ಆತಂಕ ಕಾಯಿಲೆ
ಆತಂಕ ಕಾಯಿಲೆಯು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮಬೀರಬಹುದಾದ ವಿಪರೀತ ಆಲೋಚನೆಗಳು, ಚಿಂತೆ, ಕಸಿವಿಸಿ, ನೈಜ ಮತ್ತು ಕಾಲ್ಪನಿಕ ಘಟನೆಗಳನ್ನು ಆಧರಿಸಿದ ಭವಿಷ್ಯದ ಅನಿಶ್ಚಿತಿತತೆಗಳ ಬಗ್ಗೆ ಗಾಬರಿ ಮತ್ತು ಭಯದ ಲಕ್ಷಣಗಳಿರುವ ಒಂದು ಪ್ರಕಾರದ ಸಾಮಾನ್ಯ ಮಾನಸಿಕ ಕಾಯಿಲೆಯ ಹಲವು ವಿವಿಧ ರೂಪಗಳನ್ನು ಒಳಗೊಳ್ಳುವ ಒಂದು ಆಶ್ರಯನಾಮ. ಹೈಪರ್‍ಥೈರಾಯ್ಡಿಸಂನಂತಹ ಕಾಯಿಲೆಯು ತಪ್ಪು ರೋಗನಿದಾನದಿಂದಾಗಿ ಸಾಮಾನ್ಯೀಕರಿಸಿದ ಆತಂಕ ಕಾಯಿಲೆಯೆಂದು ತಿಳಿದು ಒಂದು ಆತಂಕ ಕಾಯಿಲೆಯ ಲಕ್ಷಣಗಳನ್ನು ಅನುಕರಿಸಬಹುದಾದ ಅನೇಕ ಮಾನಸಿಕ ಮತ್ತು ವೈದ್ಯಕೀಯ ರೋಗಲಕ್ಷಣಗಳಿವೆ. ಆತಂಕ ಕಾಯಿಲೆಯಿದೆಯೆಂದು ನಿರ್ಣಯಿಸಲಾದ ವ್ಯಕ್ತಿಗಳನ್ನು ಎರಡು ವರ್ಗಗಳಲ್ಲಿ ವಿಂಗಡಿಸಬಹುದು; ಅವರು ನಿರಂತರ ಅಥವಾ ಪ್ರಾಸಂಗಿಕ ಲಕ್ಷಣಗಳನ್ನು ಅನುಭವಿಸುತ್ತಾರೊ ಎಂಬುದನ್ನು ಆಧರಿಸಿ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |