಮ ಪತ್ನಿಗೆ ತುಂಬು ಸಹಕಾರ ಹಾಗೂ ಪ್ರೋತ್ಸಾಹ ನೀಡುತ್ತಿದ್ದುದರಿಂದ ಆನಂದಿಯವರ ಸಾಹಿತ್ಯ ಕೃಷಿ ಯಾವುದೇ ತೊಂದರೆಯಿಲ್ಲದೆ ಬೆಳೆಯತೊಡಗಿತು. ಆದರೆ ಅನಿರೀಕ್ಷಿತವಾಗಿ ಸದಾಶಿವರಾಯರು ಹೃದ್ರೋಗಕ್ಕೆ ತುತ್ತಾದಾಗ ಕ್ರಮೇಣ ಆನಂದಿಯವರಲ್ಲೂ ಉತ್ಸಾಹ, ಲವಲವಿಕೆ ಕದಿಮೆಯಾಗಿ ಬರವಣಿಗೆಯ ಆಸಕ್ತಿ ಕಡಿಮೆಯಾಯಿತು. ನಂತರ ಅವರು ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ಕನ್ನಡ ಸಾಹಿತ್ಯ ಕೃಷಿ
ಬದಲಾಯಿಸಿಆನಂದಿ ಸದಾಶಿವರಾಯರ ಮೊದಲ ಕಥೆ'ಗೆದ್ದವರು ಯಾರು?' 'ಉಷಾ' ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದೀಗ ಲಭ್ಯವಿಲ್ಲ. ಆ ಬಳಿಕ ಅವರ ನೂರಾರು ಕಥೆಗಳು ಕರ್ಮವೀರ, ಪ್ರಜಾಮೃತ, ನವಯುಗ ಅಲ್ಲದೇ ಇನ್ನೂ ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಪ್ರಕಟಿತ ಕೃತಿಗಳು:
ಬದಲಾಯಿಸಿಆನಂದಿ ಸದಾಶಿವರಾಯರ ಒಟ್ಟು ಐದು ಕನ್ನಡ ಕೃತಿಗಳು.
ಬದಲಾಯಿಸಿ- ಸ್ನೇಹಸುಧೆ (ಕಾದಂಬರಿ)[೧]
ಕಥಾ ಸಂಕಲನಗಳು
ಬದಲಾಯಿಸಿ- ಅಪರ್ಣಾ
- ಕಲಾವಿದೆ
- ಸ್ವಾಭಿಮಾನ
- ಉಡುಗೊರೆ ಮತ್ತು ಇತರ ಕಥೆಗಳು
ಆನಂದಿಯವರ ಮೂರು ಆಂಗ್ಲ ಕವನ ಸಂಗ್ರಹಗಳು.
ಬದಲಾಯಿಸಿ- ಇಕೋಸ್ ಆಫ್ ಫ್ರೀಡಂ
- ಸಾಂಗ್ಸ್ ಆಫ್ ಸೈಲೆನ್ಸ್
- ಮ್ಯಾಜಿಕ್ ಆಫ್ ಮೈಂಡ್
ಸನ್ಮಾನ ಪ್ರಶಸ್ತಿಗಳು
ಬದಲಾಯಿಸಿಸನ್ಮಾನ
ಬದಲಾಯಿಸಿಲೇಡೀಸ್ ಸೋಷಿಯಲ್ ಲೀಗ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕಾಂತಾವರ ಕನ್ನಡ ಸಂಘ, ಕರಾವಳಿ ಲೇಖಕಿಯರ ವಾಚಕಿಯರ ಸಂಘ, ಮಹಿಳಾ ಸಭಾ, ಸಮತಾ, ರೋಟರಿ ಕ್ಲಬ್, ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನ, ಬೆಂಗಳೂರು-ಈ ಎಲ್ಲಾ ಕಡೆಗಳಲ್ಲಿಯೂ ಇವರು ಸನ್ಮಾನವನ್ನು ಸ್ವೀಕರಿಸಿದ್ದಾರೆ.
ಪ್ರಶಸ್ತಿಗಳು
ಬದಲಾಯಿಸಿ- ಅನುಪಮಾ ಪ್ರಶಸ್ತಿ[೨]
ಸಮಾಜಸೇವೆ
ಬದಲಾಯಿಸಿಆನಂದಿಯವರು ಭಗಿನಿ ಸಮಾಜ, ಈಶ್ವರಾನಂದ ಸೇವಾಶ್ರಮ, ಗಿಲ್ಡ್ ಆಫ್ ಸರ್ವಿಸ್, ಜನತಾ ಬಜಾರ್ ಇತ್ಯಾದಿ ಹತ್ತು ಹಲವಾರು ಸಂಸ್ಥೆಗಳ ವಿವಿಧ ಪದಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅನಾಥ ಮಕ್ಕಳಿಗಾಗಿ, ಮಹಿಳಾ ಶೈಕ್ಷಣಿಕ ಅಬಿವೃಧ್ಧಿಗಾಗಿ ಶ್ರಮಿಸಿದ್ದಾರೆ. ಸರಳ ಸ್ವಭಾವ, ನಿರಾಡಂಬರ ವ್ಯಕ್ತಿತ್ವದ ಆನಂದಿಯವರು ಉತ್ತಮ ವಾಗ್ಮಿಯಾಗಿದ್ದರು. ಒಟ್ಟಿನಲ್ಲಿ ಆನಂದಿ ಸದಾಶಿವರಾಯ Archived 2016-03-06 ವೇಬ್ಯಾಕ್ ಮೆಷಿನ್ ನಲ್ಲಿ. ರು ಒಬ್ಬ ಗೃಹಿಣಿ, ಲೇಖಕಿ ಹಾಗೂ ಸಮಾಜ ಸೇವಕಿಯಾಗಿದ್ದರು.
ಉಲ್ಲೇಖ
ಬದಲಾಯಿಸಿ- ↑ ಚಂದ್ರಗಿರಿ ನಾಡೋಜ ಡಾ.ಸಾರಾ ಅಬೂಬಕರ್ ಅಭಿನಂದನ ಗ್ರಂಥ ಸಂಪಾದಕರು ಡಾ.ಸಬೀಹಾ ಸಿರಿವರ ಪ್ರಕಾಶನ ಬೆಂಗಳೂರು ಮರುಮುದ್ರಣ ೨೦೦೯
- ↑ "ಆರ್ಕೈವ್ ನಕಲು". Archived from the original on 2016-03-05. Retrieved 2015-12-11.