ಆತಿಥ್ಯ/ಅತಿಥಿ ಸತ್ಕಾರ

ಈ ಲೇಖನವು ಆತಿಥ್ಯ/ಅತಿಥಿ ಸತ್ಕಾರದ ಅರ್ಥ ನಿರೂಪಣೆಗೆ ಸಂಬಂಧಿಸಿದುದಾಗಿದೆ. ಹೋಟೆಲ್‌ ನಿರ್ವಹಣೆಯ ಶೈಕ್ಷಣಿಕ ಅಧ್ಯಯನಗಳಿಗಾಗಿ, ನೋಡಿ ಆತಿಥ್ಯ/ಅತಿಥಿ ಸತ್ಕಾರ ನಿರ್ವಹಣಾ ಅಧ್ಯಯನಗಳು ಹಾಗೂ ಆತಿಥ್ಯ/ಅತಿಥಿ ಸತ್ಕಾರ ಉದ್ಯಮ.

ಆತಿಥ್ಯ/ಅತಿಥಿ ಸತ್ಕಾರ ವು ಓರ್ವ ಅತಿಥಿ ಹಾಗೂ ಆತಿಥೇಯರ ನಡುವಿನ ಒಂದು ಬಾಂಧವ್ಯ/ಸಂಬಂಧ, ಅಥವಾ ಅತಿಥಿ ಸತ್ಕಾರದ ನಡೆ ಅಥವಾ ಪ್ರವೃತ್ತಿಯಾಗಿರುತ್ತದೆ. ನಿರ್ದಿಷ್ಟವಾಗಿ, ಇದು ಅತಿಥಿಗಳು, ಸಂದರ್ಶಕರು, ಅಥವಾ ಅಪರಿಚಿತರುಗಳನ್ನು ಸ್ವಾಗತಿಸುವ ಹಾಗೂ ಅವರಿಗೆ ಆತಿಥ್ಯ ನೀಡುವುದನ್ನು, ಪ್ರಯಾಣಿಕರಿಗೆ ಹಾಗೂ ಪ್ರವಾಸಿಗರಿಗೆ ರೆಸಾರ್ಟ್‌‌ಗಳು, ಸದಸ್ಯತ್ವ ಕ್ಲಬ್‌ಗಳು, ಸಭೆಗಳು, ಆಕರ್ಷಣೆಗಳು, ವಿಶೇಷ ಕಾರ್ಯಕ್ರಮಗಳು ಹಾಗೂ ಇತರೆ ಸೇವೆಗಳನ್ನು ಒಳಗೊಂಡಿರುತ್ತದೆ. "ಆತಿಥ್ಯ/ಅತಿಥಿ ಸತ್ಕಾರ" ಎಂಬುದು ಅಗತ್ಯದಲ್ಲಿರುವವರಿಗೆ ಉದಾರವಾಗಿ ನೋಡಿಕೊಳ್ಳುವುದು ಹಾಗೂ ಕರುಣೆದೋರುವುದು ಎಂಬರ್ಥವನ್ನೂ ನೀಡಬಹುದು.

ಆತಿಥ್ಯ/ಅತಿಥಿ ಸತ್ಕಾರದ ಅರ್ಥಸಂಪಾದಿಸಿ

ಹಾಸ್ಪಿಟಾಲಿಟಿ ಎಂಬ ಪದವು ವಾಸ್ತವವಾಗಿ ಶಕ್ತಿಯನ್ನು ಹೊಂದಿರುವುದು ಎಂಬರ್ಥ ಬರುವಂತಹಾ ಹಾಸ್ಟಿಸ್‌‌ ಎಂಬ ಪದದಿಂದ ರೂಪುಗೊಂಡ ಲ್ಯಾಟಿನ್‌‌ ಪದ ಹಾಸ್ಪೆಸ್‌ ನಿಂದ ವ್ಯುತ್ಪನ್ನವಾಗಿದೆ. "ಆತಿಥೇಯ/ಹೋಸ್ಟ್‌" ಎಂಬ ಪದದ ಅಕ್ಷರಶಃ ಅರ್ಥ "ಅಪರಿಚಿತರ ದೇವರು" ಎಂಬುದು. [೧] ಹಾಸ್ಟೈರ್‌ ಎಂದರೆ ಸಮೀಕರಿಸುವುದು ಅಥವಾ ಸರಿದೂಗಿಸುವುದು. ಹೋಮರನ ಕಾಲದಲ್ಲಿ, ಗ್ರೀಕ್‌ ದೇವತಾ ಗಣದ ಪ್ರಮುಖ ದೇವತೆಯಾದ ಜೀಯಸ್‌ ದೇವತೆಯ ಆಶ್ರಯದಲ್ಲಿ ಆತಿಥ್ಯ/ಅತಿಥಿ ಸತ್ಕಾರವು ಇರುತ್ತದೆ. ಜೀಯಸ್‌/ಝೀಯಸ್‌‌ ದೇವತೆಗೆ ಆತಿಥ್ಯ/ಅತಿಥಿ ಸತ್ಕಾರವು ಅತ್ಯಂತ ಪ್ರಾಮುಖ್ಯತೆಯದು ಎಂಬುದನ್ನು ಬಿಂಬಿಸಲು 'ಕ್ಸೆನಿಯಸ್‌ ಜೀಯಸ್‌/ಝೀಯಸ್‌‌' ('ಕ್ಸೆನಾಸ್‌‌' ಎಂಬುದರ ಅರ್ಥ) ಎಂಬ ಬಿರುದನ್ನೂ ನೀಡಲಾಗಿದೆ. ಗ್ರೀಕ್‌ ಗೃಹವೊಂದರ ಮುಂದೆ ಹಾದುಹೋಗುವ ಅಪರಿಚಿತ ವ್ಯಕ್ತಿಯನ್ನು ಕುಟುಂಬದವರು ಗೃಹದೊಳಗೆ ಕರೆದು ಉಪಚರಿಸುವುದು ಸಾಧಾರಣ ವಾಡಿಕೆ. ಆತಿಥೇಯನು ಅಭ್ಯಾಗತನ ಪಾದ ತೊಳೆದು, ಆಹಾರ ಹಾಗೂ ಮದ್ಯ/ಪಾನೀಯಗಳನ್ನು ನೀಡುತ್ತಾರಲ್ಲದೇ, ಅತಿಥಿಯು ವಿಶ್ರಮಿಸಿದ ನಂತರವೇ ಆತನ ಅಥವಾ ಆಕೆಯ ಹೆಸರನ್ನು ಕೇಳಲಾಗುತ್ತದೆ. ಪವಿತ್ರ ಆತಿಥ್ಯ/ಅತಿಥಿ ಸತ್ಕಾರದ ಗ್ರೀಕ್‌ ಕಲ್ಪನೆಯು ಟೆಲಿಮಾಕಸ್‌‌ ಹಾಗೂ ನೆಸ್ಟರ್‌‌ನ ಕಥೆಯಲ್ಲಿ ನಿದರ್ಶಿಸಲಾಗಿದೆ. ಟೆಲಿಮಾಕಸ್‌‌ ನೆಸ್ಟರ್‌‌ನನ್ನು ಭೇಟಿ ಮಾಡಲು ಬಂದಾಗ, ನೆಸ್ಟರ್‌‌ಗೆ ತನ್ನ ಅತಿಥಿಯು ತನ್ನ ಹಳೆಯ ಒಡನಾಡಿ ಒಡೆಸ್ಸೆಯಸ್‌ನ ಪುತ್ರನೆಂದು ಗೊತ್ತಿರಲಿಲ್ಲ. ಏನೇ ಆದರೂ, ಟೆಲಿಮಾಕಸ್‌‌ ಹಾಗೂ ಆತನ ತಂಡವನ್ನು ಧಾರಾಳತನದಿಂದಲೇ ನೆಸ್ಟರ್‌‌ ಸ್ವಾಗತಿಸಿದುದು, ಹಾಸ್ಟಿಸ್‌ , "ಅಪರಿಚಿತ," ಹಾಗೂ ಹಾಸ್ಟೈರ್‌‌ ಗಳ ನಡುವಿನ ಸಂಬಂಧವನ್ನು, "ಸಮೀಕರಿಸುವಿಕೆಯನ್ನು" ಹಾಗೂ ಹೇಗೆ ಎರಡೂ ಅಂಶಗಳು ಆತಿಥ್ಯ/ಅತಿಥಿ ಸತ್ಕಾರದ ಕಲ್ಪನೆಯನ್ನು ಸಂಯೋಜಿತಗೊಂಡಿವೆ ಎಂಬುದನ್ನು ತೋರಿಸುತ್ತದೆ. ನಂತರ, ನೆಸ್ಟರ್‌‌'ನ ಪುತ್ರರಲ್ಲಿ ಓರ್ವನು ಟೆಲಿಮಾಕಸ್‌‌ನಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಆತನ ಹತ್ತಿರದ ಹಾಸಿಗೆಯಲ್ಲಿ ಮಲಗುತ್ತಾನೆ. ನೆಸ್ಟರ್‌‌ ಪೈಲೋಸ್‌ನಿಂದ ಸ್ಪಾರ್ಟಾಗೆ ಭೂಮಾರ್ಗದಲ್ಲಿ ವೇಗವಾಗಿ ಹೋಗಲು ಅನುವಾಗುವಂತೆ ಟೆಲಿಮಾಕಸ್‌‌'ನ ಬಳಕೆಗೆಂದು ತನ್ನ ಪುತ್ರ ಪಿಸಿಸ್ಟ್ರಾಟಸ್‌‌ನನ್ನು ಸಾರಥಿಯನ್ನಾಗಿಸಿ ರಥ ಹಾಗೂ ಕುದುರೆಗಳನ್ನು ಕೂಡಾ ಸಿದ್ಧಪಡಿಸುತ್ತಾನೆ. ಇವು ಪ್ರಾಚೀನ ಗ್ರೀಕ್‌ ಆತಿಥ್ಯ/ಅತಿಥಿ ಸತ್ಕಾರದ ಇನ್ನೆರಡು ಅಂಶಗಳಾದ ಸಂರಕ್ಷಣೆ ಹಾಗೂ ಮಾರ್ಗದರ್ಶನ ಗಳನ್ನು ಬಿಂಬಿಸುತ್ತವೆ. ಮೇಲಿನ ಕಥೆ ಹಾಗೂ ಅದರ ಈಗಿನ ತಾತ್ಪರ್ಯದ ಮೇಲೆ ಆಧಾರವಾಗಿ ಹೇಳುವುದಾದರೆ, ಆತಿಥ್ಯ/ಅತಿಥಿ ಸತ್ಕಾರ ಎಂಬುದು ಅಭ್ಯಾಗತನೋರ್ವನನ್ನು ಆತಿಥೇಯನೊಂದಿಗೆ ಸಮೀಕರಿಸುವುದು/ ಸರಿದೂಗಿಸುವುದಲ್ಲದೇ ಆತನಿಗೆ ತಾನು ಸುರಕ್ಷಿತವಾಗಿದ್ದೇನೆ ಹಾಗೂ ತನ್ನನ್ನು ನೋಡಿಕೊಳ್ಳಲಾಗುತ್ತಿದೆ ಎಂಬ ಭಾವನೆ ಬರುವಂತೆ ಮಾಡುವುದು ಹಾಗೂ ಆತಿಥ್ಯದ ಕೊನೆಗೆ ಆತನ ಗಮ್ಯದೆಡೆಗೆ ಮಾರ್ಗದರ್ಶನ ನೀಡುವುದನ್ನು ಒಳಗೊಂಡಿರುತ್ತದೆ.

ಸಮಕಾಲೀನ ಬಳಕೆಸಂಪಾದಿಸಿ

ಪಶ್ಚಿಮದಲ್ಲಿ ಸಮಕಾಲೀನ ಪರಿಸ್ಥಿತಿಯಲ್ಲಿ, ಆತಿಥ್ಯ/ಅತಿಥಿ ಸತ್ಕಾರ ರಕ್ಷಣೆ ಹಾಗೂ ಉಳಿಕೆಯ ವಿಚಾರವೆಂಬ ಮಹತ್ವವು ಅಪರೂಪವಾಗಿದ್ದು, ಶಿಷ್ಟಾಚಾರ ಹಾಗೂ ಸತ್ಕಾರಕ್ಕೆ ಸಂಬಂಧಿಸಿದ ವಿಚಾರವಾಗಿದೆ. ಆದಾಗ್ಯೂ, ಅದು ಈಗಲೂ ಅತಿಥಿಗಳನ್ನು ಗೌರವಿಸುವುದು, ಅವರ ಅಗತ್ಯತೆಗಳನ್ನು ನೋಡಿಕೊಳ್ಳುವುದು ಹಾಗೂ ಅವರನ್ನು ಸಮಾನರನ್ನಾಗಿ ಭಾವಿಸುವುದನ್ನು ಒಳಗೊಂಡಿರುತ್ತದೆ. ಸಂಸ್ಕೃತಿಗಳು ಹಾಗೂ ಉಪಸಂಸ್ಕೃತಿಗಳು ಆತ್ಮೀಯ ಸ್ನೇಹಿತರು ಹಾಗೂ ತಮ್ಮ ಪಂಗಡದೊಳಗಿನವರನ್ನು ಹೊರತುಪಡಿಸಿ ಇತರೆ ಅಪರಿಚಿತ/ಅಭ್ಯಾಗತರಿಗೆ ಎಷ್ಟರಮಟ್ಟಿಗಿನ ಆತಿಥ್ಯ/ಅತಿಥಿ ಸತ್ಕಾರವನ್ನು ನೀಡಬೇಕು ಎಂಬುದರಲ್ಲಿ ವ್ಯತ್ಯಾಸಗಳನ್ನು ಹೊಂದಿರುತ್ತವೆ. ಆತಿಥ್ಯ/ಅತಿಥಿ ಸತ್ಕಾರ ಸೇವಾ ಉದ್ಯಮವು ವ್ಯಾವಹಾರಿಕ ಬಾಂಧವ್ಯದ ಅಂಗವಾಗಿ ಮಾತ್ರವೇ ಅಪರಿಚಿತ/ಅಭ್ಯಾಗತರುಗಳಿಗೆ ಆತಿಥ್ಯ ಹಾಗೂ ಮಾರ್ಗದರ್ಶನ ನೀಡುವ ಹೋಟೆಲ್‌ಗಳು, ಮೋ/ಜೂಜುಕೇಂದ್ರಗಳು ಹಾಗೂ ರೆಸಾರ್ಟ್‌ಗಳನ್ನು ಒಳಗೊಂಡಿರುತ್ತದೆ. ಹಾಸ್ಪಿಟಲ್‌‌, ಹಾಸ್ಪೈಸ್‌ ಹಾಗೂ ಹಾಸ್ಟೆಲ್‌ ಎಂಬ ಪದಗಳು ಕೂಡಾ "ಹಾಸ್ಪಿಟಾಲಿಟಿ/ಆತಿಥ್ಯ/ಅತಿಥಿ ಸತ್ಕಾರ" ಪದದಿಂದಲೇ ವ್ಯುತ್ಪನ್ನವಾಗಿದ್ದು ಈ ವ್ಯವಸ್ಥೆಗಳು ವೈಯಕ್ತಿಕ ಆರೈಕೆಗಳ ಸೂಚಿತಾರ್ಥಗಳನ್ನು ಉಳಿಸಿಕೊಂಡಿವೆ. ಆತಿಥ್ಯ/ಅತಿಥಿ ಸತ್ಕಾರ ನೀತಿಸಂಹಿತೆಯು ಆತಿಥ್ಯ/ಅತಿಥಿ ಸತ್ಕಾರದ ಈ ರೀತಿಯ ಬಳಕೆಯ ಅಧ್ಯಯನವನ್ನು ಮಾಡುವ ಶೈಕ್ಷಣಿಕ ಶಾಖೆಯಾಗಿದೆ. ಪಾಶ್ಚಿಮಾತ್ಯ ಸನ್ನಿವೇಶದಲ್ಲಿ, ಅಥೆನ್ಸ್‌‌ ಹಾಗೂ ಜೆರುಸಲೇಂಗಳ ನಡುವಿನ ಅಲ್ಲಿನ ಸಕ್ರಿಯಾತ್ಮಕ ತುಯ್ತಗಳಿಂದಾಗಿ, ಎರಡೂ ಹಂತಗಳನ್ನು ಬಹು ಪ್ರಗತಿಶೀಲ ಸಂಕ್ರಮಣಗಳಿಂದ ಪ್ರತ್ಯೇಕವಾಗಿ ಗುರುತಿಸಬಹುದಾಗಿದೆ : ವೈಯಕ್ತಿಕವಾಗಿ ತನ್ನ ಜವಾಬ್ದಾರಿ ಎಂದೆನಿಸಿ ಮಾಡಿದ ಆತಿಥ್ಯ/ಅತಿಥಿ ಸತ್ಕಾರ ಒಂದಾದರೆ, ಮತ್ತೊಂದು ವ್ಯವಸ್ಥಿತ ಆದರೆ ವೈಶಿಷ್ಟ್ಯರಹಿತ ಸಾಮಾಜಿಕ ಸೇವೆಗಳು: ಬಡವ, ಅನಾಥ(ರು), ರೋಗಿಷ್ಠರು, ವಿದೇಶೀಯ, ಅಪರಾಧಿ, etc. ಮುಂತಾದ ನಿರ್ದಿಷ್ಟ ವಿಧದ "ಅಪರಿಚಿತ/ಅಭ್ಯಾಗತರ"ನ್ನು ನೋಡಿಕೊಳ್ಳುವ "ಅಧಿಕೃತ" ಸಂಸ್ಥೆಗಳು ಮತ್ತೊಂದೆಡೆ ಕಾಣಿಸಿಕೊಳ್ಳುತ್ತವೆ. ಬಹುಶಃ ಈ ಹೆಚ್ಚುತ್ತಾ ಹೋಗುತ್ತಿರುವ ಸಂಸ್ಥೀಕರಣವನ್ನು ಮಧ್ಯಯುಗದಿಂದ ನವೋದಯಕ್ಕೆ ಬದಲಾಗುವಿಕೆಗೆ ತಳಕುಹಾಕಬಹುದಾಗಿದೆ (ಇವಾನ್‌ ಇಲ್ಲಿಚ್, ದ ರಿವರ್‌ಸ್‌‌ ನಾರ್ತ್‌ ಆಫ್‌ ದ ಫ್ಯೂಚರ್‌‌ ). ಆತಿಥ್ಯ/ಅತಿಥಿ ಸತ್ಕಾರದ ಒಂದು ಉದಾಹರಣೆಯೆಂದರೆ "ನಾನು ನಿಮಗೊಂದು ದಿಂಬು ತಂದುಕೊಡಲಿದ್ದೇನೆ ಅದರಿಂದ ನಿಮಗೆ ನಿಜಕ್ಕೂ ಆರಾಮವಾಗುವುದು" ಎಂಬ ರೀತಿಯ ಹೇಳಿಕೆ. ಇದನ್ನೇ ಅತಿಥಿಗಳಿಗೆ ಆತಿಥ್ಯ/ಅತಿಥಿ ಸತ್ಕಾರ ಮಾಡುವುದು ಎನ್ನಲಾಗುತ್ತದೆ

