ಆಣೆ (ಚಲಾವಣೆ)
ಆಣೆ ಹಿಂದೆ ಭಾರತ ಮತ್ತು ಪಾಕಿಸ್ತಾನದಲ್ಲಿ ಬಳಸಲಾಗುತ್ತಿದ್ದ ಒಂದು ಚಲಾವಣಾ ಏಕಮಾನವಾಗಿತ್ತು, ಮತ್ತು 1/16 ರೂಪಾಯಿಗೆ ಸಮವಾಗಿತ್ತು.[೧] ಇದನ್ನು ೪ ಪೈಸೆ ಅಥವಾ ೧೨ ಪಾಯಿಗಳಾಗಿ ವಿಭಜಿಸಲಾಗಿತ್ತು (ಹಾಗಾಗಿ ಒಂದು ರೂಪಾಯಿಯಲ್ಲಿ ೬೪ ಪೈಸೆ ಮತ್ತು ೧೯೨ ಪಾಯಿಗಳಿದ್ದವು). ಈ ಪದ ಮುಸ್ಲಿಮ್ ವಿತ್ತೀಯ ವ್ಯವಸ್ಥೆಗೆ ಸೇರಿತ್ತು. ಭಾರತ ತನ್ನ ಚಲಾವಣೆಯನ್ನು ೧೯೫೭ರಲ್ಲಿ ದಶಮಾಂಶೀಕರಿಸಿದಾಗ, ಒಂದು ಚಲಾವಣಾ ಏಕಮಾನವಾಗಿ ಆಣೆಯನ್ನು ರದ್ದು ಮಾಡಲಾಯಿತು, ನಂತರ ೧೯೬೧ರಲ್ಲಿ ಪಾಕಿಸ್ತಾನ ಭಾರತವನ್ನು ಅನುಸರಿಸಿತು. ಇದರ ಬದಲಿಗೆ ೫ ಪೈಸೆ ನಾಣ್ಯ ಬಂದಿತು, ಇದನ್ನು ಕೂಡ ೧೯೯೪ರಲ್ಲಿ ನಿಲ್ಲಿಸಲಾಯಿತು ಮತ್ತು ೨೦೧೧ ರಲ್ಲಿ ರದ್ದು ಮಾಡಲಾಯಿತು. ಆದರೆ ಇಂದು ಕೂಡ, ಕೆಲವೊಮ್ಮೆ ಆಡುಮಾತಿನಲ್ಲಿ ೫೦ ಪೈಸೆ ನಾಣ್ಯವನ್ನು ೮ ಆಣೆ ಎಂದು ಮತ್ತು ೨೫ ಪೈಸೆ ನಾಣ್ಯವನ್ನು ೪ ಆಣೆ ಎಂದು ಸೂಚಿಸಲಾಗುತ್ತದೆ.
ಒಂದು ಆಣೆಯ ನಾಣ್ಯವಿತ್ತು, ಮತ್ತು ತಾಮ್ರದ ಅರ್ಧ ಆಣೆಯ ಮತ್ತು ಬೆಳ್ಳಿಯ ಎರಡಾಣೆ ನಾಣ್ಯಗಳೂ ಇದ್ದವು. ಆಗಾಗ್ಗೆ ಆಣೆ ಪದವನ್ನು 1/16ರ ಭಿನ್ನರಾಶಿಯನ್ನು ವ್ಯಕ್ತಪಡಿಸಲು ಬಳಸಲಾಗುತ್ತದೆ. ಜೊತೆಗೆ, ಆಣೆಯ ಹೆಸರಿನ ಅಂಚೆ ಚೀಟಿಗಳು ಬ್ರಿಟಿಷ್ ಭಾರತದ ಅವಧಿಯಲ್ಲಿ ಬಳಸಲ್ಪಡುತ್ತಿತ್ತು.
ನಾಣ್ಯಗಳು
ಬದಲಾಯಿಸಿ-
2 ಭಾರತೀಯ ಆಣೆ (1919).
-
ಆಣೆ - ಪೈಸೆ ಪರಿವರ್ತನಾ ಕೋಷ್ಟಕ.
-
೧೮೩೫ರ ಕಾಲಾಣೆ.
ಉಲ್ಲೇಖಗಳು
ಬದಲಾಯಿಸಿ- ↑ "Republic India Coinage". Archived from the original on 2015-03-24. Retrieved 2017-12-17.Accessed 14 July 2011.