ಆನಂದಾಶ್ರಮ್ ಭಾರತದ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಒಂದು ನಗರ ಮತ್ತು ಪುರಸಭೆಯಾದ ಕಾಞ್ಞಂಗಾಡಿನಲ್ಲಿರುವ ಆಧ್ಯಾತ್ಮಿಕ ಆಶ್ರಯಧಾಮವಾಗಿದೆ.[೧] ಆನಂದಾಶ್ರಮವನ್ನು ಸ್ವಾಮಿ ರಾಮದಾಸ್ ಮತ್ತು ತಾಯಿ ಕೃಷ್ಣಾಬಾಯಿಯವರು 1931 ರಲ್ಲಿ ಸ್ಥಾಪಿಸಿದರು.[೨]

ಮೂಲ ಕಟ್ಟಡ

ಆನಂದಾಶ್ರಮದ ಒಳಗೆ ಬದಲಾಯಿಸಿ

ಕಮಾನಿನ ಕೆಳಗೆ ನಿಂತಿರುವವರು ಸುಮಾರು 250 ಮೀಟರ್ ದೂರದಲ್ಲಿ ಎತ್ತರದ ಬೆಟ್ಟದ ಸ್ಥಳದಲ್ಲಿರುವ ಮುಖ್ಯ ಆಶ್ರಮ ಕಟ್ಟಡವನ್ನು ನೋಡಬಹುದು. ಈ ಮಾರ್ಗವು ದಟ್ಟವಾಗಿ ಬೆಳೆದಿರುವ ಕೋನಿಫೆರಸ್ ಸಸ್ಯಗಳಿಂದ ಸುತ್ತುವರಿಯಲ್ಪಟ್ಟಿದೆ.

ಹಾಜರಿ ಸ್ಥಳ : ಪ್ರವೇಶದ್ವಾರವನ್ನು ಪ್ರವೇಶಿಸುತ್ತಿದ್ದಂತೆ, ಭೇಟಿ ನೀಡುವ ಭಕ್ತರನ್ನು ಸ್ವಾಗತಿಸಲು, ಅವರ ಹೆಸರನ್ನು ನೋಂದಾಯಿಸಲು ಮತ್ತು ವಸತಿಗಳನ್ನು ನೀಡಲು ಸ್ವಾಗತ ಕಚೇರಿ ಬಲಭಾಗದಲ್ಲಿದೆ.

ಧ್ವಜ : ಗೇಟ್‌ನಿಂದ ಕೆಲವು ಮೀಟರ್‌ಗಳಷ್ಟು ಮುಂದೆ ಚಿಕ್ಕದಾದ ವೃತ್ತಾಕಾರದ ಉದ್ಯಾನವನವಿದೆ. ಅದರ ದಕ್ಷಿಣ ಪಾರ್ಶ್ವದಲ್ಲಿ ಧ್ವಜಕಂಬವಿದೆ. ಅದರ ಮೇಲೆ ಆಶ್ರಮದ ಲಾಂಛನ ಬೀಸುತ್ತದೆ. ಅದರ ಮೇಲೆ ಪವಿತ್ರ ರಾಮನಾಮವನ್ನು ಮುದ್ರಿಸಲಾಗಿದೆ.

ಪ್ರಮುಖ ದಿನಗಳಲ್ಲಿ, ಉದಾ: ಜಯಂತಿ ಮತ್ತು ಸಮಾಧಿ ದಿನಗಳಂದು ಮತ್ತು ಪೂಜ್ಯ ತಂದೆಯವರ ಸನ್ಯಾಸ ದಿನದಂದು, ರಾಮ ನಾಮದ ಪಠಣದ ನಡುವೆ ಹೊಸ ಧ್ವಜವನ್ನು ಹಾರಿಸಲಾಗುತ್ತದೆ.

ಮಾಹಿತಿ ಕೇಂದ್ರ : ಉದ್ಯಾನದ ಬಲಕ್ಕೆ ಒಂದು ಸಣ್ಣ ಮನೆಯಿದೆ. ಇದೇ ಮಾಹಿತಿ ಕೇಂದ್ರವಾಗಿದೆ. ಎಲ್ಲಾ ಹೊಸ ಸಂದರ್ಶಕರಿಗೆ ಆಶ್ರಮ ಮತ್ತು ಅದರ ಚಟುವಟಿಕೆಗಳ ಬಗ್ಗೆ ಸಾಮಾನ್ಯ ಕಲ್ಪನೆಯನ್ನು ನೀಡುವ ವೀಡಿಯೊವನ್ನು ತೋರಿಸಲಾಗುತ್ತದೆ.

ಪುಸ್ತಕ ಮಳಿಗೆ : ಉದ್ಯಾನದ ಎಡಭಾಗದಲ್ಲಿ ಪುಸ್ತಕ ಮಳಿಗೆ ಇದೆ. ಇಲ್ಲಿ ಭೇಟಿಕಾರರು ಆಶ್ರಮದಿಂದ ಪ್ರಕಟಿಸಲಾದ ಎಲ್ಲ ಪುಸ್ತಕಗಳನ್ನು ಪಡೆಯಬಹುದು.