ವಿಶ್ವದೆಲ್ಲೆಡೆಯ ಆತಿಥ್ಯ/ಅತಿಥಿ ಸತ್ಕಾರಸಂಪಾದಿಸಿ

ಬೈಬಲಿಗೆ ಅನುಗುಣವಾದ ರೀತಿಯ ಹಾಗೂ ಮಧ್ಯಪ್ರಾಚ್ಯ ಪ್ರದೇಶಗಳಲ್ಲಿಸಂಪಾದಿಸಿ

 
ದೇವತೆಗಳಿಗೆ ಆತಿಥ್ಯ/ಅತಿಥಿ ಸತ್ಕಾರವನ್ನು ಮಾಡುತ್ತಿರುವ ಅಬ್ರಹಾಂ

ಮಧ್ಯಪ್ರಾಚ್ಯ ಪ್ರದೇಶಗಳ ಸಂಸ್ಕೃತಿಯಲ್ಲಿ, ತಮ್ಮ ಸನಿಹದಲ್ಲಿ ವಾಸಿಸುತ್ತಿರುವ ಅಪರಿಚಿತ/ಅಭ್ಯಾಗತರು ಹಾಗೂ ವಿದೇಶೀಯರುಗಳ ಯೋಗಕ್ಷೇಮ ನೋಡುವುದು ಸಾಂಸ್ಕೃತಿಕ ಕಟ್ಟಳೆ ಎಂದು ಭಾವಿಸಲಾಗಿತ್ತು. ಈ ಕಟ್ಟಳೆಗಳನ್ನು ಅನೇಕ ಬೈಬಲಿನ ಆದೇಶಗಳು ಹಾಗೂ ಉದಾಹರಣೆಗಳಲ್ಲಿ ಬಿಂಬಿಸಲಾಗಿದೆ.[೧] ಬಹುಶಃ ಪರಾಕಾಷ್ಠೆಯ ಉದಾಹರಣೆಯನ್ನು ಸೃಷ್ಟಿಪರ್ವದಲ್ಲಿ ನೀಡಲಾಗಿದೆ. ಲಾಟ್‌‌ ದೇವತೆಗಳ ತಂಡವೊಂದಕ್ಕೆ (ಆತ ಅವರನ್ನು ಕೇವಲ ಪುರುಷರೆಂದು ತಿಳಿದಿರುತ್ತಾನೆ) ಆತಿಥ್ಯ/ಅತಿಥಿ ಸತ್ಕಾರವನ್ನು ನೀಡುತ್ತಿರುತ್ತಾನೆ; ಪುಂಡರ ತಂಡವೊಂದು ಅವರ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದಾಗ, ಲಾಟ್‌‌" ನನ್ನ ಮನೆಯಲ್ಲಿ/ಸೂರಿನಲ್ಲಿದ್ದಾರಾದ್ದರಿಂದ ಈ ಪುರುಷ/ಮನುಷ್ಯರಿಗೆ/ಇವರುಗಳಿಗೆ ಏನೂ ಮಾಡಬೇಡಿ." ಎಂದು ಹೇಳಿಕೊಂಡು ಅವರ ಬದಲಿಗೆ ತನ್ನ ಹೆಣ್ಣುಮಕ್ಕಳನ್ನೇ ಬದಲಿಯಾಗಿ ಕೊಡಲು ತಯಾರಾಗುತ್ತಾನೆ. (ಸೃಷ್ಟಿಪರ್ವ 19:8, NIV). ಆತಿಥೇಯ ಹಾಗೂ ಅತಿಥಿ ಇಬ್ಬರ ಹೊಣೆಗಾರಿಕೆಗಳೂ ಕಠಿಣವಾದವು. ಒಂದೇ ಸೂರಿನಡಿಯಲ್ಲಿ ಉಪ್ಪು ತಿನ್ನುವುದರ ಮೂಲಕ ಬಂಧನವು ರೂಪುಗೊಳ್ಳುತ್ತದೆ, ಹಾಗೂ ಇದು ಎಷ್ಟು ಕಟ್ಟುನಿಟ್ಟು ಎಂದರೆ ಅರಬ್‌ ಕಥೆಯೊಂದರಲ್ಲಿ ಯಾವುದೋ ವಸ್ತುವೊಂದನ್ನು ಸಕ್ಕರೆಯೇ ಎಂದು ರುಚಿ ನೋಡಿದಾಗ ಅದು ಉಪ್ಪೆಂದು ತಿಳಿದುಬಂದ ತಕ್ಷಣ ತಾನು ಕದ್ದಿದ್ದ ಎಲ್ಲಾ ವಸ್ತುಗಳನ್ನು ಅಲ್ಲಿಯೇ ಬಿಟ್ಟು ಹೊರಡುತ್ತಾನೆ.

