ಆಟಿ ಅಮವಾಸ್ಯೆಯ ತೀರ್ಥ ಸ್ನಾನ

ಆಟಿ ಅಮವಾಸ್ಯೆಯ ತೀರ್ಥ ಸ್ನಾನ

ಆಟಿ ಅಮವಾಸ್ಯೆ

ಬದಲಾಯಿಸಿ

ಆಟಿಯ ಅಮಾವಾಸ್ಯೆ ಅಥಾವ ಆಟಿ ಅಮಾಸೆ ತುಳುನಾಡಿನ ಆಟಿ ತಿಂಗಳಲ್ಲಿ ಆಚರಣೆ ಮಾಡುವ ಒಂದು ಹಬ್ಬ. ಈ ಅಮಾವಾಸ್ಯೆ ಆಷಾಡ ಅಮಾಸೆ ಅಥಾವ ಭೀಮನ ಅಮಾವಾಸ್ಯೆ ಎಂದೂ ಕರೆಯುತ್ತಾರೆ. ಆಟಿ ತಿಂಗಳಲ್ಲಿ ಬರುವ ಈ ಅಮಾವಾಸ್ಯೆ ತುಳುನಾಡಿನ ಜನರಿಗೆ ಬಹು ವಿಶೇಷವಾದ ದಿನ ಮತ್ತು ಇದು ಹಿಂದಿನ ಕಾಲದಿಂದಲೂ ಆಚರಣೆ ಮಾಡಿ ಬರುತ್ತಿದ್ದ ಒಂದು ಹಬ್ಬ.[]

ತೀರ್ಥ ಸ್ನಾನ

ಬದಲಾಯಿಸಿ

ಆಟಿ ತಿಂಗಳಿನ ಅಮಾವಾಸ್ಯೆಯ ದಿನ ಕರಾವಳಿಯ ಬೇರೆ ಬೇರೆ ಶಿವ ಕ್ಷೇತ್ರಗಳಲ್ಲಿ ಆಟಿಯ ಅಮಾವಾಸ್ಯೆಯ ದಿನ ತೀರ್ಥ ಸ್ನಾನ ದ ಸಂಭ್ರಮ ಜರಗುತ್ತದೆ. ಅದರಲ್ಲೂ ಐತಿಹಾಸಿಕ ಹಿನ್ನೆಲೆ ಇರುವ ಮಹತೋಭಾರ ಕಾರಿಂಜ ಶ್ರೀಕಾರಿಂಜೇಶ್ವರ ದೇವಸ್ಥಾನ ಮತ್ತು ನರಹರಿ ಪರ್ವತ ಶ್ರೀ ಸದಾಶಿವ ದೇವಸ್ಥಾನದಲ್ಲಿ ನಡೆಯುವ ತೀರ್ಥಸ್ನಾನ ಭಾರೀ ವಿಶೇಷ ಸ್ಥಾನ ಪಡೆದಿದೆ. ಆಟಿಯ ಅಮಾವಾಸ್ಯೆಯ ದಿನ ತುಳುನಾಡಿನ ಜನರು ಬೆಳ್ಳಗೆ ಬೇಗನೇ ಎದ್ದು , ಹಾಲೆಯ ಮರದ ಕೆತ್ತೆಯನ್ನು ಕಲ್ಲಿನಲ್ಲಿ ಜಜ್ಜಿ ತಂದು, ಕಶಾಯ ಮಾಡಿ, ಸ್ನಾನ ಮಾಡಿ, ಕಶಾಯವನ್ನು ಕುಡಿದು. ಈಶ್ವರ ದೇವೆರ ದೇವಸ್ಥಾನಕ್ಕೆ ಅಥಾವ ವಿಶ್ಣು ದೇವರ ದೇವಸ್ಥಾನಕ್ಕೆ ಹೋಗಿ ತೀರ್ಥಸ್ನಾನ ಮಾಡುತ್ತಾರೆ.[]

ತೀರ್ಥ ಸ್ನಾನ ಜರಗುವ ಈಶ್ವರ ದೇವರ ದೇವಾಸ್ಥಾನಗಳು

ಬದಲಾಯಿಸಿ

ಕಾರಿಂಜ ಶ್ರೀಕಾರಿಂಜೇಶ್ವರ ದೇವಸ್ಥಾನ ಮತ್ತು ಶ್ರೀನರಹರಿ ಪರ್ವತ ಶ್ರೀ ಸದಾಶಿವ ದೇವಸ್ಥಾನದಲ್ಲಿ ಇರುವ ತೀರ್ಥದ ಬಾವಿಗಳಲ್ಲಿ ಅಥಾವ ಕೆರೆಗಳಲ್ಲಿ ತುಳುನಾಡಿನ ಜನರು ಪ್ರತಿಯೊಂದು ಕಡೆಗಳಿಂದ ಬಂದು ತೀರ್ಥ ಸ್ನಾನ ಮಾಡುತ್ತಾರೆ.[]

ತೀರ್ಥ ಸ್ನಾನದ ‌ಫಲ

ಬದಲಾಯಿಸಿ

ತೀರ್ಥ ಸ್ನಾನ ಮಾಡಿದರೆ ಸಕಲ ಇಷ್ಟಾರ್ಥಾಗಳು ಸುಲಭವಾಗಿ ನೆರವೇರುತ್ತದೆ ಅನ್ನುವ ಪ್ರತೀತಿ ಇದೆ.ಪಾಪ ಪರಿಹಾರಕ್ಕಾಗಿ ಇಲ್ಲಿಯ ಬಾವಿ ಅಥಾವ ಕೆರೆಗಳಲ್ಲಿ ಮಹಾಭಾರತದ ಪಾಂಡವರೂ ಬಂದು ಸ್ನಾನ ಮಾಡಿ ಅವರಿಗೆ ಅಂಟಿದ ಪಾಪವನ್ನು ಕೂಡಾ ಪರಿಹಾರ ಮಾಡಿದ್ದರು ಅನ್ನುವ ಐತಿಹ್ಯ ಕೂಡಾ ಇದೆ.[]

ಉಲ್ಲೇಖಗಳು

ಬದಲಾಯಿಸಿ
  1. "Udupi: Aati Amavasya – Facts on tradition of 'Paleda Kashaya' consumption". Daijiworld.com. 2019-08-01. Retrieved 2020-10-20.
  2. ೨.೦ ೨.೧ ೨.೨ https://nammakudlanews.com/bantwala-tirtha-snana-on-aati-amavasya-at-narahari-mountain/