ಆಟಿಪಾಯಸ
ಆಟಿಯ ಪಾಯಸ
ಕೊಡಗಿನಕೊಡಗು ಕಡೆ ಎಲ್ಲರೂ ಮನೆಯಲ್ಲಿ ಆಟಿಯ ಅಥಾವ ಆಷಾಢ ಸೊಪ್ಪಿನ ಪಾಯಸವನ್ನು ಮಾಡುತ್ತಾರೆ. ಆ ಸಮಯದಲ್ಲಿ ಎಲ್ಲಾ ಮನೆಯಲ್ಲೂ ಆಟಿಯ ಪಾಯಸ ಇದ್ದೇ ಇರುತ್ತದೆ, ಅದರ ಪರಿಮಳ ಎಲ್ಲರಿಗೂ ಬಂದೇ ಬರುತ್ತದೆ.[೧] ಆಟಿ ಅಥಾವ ಆಷಾಢ ತಿಂಗಳಿನ ೧೮ನೇ ದಿನ ಆಟಿ ಸೊಪ್ಪು ಎನ್ನುವ ಔಷಧೀಯ ಗುಣ ಇರುವ ಆ ಸೊಪ್ಪನ್ನು ನೀರಲ್ಲಿ ಕುದಿಸಿದಾಗ ನೀರು ಕಡು ನೀಲಿ ಬಣ್ಣಕ್ಕೆ ತಿರುಗುತ್ತದೆ.ಆಟಿ ಸೊಪ್ಪಿನಿಂದ ಮಾಡಿದ ಈ ಪಾಯಸಕ್ಕೆ ಕಕ್ಕಡ ಪದಿನೆಟ್ಟ್ ಪಾಯ್ಸ ಎಂದು ಕೊಡಗಿನ ಜನರು ಕರೆಯುತ್ತಾರೆ . ಕಕ್ಕಡ ಅಂದರೆ ಆಟಿ /ಆಷಾಢ ತಿಂಗಳು ಅಥಾವ ಕರ್ಕಾಟಕ ಮಾಸ ಅನ್ನುವ ಅರ್ಥ ಕೂಡಾ ಇದೆ .ಆಟಿ ತಿಂಗಳಲ್ಲಿ ಮಾತ್ರ ಈ ಸೊಪ್ಪನ್ನು ಉಪಯೋಗಿಸುತ್ತಾರೆ. ಪುಷ್ಯ ಮಳೆ ಬರುವಾಗ ಈ ಸೊಪ್ಪಿಗೆ ಔಷಧೀಯ ಅಂಶ ಸೇರುತ್ತದೆ. ಆಟಿ/ಆಷಾಢ ತಿಂಗಳಿನ ಪ್ರಾರಂಭದಿಂದ ೧೮ನೇ ದಿನ ತನಕ ಒಂದೊಂದು ಬಗೆಯ ಔಷಧೀಯ ಅಂಶಗಳು ಈ ಸೊಪ್ಪಿಗೆ ಸೇರುತ್ತದೆ . ಹಾಗಾಗಿ ೧೮ನೇ ದಿನದಂದು ಈ ಸೊಪ್ಪನ್ನು ಪುಡಿ ಪುಡಿ ಮಾಡಿದಾಗ ಪರಿಮಳ ಬರುವುದಕ್ಕೆ ಪ್ರಾರಂಭವಾಗುತ್ತದೆ. ಆವಾಗ ಈ ಸೊಪ್ಪಿನಿಂದ ಪಾಯ್ಸ, ಹಲ್ವಾ ಮುಂತಾದ ಉತ್ಪನ್ನಗಳನ್ನು ಮಾಡುತ್ತಾರೆ. ಈ ಸೊಪ್ಪಿನ ರಸದಿಂದ ಶರೀರಕ್ಕೆ ಬೇಕಾದ ಶಕ್ತಿ ಸಿಗುತ್ತದೆ. ಶೀತ, ಜ್ವರ ಮುಂತಾದ ರೋಗಗಳಿಗೆ ಔಷಧೀಯವಾಗಿದೆ.
ಆಟಿ ಪಾಯಸಕ್ಕೆ ಬೇಕಾಗುವ ಸಾಮಾಗ್ರಿಗಳು
ಬದಲಾಯಿಸಿ- ಆಟಿಯ ಸೊಪ್ಪು
- ನೀರು
- ಬಿಳಿ ಅಕ್ಕಿ
- ಬೆಲ್ಲ
- ತುಪ್ಪ
- ಗೇರು ಬೀಜ
- ಏಲಕ್ಕಿ
ಆಟಿ ಸೊಪ್ಪಿನ ಪಾಯಸ ಮಾಡುವ ವಿಧಾನ
ಬದಲಾಯಿಸಿಮೊದಲಿಗೆ ಪಾತ್ರೆಯಲ್ಲಿ ಅರ್ಧ ನೀರು ಹಾಕಿ ಸೊಪ್ಪನ್ನು ಬೇಯಲು ಇಡಬೇಕು , ಸೊಪ್ಪು ಬೆಂದ ನಂತರ ನೀರು ನೀಲಿ ಬಣ್ಣಕ್ಕೆ ತಿರುಗುತ್ತದೆ. ಆ ನೀರನ್ನು ಸೋಸಿ, ಆ ನೀರಿಗೆ ಬಿಳಿ ಅಕ್ಕಿಯನ್ನು ತೊಳೆದು ಹಾಕಬೇಕು. ರುಚಿಗೆ ತಕ್ಕಸ್ಟು ಉಪ್ಪು ಹಾಕಿ, ಅದಕ್ಕೆ ಬೆಲ್ಲ ಹಾಕಬೇಕು. ಆ ಬಳಿಕ ಅಕ್ಕಿಯನ್ನು ಚೆನ್ನಾಗಿ ಬೇಯಿಸಿ ಅದಕ್ಕೆ, ಒಗ್ಗರಣೆ ಹಾಕುವ ಚಮಚದಲ್ಲಿ ಅದಕ್ಕೆ ೨ ಚಮಚ ತುಪ್ಪ ಹಾಕಿ, ಅದಕ್ಕೆ ಗೇರು ಬೀಜ ಹಾಕಿ, ಬಿಸಿ ಮಾಡಿ ಪಾಯಸಕ್ಕೆ ಹಾಕಬೇಕು. ಅದರ ಮೇಲೆ ತೆಂಗಿನ ಕಾಯಿಯನ್ನು ಹಾಕಿದರೆ ಇನ್ನೂ ಒಳ್ಳೆಯದಾಗುತ್ತದೆ. ಇದಕ್ಕೆ ತುಪ್ಪ, ಜೇನು ಹನಿ ಹಾಕಿ ಚೆನ್ನಾಗಿ ತಿನ್ನಬಹುದು.
ಅಟಿ ಸೊಪ್ಪಿನ ಪಾಯಸ ಮಾಡುವ ಪ್ರದೇಶಗಳು
ಬದಲಾಯಿಸಿಕೊಡಗಿನಲ್ಲಿ ಅಂದರೆ ಮಡಿಕೇರಿ, ಸೋಮವಾರಪೇಟೆ ಮತ್ತು ಕುಶಾಲನಗರ ಪ್ರದೇಶಗಳಲ್ಲಿ ಆಟಿ ಸೊಪ್ಪಿನ ಪಾಯಸ ಮಾಡುವುದು ಸರ್ವೇ ಸಾಮಾನ್ಯ. ಆದರೆ ತುಳುನಾಡಿನಲ್ಲೂ ಆಟಿ ಪಾಯಸ ಮಾಡುವ ಕೆಲವು ಪ್ರದೇಶಗಳು ಈ ರೀತಿಯಲ್ಲಿ ಇವೆ. ಸುಳ್ಯ ಪುತ್ತೂರು ಮತ್ತು ಉಬರ್/ಉಪ್ಪಿನಂಗಡಿ
ನಂಬಿಕೆ
ಬದಲಾಯಿಸಿಆಟಿಯ ಸೊಪ್ಪಿನ ಪಾಯಸ ಕುಡಿದರೆ ಯಾವ ಕಾಯಿಲೆ ಕೂಡಾ ಬರುದಿಲ್ಲ. ಹಾಗೆಯೇ ೧೮ ಬಗೆಯ ಔಷಧೀಯ ಗುಣಗಳು ಅಟಿ ತಿಂಗಳಿನ ೧೮ ದಿವಸದಲ್ಲಿ ಇರುತ್ತದೆಯಂತೆ.
ಉಲ್ಲೇಖ
ಬದಲಾಯಿಸಿ