ಪ್ರಾಚೀನ ಗ್ರೀಕ್‌ ವಿಶ್ವಸಂಪಾದಿಸಿ

ಪ್ರಾಚೀನ ಗ್ರೀಕರು ಹಾಗೂ ರೋಮನ್ನರ ಮಟ್ಟಿಗೆ, ಆತಿಥ್ಯ/ಅತಿಥಿ ಸತ್ಕಾರವು ಒಂದು ದೈವಿಕ ವಾಗ್ದಾನವಾಗಿತ್ತು. ತನ್ನ ಅತಿಥಿಗಳ ಅಗತ್ಯಗಳನ್ನು ಪೂರೈಸಲಾಗುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಆತಿಥೇಯನ ಕರ್ತವ್ಯವಾಗಿತ್ತು. ಪ್ರಾಚೀನ ಗ್ರೀಕ್‌ ಪದ ಕ್ಸೆನಿಯಾ, ಅಥವಾ ಥಿಯೋಕ್ಸೆನಿಯಾ ಎಂಬುದು ದೇವರ ವಿಚಾರಕ್ಕೆ ಸಂಬಂಧಿಸಿದಂತೆ, ಮತಾಚರಣೆಯಾಗಿ ಅತಿಥಿ-ಸ್ನೇಹ ಸಂಬಂಧವನ್ನು ವ್ಯಕ್ತಪಡಿಸುತ್ತಿತ್ತು. ಪುರಾಣ ಕಥೆಗಳಲ್ಲಿ ಆತಿಥ್ಯ/ಅತಿಥಿ ಸತ್ಕಾರದ ಮಹತ್ವದ ಬಗೆಗಿನ ಉತ್ತಮ ಉದಾಹರಣೆಯೆಂದರೆ ಬಾಸಿಸ್‌‌ ಹಾಗೂ ಫಿಲೆಮನ್‌ರ ಆಖ್ಯಾಯಿಕೆ. ಈ ಆಖ್ಯಾಯಿಕೆಯಲ್ಲಿ, ಪ್ರಾಚೀನ ದೇವತೆಯರಾದ ಜೀಯಸ್‌/ಝೀಯಸ್‌‌ ಹಾಗೂ ಹರ್ಮಿಸ್‌ ಸರಳ ರೈತರ ಮಾರುವೇಷದಲ್ಲಿ ಫ್ರಿಜಿ/ಗಿಯಾ ಪಟ್ಟಣಕ್ಕೆ ಭೇಟಿ ನೀಡುತ್ತಾರೆ. ಅವರು ಆಹಾರ/ಊಟ ಹಾಗೂ ಒಂದು ರಾತ್ರಿಯ ಆಶ್ರಯಕ್ಕೆಂದು ಹುಡುಕಾಟ ನಡೆಸಿದಾಗ ಕೊನೆಗೆ ಫಿಲೆಮನ್‌ ಹಾಗೂ ಬಾಸಿಸ್‌‌ರ ಗೃಹವನ್ನು ತಲುಪುವವರೆಗೆ ಬಹಳಷ್ಟು ಮುಚ್ಚಿದ ಬಾಗಿಲುಗಳು ಎದುರಾಗುತ್ತವೆ. ಬಡವರಾದರೂ, ದಂಪತಿಗಳು ಉತ್ತಮ ಆತಿಥೇಯರಾಗಿ ವರ್ತಿಸಿ ತಮ್ಮಲ್ಲಿದ್ದ ಅಲ್ಪ ಆಹಾರವನ್ನೇ ಅತಿಥಿಗಳಿಗೆ ನೀಡಿದುದಲ್ಲದೇ, ತಮ್ಮ ಅತಿಥಿಗಳು ಮಾರುವೇಷದಲ್ಲಿರುವ ದೇವತೆಗಳು ಎಂದು ತಿಳಿದುಬಂದಾಗ, ಅವರು ತಮ್ಮ ಮನೆಗೆ ಕಾವಲಿರುವ ಹೆಬ್ಬಾತನ್ನು ವಧಿಸಿ ಅಡುಗೆ ಮಾಡಲು ಕೂಡಾ ಮುಂದಾಗುತ್ತಾರೆ. ಇದಕ್ಕೆ ಪ್ರತಿಫಲವಾಗಿ, ದೇವತೆಗಳು ಅವರಿಗೆ ಆತಿಥ್ಯ ನೀಡಲಾರದ ಉಳಿದ ಪಟ್ಟಣದ ಮೇಲೆರೆಗುವ ಪ್ರವಾಹದಿಂದ ರಕ್ಷಿಸುವುದಲ್ಲದೇ ವರವೊಂದನ್ನು ಕೂಡಾ ನೀಡುತ್ತಾರೆ.

ಕೆಲ್ಟಿಕ್‌ ಸಂಸ್ಕೃತಿಗಳಲ್ಲಿ ಆತಿಥ್ಯ/ಅತಿಥಿ ಸತ್ಕಾರಸಂಪಾದಿಸಿ

ಕೆಲ್ಟಿಕ್‌ ಸಮಾಜವೂ ಕೂಡಾ ವಿಶೇಷವಾಗಿ ಸಂರಕ್ಷಣೆಗೆ ಸಂಬಂಧಿಸಿದಂತೆ ಆತಿಥ್ಯ/ಅತಿಥಿ ಸತ್ಕಾರದ ಕಲ್ಪನೆಯನ್ನು ಗೌರವಿಸುತ್ತವೆ. ಓರ್ವ ವ್ಯಕ್ತಿಗೆ ಆಶ್ರಯ ನೀಡಲು ಒಪ್ಪಿಕೊಂಡ ಆತಿಥೇಯರು ಆತನ/ಆಕೆಯ ಅತಿಥಿಗೆ ಆಹಾರ ಹಾಗೂ ಆಸರೆ ಮಾತ್ರವಲ್ಲದೇ, ಅವರು ತಮ್ಮ ರಕ್ಷಣೆಯಲ್ಲಿರುವಾಗ ಅವರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದೂ ಅವರ ಕರ್ತವ್ಯವಾಗಿರುತ್ತದೆ. ಇದರ ನಿಜ ಜೀವನದ ಉದಾಹರಣೆಯು ಹದಿನೇಳನೇ ಶತಮಾನದ ಆದಿಯ ಸ್ಕಾಟ್‌ಲೆಂಡ್‌ ರಾಷ್ಟ್ರದ ಮೆಕ್‌ಗ್ರೆಗರ್‌ ಕುಲದ ಇತಿಹಾಸದಲ್ಲಿ ಬೇರೂರಿಬಿಟ್ಟಿದೆ. ಲಾ/ಲೇಮಂಟ್‌ ವಂಶದ ಮುಖ್ಯಸ್ಥ ಗ್ಲೆನ್‌ಸ್ಟ್ರೇನಲ್ಲಿನ ಮೆಕ್‌ಗ್ರೆಗರ್‌ ಮುಖ್ಯಸ್ಥನ ಮನೆಗೆ ಬಂದು ತಾನು ಶತ್ರುಗಳಿಂದ ತಪ್ಪಿಸಿಕೊಂಡು ಬಂದಿರುವುದಾಗಿಯೂ ತನಗೆ ಆಶ್ರಯ ನೀಡಬೇಕೆಂದು ಕೇಳಿಕೊಳ್ಳುತ್ತಾನೆ. ಮೆಕ್‌ಗ್ರೆಗರ್‌ ತನ್ನ ಸಹಮುಖ್ಯಸ್ಥನನ್ನು ಏನನ್ನೂ ವಿಚಾರಿಸದೇ ಸ್ವಾಗತಿಸುತ್ತಾನೆ. ಅದೇ ದಿನ ರಾತ್ರಿ, ಮೆಕ್‌ಗ್ರೆಗರ್‌ ಕುಲದ ಸದಸ್ಯರು, ಲಾ/ಲೇಮಂಟ್‌ ಮುಖ್ಯಸ್ಥನು ವಸ್ತುತಃ ತಮ್ಮ ಮಗ ಹಾಗೂ ಉತ್ತರಾಧಿಕಾರಿಯನ್ನು ಹೋರಾಟ/ಜಗಳವೊಂದರಲ್ಲಿ ಕೊಂದಿದ್ದಾನೆ ಎಂದು ಹೇಳುತ್ತಾ ಲಾ/ಲೇಮಂಟ್‌ ಮುಖ್ಯಸ್ಥನನ್ನು ಹುಡುಕಿಕೊಂಡು ಬರುತ್ತಾರೆ. ಆತಿಥ್ಯ/ಅತಿಥಿ ಸತ್ಕಾರದ ಪವಿತ್ರ ನಿಯಮವನ್ನು ಪಾಲಿಸುವುದಕ್ಕಾಗಿ, ಮೆಕ್‌ಗ್ರೆಗರ್‌ ಮುಖ್ಯಸ್ಥ ಲಾ/ಲೇಮಂಟ್‌ನನ್ನು ಅವನ ವಂಶೀಕರ ಕೈಗೊಪ್ಪಿಸಲು ನಿರಾಕರಿಸಿದ್ದುದಲ್ಲದೇ, ಮರುದಿನ ಬೆಳಗ್ಗೆ ಆತನನ್ನು ತಮ್ಮ ಪೂರ್ವಿಕರಿಂದ ಬಂದ ಪ್ರದೇಶಕ್ಕೆ ರಕ್ಷಣೆಗೆ ಕರೆದೊಯ್ಯುತ್ತಾನೆ. ಈ ನಡವಳಿಕೆಯು ಅವರಿಗೆ ನಂತರ ಮೆಕ್‌ಗ್ರೆಗರ್‌‌ರನ್ನು ದೇಶಭ್ರಷ್ಟಗೊಳಿಸಿದಾಗ, ಲಾ/ಲೇಮಂಟ್‌ರು ಅವರಲ್ಲಿ ಅನೇಕರಿಗೆ ಸುರಕ್ಷಿತ ನೆಲೆಯನ್ನು ನೀಡುವ ಮೂಲಕ ಋಣ ಸಂದಾಯವನ್ನು ಮಾಡಿತು[೨].

