ಆಣೆ ಶಬ್ದದ ಇತರ ಬಳಕೆಗಳಿಗಾಗಿ ಆಣೆ (ದ್ವಂದ್ವ ನಿವಾರಣೆ) ನೋಡಿ.

ವ್ಯಾಖ್ಯಾನ

ಬದಲಾಯಿಸಿ

ಆಣೆ ಎಂದರೆ ಪ್ರಮಾಣವಚನ, ಸತ್ಯವೆಂದು ಒಬ್ಬನು ಕೊಟ್ಟ ಹೇಳಿಕೆ. ಈ ಹೇಳಿಕೆಯನ್ನು ದೇವರ ಮುಂದೆ ಕೊಡಬಹುದು. ಇಲ್ಲವೆ ಲೌಕಿಕವಾದ ನ್ಯಾಯಾಲಯದಲ್ಲಿ ನ್ಯಾಯಾಧೀಶನ ಮುಂದೆ ಕೊಡಬಹುದು. ಹಿಂದಿನ ಕಾಲದಲ್ಲಿ ಸಾಮಾನ್ಯವಾಗಿ ಮತೀಯ ಸನ್ನಿವೇಶದಲ್ಲಿ ಕೊಟ್ಟ ಹೇಳಿಕೆಯಾಗಿರುತ್ತಿತ್ತು.ಭಾರತದಲ್ಲಿ ದೇವಸ್ಥಾನದಲ್ಲಿ ದೇವರ ಸಮ್ಮುಖದಲ್ಲಿ ಪ್ರಮಾಣ ಮಾಡಿ ಹೇಳಿಕೆಕೊಡುವುದು ರೂಢಿಯಲ್ಲಿತ್ತು. ಪಾಶ್ಚಾತ್ಯ ದೇಶಗಳಲ್ಲಿ ಕ್ರೈಸ್ತಮಠಾಧಿಪತಿಯ ಮುಂದೆ ಪ್ರಮಾಣ ಮಾಡುವುದು ರೂಢಿಯಲ್ಲಿತ್ತು. ಪ್ರಮಾಣ ಮಾಡಲು ದೇವಸ್ಥಾನಕ್ಕೆ ಅಗತ್ಯವಾಗಿ ಹೋಗಬೇಕಾಗಿರಲಿಲ್ಲ. ಸೂರ್ಯಚಂದ್ರಾದಿಗಳ ಮುಂದೆ, ಬಹಿರಂಗವಾಗಿ ಎಲ್ಲರ ಮುಂದೆ ಪ್ರಮಾಣ ಮಾಡುವ ಸಂಪ್ರದಾಯವೂ ಆಚರಣೆಯಲ್ಲಿತ್ತು.

ಆಣೆ ಸೂಚಿಸುವ ಅಂಶ

ಬದಲಾಯಿಸಿ

ಸಂದಿಗ್ಧವಾದ ಲೌಕಿಕವ್ಯವಹಾರಗಳ ವ್ಯಾಜ್ಯಗಳಲ್ಲಿ ವಾದಿಯೋ ಪ್ರತಿವಾದಿಯೋ ಮತ ಗ್ರಂಥವನ್ನು ಕೈಲಿ ಹಿಡಿದೋ ದೇವರ ಹೆಸರು ಹೇಳಿಯೋ ಪ್ರಮಾಣ ಮಾಡಿದಾಗ ಅದರ ಆಧಾರದ ಮೇಲೆ ವ್ಯಾಜ್ಯವನ್ನು ಇಬ್ಬರಿಗೂ ಅನುಕೂಲವಾಗುವ ರೀತಿಯಲ್ಲಿ ಅಧಿಕಾರಿಗಳು ಪರಿಹರಿಸುತ್ತಿದ್ದುದಕ್ಕೆ ಚರಿತ್ರೆಯಲ್ಲಿ ನಿದರ್ಶನಗಳಿವೆ. ದೈವ, ಮತವಿಚಾರದಲ್ಲಿ ಭಯಭೀತಿ ಇರುವ ತನಕ ಇದು ಒಳ್ಳೆಯ ಮಾರ್ಗವೇ ಆಗಿತ್ತು. ಕೊಟ್ಟ ಮಾತಿಗೆ ತಪ್ಪಬಾರದು, ಅಸತ್ಯವನ್ನು ನುಡಿಯಬಾರದು, ಅನ್ಯಾಯವನ್ನು ಮಾಡಬಾರದು ಎಂಬ ನೈತಿಕ ಭಾವನೆಗಳು ಆಣೆಯ ಹಿಂದೆ ಇದ್ದಂತೆ ತೋರುತ್ತದೆ. ಸೂರ್ಯಚಂದ್ರಾದಿಗಳ ಮುಂದೆ ಪ್ರಮಾಣ ಮಾಡುವುದು ತೊಂಬ ಆರ್ಷೇಪದ್ಧತಿ. ಬೇರೆ ಬೇರೆ ದೇಶಗಳ ಅನಾಗರಿಕ ಸಮಾಜಗಳಲ್ಲೂ ಈ ಪದ್ಧತಿ ರೂಢಿಯಲ್ಲಿದೆ.

ಉಲ್ಲೇಖಗಳು

ಬದಲಾಯಿಸಿ

[]

  1. http://jodihakkigalu.blogspot.in/2014/05/promise.html
"https://kn.wikipedia.org/w/index.php?title=ಆಣೆ&oldid=1249371" ಇಂದ ಪಡೆಯಲ್ಪಟ್ಟಿದೆ