ಸತ್ಸಂಗ ಸಭಾಂಗಣ : ಪುಸ್ತಕ ಮಳಿಗೆಯ ಪಕ್ಕದಲ್ಲಿ ಸತ್ಸಂಗ ಸಭಾಂಗಣವಿದೆ. ಇಲ್ಲಿ ಪ್ರೀತಿಯ ತಂದೆ ಮತ್ತು ಇತರ ಸಂತರ ಪುಸ್ತಕಗಳನ್ನು ಪ್ರತಿದಿನ ಮಧ್ಯಾಹ್ನ 3:30 ರಿಂದ 4:30ರ ನಡುವೆ ಓದಲಾಗುತ್ತದೆ.

ಪಂಚವಟಿ : ಉದ್ಯಾನದಿಂದ ಕೆಲವು ಮೆಟ್ಟಿಲು ಹತ್ತಿದರೆ ಪಂಚವಟಿಗೆ ಬರುವೆವು. ಈ ಹೆಸರು 1931 ರಲ್ಲಿ ಪ್ರೀತಿಯ ತಂದೆಯವರು ನೆಟ್ಟ ಐದು ಮರಗಳನ್ನು ಸೂಚಿಸುತ್ತದೆ.

ಭಜನಾ ಮಂದಿರ : ಕೆಲವು ಹೆಜ್ಜೆ ಮುಂದೆ ಭಜನಾ ಮಂದಿರವಿದೆ.

 
ಮುಂಭಾಗದಲ್ಲಿ ಧ್ವಜಸ್ತಂಭದೊಂದಿಗೆ ಭಜನಾ ಮಂದಿರ

ಭಜನಾ ಮಂದಿರದ ದಕ್ಷಿಣ ತುದಿಯಲ್ಲಿ ಒಂದು ಚಿಕ್ಕ ಕೋಣೆ ಇದೆ. ಈ ಚಿಕ್ಕ ಕೋಣೆಯೇ 1931ರಲ್ಲಿ ಪ್ರೀತಿಯ ತಂದೆಯವರು ಆರಂಭಿಸಿದ "ಆನಂದಾಶ್ರಮ".

ಶತಮಾನೋತ್ಸವ ಭವನ : ಭಜನಾ ಮಂದಿರದ ಬಲಭಾಗದಲ್ಲಿ ಶತಮಾನೋತ್ಸವ ಭವನವಿದೆ.

ಸಮಾಧಿ ಮಂದಿರಗಳು : ಮೂರು ಸಮಾಧಿ ಮಂದಿರಗಳಿವೆ - ಪ್ರೀತಿಯ ತಂದೆಯವರದು, ಪೂಜ್ಯ ತಾಯಿಯವರದು ಮತ್ತು ಸ್ವಾಮಿ ಸಚ್ಚಿದಾನಂದರದು. ಇವುಗಳು ಮುಖ್ಯ ದ್ವಾರದ ಎಡಭಾಗದಲ್ಲಿವೆ.

ಗೋಶಾಲೆ :

 
ಗೋಶಾಲೆ

ಆಶ್ರಮದಲ್ಲಿ ಒಂದು ಗೋಶಾಲೆಯಿದೆ. ಇಲ್ಲಿ ೫೦ಕ್ಕಿಂತ ಹೆಚ್ಚು ದನಗಳಿವೆ. ಹಾಲಿನ ಇಳುವರಿಯನ್ನು ಆಶ್ರಮ ಭೋಜನ ಶಾಲೆ (ಕ್ಯಾಂಟೀನ್) ಗೆ ರವಾನಿಸಲಾಗುತ್ತದೆ.


ಗ್ರಂಥಾಲಯ ಮತ್ತು ರಾಮನಾಮ ಬ್ಯಾಂಕ್ : ಆಶ್ರಮದಲ್ಲಿರುವ ಸುಸಜ್ಜಿತ ಗ್ರಂಥಾಲಯವು ಭೇಟಿ ನೀಡುವ ಭಕ್ತರಿಗೆ ವಿವಿಧ ಭಾಷೆಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ಆಧ್ಯಾತ್ಮಿಕ ಮತ್ತು ಧಾರ್ಮಿಕ ಪುಸ್ತಕಗಳ ಮೂಲಕ ಆಧ್ಯಾತ್ಮಿಕ ಜ್ಞಾನವನ್ನು ಪಡೆಯಲು ಅವಕಾಶವನ್ನು ಒದಗಿಸುತ್ತದೆ.

ಚಿತ್ರಸಂಪುಟ ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

 

  1. "TOURISM IN KASARGOD". Archived from the original on 2012-04-14. Retrieved 2012-05-20.
  2. "Archived copy". Archived from the original on 9 May 2010. Retrieved 23 February 2010.{{cite web}}: CS1 maint: archived copy as title (link)