ಭಾರತದಲ್ಲಿನ ಆತಿಥ್ಯ/ಅತಿಥಿ ಸತ್ಕಾರಸಂಪಾದಿಸಿ

ಭಾರತೀಯ ನಾಗರೀಕತೆಯು ಭೂಮಿಯಲ್ಲಿ ಅತ್ಯಂತ ಪ್ರಾಚೀನವಾದವುಗಳಲ್ಲಿ ಒಂದಾಗಿರುವುದಲ್ಲದೇ, ಇತರೆ ಎಲ್ಲಾ ಸಂಸ್ಕೃತಿಗಳಂತೆ ತನ್ನದೇ ಆದ ಜನಪ್ರಿಯ ಆಖ್ಯಾಯಿಕೆಗಳನ್ನು ಹೊಂದಿದ್ದು ಅವುಗಳಲ್ಲಿ ಸಾಕಷ್ಟು ಆತಿಥ್ಯ/ಅತಿಥಿ ಸತ್ಕಾರದ ವಿಚಾರಗಳನ್ನು ಹೊಂದಿವೆ. ತನ್ನಲ್ಲಿರುವ ಅತ್ಯಲ್ಪ ಚೂರುಪಾರು ಆಹಾರವನ್ನು ಅಭ್ಯಾಗತನೊಂದಿಗೆ ಹಂಚಿಕೊಳ್ಳಲು ಸಿದ್ಧವಾಗುವ ಸರಳವ್ಯಕ್ತಿಯ ಬಗೆಗಿನ ಕಥೆಯಲ್ಲಿ, ನಂತರ ಆ ಅತಿಥಿಯು ಮಾರುವೇಷದಲ್ಲಿರುವ ದೇವತೆಯಾಗಿದ್ದು ಆತನ ಉದಾರಮನೋಭಾವಕ್ಕಾಗಿ ಸಮೃದ್ಧಿಯನ್ನು ದಯಪಾಲಿಸುತ್ತಾನೆ. ತಾನು ನೀಡಲು ಶಕ್ತಳಾಗಿರುವಷ್ಟು ಖಿಚಡಿಯನ್ನು ಹಸಿದವರಿಗೆಲ್ಲರಿಗೂ ನೀಡುವ ಮಹಿಳೆಯೊಬ್ಬಳ ಕಥೆ ಮತ್ತೊಂದು, ಅವಳು ಹಾಗೆ ನೀಡುತ್ತಾ ಅವಳ ಬಳಿ ಇದ್ದ ಆಹಾರವೆಲ್ಲಾ ಖಾಲಿಯಾಗಿ ಕೊನೆಗೆ ತನ್ನ ಪಾಲನ್ನೇ ಕೊನೆಯ ಹಸಿದ ವ್ಯಕ್ತಿಗೆ ನೀಡುತ್ತಾಳೆ. ಆಗ ಮಾರುವೇಷದಲ್ಲಿರುವ ದೇವತೆಯು ಅವಳಿಗೆ ಎಂದೂ ಖಾಲಿಯಾಗದ ಖಿಚಡಿಯ ಪಾತ್ರೆಯನ್ನು ಕರುಣಿಸುತ್ತದೆ. ಬಹುತೇಕ ಭಾರತೀಯ ವಯಸ್ಕರು ಮಕ್ಕಳಾಗಿದ್ದಾಗಿನಿಂದ ಈ ಬಗೆಯ ಕಥೆಗಳನ್ನು ಕೇಳುತ್ತಾ ಬೆಳೆದವರು ಅತಿಥಿಯು ದೇವರು ಎಂಬರ್ಥದ "ಅತಿಥಿ ದೇವೋ ಭವ" ಎಂಬ ತತ್ವದಲ್ಲಿ ನಂಬಿಕೆಯಿಟ್ಟುಕೊಂಡಿರುತ್ತಾರೆ. ಮನೆಯಲ್ಲಿ ಹಾಗೂ ಎಲ್ಲಾ ಸಾಮಾಜಿಕ ಸನ್ನಿವೇಶಗಳಲ್ಲಿ ಅತಿಥಿಗಳ ಬಗೆಗಿನ ದಯಾಪರತೆಯನ್ನು ಹೊಂದುವ ಇದರಿಂದಲೇ ಭಾರತೀಯ ನಡತೆಯು ರೂಪುಗೊಂಡಿದೆ.

ಸಾಂಸ್ಕೃತಿಕ ಮೌಲ್ಯ ಅಥವಾ ರೂಢಿ/ಸಂಪ್ರದಾಯಗಳುಸಂಪಾದಿಸಿ

ಸಾಂಸ್ಕೃತಿಕ ರೂಢಿ ಅಥವಾ ಮೌಲ್ಯವಾಗಿ ಆತಿಥ್ಯ/ಅತಿಥಿ ಸತ್ಕಾರವು ವ್ಯಕ್ತಿಗಳು ಅಧ್ಯಯನ ನಡೆಸುವಂತಹಾ ಹಾಗೂ ನಿಬಂಧಗಳನ್ನು ಬರೆಯುವಂತಹಾ ವಿಷಯವಾದ ಸ್ಥಾಪಿತ ಸಮಾಜಶಾಸ್ತ್ರೀಯ ವಿದ್ಯಮಾನವಾಗಿದೆ(ನೋಡಿ ಆಕರಗಳು, ಹಾಗೂ ಆತಿಥ್ಯ/ಅತಿಥಿ ಸತ್ಕಾರ ನೀತಿಸಂಹಿತೆ). ಕೆಲವು ಪ್ರದೇಶಗಳು ಆತಿಥ್ಯ/ಅತಿಥಿ ಸತ್ಕಾರದ ನಿರ್ದಿಷ್ಟ ಶೈಲಿಯನ್ನು ಅನುಸರಿಸಿಕೊಂಡು ರೂಢಮಾದರಿ ಎಂದೆನಿಸಿಕೊಳ್ಳುತ್ತವೆ. ಉದಾಹರಣೆಗಳಲ್ಲಿ ಈ ಕೆಳಗಿನವು ಸೇರಿವೆ:

ಆತಿಥ್ಯ/ಅತಿಥಿ ಸತ್ಕಾರ ನೀತಿಸಂಹಿತೆಸಂಪಾದಿಸಿ

"ಆತಿಥ್ಯ/ಅತಿಥಿ ಸತ್ಕಾರ ನೀತಿಸಂಹಿತೆ" ಎಂಬ ಪದವನ್ನು ಎರಡು ಬೇರೆ ಬೇರೆ ಆದರೂ ಪರಸ್ಪರ ಸಂಬಂಧಿತ ಅಧ್ಯಯನ ಕ್ಷೇತ್ರಗಳನ್ನು ಹೆಸರಿಸಲು ಬಳಸಲಾಗುತ್ತದೆ:

 1. ಆತಿಥ್ಯ/ಅತಿಥಿ ಸತ್ಕಾರ ಬಾಂಧವ್ಯಗಳು ಹಾಗೂ ಪದ್ಧತಿಗಳಲ್ಲಿನ ನೈತಿಕ ಹೊಣೆ/ಜವಾಬ್ದಾರಿಗಳನ್ನು ಕುರಿತ ತತ್ವಶಾಸ್ತ್ರೀಯ ಅಧ್ಯಯನ.
 2. ವಾಣಿಜ್ಯಿಕ ಆತಿಥ್ಯ/ಅತಿಥಿ ಸತ್ಕಾರ ಹಾಗೂ ಪ್ರವಾಸೋದ್ಯಮಗಳಲ್ಲಿನ ನೀತಿನಿಯಮಗಳ ಬಗೆಗಿನ ಔದ್ಯಮಿಕ ನೀತಿಸಂಹಿತೆಯ ಶಾಖೆ.

ಏನು ಮಾಡಲೇಬೇಕೆಂದು ನಿರೂಪಿಸಬೇಕೆಂದು ವಿಧಿಸುವ ಉದ್ದೇಶದಿಂದ ಏನು ಮಾಡಬೇಕಾಗುತ್ತದೆ ಎಂದು ವಿಧಿಸುವುದಕ್ಕೂ ಮುಂದೆ ಹೋಗುವ ನೀತಿಸಂಹಿತೆಯು; ಆತಿಥ್ಯ/ಅತಿಥಿ ಸತ್ಕಾರ ನೀತಿಸಂಹಿತೆ ಆತಿಥ್ಯ/ಅತಿಥಿ ಸತ್ಕಾರಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಏನು ಮಾಡಬೇಕೆಂದು ವಿಧಿಸುತ್ತದೆ. ಅನೇಕ ಸಂಸ್ಕೃತಿಗಳು ಹಾಗೂ ಸಂಪ್ರದಾಯಗಳಲ್ಲಿ ; ಹಾಗೂ ಇತಿಹಾಸದುದ್ದಕ್ಕೂ ಆತಿಥ್ಯ/ಅತಿಥಿ ಸತ್ಕಾರ ಸಿದ್ಧಾಂತಗಳನ್ನು ಹಾಗೂ ರೂಢಿವ್ಯವಸ್ಥೆಗಳನ್ನು ಆತಿಥ್ಯ/ಅತಿಥಿ ಸತ್ಕಾರದ ಪದ್ಧತಿಗಳು, ಪ್ರಕ್ರಿಯೆಗಳು ಹಾಗೂ ಸಂಬಂಧಗಳ ಪ್ರಮುಖ ವಿಶ್ಲೇಷಣೆಗಳ ಮೂಲಕ ನಿರೂಪಿಸಲಾಗುತ್ತದೆ. ಅಂತಿಮವಾಗಿ, ಆತಿಥ್ಯ/ಅತಿಥಿ ಸತ್ಕಾರ ಸಿದ್ಧಾಂತಗಳನ್ನು ಅನ್ವಯಿಸಲಾಗುತ್ತದಲ್ಲದೇ, ವಾಣಿಜ್ಯಿಕ ಹಾಗೂ ವಾಣಿಜ್ಯಿಕ-ವಲ್ಲದ ಸಜ್ಜಿಕೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತದೆ. ನಡತೆಯ ಮಾನಕವಾಗಿ, ಆತಿಥ್ಯ/ಅತಿಥಿ ಸತ್ಕಾರವನ್ನು ವಿವಿಧ ರೀತಿಗಳಲ್ಲಿ ಇತಿಹಾಸದುದ್ದಕ್ಕೂ ಕಾನೂನು, ನಿಯಮಾವಳಿ, ಮೂಲತತ್ವ, ನೀತಿ ಸಂಹಿತೆ, ಕರ್ತವ್ಯ, ಸಂಪನ್ನತೆ, etc. ಪರಿಗಣಿಸಲಾಗುತ್ತದೆ. ಈ ಅನುಶಾಸನಗಳನ್ನು ಅತಿಥಿಗಳು, ಆತಿಥೇಯರು, ನಾಗರೀಕರು, ಹಾಗೂ ಅಪರಿಚಿತ/ಅಭ್ಯಾಗತರುಗಳ ನಡುವಿನ ಅಸ್ಪಷ್ಟ ಸಂಬಂಧವನ್ನು ತೀರ್ಮಾನಿಸುವ ಉದ್ದೇಶದಿಂದ ರಚಿಸಲಾಗುತ್ತದೆ. ಅದರ ಮನುಷ್ಯ ಸಂಸ್ಕೃತಿಗಳ ಪ್ರಾಚೀನ ಮೂಲಗಳು ಹಾಗೂ ಅವುಗಳ ಸರ್ವ ವ್ಯಾಪಕತ್ವ, ಆತಿಥ್ಯ/ಅತಿಥಿ ಸತ್ಕಾರದ ಕಲ್ಪನೆಯು ನೈತಿಕ ತತ್ವಶಾಸ್ತ್ರಜ್ಞರು ಸಾಪೇಕ್ಷವಾಗಿ ಅಲ್ಪ ಪ್ರಾಮುಖ್ಯತೆಯನ್ನು ನೀಡಿದ್ದು, e.g. ಋಜು ವಿಚಾರ, ಪಾಪ, ಸರಿ, ಹಾಗೂ ತಪ್ಪುಗಳಂತಹಾ ಇತರೆ ನೈತಿಕ ಕಲ್ಪನೆಗಳ ಬಗ್ಗೆ ಹೆಚ್ಚಿನ ಗಮನಗಳನ್ನು ನೀಡಿವೆ. ಆದರೂ ಆತಿಥ್ಯ/ಅತಿಥಿ ಸತ್ಕಾರವನ್ನು ನೈತಿಕ ಅನುಶಾಸನವನ್ನಾಗಿ, ಅಥವಾ ನೈತಿಕ ದೃಷ್ಟಿಕೋನವಾಗಿ, ನೈತಿಕ ನಡತೆಗೆ ಇನ್ನೂ ಅನೇಕ ವಿಧಿ ನಿಯಮಗಳಿಗಿನ ಮುಂಚಿನ ಸ್ಥಾನದಲ್ಲಿದೆ: ಪ್ರಾಚೀನ ಮಧ್ಯಪ್ರಾಚ್ಯ, ಗ್ರೀಕ್‌ ಹಾಗೂ ರೋಮನ್‌ ಸಂಸ್ಕೃತಿಗಳಲ್ಲಿ, ಆತಿಥ್ಯ/ಅತಿಥಿ ಸತ್ಕಾರದ ನೀತಿನಿಯಮಗಳು ಅತಿಥಿಗಳು ಹಾಗೂ ಆತಿಥೇಯರುಗಳಿಬ್ಬರಿಂದಲೂ ನಿರ್ದಿಷ್ಟ ವಿಧದ ನಡತೆಗಳನ್ನು ನಿರೀಕ್ಷಿಸುವಂತಹಾ ಕಟ್ಟಳೆಗಳಾಗಿವೆ. ಒಂದು ಉದಾಹರಣೆ: ಅಶ್ವದಳದ ಉನ್ನತ ವ್ಯಕ್ತಿಗಳು ಆಹಾರ ಹಾಗೂ ವಸತಿಯನ್ನು ಕೋರಿದ ಇತರೆ ಯಾವುದೇ ಉನ್ನತ ವ್ಯಕ್ತಿಗಳಿಗೆ ಅದನ್ನು ನೀಡಲೇಬೇಕೆಂದು ಕಟ್ಟಳೆಯಿದೆ. ಅನೇಕ ರೀತಿಗಳಲ್ಲಿ, ಈ ನಡತೆಗಳ ಮೇಲಿನ ಮಾನದಂಡಗಳು ಆತಿಥ್ಯ/ಅತಿಥಿ ಸತ್ಕಾರ ಉದ್ಯಮದಲ್ಲಿ ಕೂಡಾ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿವೆ, ಪ್ರಾಚೀನ ಕಲ್ಪನೆಗಳ ಮೂಲಕ ಮುಂದುವರಿದು ಪ್ರಸ್ತುತ ಮಾನಕಗಳು ಹಾಗೂ ಪದ್ಧತಿಗಳ ಮೇಲೆ ತಮ್ಮ ಪ್ರಭಾವವನ್ನು ಬೀಡುವುದನ್ನು ಮುಂದುವರೆಸಿಕೊಂಡು ಬಂದಿವೆ.

ಬಳಕೆಯಲ್ಲಿರುವ ಆತಿಥ್ಯ/ಅತಿಥಿ ಸತ್ಕಾರ ನೀತಿಸಂಹಿತೆ ಪದ್ಧತಿಗಳುಸಂಪಾದಿಸಿ

ವಾಣಿಜ್ಯಿಕ ಆತಿಥ್ಯ/ಅತಿಥಿ ಸತ್ಕಾರಗಳ ಸನ್ನಿವೇಶಗಳಲ್ಲಿನ ನೀತಿಸಂಹಿತೆ. ಅನ್ವಯಿಕ ನೀತಿಸಂಹಿತೆಯು ನಮ್ಮ ನೈತಿಕ ಸಿದ್ಧಾಂತಗಳು ಹಾಗೂ ವಿವೇಚನೆಗಳ ಅನ್ವಯಿಸುವಿಕೆಗಳ ಅಧ್ಯಯನದ ನೀತಿಸಂಹಿತೆಯ ಒಂದು ಶಾಖೆಯಾಗಿದೆ. ಅನ್ವಯಿಕ ನೀತಿಸಂಹಿತೆಯ ಅನೇಕ ಶಾಖೆಗಳಿವೆ: ಔದ್ಯಮಿಕ ನೀತಿಸಂಹಿತೆ, ವೃತ್ತಿಪರ ನೀತಿಸಂಹಿತೆ, ವೈದ್ಯಕೀಯ ನೀತಿಸಂಹಿತೆ, ಶೈಕ್ಷಣಿಕ ನೀತಿಸಂಹಿತೆ, ಪರಿಸರೀಯ ನೀತಿಸಂಹಿತೆ, ಹಾಗೂ ಮತ್ತಷ್ಟು. ಆತಿಥ್ಯ/ಅತಿಥಿ ಸತ್ಕಾರ ನೀತಿಸಂಹಿತೆಯು ಅನ್ವಯಿಕ ನೀತಿಸಂಹಿತೆಯ ಒಂದು ಶಾಖೆಯಾಗಿದೆ. ಬಳಕೆಯಲ್ಲಿ, ಅನ್ವಯಿಕ ನೀತಿಸಂಹಿತೆಯ ಇತರೆ ಶಾಖೆಗಳಾದ, ಔದ್ಯಮಿಕ ನೀತಿಸಂಹಿತೆ, ಪರಿಸರೀಯ ನೀತಿಸಂಹಿತೆ, ವೃತ್ತಿಪರ ನೀತಿಸಂಹಿತೆ ಹಾಗೂ ಮತ್ತಿತರ ಶಾಖೆಗಳ ವಿಷಯಗಳನ್ನು ಸಂಯೋಜಿಸುತ್ತದೆ. ಉದಾಹರಣೆಗೆ, ಸ್ಥಳೀಯ ಆತಿಥ್ಯ/ಅತಿಥಿ ಸತ್ಕಾರ ಉದ್ಯಮವು ಏಳಿಗೆಗೊಂಡಾಗ, ಸಂಭಾವ್ಯ ನೈತಿಕ ಇಬ್ಬಂದಿತನಗಳು ಹೆಚ್ಚಾಗುತ್ತವೆ: ಉದ್ಯಮ ಪದ್ಧತಿಗಳು ಪರಿಸರದ ಮೇಲೆ ಯಾವ ಪರಿಣಾಮಗಳನ್ನು ಬೀರುತ್ತವೆ? ಆತಿಥೇಯ ಸಮುದಾಯದ ಮೇಲೆ ಅವು ಬೀರಬಹುದಾದ ಪರಿಣಾಮಗಳೇನು? ಸ್ಥಳೀಯ ಆರ್ಥಿಕತೆಯ ಮೇಲೆ ಅವು ಬೀರಬಹುದಾದ ಪರಿಣಾಮಗಳೇನು?; ಪರಸ್ಥಳದವರು, ಪ್ರವಾಸಿಗರು, ಹಾಗೂ ಅತಿಥಿಗಳ ಬಗ್ಗೆ ತಮ್ಮ ಸ್ಥಳೀಯ ಸಮುದಾಯದ ಮೇಲೆ ನಾಗರೀಕರ ದೃಷ್ಟಿಕೋನಗಳೇನು? ಇವು ಅನ್ವಯಿಕ ನೀತಿಸಂಹಿತೆಯ ಒಂದು ಆವೃತ್ತಿಯಾಗಿ ಆತಿಥ್ಯ/ಅತಿಥಿ ಸತ್ಕಾರ ನೀತಿಸಂಹಿತೆಯು ಕೇಳಬಹುದಾದ ಪ್ರಶ್ನೆಗಳಾಗಿವೆ. ಆತಿಥ್ಯ/ಅತಿಥಿ ಸತ್ಕಾರ ಹಾಗೂ ಪ್ರವಾಸೋದ್ಯಮಗಳು ವಿಶ್ವದಲ್ಲೇ ಅತ್ಯಂತ ದೊಡ್ಡ ಸೇವಾ ಉದ್ಯಮವಾಗಿರುವುದರಿಂದ, ಆತಿಥ್ಯ/ಅತಿಥಿ ಸತ್ಕಾರ ಹಾಗೂ ಪ್ರವಾಸೋದ್ಯಮದ ವ್ಯಕ್ತಿಗಳ ಒಳ್ಳೆಯ ಹಾಗೂ ಕೆಟ್ಟ ನಡವಳಿಕೆ ಎರಡಕ್ಕೂ ಹಾಗೂ ಸರಿ ಹಾಗೂ ತಪ್ಪು ಚರ್ಯೆಗಳೆರಡಕ್ಕೂ ಅನೇಕ ಅವಕಾಶಗಳಿವೆ. ಈ ಉದ್ಯಮಗಳಲ್ಲಿನ ನೈತಿಕತೆಯನ್ನು ಸದಾಚಾರ ಸಂಹಿತೆಗಳು, ನೌಕರವರ್ಗದ ಕೈಪಿಡಿಗಳು, ಕೈಗಾರಿಕಾ ಮಾನಕಗಳು (ಅಂತರ್ಗತ ಅಥವಾ ಬಹಿರ್ಗತ ಯಾವುದಾದರೂ) ಹಾಗೂ ಮತ್ತಿತರ ವಿಚಾರಗಳ ಮೇಲೆ ಆಧಾರಿತವಾಗಿರುತ್ತದೆ. ವಿಶ್ವ ಪ್ರವಾಸೋದ್ಯಮ ಸಂಸ್ಥೆಯು ಉದ್ಯಮ-ವ್ಯಾಪ್ತಿಯ ನೀತಿಸಂಹಿತೆಯನ್ನು ರೂಪಿಸಲು ಪ್ರಸ್ತಾಪಿಸಿರುವುದಾದರೂ, ಪ್ರಸ್ತುತ ಆತಿಥ್ಯ/ಅತಿಥಿ ಸತ್ಕಾರ ಉದ್ಯಮಕ್ಕೆ ಸಾರ್ವತ್ರಿಕ ನೀತಿಸಂಹಿತೆ ಎಂಬುದಿಲ್ಲ. ವಾಣಿಜ್ಯಿಕ ಆತಿಥ್ಯ/ಅತಿಥಿ ಸತ್ಕಾರ ಸನ್ನಿವೇಶಗಳಲ್ಲಿ ನೀತಿಸಂಹಿತೆಯ ಕುರಿತು ಅನೇಕ ಪಠ್ಯಪುಸ್ತಕಗಳನ್ನು ಇತ್ತೀಚೆಗೆ ಪ್ರಕಟಿಸಲಾಗಿರುವುದಲ್ಲದೇ, ಪ್ರಸ್ತುತವಾಗಿ ಆತಿಥ್ಯ/ಅತಿಥಿ ಸತ್ಕಾರ ಶಿಕ್ಷಣ ಕೋರ್ಸ್‌ಗಳಲ್ಲಿ ಅವುಗಳನ್ನು ಬಳಸಲಾಗುತ್ತಿದೆ.

ಇವನ್ನೂ ನೋಡಿಸಂಪಾದಿಸಿ

ಆಕರಗಳುಸಂಪಾದಿಸಿ

 1. (ಎಕ್ಸೋಡಸ್‌ 22:21, NIV)
 2. ಚಾರ್ಲ್ಸ್‌ ಮ್ಯಾಕ್ಕಿನ್ನಾನ್‌‌, ಸ್ಕಾಟಿಷ್‌ ಹೈಲ್ಯಾಂಡರ್ಸ್‌‌ (1984, ಬಾರ್ನೆಸ್‌ & ನೋಬಲ್‌ ಬುಕ್ಸ್); ಪುಟ 76

ಹೆಚ್ಚಿನ ಓದಿಗಾಗಿಸಂಪಾದಿಸಿ

 • ಕ್ರಿಸ್ಟೀನ್‌ ಜಾಸ್‌ಜೇ. (2006). ಎಥಿಕಲ್‌ ಡಿಸಿಷನ್‌-ಮೇಕಿಂಗ್‌‌ ಇನ್‌ ದ ಹಾಸ್ಪಿಟಾಲಿಟಿ ಇಂಡಸ್ಟ್ರಿ
 • ಕರೇನ್‌‌ ಲೀಬರ್‌ಮನ್‌‌ & ಬ್ರೂಸ್‌ ನಿಸ್ಸೆನ್‌‌. (2006). ಎಥಿಕ್ಸ್‌ ಇನ್‌ ದ ಹಾಸ್ಪಿಟಾಲಿಟಿ ಅಂಡ್‌ ಟೂರಿಸಮ್‌ ಇಂಡಸ್ಟ್ರಿ
 • ರೋಸಲೀನ್‌ ಡಫ್ಫಿ ಹಾಗೂ ಮಿಕ್‌ ಸ್ಮಿತ್‌. ದ ಎಥಿಕ್ಸ್‌ ಆಫ್‌ ಟೂರಿಸಮ್‌ ಡೆವಲಪ್‌ಮೆಂಟ್‌‌
 • ಕಾನ್ರಾಡ್‌‌ ಲಾಷ್‌ಲೇ ಹಾಗೂ ಅಲಿಸನ್‌ ಮಾರ್ರಿಸನ್‌‌. ಇನ್‌‌ ಸರ್ಚ್‌ ಆಫ್‌ ಹಾಸ್ಪಿಟಾಲಿಟಿ
 • ಕಾನ್ರಾಡ್‌‌ ಲಾಷ್‌ಲೇ ಹಾಗೂ ಅಲಿಸನ್‌ ಮಾರ್ರಿಸನ್‌‌ ವಿರಚಿತ ಹಾಸ್ಪಿಟಾಲಿಟಿ : A ಸೋಷಿಯಲ್‌ ಲೆನ್ಸ್‌
 • ದ ಗ್ರೇಟ್‌ ಗುಡ್‌ ಪ್ಲೇಸ್‌ ರೇ ಓಲ್ಡೆನ್‌ಬರ್ಗ್‌ ರಚಿತ
 • ಕಸ್ಟಮರ್‌ ಸರ್ವೀಸ್‌‌ ಅಂಡ್‌ ದ ಲಕ್ಷುರಿ ಗೆಸ್ಟ್‌‌ ಪಾಲ್‌ ರಫಿನೋರಿಂದ
 • ಫಸ್ಟೆಲ್‌ ಡೆ ಕೌಲೆಂಜಸ್‌‌. ದ ಏನ್‌ಷಿಯೆಂಟ್‌ ಸಿಟಿ: ರಿಲಿಜನ್‌, ಲಾಸ್‌‌, ಅಂಡ್‌ ಇನ್‌ಸ್ಟಿಟ್ಯೂಷನ್ಸ್‌ ಆಫ್‌ ಗ್ರೀಸ್‌ ಅಂಡ್‌ ರೋಮ್‌‌
 • ಬೊಲ್‌ಚೇಜಿ. ಹಾಸ್ಪಿಟಾಲಿಟಿ ಇನ್‌ ಆಂಟಿಕ್ವಿಟಿ : ಲಿವಿ'ಸ್‌ ಕಾನ್ಸೆಪ್ಟ್‌ ಆಫ್‌‌ ಇಟ್ಸ್‌‌ ಹ್ಯೂಮನೈಜಿಂಗ್‌ ಫೋರ್ಸ್‌
 • ಜ್ಯಾಕ್ವೆಸ್‌ ಡೆರ್ರಿಡಾ. (2000). ಆಫ್‌ ಹಾಸ್ಪಿಟಾಲಿಟಿ. Trans. ರಾಚೆಲ್‌ ಬೌಲ್ಬಿ. ಸ್ಟ್ಯಾನ್‌ಫರ್ಡ್‌ : ಸ್ಟ್ಯಾನ್‌ಫರ್ಡ್‌ ವಿಶ್ವವಿದ್ಯಾಲಯ ಮುದ್ರಣಾಲಯ.
 • ಸ್ಟೀವ್‌ ರೀಸ್‌. (1993). ದ ಸ್ಟ್ರೇಂಜರ್ಸ್‌ ವೆಲ್‌ಕಮ್‌‌ : ಓರಲ್‌ ಥಿಯರಿ ಅಂಡ್‌ ದ ಏಸ್ತಿಟಿಕ್ಸ್‌ ಆಫ್‌ ದ ಹೋಮರಿಕ್‌‌ ಹಾಸ್ಪಿಟಾಲಿಟಿ ಸೀನ್‌. ಆನ್‌ ಆರ್ಬರ್‌‌: ಮಿಷಿಗನ್‌ ವಿಶ್ವವಿದ್ಯಾಲಯ ಮುದ್ರಣಾಲಯ.
 • ಮಿರೆಇಲ್ಲೆ ರೊಸೆಲ್ಲೋ. (2001). ಪೋಸ್ಟ್‌ ಕೊಲೋನಿಯಲ್‌ ಹಾಸ್ಪಿಟಾಲಿಟಿ. ದ ಇಮಿಗ್ರೆಂಟ್‌ ಆಸ್‌‌ ಗೆಸ್ಟ್‌ ಸ್ಟ್ಯಾನ್‌ಫರ್ಡ್‌, CA: ಸ್ಟ್ಯಾನ್‌ಫರ್ಡ್‌ ವಿಶ್ವವಿದ್ಯಾಲಯ ಮುದ್ರಣಾಲಯ.
 • ಕ್ಲಿಫರ್ಡ್‌ J. ರೂಟ್ಸ್‌‌‌. (1999). ಟ್ರಾವೆಲ್‌ ಅಂಡ್‌ ಟ್ರಾನ್ಸ್‌ಲೇಷನ್‌ ಇನ್‌ ದ ಲೇಟ್‌ ಟ್ವೆಂಟೀಯತ್‌ ಸೆಂಚುರಿ. ಕೇಂಬ್ರಿಡ್ಜ್‌, MA: ಹಾರ್ವರ್ಡ್‌‌ ವಿಶ್ವವಿದ್ಯಾಲಯ ಮುದ್ರಣಾಲಯ.
 • ಇಮ್ಯಾನ್ಯುಯೆಲ್‌ ವೆಲಿಸ್ಕೋವ್ಸ್‌ಕಿ. (1982). ಮ್ಯಾನ್‌ಕೈಂಡ್‌ ಇನ್‌ ಅಮ್ನೀಸಿಯಾ. ಗಾರ್ಡನ್‌ ಸಿಟಿ, ನ್ಯೂಯಾರ್ಕ್‌ : ಡಬಲ್‌ಡೇ.

ಬಾಹ್ಯ ಕೊಂಡಿಗಳುಸಂಪಾದಿಸಿ